Latest Updates
-
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ -
ಒಂದು ಹನಿ ಎಣ್ಣೆ ಕೆಳಗೆ ಬೀಳದಂತೆ ಬಾಟಲಿಗೆ ಹಾಕೋ ಐಡಿಯಾ ಗೊತ್ತಾ? ಈ ಟ್ರಿಕ್ಸ್ ನೀವೆಂದು ಬಳಸಿರಲ್ಲ! -
ಸ್ಟೌವ್ ಬೇಡ, ಎಣ್ಣೆ ಬೇಡ..! 5 ನಿಮಿಷದಲ್ಲಿ ಸಿದ್ಧವಾಗುತ್ತೆ ಈ ಇಡಿಚ್ಚ ಮೊಸರು ಚಟ್ನಿ! ಒಮ್ಮೆ ಟ್ರೈ ಮಾಡಿ -
ಬಾಯಿ ಚಪ್ಪರಿಸಿ ಸವಿಯುವ ಮಾವಿನಮಿಡಿ ಉಪ್ಪಿನಕಾಯಿ: ಮನೆಯಲ್ಲೇ ಮಾಡುವ ವಿಧಾನ! -
Eid-ul-Fitr 2026: ಮಾ.20 ಅಥವಾ ಮಾ.21? ಭಾರತದಲ್ಲಿ ರಂಜಾನ್ ಯಾವ ದಿನ? ರಜೆ ಯಾವಾಗ? ತಿಳಿಯಿರಿ -
ಗುರು-ಶುಕ್ರನಿಂದ ಗಜಕೇಸರಿ ರಾಜಯೋಗ: ಯುಗಾದಿ ಬಳಿಕ ಈ ರಾಶಿಯವರ ಜೀವನದಲ್ಲಿ ಅದೃಷ್ಟ! -
ಶನಿ ಕೃಪೆ ಶುರು.. ಹಣ, ಯಶಸ್ಸು, ಶುಭ ಸುದ್ದಿ! ಯುಗಾದಿ ಬಳಿಕ ಈ 3 ರಾಶಿಗಳಿಗೆ ಭಾರೀ ಅದೃಷ್ಟ
ಫೇಸ್ ಕ್ರೀಮ್ ಹಚ್ಚುವುದಕ್ಕೂ ನೀತಿ, ನಿಯಮವಿದೆ...
ಸುಂದರ ಮುಖ, ಕಾಂತಿಯುಕ್ತ ತ್ವಚೆ, ಕಲೆಯಿಲ್ಲದ ಚರ್ಮ ಯಾರಿಗೆ ಬೇಡ? ಇದಕ್ಕೆ ಸೂಕ್ತ ಆರೈಕೆ ಅಗತ್ಯ. ಈ ಅಗತ್ಯವನ್ನು ಮುಖಲೇಪಗಳು ಸಮರ್ಥವಾಗಿ ಪೂರೈಸುತ್ತವೆ. ಆದರೆ ಯಾವುದೇ ವಿಧಾನಗಳನ್ನು ಅನುಸರಿಸುವ ಮುನ್ನ ಕೈಗೊಳ್ಳಬೇಕಾದ ಎಚ್ಚರಿಕೆಗಳಂತೆಯೇ ಮುಖಲೇಪ ಹಚ್ಚಲೂ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅಗತ್ಯ. ಮುಖಲೇಪವನ್ನು ಸರಿಯಾದ ಕ್ರಮದಲ್ಲಿ ಅನುಸರಿಸಿದರೆ ಮಾತ್ರ ಅಪೇಕ್ಷಿತ ಪರಿಣಾಮವನ್ನು ಪಡೆಯಬಹುದು. ಒಂದು ವೇಳೆ ಅಗತ್ಯಕ್ಕಿಂತಲ್ಲೂ ಹೆಚ್ಚು ಹೊತ್ತು ಲೇಪನವನ್ನು ಒಣಗಲು ಬಿಟ್ಟರೆ ಅಥವಾ ತಪ್ಪು ಕ್ರಮದಲ್ಲಿ ಹಚ್ಚಿದರೆ ಇದು ಚರ್ಮಕ್ಕೆ ಒಳ್ಳೆಯದು ಮಾಡುವುದಕ್ಕಿಂತ ಹೆಚ್ಚು ಹಾನಿಯನ್ನೇ ಮಾಡಬಹುದು.
