Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿಂಪಲ್ ಬ್ಯೂಟಿ ಟಿಪ್ಸ್: ಸ್ಟ್ರಾಬೆರಿ ಫೇಸ್ ಸ್ಕ್ರಬ್!
ಸ್ಟ್ರಾಬೆರಿ ಹಣ್ಣುಗಳ ವಿಶೇಷತೆ ಏನು? ಹುಳಿ ಸಿಹಿ ಇರುವ ಈ ಹಣ್ಣಿನ ಬೀಜಗಳು ಇದರ ಹೊರಗಿರುತ್ತವೆ ಎಂಬುದೊಂದು ವಿಶೇಷವಾದರೆ ಹಣ್ಣನ್ನು ಸೇವಿಸುವ ಹೊರತಾಗಿ ತ್ವಚೆಯ ಆರೋಗ್ಯ ಮತ್ತು ಕಾಂತಿ ವೃದ್ಧಿಸುವ ಪ್ರಸಾಧನವಾಗಿಯೂ ಬಳಸಬಹುದು
ತ್ವಚೆಯನ್ನು ಸುಕೋಮಲಗೊಳಿಸುವುದಕ್ಕಾಗಿ ಹಲವಾರು ವಿಧಾನಗಳನ್ನು ನೀವು ಪ್ರಯತ್ನಿಸಿರುತ್ತೀರಿ ಅಲ್ಲವೇ? ಆದರೆ ಇವುಗಳು ನಿಮಗೆ ಬಯಸುವ ಫಲವನ್ನು ನೀಡಿಲ್ಲವೇ? ಹಾಗಿದ್ದರೆ ನೀವೇ ತಯಾರಿಸಬಹುದಾದ ಸ್ಟ್ರಾಬೆರಿ ಫೇಸ್ ಸ್ಕ್ರಬ್ ಮುಖಕ್ಕೆ ಯಾವ ರೀತಿಯಲ್ಲಿ ಪರಿಣಾಮವನ್ನು ಉಂಟುಮಾಡಲಿದೆ ಎಂಬುದನ್ನು ಕಂಡುಕೊಳ್ಳೋಣ.

ಸ್ಟ್ರಾಬೆರ್ರಿಯಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ವಿಟಮಿನ್ ಸಿ, ಮೊಡವೆಯನ್ನು ಹೋಗಲಾಡಿಸಿ ಒಣ ತ್ವಚೆಯನ್ನು ಕಾಂತಿಯುಕ್ತಗೊಳಿಸುತ್ತದೆ ಮತ್ತು ಹೊಸ ತ್ವಚೆಯ ಕೋಶಗಳನ್ನು ಮರುಉತ್ಪಾದಿಸುತ್ತದೆ. ಹಾಗಿದ್ದರೆ ಸ್ಟ್ರಾಬೆರಿ ಫೇಸ್ ಸ್ಕ್ರಬ್ ಅನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ನವ ತಾರುಣ್ಯದ ತ್ವಚೆಗಾಗಿ ಸ್ಟ್ರಾಬೆರಿ ಹಣ್ಣಿನ ಫೇಸ್ ಪ್ಯಾಕ್
ಸ್ಟೆಪ್ #1
100 ಗ್ರಾಮ್ನಷ್ಟು ಸ್ಟ್ರಾಬೆರಿಯನ್ನು ತೆಗೆದುಕೊಂಡು ಅದನ್ನು ನುಣ್ಣನೆ ಪೇಸ್ಟ್ ಮಾಡಿಕೊಳ್ಳಿ
ಸ್ಟೆಪ್ #2
1 ಚಮಚದಷ್ಟು ಲಿಂಬೆ ರಸವನ್ನು ಮತ್ತು ಎರಡು ಚಮಚ ಮಿಲ್ಕ್ ಪೌಡರ್ ಸೇರಿಸಿ. ಫೋರ್ಕ್ ಬಳಸಿಕೊಂಡು, ಎಲ್ಲಾ ಸಾಮಗ್ರಿಗಳನ್ನು ಮಿಶ್ರ ಮಾಡಿ ಮತ್ತು ನುಣ್ಣನೆಯ ಪೇಸ್ಟ್ ತಯಾರಿಸಿ.
ಸ್ಟೆಪ್ #3
ನಿಮ್ಮ ಮುಖವನ್ನು ತೊಳೆದುಕೊಳ್ಳಿ ಮತ್ತು ಮಾಸ್ಕ್ನಂತೆ ನಿಮ್ಮ ಮುಖಕ್ಕೆ ಹಾಗೂ ಕುತ್ತಿಗೆಗೆ ಹಚ್ಚಿ. 15 ನಿಮಿಷಗಳ ಕಾಲ ಹಾಗೆಯೇ ಬಿಡಿ.
ಸ್ಟೆಪ್ #4
ಮಾಸ್ಕ್ ಅನ್ನು ಬಿಡಿಸಿಕೊಳ್ಳಲು ಸ್ವಲ್ಪ ನೀರನ್ನು ಚುಮುಕಿಸಿ. ವೃತ್ತಾಕಾರವಾಗಿ ಸ್ಕ್ರಬ್ ಮಾಡಿಕೊಳ್ಳಿ. ಇದರಿಂದ ರಕ್ತ ಪ್ರವಾಹ ವೃದ್ಧಿಗೊಳ್ಳುತ್ತದೆ. 5 ನಿಮಿಷಗಳ ಕಾಲ ಹೀಗೆ ಮಾಡಿ. ಸ್ಟ್ರಾಬೆರಿಯಲ್ಲಿದೆ ಟಾಪ್ 10 ಆರೋಗ್ಯಕರ ಗುಣಗಳು
ಸ್ಟೆಪ್ #5
ಲಿಂಬೆ ರಸವಿರುವ ಕಪ್ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ತಣ್ಣನೆಯ ನೀರನ್ನು ಮುಖಕ್ಕೆ ಚಿಮುಕಿಸಿಕೊಳ್ಳಿ.
ಸ್ಟೆಪ್ #6
ವಾರದಲ್ಲಿ ಎರಡು ಬಾರಿ ಸ್ಟ್ರಾಬೆರಿ ಫೇಸ್ ಸ್ಕ್ರಬ್ ಅನ್ನು ಬಳಸಿಕೊಂಡು ಮೃತಕೋಶಗಳನ್ನು ನಿವಾರಿಸಿಕೊಳ್ಳಿ. ತೆರೆದ ರಂಧ್ರಗಳನ್ನು ಮುಚ್ಚಿ ಸ್ವಚ್ಛ ಮುಖಕಾಂತಿಯನ್ನು ನಿಮಗೆ ಒದಗಿಸುತ್ತದೆ. ಸ್ಟ್ರಾಬೆರಿ ಫೇಸ್ ಸ್ಕ್ರಬ್ ಅನ್ನು ಪ್ರಯತ್ನಿಸಿ ನೋಡಿ ಮತ್ತು ಫಲಿತಾಂಶ ನಿಮ್ಮನ್ನು ಅಚ್ಚರಿಗೊಳಪಡಿಸಲಿದೆ. ನಿಮ್ಮ ಕಾಮೆಂಟ್ ಅನ್ನು ನಮಗೆ ತಿಳಿಸಿ.



Click it and Unblock the Notifications




