Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೂಕ್ಷ್ಮ ತ್ವಚೆಯ ಪರಿಹಾರಕ್ಕೆ ನೈಸರ್ಗಿಕ ಫೇಸ್ ಸ್ಕ್ರಬ್
ಸೂಕ್ಷ್ಮ ತ್ವಚೆಯನ್ನು ಹೊಂದಿರುವವರಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತಿರುತ್ತದೆ. ಯಾವುದೇ ತರಹದ ಮೇಕಪ್ ಮಾಡಿಕೊಳ್ಳುವುದು ಈ ಸೂಕ್ಷ್ಮ ತ್ವಚೆಯವರಿಗೆ ತೊಂದರೆಗಳನ್ನು ತಂದೊಡ್ಡುತ್ತದೆ. ಯಾವುದೇ ಸೌಂದರ್ಯ ಉತ್ಪನ್ನಗಳನ್ನು ಬಳಸಿದರೂ ಈ ತ್ವಚೆಗೆ ಹಾನಿಕರವಾಗಿರುತ್ತದೆ.
ಹೆಚ್ಚಿನ ಜನರು ಸೂಕ್ಷ್ಮ ತ್ವಚೆಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದು ಈ ತರಹದ ತ್ವಚೆಯನ್ನು ನಿಭಾಯಿಸುವುದು ಕೊಂಚ ಕಷ್ಟವೇ. ಇಂತಹ ತ್ವಚೆಯು ಹಲವಾರು ಸಮಸ್ಯೆಗಳಿಂದ ಬಳಲುತ್ತದೆ. ಮೃತಕೋಶಗಳು, ಬ್ರೇಕ್ ಔಟ್ಗಳು, ಕೆಂಪು ಗುಳ್ಳೆಗಳು, ತುರಿಕೆ ಮತ್ತು ಇನ್ನೂ ಕೆಲವೊಂದು ತ್ವಚೆಯ ಸಮಸ್ಯೆಗಳನ್ನು ಈ ತ್ವಚೆಯವರು ಅನುಭವಿಸುವುದು ಖಂಡಿತ.

ಹಾಗಿದ್ದರೆ ಈ ತ್ವಚೆಯ ಸಮಸ್ಯೆ ನಿವಾರಣೆಗೆ ಯಾವುದೇ ಪರಿಹಾರಗಳಿಲ್ಲವೇ ಎಂಬುದಾಗಿ ಯೋಚಿಸುತ್ತಿದ್ದೀರಾ. ಖಂಡಿತ ಇದೆ ಇಂದಿನ ಲೇಖನದಲ್ಲಿ ಇಂತಹ ತ್ವಚೆಗಾಗಿ ಇರುವ ಫಲಪ್ರದ ಮನೆಮದ್ದನ್ನೇ ನಾವು ತಿಳಿಸುತ್ತಿದ್ದೇವೆ. ಮತಚರ್ಮಗಳನ್ನು ನಿವಾರಿಸಲು ನಿಮ್ಮ ಮುಖಕ್ಕೆ ಸ್ಕ್ರಬ್ ಮಾಡಬೇಕಾಗುತ್ತದೆ ಹಾಗೂ ತ್ವಚೆಯನ್ನು ಮಾಯಿಶ್ಚರೈಸ್ ಮಾಡುವ ಸಾಮರ್ಥ್ಯವನ್ನು ಈ ಮದ್ದು ಒಳಗೊಂಡಿದೆ.
ಬಾಳೆಹಣ್ಣು ಮತ್ತು ಓಟ್ ಮೀಲ್ ಬಳಸಿ ತಯಾರಿಸಬಹುದಾದ ಫೇಸ್ ಸ್ಕ್ರಬ್ ಇದಾಗಿದ್ದು, ನಿಮ್ಮ ಅಡುಗೆ ಮನೆಯಲ್ಲಿ ಈ ಪರಿಕರಗಳು ಖಂಡಿತ ಇದ್ದೇ ಇರುತ್ತದೆ. ಈ ಎರಡು ನೈಸರ್ಗಿಕ ಪರಿಕರಗಳು ಉತ್ಕರ್ಷಣ ನಿರೋಧಿ ಅಂಶಗಳನ್ನು ಒಳಗೊಂಡಿದ್ದು, ಸೂಕ್ಷ್ಮ ತ್ವಚೆಗೆ ಇದು ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಹಾಗಿದ್ದರೆ ಈ ಫೇಸ್ ಸ್ಕ್ರಬ್ ತಯಾರಿಸುವ ವಿಧಾನವೇನು ಎಂಬುದನ್ನು ಇಲ್ಲಿ ನಾವು ನೀಡುತ್ತಿದ್ದು ಇದು ಹೆಚ್ಚು ಪರಿಣಾಮಕಾರಿ ಎಂದೆನಿಸಿದೆ.
ಸಾಮಾಗ್ರಿಗಳು:
3 ಚಮಚದಷ್ಟು ಓಟ್ಸ್
1 ಬಾಳೆಹಣ್ಣು
ಸಿದ್ಧತೆ:
ಮೊದಲನೆಯದಾಗಿ, ಬಾಳೆಹಣ್ಣನ್ನು ಚೆನ್ನಾಗಿ ಹಿಸುಕಿಕೊಳ್ಳಿ ಮತ್ತು ಇದನ್ನು ಓಟ್ಮೀಲ್ನೊಂದಿಗೆ ಮಿಶ್ರ ಮಾಡಿಕೊಳ್ಳಿ. ಸ್ಕ್ರಬ್ ಪ್ಯಾಡ್ ಅನ್ನು ಬಳಸಿಕೊಂಡು ನಿಮ್ಮ ಮುಖಕ್ಕೆಲ್ಲಾ ಇದನ್ನು ಸ್ಕ್ರಬ್ ಮಾಡಿ. 5 ರಿಂದ 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿದ ನಂತರ 15-20 ನಿಮಿಷ ಹಾಗೆಯೇ ಬಿಡಿ. ತಣ್ಣಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.



Click it and Unblock the Notifications

