Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಕಾಂತಿಗೆ- ದ್ರಾಕ್ಷಿ ಹಣ್ಣಿನ ಫೇಸ್ ಪ್ಯಾಕ್
ದ್ರಾಕ್ಷಿಹಣ್ಣು ತಿನ್ನಲು ಮಾತ್ರವಲ್ಲ, ಸೌಂದರ್ಯವನ್ನು ವೃದ್ಧಿಸಲೂ ಬಳಸಬಹುದು. ದ್ರಾಕ್ಷಿರಸ ಕ್ಷಾರೀಯವಾಗಿರುವ ಕಾರಣ ತ್ವಚೆಯ ಆಮ್ಲೀಯತೆಯನ್ನು ನಿವಾರಿಸಲು ಸಮರ್ಥವಾಗಿದೆ (ಆಮ್ಲ + ಕ್ಷಾರ = ಉಪ್ಪು + ನೀರು) ಎಂಬ ಸರಳ ರಾಸಾಯನಿಕ ಸಮೀಕರಣದಂತೆ ತ್ವಚೆಯ ಆಮ್ಲೀಯ ತೊಂದರೆಗಳಿಂದ ರಕ್ಷಿಸಲು ಕ್ಷಾರೀಯ ದ್ರಾಕ್ಷಿರಸಕ್ಕೆ ಸಾದ್ಯ. ದ್ರಾಕ್ಷಿ ರಸದಲ್ಲಿ ಅಡಗಿರುವ 7 ಸೌಂದರ್ಯದ ರಹಸ್ಯ
ಆದರೆ ದ್ರಾಕ್ಷಿರಸವನ್ನು ಮುಖದ ಮೇಲೆ ಲೇಪಿಸುವುದು ಸಾಧ್ಯವಿಲ್ಲದ ಕಾರಣ ಇದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದಾದ ಲೇಪನದಂತೆ ತಯಾರಿಸುವುದೇ ಜಾಣತನದ ಕ್ರಮ. ಬನ್ನಿ, ಈ ಮುಖಲೇಪವನ್ನು ಹೇಗೆ ಮಾಡಬಹುದು ಎಂಬುದನ್ನು ಮುಂದೆ ಓದಿ..

ದ್ರಾಕ್ಷಿ-ಪುದಿನಾ ಮುಖಲೇಪ
ಸುಮಾರು ಆರು ಬಿಳಿ ದ್ರಾಕ್ಷಿಯ ಬೀಜಗಳನ್ನು ನಿವಾರಿಸಿ ಒಂದು ದೊಡ್ಡಚಮಚ ಪುದಿನಾ ಎಲೆಗಳ ಜೊತೆ ಅರೆದು ನುಣ್ಣಗಾಗಿಸಿ ಇದಕ್ಕೆ ಒಂದು ದೊಡ್ಡಚಮಚ ಲಿಂಬೆರಸ ಸೇರಿಸಿ. ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ದಪ್ಪನಾಗಿ ಲೇಪಿಸಿ. ಕಣ್ಣುಗಳ ಕೆಳಗೆ ಮತ್ತು ಹಣೆಗೆ (ಎಣ್ಣೆ ಪಸೆ ಹೆಚ್ಚು ಇರುವಲ್ಲಿ) ಹೆಚ್ಚು ದಪ್ಪನಾಗಿ ಹಚ್ಚಿ. ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಬಳಿಕ ಫ್ರಿಜ್ಜಿನಲ್ಲಿಟ್ಟಿದ್ದ ತಣ್ಣನೆಯ ಕೊಂಚ ಗುಲಾಬಿ ನೀರು (ಅಥವಾ ಐಸ್ ಬೆರೆಸಿದ) ಬಳಕಿ ಮುಖಕ್ಕೆ ಪ್ರೋಕ್ಷಳಿಸಿಕೊಳ್ಳಿ. ಈ ವಿಧಾನದಿಂದ ಮುಖದಲ್ಲಿರುವ ಎಣ್ಣೆಯ ಪಸೆ ನಿವಾರಣೆಯಾಗುತ್ತದೆ ಹಾಗೂ ಸರಿಸುಮಾರು ಇಡಿಯ ದಿನ ತಾಜಾತನ ಉಳಿಯುವಂತಾಗುತ್ತದೆ. ಬೆಳಿಗ್ಗೆ ಈ ಲೇಪನ ಹಚ್ಚಿದರೆ ಮದ್ಯಾಹ್ನ ಒಮ್ಮೆ ತಣ್ಣೀರಿನಿಂದ ಮುಖ ತೊಳೆದುಕೊಂಡರೆ ಸಾಕಾಗುತ್ತದೆ. ಆರೋಗ್ಯಕ್ಕೆ ಸಿಹಿ ಈ ಕೆಂಪು ದ್ರಾಕ್ಷಿ...
