Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೌಂದರ್ಯ ಇಮ್ಮಡಿಸುವ ಸೀರಮ್ ದ್ರವ್ಯಗಳು
ಸಾಮಾನ್ಯವಾಗಿ ಚಳಿಗಾಲದಲ್ಲಿ ಮತ್ತು ಹೊರಗಿನ ವಾತಾವರಣದಲ್ಲಿ ಹೆಚ್ಚು ಹೊತ್ತು ಇರಬೇಕಾಗಿ ಬರುವವರ ಚರ್ಮಕ್ಕೆ ಸಾಮಾನ್ಯ ಆರೈಕೆ ಸಾಕಾಗುವುದಿಲ್ಲ. ಇವರಿಗೆ ಕೊಂಚ ಹೆಚ್ಚು ಶಕ್ತಿಯುತ ಅಥವಾ ಹೆಚ್ಚಿನ ಸಾಮರ್ಥವುಳ್ಳ ಆರೈಕೆಯ ಅಗತ್ಯವಿದೆ. ಈ ಅಗತ್ಯತೆಯನ್ನು ಸೀರಮ್ ಎಂಬ ಪ್ರಸಾಧನ ಪೂರೈಸುತ್ತದೆ. ಇದೊಂದು ದ್ರವರೂಪದ ಪ್ರಸಾಧನವಾಗಿದ್ದು ಇತರ ಪ್ರಸಾದನಗಳಿಗಿಂತ ಕೊಂಚ ಹೆಚ್ಚು ಪ್ರಭಾವಶಾಲಿಯಾಗಿದೆ.
ಇದರಿಂದ ಚರ್ಮ ಕಳೆದುಕೊಂಡಿದ್ದ ಪೋಷಕಾಂಶಗಳನ್ನು ಮರುಪೂರೈಸಿ ಚರ್ಮವನ್ನು ಮತ್ತೆ ಮೊದಲಿನ ಸ್ಥಿತಿಗೆ ತರಲು ಸಾಧ್ಯವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸೀರಂಗಳಲ್ಲಿ ಅಗತ್ಯ ಪೋಷಕಾಂಶಗಳ ಜೊತೆಗೇ ಅನಗತ್ಯವಾದ ಮತ್ತು ಪ್ರಬಲವಾದ ಹಾನಿಕಾರಕ ರಾಸಾಯನಿಕಗಳೂ ಇರುತ್ತವೆ. ಇವು ಚರ್ಮವನ್ನು ಹಾಳುಗೆಡವಬಹುದು. ಇದರ ಬದಲಿಗೆ ಇದೇ ಫಲಿತಾಂಶವನ್ನು ನೀಡುವ ನೈಸರ್ಗಿಕ ಸೀರಂಗಳನ್ನು ಬಳಸುವುದು ಕ್ಷೇಮ ಹಾಗೂ ಜಾಣತನದ ಕ್ರಮ.
ಮಾರುಕಟ್ಟೆಯಲ್ಲಿಯೂ ನೈಸರ್ಗಿಕ ಅಂಶಗಳನ್ನೇ ಬಳಸಿ ತಯಾರಿಸಿದ ಸೀರಂಗಳು ಲಭ್ಯವಿವೆ. ನಿಮ್ಮ ಚರ್ಮಕ್ಕೆ ಹೊಂದುವ ಸೀರಮ್ ದ್ರವಗಳನ್ನು ಆಯ್ಕೆ ಮಾಡಿಕೊಂಡು ನಿತ್ಯವೂ ಬಳಸಿದರೆ ಚರ್ಮ ಅತ್ಯುತ್ತಮ ಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಚರ್ಮದ ಕಪ್ಪುಕಲೆಗಳು, ಬದಲಾದ ಬಣ್ಣ, ವೃದ್ಧಾಪ್ಯದ ಚಿಹ್ನೆಗಳು, ನೆರಿಗೆಗಳು ಮೊದಲಾದ ತೊಂದರೆಗಳಿಂದ ಮುಕ್ತಿ ನೀಡುತ್ತದೆ. ಆದ್ದರಿಂದ ನಿಯಮಿತವಾದ ಸೀರಮ್ ಬಳಕೆ ತಾರುಣ್ಯವನ್ನು ಕಾಪಾಡುತ್ತದೆ...

ವಿಟಮಿನ್ ಸಿ
ಚರ್ಮದ ಆರೈಕೆಗೆ ಅತ್ಯುತ್ತಮ ಪೋಷಕಾಂಶ ಎಂದರೆ ವಿಟಮಿನ್ ಸಿ. ಒಂದು ವೇಳೆ ನಿಮ್ಮ ಮುಖದಲ್ಲಿ ಕಲೆ, ಮೊಡವೆ ಅಳಿದ ಮೇಲೆ ಮೂಡಿದ ಗುಳಿ ಅಥವಾ ಇತರ ಗುರುತುಗಳಿದ್ದರೆ ಅಥವಾ ಗಾಯದ ಗುರುತುಗಳಿದ್ದರೆ ಇದನ್ನು ನಿವಾರಿಸಲು ನೀವು ಆಯ್ಕೆ ಮಾಡಿರುವ ಸೀರಂ ನಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿರಬೇಕು. ಅತಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇರುವ ಸೀರಮ್ ನಿಮಗೆ ಸೂಕ್ತ.

