Latest Updates
-
ಪ್ರೈಡ್ ಮಂತ್ 2026: ಮನೆಯವರ ಮುಂದೆ ನಿಮ್ಮ ನಿಜವಾದ ವ್ಯಕ್ತಿತ್ವವನ್ನು ಹೇಳಿಕೊಳ್ಳಲು ಹೆದರುತ್ತಿದ್ದೀರಾ? ಈ ಸಲಹೆಗಳು ನಿಮಗಾಗಿ! -
ಮಳೆಗಾಲದ ಮೊದಲ ಮಳೆ ಬಂತು: ನಿಮ್ಮ ಮನೆಯನ್ನು ದುಬಾರಿ ರಿಪೇರಿಯಿಂದ ರಕ್ಷಿಸಲು ಈ ಸಣ್ಣ ಕೆಲಸಗಳನ್ನು ಇಂದೇ ಮಾಡಿ! -
ಮಳೆಗಾಲದಲ್ಲಿ ಪದೇ ಪದೇ ಕಾಯಿಲೆ ಬೀಳ್ತಿದ್ದೀರಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ, ವೈರಲ್ ಜ್ವರದಿಂದ ದೂರವಿರಿ! -
ಆರ್ಸಿಬಿ ಗೆಲುವಿನ ಅಬ್ಬರ: ಬೆಂಗಳೂರಿನಲ್ಲಿ ವಿರಾಟ್-ಅನುಷ್ಕಾ ಸಂಭ್ರಮದ ವಿಡಿಯೋ ವೈರಲ್, ನೀವು ನೋಡಲೇಬೇಕಾದ ದೃಶ್ಯಗಳಿವು! -
ಮಳೆಗಾಲದಲ್ಲಿ ವ್ಯಾಯಾಮ ಮಾಡ್ತೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
ಪ್ರೈಡ್ ಮಂತ್ 2026: ಕ್ವೀರ್ ಜೋಡಿಗಳ ಭವಿಷ್ಯ ಭದ್ರಪಡಿಸಲು ಮತ್ತು ಕುಟುಂಬದ ಮನವೊಲಿಸಲು ಇಲ್ಲಿದೆ ವಿಶೇಷ ಮಾರ್ಗದರ್ಶಿ! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ: ದುಬಾರಿ ರಿಪೇರಿ ತಪ್ಪಿಸಲು ಇಲ್ಲಿವೆ ಸರಳ ಟಿಪ್ಸ್! -
ಬಿಸಿಲು-ಮಳೆಯ ಆಟದಲ್ಲಿ ಸುಸ್ತಾಗಿದ್ದೀರಾ? ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಆಹಾರ ಕ್ರಮಗಳನ್ನು ಮಿಸ್ ಮಾಡಬೇಡಿ! -
ದಿಢೀರ್ ಮಳೆಗೆ ರೆಡಿಯಾಗಿದ್ದೀರಾ? ಸ್ಟೈಲಿಶ್ ಆಗಿ ಕಾಣಲು ಮತ್ತು ಮಳೆಯಿಂದ ಪಾರಾಗಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ!
ಸೌಂದರ್ಯ ಎನ್ನುವುದು ಆಡಂಬರ ಅಲ್ಲ, ಅದು ಒಂದು ಶಿಸ್ತು