ದ್ರಾಕ್ಷಿ-ಕ್ಯಾರೆಟ್ ಮುಖಲೇಪ
ಸುಮಾರು ಆರು ಬಿಳಿದ್ರಾಕ್ಷಿಗಳನ್ನು (ಚಿಕ್ಕದಾದರೆ ಹನ್ನೆರಡು-ಹದಿನೈದು) ಬೀಜ ನಿವಾರಿಸಿ ನುಣ್ಣಗೆ ಅರೆಯಿರಿ. ಇದಕ್ಕೆ ಒಂದು ದೊಡ್ಡ ಚಮಚ ಹುಳಿ ಕ್ರೀಂ (sour cream) ಒಂದು ಚಮಚ ಮೈದಾಹಿಟ್ಟು ಮತ್ತು ಒಂದು ದೊಡ್ಡಚಮದ ಕ್ಯಾರೆಟ್ ರಸವನ್ನು ಸೇರಿಸಿ ಮಿಶ್ರಣ ಮಾಡಿ. ಈ ಲೇಪನವನ್ನು ಮುಖದ ಮೇಲೆ ದಪ್ಪನಾಗಿ ಹಚ್ಚಿನ್ ಒಣಗಲು ಬಿಡಿ. ಕೊಂಚ ಹೊತ್ತಿನ ಬಳಿಕ ಒಣಗಿದ ಲೇಪನವನ್ನು ಉಗುರುಬೆಚ್ಚನೆಯ ನೀರು ಬಳಸಿ ತೊಳೆದುಕೊಳ್ಳಿ. ಇದರಿಂದ ಚರ್ಮದ ಸೆಳೆತ ಹೆಚ್ಚಾಗಿ ನೆರಿಗೆಗಳು ಮಾಯವಾಗುತ್ತವೆ.
ದ್ರಾಕ್ಷಿ-ಮುಲ್ತಾನಿಮಿಟ್ಟಿ ಮುಖಲೇಪ
ಈ ವಿಧಾನ ಎಣ್ಣೆಚರ್ಮ ಮತ್ತು ಮೊಡವೆ ಇರುವ ಚರ್ಮಕ್ಕೆ ಹೇಳಿ ಮಾಡಿಸಿದಂತಿದೆ. ಒಂದು ಚಿಕ್ಕ ಬೋಗುಣಿಯಲ್ಲಿ ಎರಡು ದೊಡ್ಡಚಮಚ ಮುಲ್ತಾನಿಮಿಟ್ಟಿ ಮತ್ತು ಕೆಲವು ಹನಿ ಲಿಂಬೆರಸ ಮತ್ತು ಅಗತ್ಯವಿದ್ದಷ್ಟು ಗುಲಾಬಿ ನೀರು ಬಳಸಿ ಮಿಶ್ರಣ ಮಾಡಿ ದಪ್ಪನಾದ ಲೇಪ ತಯಾರಿಸಿ. ಇದಕ್ಕೆ ಸುಮಾರು ಮೂರರಿಂದ ಆರು (ಈ ಲೇಪ ನೀರು ನೀರಾಗದಷ್ಟು) ದ್ರಾಕ್ಷಿಹಣ್ಣುಗಳನ್ನು ಬೀಜ ನಿವಾರಿಸಿ ಕಿವುಚಿ ಸೇರಿಸಿ ಮಿಶ್ರಣ ಮಾಡಿ. ದ್ರಾಕ್ಷಿ ಹಣ್ಣು- ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು
ಈ ಲೇಪನವನ್ನು ಈಗತಾನೇ ತೊಳೆದ ಮುಖಕ್ಕೆ ದಪ್ಪನಾಗಿ ಹಚ್ಚಿ. ಮೊಡವೆಗಳಿರುವಲ್ಲಿ ಹೆಚ್ಚು ದಪ್ಪನಾಗಿ ಹಚ್ಚಿ. ಸುಮಾರು ಇಪ್ಪತ್ತು ನಿಮಿಷದ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಮೊಡವೆಗಳ ಕೀವು ಶೀಘ್ರವಾಗಿ ಹೊರಬಂದು ಹೊಸಚರ್ಮ ಬೆಳೆಯಲು ಮತ್ತು ಎಣ್ಣೆಪಸೆ ನಿವಾರಣೆಯಾಗಲು ಸಾಧ್ಯವಾಗುತ್ತದೆ.



Click it and Unblock the Notifications