ನೈಸರ್ಗಿಕ ತೈಲಗಳು
ಒಂದು ವೇಳೆ ನಿಮ್ಮ ಚರ್ಮ ಆರ್ದ್ರತೆಯ ಕೊರತೆಯಿಂದ ಬಳಲಿದಂತೆ ಅಥವಾ ಸೂಕ್ಷ್ಮವಾಗಿ ಚಳಿಗೆ ಒಡೆದಂತೆ ಕಂಡರೆ ಇದಕ್ಕೆ ನೈಸರ್ಗಿಕ ತೈಲವಿರುವ ಸೀರಂ ಆಯ್ದುಕೊಳ್ಳುವುದು ಉತ್ತಮ. ಈ ತೈಲಗಳು ಚರ್ಮಕ್ಕೆ ಅಗತ್ಯವಾದ ಆದ್ರತೆಯನ್ನು ನೀಡಿ ಚರ್ಮವನ್ನು ಸದಾ ಕೋಮಲವಾಗಿರುವಂತೆ ನೋಡಿಕೊಳ್ಳುತ್ತವೆ.

ಆಂಟಿ ಆಕ್ಸಿಡೆಂಟುಗಳು
ನಮ್ಮ ಚರ್ಮದಲ್ಲಿ ಕಪ್ಪು ಕಲೆ, ನೆರಿಗೆಗಳು ಮೂಡಲು ಮುಖ್ಯ ಕಾರಣ ಫ್ರೀ ರ್‍ಯಾಡಿಕಲ್ ಎಂಬ ಕಣಗಳು. ಇವುಗಳು ದೇಹದಲ್ಲಿ ಕ್ಯಾನ್ಸರ್ ರೋಗಕ್ಕೂ ಕಾರಣವಾಗುತ್ತವೆ. ಆಂಟಿ ಆಕ್ಸಿಡೆಂಟ್ ಇರುವ ಸೀರಂ ಆಯ್ಕೆ ಮಾಡಿಕೊಳ್ಳುವ ಮೂಲಕ ಈ ಕಣಗಳ ಧಾಳಿಗೆ ನಲುಗಿದ ಚರ್ಮಕ್ಕೆ ಉತ್ತಮ ಆರೈಕೆ ಪಡೆಯಬಹುದು. ವೃದ್ದಾಪ್ಯವನ್ನು ದೂರವಾಗಿಸಲು ಈ ಸೀರಂಗಳು ಅತ್ಯುತ್ತಮವಾಗಿವೆ.

ಅರ್ಗಾನ್ ತೈಲ
ಒಂದು ವೇಳೆ ಹಳೆಯ ಮೊಡವೆಗಳನ್ನು ಚಿವುಟಿದ್ದರ ಪರಿಣಾಮವಾಗಿ ಗಾಢ ಮತ್ತು ಕಪ್ಪು ಕಲೆಗಳು ಮೂಡಿದ್ದರೆ ಈಗ ಇವನ್ನು ನಿವಾರಿಸಲು ಉತ್ತಮ ಸೀರಂ ಲಭ್ಯವಿದೆ. ಯಾವ ಸೀರಂನಲ್ಲಿ ಅರ್ಗಾನ್ ತೈಲ (argan oil) ಪ್ರಮುಖವಾಗಿರುತ್ತದೆಯೋ ಅದೇ ನಿಮ್ಮ ಚರ್ಮಕ್ಕೆ ಅತ್ಯುತ್ತಮವಾದುದು! ಈ ತೈಲವನ್ನು ಚರ್ಮ ಪೂರ್ಣವಾಗಿ ಹೀರಿಕೊಳ್ಳುವ ಮೂಲಕ ಒಳಗಿನಿಂದ ಉತ್ತಮ ಪೋಷಣೆ ದೊರಕುತ್ತದೆ. ಇದು ಜೆಲ್ ನಂತಿರುವ ದ್ರವವಾದ ಕಾರಣ ಇದನ್ನು ಹಚ್ಚಿಕೊಂಡ ಬಳಿಕ ಚರ್ಮದಿಂದ ಆರ್ದ್ರತೆ ಆವಿಯಾಗದಿರುವಂತೆ ನೋಡಿಕೊಳ್ಳುವ ಮೂಲಕ ಚರ್ಮ ಕೋಮಲ ಮತ್ತು ಕಾಂತಿಯುಕ್ತವಾಗುತ್ತದೆ.

ಲಿಂಬೆಯ ಸಿಟ್ರಿಕ್ ಆಮ್ಲ
ಒಂದು ವೇಳೆ ಬಿಸಿಲು ಅಥವಾ ಬೇರೆ ಕಾರಣದಿಂದ ತ್ವಚೆಯ ವರ್ಣ ಸಹಜವರ್ಣಕ್ಕಿಂತ ಹೆಚ್ಚು ಗಾಢವಾಗಿದ್ದರೆ ಬಣ್ಣವನ್ನು ಸಹಜವರ್ಣಕ್ಕೆ ತರಲು ಲಿಂಬೆಯಲ್ಲಿರುವ ಸಿಟ್ರಿಕ್ ಆಮ್ಲ ಇರುವ ಸೀರಂ ಆಯ್ದುಕೊಳ್ಳಬೇಕು. ಇದರ ನಿಯಮಿತ ಬಳಕೆಯಿಂದ ವಿಶೇಷವಾಗಿ ಎಣ್ಣೆಚರ್ಮದವರಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಹಾಗೂ ಗಾಢವಾಗಿದ್ದ ಚರ್ಮ ಪುನಃ ಸಹಜವರ್ಣ ಪಡೆಯಲು ಸಾಧ್ಯವಾಗುತ್ತದೆ.



Click it and Unblock the Notifications