ಆದ್ದರಿಂದ ಯಾವುದೇ ಮುಖಲೇಪವಾದರೂ ಸಂಪೂರ್ಣವಾಗಿ ಒಣಗಲು ಬಿಡಲೇಬಾರದು. ಏಕೆಂದರೆ ಒಣಗಿದ ಮುಖಲೇಪ ಚರ್ಮಕ್ಕೆ ಪೋಷಕಾಂಶ ನೀಡುವ ಬದಲು ಚರ್ಮದಿಂದಲೇ ಅಗತ್ಯ ತೈಲ ಮತ್ತು ಇತರ ದ್ರವಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ನೆರಿಗೆಗಳು ಮೂಡುತ್ತವೆ ಹಾಗೂ ಒಣಚರ್ಮ ವಿಪರೀತವಾಗಿ ಒಣಗಿ ಬಿರಿಬಿಡಲು, ಪರೆ ಏಳಲು ಆರಂಭಿಸುತ್ತದೆ. ಇಂತಹ ಇನ್ನೂಹಲವು ಮುನೆಚ್ಚರಿಕೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದ್ದು ಇವುಗಳನ್ನು ಅನುಸರಿಸುವ ಮೂಲಕ ಮುಖಲೇಪದ ಅತ್ಯುತ್ತಮ ಪ್ರಯೋಜನವನ್ನು ಪಡೆಯಬಹುದು: ಸುಂದರವಾಗಿ ಕಾಣಲು ಯದ್ವಾ-ತದ್ವಾ ಕ್ರೀಮ್ ಬಳಸಬೇಡಿ!

ಮುಖಲೇಪವನ್ನು ಸ್ನಾನದ ಬಳಿಕ ಹಚ್ಚಿ
ಕೆಲವರು ಮುಖಲೇಪವನ್ನು ಹಚ್ಚಿ ಕೊಂಚ ಸಮಯದ ಬಳಿಕ ಸ್ನಾನ ಮಾಡುವುದೇ ಉತ್ತಮ ಎಂಬ ಅಭಿಪ್ರಾಯ ಹೊಂದಿದ್ದಾರೆ. ಏಕೆಂದರೆ ಮುಖಲೇಪ ನಿವಾರಿಸಲು ಪ್ರತ್ಯೇಕವಾಗಿ ಸಮಯ ವ್ಯಯಿಸಬೇಕಾಗಿಲ್ಲ ಎಂಬುದು ಇವರ ಲೆಕ್ಕಾಚಾರವಾಗಿದೆ. ಆದರೆ ಚರ್ಮದ ಆರೈಕೆಯ ವಿಷಯದಲ್ಲಿ ಈ ಲೆಕ್ಕಾಚಾರ ತಪ್ಪಾಗುತ್ತದೆ. ಸರಿಯಾದ ಕ್ರಮವೆಂದರೆ ಮುಖಲೇಪವನ್ನು ಸ್ನಾನದ ಬಳಿಕ ಹಚ್ಚುವುದು. ಏಕೆಂದರೆ ಸ್ನಾನದ ಸಮಯದಲ್ಲಿ ಮುಖದ ಮೇಲೆ ಬಿದ್ದ ಬಿಸಿನೀರು ಚರ್ಮದ ಸೂಕ್ಷ್ಮರಂಧ್ರಗಳನ್ನು ತೆರೆದಿರುತ್ತದೆ. ಈ ಸೂಕ್ಷ್ಮರಂಧ್ರಗಳಿಂದ ಮುಖಲೇಪದಲ್ಲಿರುವ ಪೋಷಕಾಂಶಗಳು ಗರಿಷ್ಟ ಪ್ರಮಾಣದಲ್ಲಿ ಚರ್ಮಕ್ಕೆ ಲಭ್ಯವಾಗಲು ಸಾಧ್ಯವಾಗುತ್ತದೆ. ಇದರಿಂದ ಚರ್ಮದ ಕಾಂತಿ ಮತ್ತು ಆರೋಗ್ಯ ಹೆಚ್ಚುತ್ತದೆ.
