Latest Updates
-
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ
ತ್ವಚೆಯ ಲವಲವಿಕೆಗೆ, ಹಾಲು-ಜೇನಿನ ಫೇಸ್ ಪ್ಯಾಕ್
ವಯಸ್ಸಾಗುವುದು ನೈಸರ್ಗಿಕ ಪ್ರಕ್ರಿಯೆ ಎಂದೆನಿಸಿದ್ದು ಇದರಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ವಯಸ್ಸಾಗುವಿಕೆಯು ನಮ್ಮ ತ್ವಚೆಯಲ್ಲಿ ಕೂಡಲೇ ಪರಿಣಾಮವನ್ನು ಉಂಟುಮಾಡುವುದರಿಂದಾಗಿ ಇದನ್ನು ಮರೆಮಾಚಲು ಸಾಧ್ಯವೇ ಇಲ್ಲ ಎಂಬುದಾಗಿ ಹೇಳಬಹುದು. ವಯಸ್ಸಾದಾಗ ಮುಖದಲ್ಲಿ ಕಪ್ಪು ಕಲೆಗಳು ಮತ್ತು ನೆರಿಗೆಗಳು ಉಂಟಾಗುತ್ತದೆ ಇದು ನಿಧಾನವಾಗಿ ತ್ವಚೆಯನ್ನು ಆವರಿಸಿಕೊಳ್ಳುತ್ತದೆ. ಹಾಲಿನ ಕೆನೆಯಂತಹ ತ್ವಚೆಯ ಸೌಂದರ್ಯ ನಿಮ್ಮದಾಗಿಸಿಕೊಳ್ಳಿ!
ತ್ವಚೆಯ ಇಂತಹ ಸಮಸ್ಯೆಗಳನ್ನು ಹೋಗಲಾಡಿಸಲು ಚಿಕಿತ್ಸೆಗಳು ಲಭ್ಯವಿದ್ದರೂ ಅದು ನೈಸರ್ಗಿಕವಾಗಿದ್ದರೆ ಫಲಿತಾಂಶ ಹೆಚ್ಚು ಸಮಯ ಇರುತ್ತದೆ. ಆಧುನಿಕ ಚಿಕಿತ್ಸೆಗಳಿಗಾಗಿ ನೀವು ಎಷ್ಟೇ ಖರ್ಚು ಮಾಡಿದರೂ ಇದು ಪರಿಣಾಮಕಾರಿ ಪ್ರಯೋಜನವನ್ನು ನೀಡಲಿಕ್ಕಿಲ್ಲ. ನೈಸರ್ಗಿಕ ವಿಧಾನ ಎಂದರೆ ಕೈಗೆಟಕುವ ಸಾಮಾಗ್ರಿಗಳಿಂದ ತ್ವಚೆಯ ಕಾಂತಿಯನ್ನು ಉತ್ತಮಗೊಳಿಸುವುದಾಗಿದೆ. ಅಂತಹುದೇ ವಿಶೇಷ ಸೌಂದರ್ಯ ರೆಸಿಪಿಯೊಂದಿಗೆ ನಾವು ಬಂದಿದ್ದು ಇದು ಮುಖದ ಕಪ್ಪು ಕಲೆಗಳು, ಮೊಡವೆ ಮತ್ತು ನೆರಿಗೆಗಳಿಗೆ ವಿದಾಯ ಹೇಳುವಂತಹದ್ದಾಗಿದೆ.

