Latest Updates
-
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ -
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ!
ಬ್ಯೂಟಿ ಟಿಪ್ಸ್: ಕ್ಯಾರೆಟ್, ಮೊಸರು, ಕಡಲೆ ಹಿಟ್ಟಿನ ಮಾಸ್ಕ್
ಸೌಂದರ್ಯ ಪ್ರಿಯರು ಬಯಸುವುದೇ ಕಾಂತಿಯುತ ಹಾಗೂ ಆರೋಗ್ಯಕರ ಚರ್ಮ. ಚರ್ಮವು ನಮ್ಮ ದೇಹದ ಸೌಂದರ್ಯವನ್ನು ವೃದ್ಧಿಸುತ್ತದೆ. ಚರ್ಮವು ಸತ್ತಂತ್ತಿದ್ದರೆ ಅಥವಾ ನೆರಿಗೆ ಬಿದ್ದಿದ್ದರೆ ಅದನ್ನು ನೋಡಿ ನಮಗೆ ಚಿಂತೆಯಾಗುತ್ತದೆ. ಚರ್ಮವು ಯಾವುದೇ ಕಲೆಗಳು ಇಲ್ಲದೆ ಕಾಂತಿಯುತ ಹಾಗೂ ಆರೋಗ್ಯದಿಂದ ಇರಬೇಕೆಂದರೆ ಅದರ ಆರೈಕೆ ಮಾಡುವುದು ಕೂಡ ಮುಖ್ಯವಾಗಿದೆ.
ಆರೈಕೆ ಎಂದರೆ ಏನು? ಟಿವಿ ಜಾಹೀರಾತಿನಲ್ಲಿ ಬರುವಂತಹ ರಾಸಾಯನಿಕಯುಕ್ತ ಉತ್ಪನ್ನಗಳನ್ನು ಬಳಸುವುದೇ? ಅಲ್ಲ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿಕೊಂಡು ಆರೈಕೆ ಮಾಡಬೇಕೇ ಎನ್ನುವ ಪ್ರಶ್ನೆಗಳು ಏಳುವುದು ಸಹಜ. ರಾಸಾಯನಿಕಗಳು ನಿಮ್ಮ ಚರ್ಮವನ್ನು ಮತ್ತಷ್ಟು ಕೆಡಿಸುವುದರಿಂದ ಮನೆಯಲ್ಲೇ ಸಿಗುವ ಸಾಮಗ್ರಿಗಳನ್ನು ಬಳಸಿ ಚರ್ಮದ ಆರೈಕೆ ಮಾಡಿ.

ಕ್ಯಾರೆಟ್, ಮೊಸರು ಮತ್ತು ಕಡಲೆ ಹಿಟ್ಟಿನಿಂದ ಮಾಡಿದ ಮಾಸ್ಕ್‌ನಿಂದ ಮುಖದ ಮೇಲಿನ ಕಲೆಗಳನ್ನು ನಿವಾರಿಸಬಹುದು. ಇದಕ್ಕೆ ಬಳಸುವ ಪ್ರತಿಯೊಂದು ಸಾಮಗ್ರಿಯಲ್ಲೂ ಸೌಂದರ್ಯ ವೃದ್ಧಿಸುವ ಅಂಶಗಳಿವೆ. ಇದನ್ನು ಜತೆಯಾಗಿ ಬಳಸಿದಾಗ ಅದರಿಂದ ಹೆಚ್ಚಿನ ಲಾಭವನ್ನು ಪಡೆಯಬಹುದು. ಪೋಷಕಾಂಶಗಳಿಂದ ತುಂಬಿರುವ ಕ್ಯಾರೆಟ್ ತ್ವಚೆಗೆ ಹಿತಕಾರಿ. ಕ್ಯಾರೆಟ್ ಫೇಸ್ ಪ್ಯಾಕ್-ತ್ವಚೆಯ ಸುಕ್ಕುಗಳಿಗೆ ಗೇಟ್ ಪಾಸ್!