ಬೆಳಗ್ಗೆಯಿಂದ ಸಂಜೆಯವರೆಗೆ ದುಡಿತ. ಸಂಜೆ ಮನೆಗೆಲಸ, ರಾತ್ರಿ ಸುಸ್ತಾಗಿ ಮಲಗಿ ಬೇಗ ಎದ್ದಾಗ ಮತ್ತದೆ ನಿಮ್ಮ ಬಿಳಿಚಿಕೊಂಡ ಮುಖವನ್ನು ನೀವೇ ನೋಡಬೇಕು. ಇದು ಬಹುತೇಕ ಎಲ್ಲಾ ಜನರ ಸಾಮಾನ್ಯ ದಿನಚರಿಯಾಗಿರುತ್ತದೆ. ಸೌಂದರ್ಯವು ಕೇವಲ ಆಡಂಬರ ಅಲ್ಲ, ಅದು ಒಂದು ಶಿಸ್ತು. ಈ ಶಿಸ್ತನ್ನು ಪಾಲಿಸಿಕೊಂಡು ಬಂದರೆ ನಿಮಗೆ ಒಳ್ಳೆಯದು. ಅದಕ್ಕಾಗಿ ಬೆಳಗ್ಗೆ, ಸಂಜೆ ಮತ್ತು ರಾತ್ರಿ ಮಲಗುವ ಮುನ್ನ ಸೌಂದರ್ಯವನ್ನು ಕಾಪಾಡಿಕೊಳ್ಳಲು ಒಂದಷ್ಟು ಕೆಲಸವನ್ನು ಮಾಡಿ. ಇದರಿಂದ ನಿಮ್ಮ ತ್ವಚೆಗೆ ಬೇಕಾದ ಆರೈಕೆ ದೊರೆಯುತ್ತದೆ. ದಿನಾ ಪೂರ್ತಿ ಅಗತ್ಯ ಪ್ರಮಾಣದಲ್ಲಿ ನೀರನ್ನು ಸೇವಿಸುವುದರಿಂದ ನಿಮ್ಮ ತ್ವಚೆಗೆ ನೀರಿನಂಶ ದೊರೆಯುತ್ತದೆ. ಅಲ್ಲದೆ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದು ಸಹ ಒಳ್ಳೆಯದು. ಇದರಿಂದ ತ್ವಚೆಗೆ ಅಗತ್ಯ ಪೋಷಕಾಂಶ ದೊರೆಯುತ್ತದೆ.
ಇಷ್ಟೆಲ್ಲ ನಮಗೆ ಗೊತ್ತಿದ್ದರು ಸಹ ನಾವು ಇವುಗಳನ್ನು ಪಾಲಿಸಲು ಮರೆತು ಹೋಗುತ್ತೇವೆ. ಇದರಿಂದ ನಿಮ್ಮ ತ್ವಚೆಯು ನಿರ್ಜೀವವಾಗಿ ಕಳೆಯನ್ನು ಕಳೆದುಕೊಳ್ಳುತ್ತದೆ. ಬನ್ನಿ ಅದಕ್ಕಾಗಿ ನಾವು ಇಂದು ನಿಮಗೆ ಕೆಲವೊಂದು ಪರಿಹಾರಗಳನ್ನು ತಿಳಿಸಿಕೊಡುತ್ತೇವೆ. ಇವು ಕೆಲವೊಂದು ಶೀಘ್ರ ಪರಿಹಾರಗಳಾಗಿದ್ದು, ನಿಮಗೆ ಹೊಳೆಯುವ ತ್ವಚೆಯನ್ನು ನೀಡಲು ಇವು ಸಹಕರಿಸುತ್ತವೆ. ಇದರ ಜೊತೆಗೆ ಧೂಮಪಾನ ಮತ್ತು ಮದ್ಯಪಾನಗಳನ್ನು ತ್ಯಜಿಸಿ ಮತ್ತು ಆರೋಗ್ಯಕರವಾದ ಜೀವನ ಶೈಲಿಯ ಜೊತೆಗೆ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಇವುಗಳ ಮೂಲಕ ನಿಮಗೆ ಸುಂದರವಾದ ಹೊಳೆಯುವ ತ್ವಚೆಯು ಲಭಿಸುತ್ತದೆ. ಬನ್ನಿ ಇನ್ನು ತಡಮಾಡದೆ ನಿಮಗೆ ತಾಜಾ ಹಾಗು ಹೊಳೆಯುವ ತ್ವಚೆಯನ್ನು ನೀಡುವ ಸಲಹೆಗಳತ್ತ ಗಮನ ಹರಿಸೋಣ.

