Latest Updates
-
ಯುಗಾದಿಗೆ ಸ್ಪೆಷಲ್ ಹೊಸ ರೀತಿಯ ಕ್ಯಾರೆಟ್ ಒಬ್ಬಟ್ಟು: ಬಾಯಲ್ಲಿ ನೀರು ತರಿಸುವ ಸಿಹಿ -
ಅಕ್ಕಿ ನೆನೆಸುವಂತೆಯೇ ಇಲ್ಲ! ಸೌತೆಕಾಯಿಯಿಂದ ಮಾಡಿ ರುಚಿಕರ ಇಡ್ಲಿ.. ಹೊಟ್ಟೆ ತುಂಬುತ್ತೆ, ತೂಕ ಇಳಿಯುತ್ತೆ -
March 17 Horoscope: ಕುಟುಂಬದಲ್ಲಿ ಸಂತಸ ಅನುಭವಿಸುವ ದಿನವಿದು! -
ಕೌಟುಂಬಿಕ ಸುಖ & ಸಂಬಂಧಗಳಲ್ಲಿ ಮಧುರತೆ ಹೆಚ್ಚಳ! ಸಂಗಾತಿಯಿಂದ ಸಂಪೂರ್ಣ ಬೆಂಬಲ -
ಯುಗಾದಿ ಮಂತ್ರಗಳು: ಹಬ್ಬದಲ್ಲಿ ಈ ಮಂತ್ರ ಪಠಿಸಿದ್ರೆ ಕಷ್ಟಗಳು ದೂರಾಗುತ್ತೆ, ಅದೃಷ್ಟ ನಿಮ್ಮದಾಗುತ್ತೆ! -
ಯುಗಾದಿ ಹಬ್ಬದಲ್ಲಿ ಸಿಹಿಯೊಂದಿಗೆ ಬೇಬಿ ಕಾರ್ನ್ 65 ಸಹ ಮಾಡಿ! ಅದ್ಭುತ ರುಚಿಯ ತಿಂಡಿ ಇದು! -
Ugadi 2026: ಬೇವಿನ ಕಹಿ ಇರಲಿ, ಬೆಲ್ಲದ ಸಿಹಿ ಇರಲಿ! ನಿಮ್ಮ ಆತ್ಮೀಯರಿಗೆ ಈ ರೀತಿ ವಿಶೇಷ ಶುಭಾಶಯ ಕಳಿಸಿ -
ರವೆ ಮತ್ತು ತುಪ್ಪ ಬಳಸಿ ಸ್ಪಂಜಿನಂಥ ಕೇಕ್ ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ.. ಓವನ್ ಇಲ್ಲದೆ ಮಾಡಬಹುದು -
ಯುಗಾದಿ ಭವಿಷ್ಯ: ಹಬ್ಬದ ಬಳಿಕ ಈ ರಾಶಿಯವರಿಗೆ ಲಕ್ಷ್ಮಿ ಆಶೀರ್ವಾದ, ಆರ್ಥಿಕ ಲಾಭ! -
ಮುದ್ದೆ, ಗಂಜಿ ಬಿಡಿ.. ರಾಗಿ ಬಳಸಿ ಈ ರೆಸಿಪಿಗಳನ್ನು ಮಾಡಿ! ಆರೋಗ್ಯಕ್ಕೆ ಸೂಪರ್, ರುಚಿಯೂ ಮಿಸ್ ಆಗಲ್ಲ
ತ್ವಚೆಯ ತೆರೆದ ರಂಧ್ರಗಳನ್ನು ನಿವಾರಿಸಲು ಸರಳ ಟಿಪ್ಸ್
ಸೌಂದರ್ಯದ ವಿಷಯದಲ್ಲಿ ನೀವು ಎಷ್ಟೇ ಕಾಳಜಿಯನ್ನು ವಹಿಸಿದರೂ ಒಮ್ಮೊಮ್ಮೆ ಇದು ಉತ್ತಮ ಫಲಿತಾಂಶವನ್ನು ನೀಡುವುದಿಲ್ಲ ಇದು ಏಕೆ ಎಂಬುದಾಗಿ ನೀವು ಆಲೋಚಿಸಿ ಬೇಸರಗೊಂಡಿರುತ್ತೀರಿ ಅಲ್ಲವೇ? ಆದರೆ ನಿಮ್ಮ ಸೌಂದರ್ಯ ಕಾಳಜಿಯನ್ನು ನಿಮ್ಮ ತ್ವಚೆಯ ಪ್ರಕಾರವನ್ನು ಅನುಸರಿಸಿ ನೀವು ಮಾಡಿದಾಗ ನಿಮ್ಮ ಸೌಂದರ್ಯ ಉತ್ಪನ್ನಗಳು ನಿಮಗೆ ಫಲವನ್ನು ನೀಡುತ್ತವೆ. ಸಾಮಾನ್ಯವಾಗಿ ಭಾರತೀಯ ತ್ವಚೆಯ ಪ್ರಕಾರಗಳಲ್ಲಿ ನಾಲ್ಕು ವಿಧಗಳಿದ್ದು ಜಿಡ್ಡಿನ ತ್ವಚೆ, ಡ್ರೈ ತ್ವಚೆ, ಸಮತೋಲಿತ ತ್ವಚೆ ಮತ್ತು ಕಾಂಬಿನೇಶನ್ ತ್ವಚೆ ಎಂದಾಗಿದೆ. ಸಮತೋಲಿತ ತ್ವಚೆಯನ್ನು ಹೊಂದಿದ ಜನರು ಹೆಚ್ಚು ಅದೃಷ್ಟಶಾಲಿಗಳು ಎಂದೆನಿಸಿದ್ದು ಕೆಲವರಿಗೆ ಜಿಡ್ಡಿನ ತ್ವಚೆ ಮತ್ತು ಒಣ ತ್ವಚೆ ತೊಂದರೆಯನ್ನು ಉಂಟುಮಾಡುತ್ತದೆ. ಮುಖದಲ್ಲಿ ಉಂಟಾಗಿರುವ ರಂಧ್ರ ನಿವಾರಣೆ ಹೇಗೆ?
ಒಣತ್ವಚೆ ಉಳ್ಳವರಿಗೆ ನಿಯಮಿತವಾಗಿ ಹೈಡ್ರೇಟ್ ಆಗದೆ ಇದು ವಯಸ್ಸಾಗುವ ಮುಂಚೆಯೇ ನೆರಿಗೆಗಳನ್ನು ಉಂಟುಮಾಡುತ್ತದೆ, ಜಿಡ್ಡಿನ ತ್ವಚೆ ಉಳ್ಳವರು ತೆರೆದ ಚರ್ಮ ರಂಧ್ರ ಮೊದಲಾದ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇನ್ನು ಕಾಂಬಿನೇಶನ್ ತ್ವಚೆಯುಳ್ಳವರು ಹೈಡ್ರೇಟೆಡ್ ಮತ್ತು ಶುದ್ಧ ತ್ವಚೆ ಎರಡನ್ನೂ ಒಳಗೊಂಡಿರುತ್ತದೆ. ಈ ರೀತಿಯ ತ್ವಚೆ ಒಣ ಮತ್ತು ಜಿಡ್ಡಿನ ಭಾಗಗಳನ್ನು ಒಳಗೊಂಡಿರುತ್ತದೆ. ಜಿಡ್ಡಿನ ತ್ವಚೆಯುಳ್ಳವರಿಗೆ ಪುರುಷ ಮತ್ತು ಮಹಿಳೆಯರಿಗೆ ತೆರೆದ ಚರ್ಮ ಸಾಮಾನ್ಯ ಸಮಸ್ಯೆಯಾಗಿರುತ್ತದೆ. ತೆರೆದ ರಂಧ್ರಗಳು ಚರ್ಮದ ಇತರ ಸಮಸ್ಯೆಗಳ ಎಚ್ಚರಿಕೆಯನ್ನು ಮಾತ್ರ ಉಂಟುಮಾಡದೇ, ಇದು ಒಮ್ಮೊಮ್ಮೆ ಕಿರಿಕಿರಿಯನ್ನು ಉಂಟುಮಾಡುತ್ತದೆ.
ತೆರೆದ ಚರ್ಮ ರಂಧ್ರಗಳು ಮೊಡವೆಗೆ ಕಾರಣವಾಗಿದ್ದು ಇದಕ್ಕೆ ಸೂಕ್ತ ಆರೈಕೆಯನ್ನು ಮಾಡಲೇಬೇಕಾಗುತ್ತದೆ. ನೈಸರ್ಗಿಕ ಸಾಮಾಗ್ರಿ ಆಧಾರಿತ ಉತ್ಪನ್ನಗಳು ಉತ್ತಮ ಆಯ್ಕೆ ಎಂದೆನಿಸಿದ್ದು ಇವುಗಳ ಬಳಕೆಯನ್ನು ಸುಲಭವಾಗಿ ಮಾಡಬಹುದು. ತ್ವಚೆಯಲ್ಲಿ ಮೊಡವೆಗೆ ಕಾರಣವಾಗಿರುವ ರಂಧ್ರಗಳನ್ನು ಮುಚ್ಚಲು ಸಹಕಾರಿಯಾಗಿರುವ ಸರಳ ಮನೆಮದ್ದುಗಳನ್ನೇ ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಈ ಮದ್ದುಗಳು ರಂಧ್ರಗಳನ್ನು ಮುಚ್ಚಿ ತ್ವಚೆಗೆ ಸಮಸ್ಯೆಯನ್ನು ಹೋಗಲಾಡಿಸುತ್ತವೆ.

