Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಚಿಟಿಕೆ ಹೊಡೆಯುವಷ್ಟು ಸುಲಭವಾಗಿ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ!
ಸುಂದರವಾಗಿ ಕಾಣಲು ಕಂಡ ಕಂಡ ಕ್ರೀಮ್‌ಗಳನ್ನು ಬಳಿದುಕೊಳ್ಳಬೇಕಿಲ್ಲ ಅಥವಾ ಬಗೆ ಬಗೆಯ ಸ್ಕ್ರಬ್‌ಗಳನ್ನು ಬಳಸಬೇಕಾಗಿಲ್ಲ, ಎಷ್ಟೇ ಆದರೂ ಕೃತಕ ಮದ್ದುಗಳು ತಾತ್ಕಾಲಿಕ ಪರಿಹಾರವನ್ನಷ್ಟೇ ನೀಡಬಲ್ಲದು. ಆರೋಗ್ಯಪೂರ್ಣ ಹಾಗೂ ಆಕರ್ಷಕ ಚರ್ಮ ಹೊಂದಲು ಮನೆಯಲ್ಲೇ ಸುಲಭವಾಗಿ ತಯಾರಿಸಲ್ಪಡುವ ಮನೆಮದ್ದು/ಪೇಸ್ಟ್ ಬಳಸಿ ಈ ಸಮಸ್ಯೆಯಿಂದ ಹೊರಬರಬಹುದು. ಅವುಗಳಲ್ಲಿ ತುಂಬಾ ಮುಖ್ಯವಾದವುಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ. ಸೌಂದರ್ಯ ವೃದ್ಧಿಗೆ, ಮೊಸರಿನ ಫೇಸ್ ಪ್ಯಾಕ್
ಚರ್ಮವು ಸಾಮಾನ್ಯವಾಗಿ ತನ್ನ ತ್ವಚೆಯ ಬಣ್ಣವನ್ನು ಒಮ್ಮೊಮ್ಮೆ ಕಳೆದುಕೊಳ್ಳುವುದು ಸಹಜ. ಇದನ್ನು ವೈದ್ಯಕೀಯ ಭಾಷೆಯಲ್ಲಿ ಹೈಪರ್ ಪಿಗ್ಮೆಂಟೇಶನ್ ಎಂದು ಕರೆಯಲಾಗುತ್ತದೆ. ಇದರಿಂದಾಗಿ ಚರ್ಮದಲ್ಲಿ ಕಪ್ಪು ಕಲೆಗಳು ಕಾಣಿಸುತ್ತವೆ ಜೊತೆಗೆ ಅಸಹಜ ರೀತಿಯಲ್ಲಿ ಚರ್ಮವು ಕಾಂತಿಯನ್ನು ಕಳೆದುಕೊಳ್ಳಲಾರಂಭಿಸುತ್ತದೆ. ನಿಮ್ಮ ಸೌಂದರ್ಯ ಹೆಚ್ಚಿಸಲು ಹಾಲಿನ ಚಮತ್ಕಾರ
ಸೂರ್ಯನ ಬಿಸಿಲಿನಲ್ಲಿ ತುಂಬಾ ಹೊತ್ತು ನಿಲ್ಲುವುದರಿಂದ, ಅನಾರೋಗ್ಯದಲ್ಲಿದ್ದಾಗ, ಲಿವರ್ ಸರಿಯಾಗಿ ಕೆಲಸಮಾದೇ ಇದ್ದಲ್ಲಿ, ಥೈರಾಯ್ಡ್ ಸಮಸ್ಯೆ ಹೆಚ್ಚಾಗಿರುವ ಸಂದರ್ಭದಲ್ಲಿ, ಗರ್ಭಧಾರಣೆಯ ಸಮಯದಲ್ಲಿ, ಮತ್ತು ಹಾರ್ಮೊನುಗಳು ಅಸಂತೋಲನವಾದಾಗ ಹೀಗೆ ಅನೇಕ ಕಾರಣಗಳು ಹೈಪರ್ ಪಿಗ್ಮೆಂಟೇಶನ್‍ಗೆ ಕಾರಣವಾಗುವ ಸಾಧ್ಯತೆ ಹೆಚ್ಚು. ಇದರಿಂದ ಮುಕ್ತಿ ಪಡೆಯಲು ಮನೆಯಲ್ಲಿಯೇ ಕೆಲವು ಮದ್ದುಗಳನ್ನು ತಯಾರಿಸಬಹುದು. ತ್ವಚೆಯ ಸುಂದರತೆ ಮತ್ತು ಕಾಂತಿಯುತ ಚರ್ಮ ಹೊಂದಲು ಕೆಲವು ಸರಳ ಸುಲಭ ವಿಧಾನಗಳನ್ನು ನೀಡಲಾಗಿದೆ ಮುಂದೆ ಓದಿ...