ಒಂದು ಲೈಟ್ ಬ್ಲಶ್
ನಿಮ್ಮ ಸುಸ್ತಾದ ತ್ವಚೆಗೆ ತಾಜಾತನವನ್ನು ನೀಡುತ್ತವೆ. ಅದಕ್ಕಾಗಿ ನಿಮ್ಮ ಕೆನ್ನೆಗೆ ಗುಲಾಬಿ ಬಣ್ಣದ ಕ್ರೀಮ್ ಬ್ಲಶ್ ನೀಡಿ. ಇವು ನಿಮ್ಮ ಸುಸ್ತಾದ ಕಣ್ಣುಗಳನ್ನು ಗಮನಿಸುವವರ ಗಮನವನ್ನು ತಮ್ಮತ್ತ ಸೆಳೆಯುತ್ತವೆ.

ನಿಮ್ಮ ಕಣ್ಣು ಹುಬ್ಬುಗಳನ್ನು ಕರ್ಲ್ ಮಾಡಿ
ಇದು ನಿಮ್ಮ ಮುಖದ ಕಳೆಯನ್ನು ಹೆಚ್ಚಿಸುವುದರ ಜೊತೆಗೆ ತಾಜಾತನ ಮತ್ತು ಹೊಳಪನ್ನು ನೀಡುತ್ತದೆ. ಇದು ನಿಮ್ಮ ಕಣ್ಣುಗಳ ಮೇಲೆ ಇರುವ ತ್ವಚೆಯನ್ನು ತೆರೆಯುತ್ತದೆ ಮತ್ತು ಅದು ಯಾವಾಗಲು ಕಳೆಯಾಗಿ ಕಾಣುವಂತೆ ಮಾಡುತ್ತದೆ. ನಿಮ್ಮ ಕಣ್ಣಿನ ಹುಬ್ಬುಗಳನ್ನು ಕರ್ಲ್ ಮಾಡಿಕೊಂಡ ಮೇಲೆ, ಒಂದು ಮಸಕರವನ್ನು ಹಚ್ಚಿ.

ಕನ್ಸೀಲರ್ ಅನ್ನು ಲೇಪಿಸಿ
ಕಣ್ಣಿನ ಕೆಳಗೆ ಕನ್ಸೀಲರ್ ಅನ್ನು ಲೇಪಿಸಿ. ಇಡೀ ಮುಖಕ್ಕೆ ಇದನ್ನು ಹಚ್ಚುವುದು ಬೇಡ. ಇದನ್ನು ಸ್ವಲ್ಪ ಹಚ್ಚಿಕೊಂಡರೆ ಸಾಕು, ಇದು ಇಡೀ ಮುಖಕ್ಕೆ ತಾಜಾತನವನ್ನು ನೀಡುತ್ತದೆ. ಇದು ನಿಮ್ಮ ಕಣ್ಣುಗಳ ಕೆಳಗೆ ಇರುವ ತ್ವಚೆಯ ಬಣ್ಣವನ್ನು ಸಮಗೊಳಿಸುತ್ತದೆ. ಇದರಿಂದ ನಿಮ್ಮ ಕಣ್ಣುಗಳು ದೊಡ್ಡದಾಗಿ ಕಾಣುವುದರ ಜೊತೆಗೆ, ನಿಮಗೆ ತಾಜಾ ತ್ವಚೆಯನ್ನು ನೀಡುತ್ತದೆ. ಜೊತೆಗೆ ನಿಮ್ಮ ಮುಖ ನಿದ್ದೆಗಣ್ಣಿನ ಮುಖದಂತೆ ಕಾಣುವುದಿಲ್ಲ.

ನಿಮ್ಮ ಮುಖವನ್ನು ಎಕ್ಸ್‌ಫೋಲಿಯೇಟ್ ಮಾಡಿ
ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದು, ಅದನ್ನು ಮೆದುವಾದ ಸ್ಕ್ರಬ್ಬರ್‌ನಿಂದ ಸ್ಕ್ರಬ್ ಮಾಡಿ. ಇದಕ್ಕಾಗಿ ನೀವು ಓಟ್‌ಮೀಲ್ಸ್ ಸಹ ಬಳಸಬಹುದು. ಮುಖಕ್ಕೆ ಯಾವಾಗಲು ಸ್ವಾಭಾವಿಕವಾದ ಸ್ಕ್ರಬ್ಬರ್ ಅನ್ನು ಬಳಸಿ. ಇದು ನಿಮ್ಮ ಮುಖದಿಂದ ಸತ್ತ ಕೋಶಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ತ್ವಚೆಯ ಬಣ್ಣವನ್ನು ತಿಳಿಗೊಳಿಸುತ್ತದೆ.