ಐಸ್ ಕ್ಯೂಬ್
ಇದೊಂದು ಸರಳ ರೆಸಿಪಿಯಾಗಿದ್ದು ಇದರಿಂದ ನಿಮ್ಮ ತ್ವಚೆಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. 15 ರಿಂದ 20 ಸೆಕೆಂಡ್ಗಳ ಕಾಲ ಐಸ್ ಕ್ಯೂಬ್ ಅನ್ನು ಉಜ್ಜಿ ಇದು ರಕ್ತ ಸಂಚಾರವನ್ನು ಹೆಚ್ಚಿಸಿ ಸ್ವಚ್ಛ ತ್ವಚೆಯನ್ನು ನಿಮಗೆ ದಯಪಾಲಿಸುತ್ತದೆ. ಈ ಆರೈಕೆ ಉಸಿರಾಟ ಸಮಸ್ಯೆಗಳು ಮತ್ತು ಸೈನಸ್ ಸಂಬಂಧಿ ಅಪಾಯ ಹೊಂದಿರುವವರಿಗೆ ಸೂಕ್ತವಲ್ಲ.

ಸ್ಟೀಮ್
ತ್ವಚೆಯ ಮೇಲಿನ ರಂಧ್ರಗಳನ್ನು ತಡೆಯಲು ಮತ್ತು ಕಪ್ಪುಕಲೆ ಮತ್ತು ಬಿಳಿ ಕಲೆಗಳನ್ನು ನಿವಾರಿಸಿಕೊಳ್ಳಲು ಸ್ಟೀಮಿಂಗ್ ಅತ್ಯುತ್ತಮ ವಿಧಾನ ಎಂದೆನಿಸಿದೆ. 8 ರಿಂದ 10 ನಿಮಿಷಗಳ ಕಾಲ ಸ್ಟೀಮಿಂಗ್ ಮಾಡಿದ ನಂತರ ನಿಮ್ಮ ಮುಖವನ್ನು ಸ್ವಚ್ಛವಾದ ಬಟ್ಟೆಯಿಂದ ಒರೆಸಿ ಹಾಗೂ ತಣ್ಣಗಿನ ನೀರಿನಿಂದ ಮುಖ ತೊಳೆದುಕೊಳ್ಳಿ ರಂಧ್ರಗಳು ಸ್ವಚ್ಛವಾಗುತ್ತವೆ.

ಪಪ್ಪಾಯ ಮಾಸ್ಕ್
ತೆರೆದ ರಂಧ್ರಗಳನ್ನು ಮುಚ್ಚಲು ಮಾತ್ರ ಪಪ್ಪಾಯ ಮಾಸ್ಕ್ ಸಹಕಾರಿಯಾಗಿರದೇ ದೊಡ್ಡ ಪ್ರಮಾಣದಲ್ಲಿ ನಿಮ್ಮ ತ್ವಚೆಯನ್ನು ಎಕ್ಸ್ಫೋಲಿಯೇಟ್ ಮಾಡುತ್ತದೆ. ಪಪ್ಪಾಯದ ಸಣ್ಣ ಪ್ರಮಾಣವನ್ನು ತೆಗೆದುಕೊಳ್ಳಿ ಮತ್ತು ವೃತ್ತಾಕಾರವಾಗಿ ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ತಣ್ಣೀರಿನಿಂದ ಮುಖವನ್ನು ತೊಳೆದುಕೊಂಡು ಪಪ್ಪಾಯ ಮಾಸ್ಕ್ ಅನ್ನು ತೆಗೆಯಿರಿ.

