Latest Updates
-
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ!
ಕೂದಲಿನ ಸೌಂದರ್ಯ ಇಮ್ಮಡಿಸುವ ಗುಣ ಅರಿಶಿನದಲ್ಲಿದೆ...!
ಅರಿಶಿನದಲ್ಲಿ ಹಲವಾರು ಆರೋಗ್ಯಕರ ಗುಣಗಳಿವೆ. ವಿಶೇಷವಾಗಿ ಇದರ ಸೋಂಕು ನಿವಾರಕ ಗುಣ. ದಕ್ಷಿಣ ಭಾರತೀಯ ಅಡುಗೆಗಳಲ್ಲಿ ಅನಿವಾರ್ಯವಾಗಿರುವ ಅರಿಶಿನ ಉತ್ತಮ ಸೌಂದರ್ಯಕಾರಕವೂ ಹೌದು. ಚರ್ಮದ ಆರೈಕೆ ಮತ್ತು ಸೌಂದರ್ಯ ಹೆಚ್ಚಿಸಲು ಅರಿಶಿನದ ಬಳಕೆ ಬಹಳ ಹಿಂದಿನಿಂದ ನಡೆದು ಬಂದ ವಿಧಿಯಾಗಿದೆ. ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಸಹಜವರ್ಣ ಪಡೆಯಲು ಅರಿಶಿನಕ್ಕಿಂತ ಇನ್ನೊಂದು ಪ್ರಸಾಧನವಿಲ್ಲ. ಅರಿಶಿನದ ಪ್ರಯೋಜನಗಳ ಪಟ್ಟಿ ಬಹಳ ಉದ್ದವಾಗಿದೆ. ಚರ್ಮದ ಜೊತೆಗೇ ಅರಿಶಿನ ಕೂದಲ ಆರೈಕೆಗೂ ಸೈ ಎನಿಸಿಕೊಂಡಿದೆ. ಚಿನ್ನದ ದೇವತೆ ಅರಿಶಿನದ ಚಿನ್ನದಂತಹ ಗುಣಗಳು
ಅರಿಶಿನದ ಸೂಕ್ತ ಬಳಕೆಯಿಂದ ಕೂದಲು ಹೆಚ್ಚು ದೃಢ, ಉದ್ದ, ಕಾಂತಿಯುಕ್ತ ಮತ್ತು ಸೊಂಪಾಗಿ ಬೆಳೆಯುತ್ತದೆ. ಅಲ್ಲದೇ ತಲೆಹೊಟ್ಟು, ತುರಿಕೆ, ಕೂದಲು ಉದುರುವುದು ಮತ್ತಿತರ ತೊಂದರೆಗಳಿಂದಲೂ ಮುಕ್ತಿ ನೀಡುತ್ತದೆ. ಈ ಅದ್ಭುತ ಮೂಲಿಕೆಯ ಪರಿಣಾಮವನ್ನು ಕಂಡುಕೊಳ್ಳಲು ಹೆಚ್ಚಿನ ಸಮಯ ಬೇಕಾಗಿಲ್ಲ. ಇದೇ ಕಾರಣಕ್ಕೆ ವಧುವನ್ನು ಸಿಂಗರಿಸಲು ಅರಿಶಿನದ ಲೇಪನವನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಬನ್ನಿ, ಕೂದಲಿಗೆ ಅರಿಶಿನ ಯಾವ ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ ಎಂಬುದನ್ನು ನೋಡೋಣ...

ತಲೆಹೊಟ್ಟು ನಿವಾರಿಸುತ್ತದೆ
ಕೂದಲಿದ್ದರೆ ತಲೆಹೊಟ್ಟಿನ ತೊಂದರೆ ಇದ್ದದ್ದೇ. ಎಷ್ಟೇ ದುಬಾರಿ ಶಾಂಪೂ ಉಪಯೋಗಿಸಿದರೂ ಮೊದಲು ಬಿಟ್ಟುಹೋದ ತಲೆಹೊಟ್ಟು ಕೆಲವೇ ದಿನಗಳಲ್ಲಿ ಹಿಂದಿರುತ್ತದೆ. ಆದರೆ ಅರಿಶಿನದ ಬ್ಯಾಕ್ಟೀರಿಯಾನಿವಾರಕ ಗುಣ ತಲೆಹೊಟ್ಟು ನಿವಾರಿಸಲು ನೆರವಾಗುತ್ತದೆ. ಅಲ್ಲದೇ ಕೂದಲ ಬುಡದ ರಕ್ತಪರಿಚಲನೆ ಹೆಚ್ಚಿಸಿ ಇಲ್ಲಿ ಸತ್ತ ಜೀವಕೋಶಗಳನ್ನು ಸಂಗ್ರಹವಾಗದಂತೆ ನೋಡಿಕೊಳ್ಳುತ್ತದೆ.

ತಲೆಹೊಟ್ಟು ನಿವಾರಿಸುತ್ತದೆ
ವಾಸ್ತವವಾಗಿ ಈ ಸತ್ತ ಜೀವಕೋಶಗಳೇ ಪದರದ ರೂಪದಲ್ಲಿ ಎದ್ದು ತಲೆಹೊಟ್ಟಿನ ರೂಪ ಪಡೆಯುತ್ತವೆ. ಇದಕ್ಕಾಗಿ ಕೊಂಚ ಅರಿಶಿನವನ್ನು ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ತಲೆಕೂದಲ ಬುಡಕ್ಕೆ ಹಚ್ಚಿ. ಸುಮಾರು ಹದಿನೈದರಿಂದ ಮೂವತ್ತು ನಿಮಿಷ ಹಾಗೇ ಬಿಟ್ಟು ಬಳಿಕ ಸೌಮ್ಯ ಶಾಂಪೂವಿನಿಂದ ತೊಳೆದುಕೊಳ್ಳಿ.

