Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೌಂದರ್ಯ ಕೆಡಿಸುವ ಮುಖದ ಮೇಲಿನ ಕೂದಲು! ಚಿಂತೆ ಬಿಡಿ...
ಮಾನವನ ದೇಹದಲ್ಲಿ ಕೂದಲುಗಳು ಸರ್ವೇ ಸಾಮಾನ್ಯವಾಗಿದ್ದು, ಸೌಂದರ್ಯ ವಿಷಯಕ್ಕೆ ಬಂದಾಗ ಇವುಗಳು ಮುಜುಗರವನ್ನುಂಟು ಮಾಡುವ ಪ್ರಸಂಗವೂ ಇದೆ. ಅದರಲ್ಲೂ ಸ್ತ್ರೀಯ ಮುಖದಲ್ಲಿ ಕೂದಲು ತುಸು ದಪ್ಪವಾಗಿ ಬೆಳೆದಿದೆ ಎಂದಾದಲ್ಲಿ ಅದನ್ನು ನಿವಾರಿಸಿಕೊಳ್ಳಲು ಬ್ಯೂಟಿಪಾರ್ಲರ್ಗೆ ಭೇಟಿಕೊಡಲೇ ಬೇಕಾಗುತ್ತದೆ. ತುಟಿಯ ಮೇಲೆ, ಕೆನ್ನೆ, ಹೀಗೆ ಹಾರ್ಮೋನುಗಳಿಂದಾಗಿ ಕೂದಲು ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ಮುಖದ ಕೂದಲನ್ನು ಶಾಶ್ವತವಾಗಿ ಹೋಗಲಾಡಿಸಬೇಕೆ?
ಈ ಕೂದಲುಗಳ ನಿವಾರಣೆಗೆ ಪ್ರತೀ ವಾರ, ಹದಿನೈದು ದಿನಗಳಿಗೊಮ್ಮೆ ಪಾರ್ಲರ್ಗೆ ಹೋಗುವುದು ಅಸಾಧ್ಯದ ಮಾತು. ಹಾಗಿದ್ದರೆ ಈ ಕೂದಲುಗಳ ನಿವಾರಣೆಗೆ ನೀವೇ ಖುದ್ದು ಮನೆಯಲ್ಲೇ ತಯಾರಿಸಬಹುದಾದ ಫೇಸ್ ಪ್ಯಾಕ್ನ್ನು ಬಳಸಿ ನೋಡಬಹುದಲ್ಲವೇ? ಪಪ್ಪಾಯದ ಫೇಸ್ ಪ್ಯಾಕ್ ಬೇಡದೇ ಇರುವ ಕೂದಲಿನ ನಿವಾರಣೆಗೆ ಹೆಚ್ಚು ಪರಿಣಾಮಕಾರಿಯಾದುದು. ಇದನ್ನು ನೀವೇ ಮನೆಯಲ್ಲಿ ತಯಾರಿಸುವುದು ಹೇಗೆ ಎಂಬುದನ್ನು ಇಂದಿಲ್ಲಿ ಅರಿತುಕೊಳ್ಳೋಣ.

ಬೇಕಾಗುವ ಸಾಮಾಗ್ರಿ
*ಪಪ್ಪಾಯ
*ಚಿಟಿಕೆಯಷ್ಟು ಅರಿಶಿನ ಪಪ್ಪಾಯಿ-ಲೋಳೆ ಸರ ಫೇಸ್ ಪ್ಯಾಕ್: ಕಡಿಮೆ ವೆಚ್ಚ, ಅಧಿಕ ಲಾಭ!