ಲಿಂಬೆರಸ ಮತ್ತು ನೀರು
ಒಂದು ಲಿಂಬೆ ಹಣ್ಣನ್ನು ಹಿಂಡಿ ಅದರ ರಸವನ್ನು ಅಷ್ಟೇ ಪ್ರಮಾಣದಲ್ಲಿ ಸಂಪೂರ್ಣವಾಗಿ ನೀರು ಬೆರೆಸಿ ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಬೇಕು ಹೀಗೆ ಪ್ರತಿ ನಿತ್ಯ ಮಾಡುವುದರಿಂದ ಚರ್ಮವು ತನ್ನ ಬಣ್ಣವನ್ನು ಕಳೆದುಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ.

ಜೇನು ಮತ್ತು ಲಿಂಬೆ
ಒಂದು ಲಿಂಬೆ ಹಣ್ಣಿನ ರಸದೊಂದಿಗೆ ಒಂದು ಟೇಬಲ್ ಚಮಚ ಜೇನನ್ನು ಚೆನ್ನಾಗಿ ಕಲಸಿಕೊಂಡು ಪೇಸ್ಟ್ ತರಹ ಮಾಡಿಕೊಂಡು ನಂತರ ಇದನ್ನು ಮುಖ ಮತ್ತು ಕತ್ತಿನ ಭಾಗಕ್ಕೆ ಹಚ್ಚಬೇಕು. ಇದನ್ನು ಪ್ರತಿ ನಿತ್ಯ ಹಚ್ಚುವುದರಿಂದ ಸನ್ ಬರ್ನ್ (ಸೂರ್ಯನ ಬೆಳಕಿನಿಂದ) ನಿಂದ ಕಪ್ಪಾಗುವುದನ್ನುತಡೆಗಟ್ಟಬಹುದು. ಇದರ ಗುಣಮಟ್ಟವನ್ನು ಇನ್ನೂ ಉತ್ತಮಗೊಳಿಸಬೇಕೆಂದರೆ ಈ ಮಿಶ್ರಣಕ್ಕೆ ಕೆಲವು ತುಳಸಿ ಎಲೆಗಳನ್ನು ಹಾಕಬೇಕು, ಯಾಕೆಂದರೆ ತುಳಸಿ ಎಲೆಯಲ್ಲಿ ರೋಗನಿರೋಧಕ ಗುಣವಿರುವುದರಿಂದ ಇದು ಚರ್ಮದಲ್ಲಿನ ಕಪ್ಪುಕಲೆಗಳಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತದೆ ಮತ್ತು ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ.

ಅರಿಶಿನ ಮತ್ತು ಹಾಲು
ಒಂದು ಚಿಕ್ಕ ತುಂಡು ಹಸಿಯಾದ ಅರಸಿನ ಕೊಂಬುನ್ನು ತೆಗೆದುಕೊಂಡು ಅದನ್ನು ತಿಕ್ಕಿ ಪೇಸ್ಟ್ ಮಾಡಿಕೊಂಡು ಸ್ವಲ್ಪ ಹಾಲಿನೊಂದಿಗೆ ಸೇರಿಸಿ ದಿನ ಹಚ್ಚುವುದರಿಂದ, ಇದು ಚರ್ಮಕ್ಕೆ ಒಂದು ಉತ್ತಮವಾದ ಬ್ಲೀಚ್ ನಂತೆ ಕೆಲಸ ಮಾಡುತ್ತದೆ.