ಕೂದಲು ಉದುರುವುದನ್ನು ತಡೆಯುತ್ತದೆ
ನಿಮ್ಮ ಕೂದಲ ಆರೈಕೆಯಲ್ಲಿ ಅರಿಶಿನವನ್ನು ಒಳಗೊಳಿಸಿದರೆ ಕೂದಲು ಉದುರುವುದನ್ನು ಬಹಳಷ್ಟು ಮಟ್ಟಿಗೆ ತಗ್ಗಿಸಬಹುದು. ಅರಿಶಿನ ಕೂದಲ ಬೆಳವಣಿಗೆಗೆ ಪ್ರಚೋದನೆ ನೀಡಿ ಬೆಳವಣಿಗೆಗೆ ಸಹಕರಿಸುತ್ತದೆ ಹಾಗೂ ಇದೊಂದು ಉತ್ತಮ ಕಂಡೀಶನರ್ ಸಹಾ ಹೌದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಕೂದಲು ಉದುರುವುದನ್ನು ತಡೆಯುತ್ತದೆ
ಇದಕ್ಕಾಗಿ ಕೊಂಚ ಅರಿಶಿನ ಪುಡಿಯನ್ನು ಸಮಪ್ರಮಾಣದ ಹಾಲು ಮತ್ತು ಜೇನಿನೊಂದಿಗೆ ಮಿಶ್ರಣ ಮಾಡಿ ಕೂದಲ ಬುಡಕ್ಕೆ ಹಚ್ಚಿ. ನಯವಾದ ಮಸಾಜ್ ಮೂಲಕ ಇಡಿಯ ತಲೆ ಆವರಿಸುವಂತೆ ಮಾಡಿ ಕೊಂಚ ಹೊತ್ತಿನ ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ.

ಕೂದಲಿಗೆ ಬಣ್ಣ ಒದಗಿಸುತ್ತದೆ
ಕೂದಲಿಗೆ ಬಣ್ಣ ಹಾಗೂ ಕಾಂತಿಯನ್ನು ನೀಡಲು ಅರಿಶಿನ ನೆರವಾಗುತ್ತದೆ. ಇದಕ್ಕಾಗಿ ಮದರಂಗಿ ಪುಡಿ ಮತ್ತು ಅರಿಶಿನ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ ಕೊಂಚ ನೀರು ಸೇರಿಸಿ ಲೇಪನ ತಯಾರಿಸಿ. ಈ ಲೇಪನವನ್ನು ದಪ್ಪನಾಗಿ ಕೂದಲಿಗೆ ಹಚ್ಚುವ ಮೂಲಕ ಕೂದಲ ಬಣ್ಣ ಕೊಂಚ ಬದಲಾಗುತ್ತದೆ ಹಾಗೂ ಪ್ರಖರವೂ ಆಗುತ್ತದೆ. ಇದು ಕೂದಲ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಕೂದಲ ಆರೈಕೆಯಲ್ಲಿ ಧನಾತ್ಮಕ ಪರಿಣಾಮವೂ ಕಂಡುಬರುತ್ತದೆ.

ವಿವಿಧ ತಲೆಯ ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ
ತಲೆಬುರುಡೆಯ ಚರ್ಮ ಅತಿ ಹೆಚ್ಚು ಕೂದಲ ಬುಡಗಳನ್ನು ಹೊಂದಿರುವ ಕಾರಣ ಅತಿ ಸೂಕ್ಷ್ಮವಾಗಿದೆ. ತುರಿಕೆ, ಶಿಲೀಂಧ್ರದ ಸೋಂಕು, ಕೂದಲು ತೆಳ್ಳಗಾಗುವುದು, ಅಲ್ಲಲ್ಲಿ ಉದುರುವುದು, ಉರಿ, ಮೊದಲಾದವು ಅರಿಶಿನದ ಲೇಪನದಿಂದ ಕಡಿಮೆಯಾಗುತ್ತವೆ. ಇದಕ್ಕಾಗಿ ಅರಿಶಿನದ ಪುಡಿಯನ್ನು ನೀರಿನೊಂದಿಗೆ ಅಥವಾ ಹಾಲಿನೊಂದಿಗೆ ಬೆರೆಸಿ ಈ ಲೇಪನವನ್ನು ದಪ್ಪನಾಗಿ ಕೂದಲಿಗೆ ಹಚ್ಚಿ. ಕೊಂಚ ಸಮಯ ಬಿಟ್ಟು ಬಳಿಕ ಉಗುರುಬೆಚ್ಚನೆಯ ನೀರಿನಿಂದ ತೊಳೆದುಕೊಳ್ಳಿ. ಈ ವಿಧಾನವನ್ನು ವಾರಕ್ಕೆ ಎರಡು ಅಥವಾ ಮೂರು ಬಾರಿ ಪುನಾರಾವರ್ತಿಸಿ.



Click it and Unblock the Notifications