ಹಾಲು ಮತ್ತು ಜೇನು ಬಳಸಿ ಅದರಿಂದ ತಯಾರಿಸಲಾದ ಮಾಸ್ಕ್ ತ್ವಚೆಯ ಸಮಸ್ಯೆಗಳನ್ನು ದೂರಮಾಡುವುದು ಖಂಡಿತ ಅಂತೆಯೇ ವಯಸ್ಸಾಗುವಿಕೆಯನ್ನು ಮುಖದಲ್ಲಿ ಗೋಚರಿಸಲು ಬಿಡುವುದಿಲ್ಲ. ಈ ಎರಡೂ ನೈಸರ್ಗಿಕ ಉತ್ಪನ್ನಗಳು ತಮ್ಮ ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿವೆ. ತ್ವಚೆಯನ್ನು ಹೈಡ್ರೇಟ್ ಮಾಡುವ ಗುಣವನ್ನು ಜೇನು ಹೊಂದಿದ್ದು ಬಿಗಿಗೊಳಿಸುವ ಲಕ್ಷಣ ಕೂಡ ಇದರಲ್ಲಿದೆ. ಫಳ ಫಳ ಹೊಳೆಯುವ ಮುಖದ ಅಂದಕ್ಕೆ ಸರಳ ಟಿಪ್ಸ್
ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶಗಳು ತ್ವಚೆಗೆ ಅನನ್ಯವಾಗಿದೆ. ಇನ್ನು ಹಾಲು ನೈಸರ್ಗಿಕ ಎಕ್ಸ್ಫೋಲಿಯೇಂಟ್ನಂತೆ ಕಾರ್ಯನಿರ್ವಹಿಸುತ್ತಿದ್ದು ಲ್ಯಾಕ್ಟಿಕ್ ಆಸಿಡ್ ಇದರಲ್ಲಿದೆ. ತ್ವಚೆಯ ಮೇಲ್ಮೈಯನ್ನು ನವೀಕರಿಸುವ ಮೂಲಕ ಕಲೆಗಳನ್ನು ತಿಳಿಗೊಳಿಸುತ್ತದೆ. ಹಾಗಿದ್ದರೆ ಈ ಮಾಸ್ಕ್ ತಯಾರಿಸುವ ವಿಧಾನವನ್ನು ಇಂದಿನ ಲೇಖನದಲ್ಲಿ ನಾವು ನೀಡಿದ್ದು ಇದನ್ನು ಅತಿ ಕಡಿಮೆ ಸಮಯ ಮತ್ತು ಅತಿ ಕಡಿಮೆ ಖರ್ಚಿನಲ್ಲಿ ನಿಮಗೆ ಮಾಡಿಕೊಳ್ಳಬಹುದಾಗಿದೆ.
ಸಾಮಾಗ್ರಿಗಳು:
2 ಚಮಚ ಹಾಲಿನ ಪುಡಿ
1 ಚಮಚ ಜೇನು
ಬಳಸುವ ವಿಧಾನ:
*ಎಲ್ಲಾ ಸಾಮಾಗ್ರಿಗಳನ್ನೂ ತೆಗೆದುಕೊಂಡು ಮಿಶ್ರ ಮಾಡಿ ನುಣ್ಣನೆಯ ಪೇಸ್ಟ್ ಮಾಡಿಕೊಳ್ಳಿ. ನಿಮ್ಮ ಸಂಪೂರ್ಣ ಮುಖಕ್ಕೆ ಇದನ್ನು ಹಚ್ಚಿಕೊಳ್ಳಿ. 5-10 ನಿಮಿಷಗಳ ಕಾಲ ವೃತ್ತಾಕಾರವಾಗಿ ಇದನ್ನು ಮುಖಕ್ಕೆ ಮಸಾಜ್ ಮಾಡಿ.ಹಾಗೆಯೇ 20-25 ನಿಮಿಷ ಬಿಡಿ.
*ಉಗುರು ಬೆಚ್ಚನೆಯ ನೀರಿನಲ್ಲಿ ಟವೆಲ್ ಅನ್ನು ಮುಳುಗಿಸಿ ನಂತರ ಅದರಿಂದ ಮುಖವನ್ನು ಒರೆಸಿ ಪ್ಯಾಕ್ ತೆಗೆಯಿರಿ. ಯುವತ್ವದಿಂದ ಕೂಡಿರುವ ಮತ್ತು ಸೌಂದರ್ಯ ಹೊರಸೂಸುವ ತ್ವಚೆಯನ್ನು ಪಡೆದುಕೊಳ್ಳಲು ವಾರದಲ್ಲಿ ಎರಡು ಬಾರಿ ಈ ಪ್ರಕ್ರಿಯೆಯನ್ನು ನಿಮಗೆ ಪುನರಾವರ್ತಿಸಿಕೊಳ್ಳಬಹುದು.



Click it and Unblock the Notifications