ಕ್ಯಾರೆಟ್ ಮತ್ತು ರೋಸ್ ವಾಟರ್ (ಗುಲಾಬಿ ನೀರು)
ಚರ್ಮದ ಉತ್ತಮ ಕಾಂತಿಗೆ ಕ್ಯಾರೆಟ್ ಒಂದು ಉತ್ತಮ ತರಕಾರಿ. ಕ್ಯಾರೆಟ್ ಅನ್ನು ತುಂಡು ಮಾಡಿ ನಂತರ ಪೇಸ್ಟ್ ಮಾಡಿಕೊಂಡು ಇದಕ್ಕೆ ರೋಸ್ ವಾಟರಿನ ಕೆಲವು ಹನಿಗಳನ್ನು ಸೇರಿಸಬೇಕು. ನಂತರ ಇದನ್ನು ಮುಖ ಮತ್ತು ಕತ್ತಿನ ಭಾಗಗಳಿಗೆ ಹಚ್ಚಬೇಕು. ಮುಖ್ಯವಾಗಿ ಬಿಸಿಲು ಸೋಕುವ ಜಾಗಗಳಿಗೆ ಇದನ್ನು ಹಚ್ಚಿದರೆ ಹೆಚ್ಚು ಪರಿಣಾಮಕಾರಿಯಾಗಿ ಈ ಪೇಸ್ಟ್ ಕೆಲಸ ಮಾಡುತ್ತದೆ.

ಆಲೋವೆರಾ (ಲೊಳೆರಸ)
ಚರ್ಮವನ್ನು ಕಲೆರಹಿತವನ್ನಾಗಿ ಮಾಡಲು ಆಲೊವೆರಾಕ್ಕಿಂತ ಉತ್ತಮವಾದುದು ಇನ್ನೊಂದಿಲ್ಲವೆನ್ನಬಹುದು. ಇದರ ಜೆಲ್ ಅನ್ನು(ಲೊಳೆ) ತೆಗೆದು ಮುಖದ ಮೇಲೆ ದುಂಡಾಕಾರವಾಗಿ ಮುಖ ಮತ್ತು ಕತ್ತಿಗೆ ಭಾಗಕ್ಕೆಉಜ್ಜಬೇಕು. ಹತ್ತು ನಿಮಿಷಗಳ ನಂತರ ತೊಳೆಯುವುದರಿಂದ ಮುಖವು ಬೆಳ್ಳಗೆ ಮತ್ತು ಸುಂದರವಾಗಿ ಕಾಣುತ್ತದೆ. ಮೇಲೆ ಹೇಳಿರುವಂತಹ, ಮನೆಯಲ್ಲಿ ಮಾಡಬಹುದಾದಂತಹ ಫೇಶಿಯಲ್ ಗಳು ಚರ್ಮಕ್ಕೆ ಹೊಳಪು ನೀಡುತ್ತದೆ. ಈ ನೈಸರ್ಗಿಕ ವಸ್ತುಗಳನ್ನು ಬಳಸಿ ಇದನ್ನು ತಯಾರಿಸುವುದರಿಂದ, ಬ್ಲೀಚ್ ಸನ್ ಬರ್ನ್ ಹೋಗಲಾಡಿಸುವಲ್ಲಿ ಮತ್ತು ಚರ್ಮವು ಕಾಂತಿಯುತವಾಗಿ, ಸುಂದರವಾಗಿ ಕಾಣುವಲ್ಲಿ ಸಹಕಾರಿಯಾಗುತ್ತದೆ.



Click it and Unblock the Notifications