ಐಸ್ ಕ್ಯೂಬ್ ಕಣ್ಣುಗಳ ಅಡಿಯಲ್ಲಿ
ಕಣ್ಣುಗಳ ಅಡಿಯಲ್ಲಿ ಐಸ್ ಕ್ಯೂಬ್‌ಗಳನ್ನು ಇರಿಸಿಕೊಂಡು ಐದು ನಿಮಿಷಗಳ ಕಾಲ ಕಣ್ಣು ಮುಚ್ಚಿ. ಇದು ನಿಮ್ಮ ಕಣ್ಣುಗಳ ಊತ ಮತ್ತು ಇಳಿಬೀಳುವಿಕೆಗಳನ್ನು ತಡೆಯುತ್ತದೆ. ಸುಸ್ತಾದ ಕಣ್ಣುಗಳಿಗೆ ಇದರಿಂದ ಸ್ವಲ್ಪ ಆರಾಮ ದೊರೆಯುತ್ತದೆ. ಇದರ ಜೊತೆಗೆ ನಿಮ್ಮ ಮುಖದ ಮೇಲೆ ಐಸ್ ಕ್ಯೂಬ್‌ಗಳನ್ನು ಉಜ್ಜಿಕೊಳ್ಳಿ. ಇದರಿಂದ ಸಹ ಊತ ಇಳಿಯುತ್ತದೆ.

ಕಣ್ಣಿನ ಕ್ರೀಮ್ ಅನ್ನು ಫ್ರಿಡ್ಜ್‌ನಲ್ಲಿಡಿ
ನಿಮ್ಮ ಕಣ್ಣಿನ ಕ್ರೀಮ್ ಅನ್ನು ಫ್ರಿಡ್ಜ್‌ನಲ್ಲಿಡಿ. ಸೆರಮ್ ಮತ್ತು ಕಣ್ಣಿನ ಕ್ರೀಮ್ ಬಳಸುವ ಅಭ್ಯಾಸವಿರುವವರು ಅದನ್ನು ಫ್ರಿಡ್ಜ್‌ನಲ್ಲಿಟ್ಟು, ಲೇಪಿಸಿಕೊಳ್ಳಿ. ಇದರಿಂದ ನಿಮ್ಮ ಕಣ್ಣಿನ ಕೆಳಗೆ ಇರುವ ತ್ವಚೆಯು ಊತ ಬರುವುದು ತಡೆಯುತ್ತದೆ. ಜೊತೆಗೆ ಇವುಗಳಿಗೆ ಬಿಗಿತನವು ಹೆಚ್ಚಾಗುತ್ತದೆ.

ನಿಮ್ಮ ಕಣ್ಣುಗಳಿಗೆ ಮಸಾಜ್ ಮಾಡಿ
ನಿಮ್ಮ ಮುಖದಲ್ಲಿ, ಕಣ್ಣಿನ ಮೇಲೆ ಮತ್ತು ಕೆಳಗೆ ಇರುವ ಭಾಗವನ್ನು ಮಸಾಜ್ ಮಾಡಿ. ಕಣ್ಣಿಗೆ ಕ್ರೀಮ್ ಹಚ್ಚುವಾಗ ಇದನ್ನು ಮಾಡಿ. ಇದು ನಿಮ್ಮ ಮುಖಕ್ಕೆ ಪ್ರಸಾರಣಗೊಳ್ಳುವ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಮತ್ತು ಕಣ್ಣುಗಳ ಊತ ಮತ್ತು ಇಳಿಬೀಳುವಿಕೆಗಳನ್ನು ಕಡಿಮೆ ಮಾಡುತ್ತದೆ. ಇವುಗಳು ನಿಮ್ಮ ಮುಖವನ್ನು ತಾಜಾ ಹಾಗು ಲವಲವಿಕೆಯಿಂದ ಇರಿಸಲು ನೆರವಾಗುತ್ತದೆ.



Click it and Unblock the Notifications