ಕೊಂಚ ಮಸಾಜ್ ಮೂಲಕ ಹಚ್ಚಿ
ಮುಖಲೇಪವನ್ನು ಸುಮ್ಮನೇ ಬಣ್ಣ ಬಳಿದಂತೆ ಹಚ್ಚುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಬೆರಳ ತುದಿಗಳಿಂದ ಕೊಂಚವೇ ಮಸಾಜ್ ಮಾಡುತ್ತಾ ಮುಖಕ್ಕೆ ಹಚ್ಚಿಕೊಳ್ಳುವ ಮೂಲಕ ಪೋಷಕಾಂಶಗಳು ಚರ್ಮದ ಆಳಕ್ಕೆ ಇಳಿದು ಉತ್ತಮ ಪೋಷಣೆ ನೀಡಲು ನೆರವಾಗುತ್ತದೆ. ಸುಮಾರು ಹತ್ತು ನಿಮಿಷಗಳ ಕಾಲ ನಯವಾಗಿ ಮಸಾಜ್ ಮಾಡುತ್ತಾ ಹಚ್ಚಿಕೊಳ್ಳಿ. ಬಳಿಕ ಹದಿನೈದು ನಿಮಿಷ ಹಾಗೇ ಬಿಟ್ಟು ನಂತರ ತಣ್ಣೀರಿನಿಂದ ತೊಳೆದುಕೊಳ್ಳಿ.
ಮುಖಲೇಪ ಹಚ್ಚಿದ ಬಳಿಕ ತೀರಾ ಒಣಗಲು ಬಿಡಬೇಡಿ
ಸಾಮಾನ್ಯವಾಗಿ ಮುಖಲೇಪ ಹಚ್ಚಿದ ಬಳಿಕ ಹೆಚ್ಚಿನವರು ಹಾಗೇ ಒಣಗಲು ಬಿಡುತ್ತಾರೆ. ಆದರೆ ಇದು ಅತಿ ಅಪಾಯಕಾರಿಯಾಗಿದೆ. ಏಕೆಂದರೆ ಒಣಗಿದ ಮುಖಲೇಪ ದ್ರವವನ್ನು ಹೀರಿಕೊಳ್ಳುವ ಗುಣ ಹೊಂದಿರುವ ಕಾರಣ ಇದು ಚರ್ಮಕ್ಕೆ ಪೋಷಣೆ ನೀಡುವ ಬದಲು ಚರ್ಮದಿಂದಲೇ ಅಗತ್ಯ ತೈಲ, ಆರ್ದ್ರತೆ ಮತ್ತಿತರ ಪೋಷಕಾಂಶಗಳನ್ನು ಹೀರಿ ಚರ್ಮವನ್ನು ಒಣಗಿಸುತ್ತದೆ. ಆದ್ದರಿಂದ ಮುಖಲೇಪ ಒಣಗುವ ಮುನ್ನವೇ ತಣ್ಣೀರಿನಿಂದ ತೊಳೆದುಕೊಳ್ಳುವುದು ಸರಿಯಾದ ಕ್ರಮವಾಗಿದೆ.
ಟೋನರ್ ಹಚ್ಚಿ
ಪ್ರತಿಬಾರಿ ಮುಖಲೇಪ ಹಚ್ಚಿ ತೊಳೆದುಕೊಂಡ ಬಳಿಕ ಫೇಸ್ ಟೋನರ್ ದ್ರವವನ್ನು ಹಚ್ಚಿಕೊಳ್ಳುವುದು ಅಗತ್ಯ. ಗುಲಾಬಿ ನೀರು ಒಂದು ನೈಸರ್ಗಿಕ ಟೋನರ್ ಆಗಿದೆ. ಇದರಿಂದ ಮುಖ ನವತಾರುಣ್ಯ ಮತ್ತು ಆರೋಗ್ಯಕರವಾಗಿರುತ್ತದೆ. ಇದರೊಂದಿಗೆ ಉತ್ತಮ ಗುಣಮಟ್ಟದ ತೇವಕಾರಕ ಅಥವಾ ಮಾಯಿಶ್ಚರೈಸರ್ ಬೆರೆಸಿ ಹಚ್ಚಿಕೊಳ್ಳುವುದು ಉತ್ತಮ.



Click it and Unblock the Notifications