ಹಸಿ ಹಾಲು
ಮುಖವನ್ನು ತೊಳೆಯುವ ನೈಸರ್ಗಿಕ ಕ್ಲೆನ್ಸರ್ ಆಗಿ ಹಸಿಹಾಲನ್ನು ಬಳಸಿಕೊಳ್ಳಬಹುದಾಗಿದೆ. ಇದಕ್ಕೆ ನಿಮಗೆ ಬೇಕಾಗಿರುವುದು ಹತ್ತಿಯ ಉಂಡೆಗಳಾಗಿದೆ. 50 ಮಿಲಿಲೀಟರ್ನಷ್ಟು ಹಸಿ ಹಾಲು ಮತ್ತು ತಂಪು ನೀರು ಬೇಕು. ಹಾಲಿನಲ್ಲಿ ಹತ್ತಿಯ ಉಂಡೆಗಳನ್ನು ಅದ್ದಿಕೊಳ್ಳಿ ಮತ್ತು ನಿಮ್ಮ ಮುಖದ ತುಂಬೆಲ್ಲಾ ಹತ್ತಿಯ ಉಂಡೆಗಳನ್ನು ಅಡ್ಡಾಡಿಸಿ. ನಿಮ್ಮ ಮುಖವನ್ನು ತಣ್ಣಗಿನ ನೀರಿನಿಂದ 2-3 ನಿಮಿಷಗಳ ನಂತರ ಮುಖವನ್ನು ತೊಳೆದುಕೊಳ್ಳಿ ಮತ್ತು ಮ್ಯಾಜಿಕ್ ನೋಡಿ

ಅಲೋವೇರಾ
ನೈಸರ್ಗಿಕ ಅಲೋವೇರಾವನ್ನು ನೈಸರ್ಗಿಕವಾಗಿ ಎಲೆಯಿಂದಲೇ ತೆಗೆದು ಅದನ್ನು ಬಳಸುವುದರ ಮೂಲಕ ತೆರೆದ ರಂಧ್ರಕ್ಕೆ ಪರಿಹಾರವನ್ನು ಮಾಡಿಕೊಳ್ಳಬಹುದು. ತೆಳುವಾಗಿ ಈ ಜೆಲ್ ಅನ್ನು ಹಚ್ಚಿದ ನಂತರ, 5-8 ನಿಮಿಷಗಳ ಕಾಲ ಕಾಯಿರಿ ನಂತರ ಮುಖವನ್ನು ತಣ್ಣಗಿನ ನೀರಿನಿಂದ ತೊಳೆದುಕೊಳ್ಳಿ.

ದಿನಕ್ಕೆ ಎರಡು ಬಾರಿ ಮುಖ ತೊಳೆದುಕೊಳ್ಳಿ
ತೆರೆದ ರಂಧ್ರಗಳಿಗೆ ಮೇಲೆ ತಿಳಿಸಿದ ತಂತ್ರಗಳನ್ನು ಅನುಸರಿಸಿದ ನಂತರ ಇದರಲ್ಲಿ ಕೊಳೆ ಕೂರದಂತೆ ಕೆಲವೊಂದು ನಿರ್ವಹಣಾ ಕ್ರಮಗಳನ್ನು ನೀವು ಅನುಸರಿಸಬೇಕಾಗುತ್ತದೆ. ದಿನಕ್ಕೆ ಎರಡು ಬಾರಿ ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಂಡು ಆಸ್ಟ್ರಿನ್ಜೆಂಟ್ ಅನ್ನು ದಿನದಲ್ಲಿ ಒಂದು ಬಾರಿ ಬಳಸಿ ಮತ್ತು ಮೃದುವಾದ ಟವೆಲ್ನಿಂದ ಮುಖವನ್ನು ಒರೆಸಿಕೊಳ್ಳಿ.



Click it and Unblock the Notifications