ವಿಧಾನ ಮತ್ತು ಹಚ್ಚುವ ಪ್ರಕ್ರಿಯೆ
ಪಪ್ಪಾಯವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ ಮತ್ತು ನುಣ್ಣಗೆ ಅರೆದುಕೊಳ್ಳಿ. ಮಿಕ್ಸಿಯನ್ನು ಬಳಸಿ ಇದನ್ನು ನುಣ್ಣಗೆ ಗ್ರೈಂಡ್ ಮಾಡಿ ಕೊಂಡು, ಇದಕ್ಕೆ ಚಿಟಿಕೆಯಷ್ಟು ಅರಿಶಿನವನ್ನು ಸೇರಿಸಿ, ದಪ್ಪಗೆ ಪೇಸ್ಟ್ ನಂತೆ ಮಾಡಿಕೊಂಡು, ತ್ವಚೆಯ ಮೇಲೆ ಚೆನ್ನಾಗಿ ಮಸಾಜ್ ಮಾಡಿಕೊಂಡು ಅದನ್ನು ಒಣಗಲು ಬಿಡಿ.
ಇನ್ನು ಸುಮಾರು 15 ನಿಮಿಷ ಬಿಟ್ಟು, ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ. ಪ್ರತೀ ದಿನ ಈ ವಿಧಾನವನ್ನು ಅನುಸರಿಸಿ, ಈ ಮಾಸ್ಕ್ ಹಚ್ಚಿಕೊಂಡ ಭಾಗದಲ್ಲಿ ಕೂದಲಿನ ಬೆಳೆಯುವಿಕೆ ನಿಧಾನವಾಗಿ ನಿಲ್ಲುವುದನ್ನು ನೀವು ಗಮನಿಸಿಕೊಳ್ಳಬಹುದಾಗಿದೆ.
ಪ್ರತಿ ನಿತ್ಯವೂ ಇದನ್ನು ಬಳಸುವುದು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಅಂತೆಯೇ ಶಾಶ್ವತವಾಗಿ ಕೂದಲಿನ ಬೆಳವಣಿಗೆಯ ಸಮಸ್ಯೆಯಿಂದ ಪಾರಾಗಬಹುದು. ದೇವತೆಗಳ ಹಣ್ಣು-ಪಪ್ಪಾಯಿ ಹಣ್ಣಿನಲ್ಲಿದೆ ಸೌಂದರ್ಯದ ಶಕ್ತಿ
ಪಪ್ಪಾಯವು ಎಂಜೀಮ್ಗಳನ್ನು ಒಳಗೊಂಡಿದ್ದು ಕೂದಲಿನ ಕಿರುಚೀಲಗಳನ್ನು ತುಂಡುಮಾಡುತ್ತದೆ. ಆದ್ದರಿಂದ ಫೇಸ್ ಪ್ಯಾಕ್ ಅನ್ನು ನಿತ್ಯವೂ ಬಳಸುವುದು ಮುಖದ ಬೇಡದ ಕೂದಲನ್ನು ನಿವಾರಿಸುತ್ತದೆ.
ಅದರಲ್ಲೂ,ಈ ಫೇಸ್ ಪ್ಯಾಕ್ ತಯಾರಿಸಿ ಅದನ್ನು ವಾರಗಳವರೆಗೆ ಫ್ರಿಡ್ಜ್ನಲ್ಲಿರಿಸಿ ಕಾಪಾಡಿಕೊಳ್ಳಬಹುದಾಗಿದೆ. ಹೀಗೆ ಮಾಡುವುದರಿಂದ ನೀವು ಬ್ಯುಸಿಯಾಗಿದ್ದರೂ ಈ ಪ್ಯಾಕ್ ಅನ್ನು ತಯಾರಿ ಮಾಡಬೇಕೆಂದೇನಿಲ್ಲ. ಹಾಗೆಯೇ ಸಿದ್ಧಪಡಿಸಿದ ಫ್ಯಾಕ್ ಅನ್ನು ಬಳಸಿಕೊಳ್ಳಬಹುದಾಗಿದೆ. ಹಾಗಿದ್ದರೆ ತಡ ಮಾಡದೇ ಈ ಫೇಸ್ ಪ್ಯಾಕ್ ಅನ್ನು ಬಳಸಿ ನಮಗೆ ಫಲಿತಾಂಶವನ್ನು ತಿಳಿಸಿ.



Click it and Unblock the Notifications