ಇದರಲ್ಲಿನ ಆ್ಯಂಟಿಆಕ್ಸಿಡೆಂಟ್, ವಿಟಮಿನ್ ಮತ್ತು ಖನಿಜಾಂಶಗಳು ತ್ವಚೆಗೆ ತುಂಬಾ ಲಾಭಕಾರಿ. ಮೊಸರು ಚರ್ಮದಲ್ಲಿ ಮೂಡುವ ಗುಳ್ಳೆ, ಮೊಡವೆ ಮತ್ತು ಕಂದು ಕಳೆಗಳನ್ನು ನಿವಾರಿಸುತ್ತದೆ. ಕಡಲೆ ಹಿಟ್ಟು ಚರ್ಮದ ಮೇಲಿನ ಕಲೆಗಳನ್ನು ಕಡಿಮೆ ಮಾಡಿ ಚರ್ಮವು ಕಾಂತಿಯುತವಾಗುವಂತೆ ಮಾಡುತ್ತದೆ. ಈ ಫೇಸ್ ಮಾಸ್ಕ್ ತಯಾರಿಸಲು ಯಾವ ಸಾಮಗ್ರಿ ಎಷ್ಟೆಷ್ಟು ಬೇಕು ಎನ್ನುವ ಬಗ್ಗೆ ತಿಳಿದುಕೊಳ್ಳುವ.
ಬೇಕಾಗುವ ಸಾಮಗ್ರಿಗಳು
*ಅರ್ಧ ಕ್ಯಾರೆಟ್
*ಒಂದು ಚಮಚ ಮೊಸರು
*ಒಂದು ಚಮಚ ಕಡಲೆ ಹಿಟ್ಟು ಪುನರ್ ಯೌವನದ ಚಿಕಿತ್ಸೆ-ಹಾಲು ಜೇನಿನ ಫೇಸ್ ಪ್ಯಾಕ್!
ಬಳಸುವ ವಿಧಾನ
*ಸಿಪ್ಪೆ ತೆಗೆದು ಅರ್ಧ ಕ್ಯಾರೆಟ್ ಅನ್ನು ಸಣ್ಣಗೆ ಕೊಚ್ಚಿ. ಇದರಿಂದ 2-3 ಚಮಚ ಕ್ಯಾರೆಟ್ ತೆಗೆದು ಅದನ್ನು ಇತರ ಎರಡು ಸಾಮಗ್ರಿಗಳೊಂದಿಗೆ ಮಿಶ್ರಣ ಮಾಡಿಕೊಳ್ಳಿ. ಫೇಸ್ ಮಾಸ್ಕ್ ಅನ್ನು ಮುಖ ಹಾಗೂ ಕುತ್ತಿಗೆಗೆ ಹಚ್ಚಿಕೊಳ್ಳಿ.
*20-25 ನಿಮಿಷ ಈ ಮಾಸ್ಕ್ ಅನ್ನು ಹಾಗೆ ಬಿಡಿ. ಬಳಿಕ ತಂಪಾದ ನೀರಿನಿಂದ ಮುಖ ತೊಳೆಯಿರಿ. ಉತ್ತಮ ಫಲಿತಾಂಶ ಪಡೆಯಲು ವಾರದಲ್ಲಿ 2-3 ಸಲ ಈ ಮಾಸ್ಕ್ ನ್ನು ಹಚ್ಚಿಕೊಳ್ಳಬೇಕು. ಈ ಫೇಸ್ ಮಾಸ್ಕ್ ತುಂಬಾ ಪರಿಣಾಮಕಾರಿ. ಇದರಿಂದ ತ್ವಚೆಯ ಅರೋಗ್ಯ ಮತ್ತು ಮುಖದ ಮೇಲಿನ ಕಲೆಗಳು ನಿವಾರಣೆಯಾಗುವುದು.



Click it and Unblock the Notifications

