Latest Updates
-
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ!
ಮುಖದ ಸೌಂದರ್ಯಕ್ಕೆ ಬೀಟ್‌ರೂಟ್ ಫೇಸ್ ಮಾಸ್ಕ್...
ಪ್ರಕೃತಿ ನಮಗೆ ಎಷ್ಟೆಲ್ಲಾ ಅತ್ಯದ್ಭುತ ಶಕ್ತಿಯನ್ನು ಹೊಂದಿರುವ ಆಹಾರಗಳನ್ನು ನೀಡಿದ್ದರೂ ನಾವು ಮಾತ್ರ ಅದನ್ನು ಕಡೆಗಣಿಸುತ್ತಲೇ ಬರುತ್ತಿದ್ದೇವೆ. ಅದರಲ್ಲೂ ಬೀಟ್ ರೂಟ್ ಎಂದರೆ ಹೆಚ್ಚಿನವರಿಗೆ ಆಗದು. ಅದರ ಬಣ್ಣ ಮತ್ತು ರುಚಿ ಸಾಕಷ್ಟು ಮಂದಿಗೆ ಹಿಡಿಸದು. ಬೀಟ್ ರೂಟ್ ಈಗೀಗ ಅಡುಗೆ ಮನೆಯಲ್ಲಿ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಇದನ್ನು ಪದಾರ್ಥ ಹಾಗೂ ಸಿಹಿಯಾಗಿ ಬಳಸಲಾಗುತ್ತಿದೆ. ಇದನ್ನು ಪದಾರ್ಥಗಳಲ್ಲಿ ಬಳಸುವುದರೊಂದಿಗೆ ಫೇಸ್ ಪ್ಯಾಕ್ ನಲ್ಲಿ ಬಳಸಬಹುದು ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ. ಇದು ಹಲವಾರು ರೀತಿಯ ಚರ್ಮದ ಕಾಯಿಲೆಗಳಿಗೆ ಉತ್ತಮ ಔಷಧಿಯಾಗಿದೆ. ಗೌರವರ್ಣದ ತ್ವಚೆಗಾಗಿ ಪ್ರಯತ್ನಿಸಿ- ಬೀಟ್‌ರೂಟ್ ಜ್ಯೂಸ್
ಬೀಟ್ ರೂಟ್ ನಲ್ಲಿರುವ ಬೆಟಲೈನ್ ಎನ್ನುವ ಆ್ಯಂಟಿಆಕ್ಸಿಡೆಂಟ್ ಚರ್ಮವನ್ನು ಕಾಂತಿಯುತವಾಗಿ ಮಾಡುವುದರ ಜೊತೆಗೆ, ಚರ್ಮದಲ್ಲಿನ ಕಲೆ, ಮೊಡವೆ, ಗುಳ್ಳೆಗಳನ್ನು ನಿವಾರಿಸಿ, ತ್ವಚೆಯ ಕಾಂತಿಯನ್ನು ಇನ್ನಷ್ಟು ವರ್ಧಿಸುತ್ತದೆ. ಅಷ್ಟೇ ಅಲ್ಲದೆ ಬೀಟ್ ರೂಟ್ ಚರ್ಮದಲ್ಲಿನ ಕಲೆಗಳನ್ನು ತೊಡೆದುಹಾಕುವುದರ ಜೊತೆಗೆ ಹಲವಾರು ಸಮಸ್ಯೆಗಳನ್ನು ನಿವಾರಿಸುತ್ತದೆ ಹಾಗು ಚರ್ಮಕ್ಕೆ ಹೊಸ ತೇಜಸ್ಸು ನೀಡುತ್ತದೆ. ಬೀಟ್ ರೂಟ್ ನ್ನು ಬಳಸಿ ಮಾಡುವ ಫೇಸ್ ಮಾಸ್ಕ್ ನಿಂದ ನಿಮ್ಮ ಚರ್ಮವು ಅದ್ಭುತವಾಗಿ ಕೆಲಸ ಮಾಡುವುದು. ರಾಸಾಯನಿಕಯುಕ್ತ ಕ್ರೀಮ್‌ಗಳನ್ನು ಬಳಸುವ ಬದಲು ಬೀಟ್ ರೂಟ್ ಫೇಸ್ ಪ್ಯಾಕ್ ಬಳಸಿ ಮುಖದ ಕಾಂತಿ ವೃದ್ಧಿಸಿ. ಬೀಟ್ ರೂಟ್ ಫೇಸ್ ಪ್ಯಾಕ್ ಮಾಡಲು ಬೇಕಾಗುವ ಸಾಮಗ್ರಿಗಳು ಬೀಟ್ ರೂಟ್ ಜ್ಯೂಸ್, ಹಾಲಿನ ಕ್ರೀಮ್ ಮತ್ತು ಕಡಲೆಹಿಟ್ಟು.

ಬೇಕಾಗುವ ಸಾಮಗ್ರಿಗಳು
*1 ಚಮಚ ಬೀಟ್ ರೂಟ್ ಜ್ಯೂಸ್
*1 ಚಮಚ ಹಾಲಿನ ಕ್ರೀಮ್
*1 ಚಮಚ ಕಡಲೆ ಹಿಟ್ಟು
ಬಳಸುವ ವಿಧಾನ
*ಬೀಟ್ ರೂಟ್ ನ ಜ್ಯೂಸ್ ತೆಗೆದಿಟ್ಟುಕೊಳ್ಳಿ. ಇದರಿಂದ ಒಂದು ಚಮಚ ಬೀಟ್ ರೂಟ್ ಜ್ಯೂಸ್ ತೆಗೆದುಕೊಂಡು ಅದಕ್ಕೆ ಇತರ ಎರಡು ಸಾಮಗ್ರಿಗಳನ್ನು ಸೇರಿಸಿಕೊಳ್ಳಿ. ಇದನ್ನು ಚೆನ್ನಾಗಿ ಕಲಸಿಕೊಂಡು ದಪ್ಪಗಿನ ಪೇಸ್ಟ್ ಮಾಡಿಕೊಳ್ಳಿ.
*ವಾರದಲ್ಲಿ ಎರಡು ಸಲ ಇದನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಮತ್ತು ಕಲೆಗಳು ಹಾಗೂ ಮೊಡವೆ ಕಲೆಗಳು ನಿಮ್ಮ ಮುಖದಿಂದ ಮಾಯವಾಗುವುದು. ನಿಮ್ಮ ಮುಖದ ಕಾಂತಿಯನ್ನು ಮರಳಿ ಪಡೆಯಲು ಇದು ತುಂಬಾ ನೈಸರ್ಗಿಕ ವಿಧಾನ. ಬೀಟ್ ರೂಟ್ ನಲ್ಲಿದೆ ಔಷಧೀಯ ಗುಣ!



Click it and Unblock the Notifications
