Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಅದ್ಭುತ ಮೈಕಾಂತಿ-ಫಿಟ್ನೆಸ್ಗಾಗಿ ಸನ್ನಿಲಿಯೋನ್ ಬ್ಯೂಟಿ ಟಿಪ್ಸ್!
ಸಿನಿ ತಾರೆಯರ ಅದ್ಭುತ ಮೈಮಾಟವನ್ನು ನೋಡಿ ಒಮ್ಮೊಮ್ಮೆ ನಾವು ಅಚ್ಚರಿ ಪಟ್ಟಿದ್ದುಂಟು. ಹೊಳೆಯುವ ತ್ವಚೆ ಮತ್ತು ಆರೋಗ್ಯಪೂರ್ಣ ದೇಹಕ್ಕಾಗಿ ಅವರುಗಳು ನೈಸರ್ಗಿಕವ ವಿಧಾನವನ್ನೇ ಅನುಸರಿಸುತ್ತಾರೆ. ತಿನ್ನುವ ಆಹಾರವಾಗಿರಬಹುದು, ಸೌಂದರ್ಯ ಸಲಹೆಗಳನ್ನು ಪಾಲಿಸುವುದಾಗಿರಬಹುದು ಎಲ್ಲವನ್ನೂ ಕಟ್ಟುನಿಟ್ಟಾಗಿ ನಿಯಮಿತವಾಗಿ ಪಾಲನೆ ಮಾಡುತ್ತಾರೆ.
ಆದರೆ ಅವರ ಲೈಫ್‌ಸ್ಟೈಲ್‌ನಂತೆ ಕಟ್ಟುನಿಟ್ಟಾದ ಪಥ್ಯವನ್ನು ನಮಗೆ ಅನುಸರಿಸಲು ಸಾಧ್ಯವಾಗುವುದಿಲ್ಲ ಎಂಬುದು ಒಪ್ಪಿಕೊಳ್ಳುವಂತಹ ಮಾತು. ಸಿನಿ ಜೀವನದಲ್ಲೇ ನಟಿಯರ ಭವಿಷ್ಯ ಅಡಗಿರುವುದರಿಂದ ಮುತುವರ್ಜಿಯಿಂದ ಇರಬೇಕಾಗುತ್ತದೆ. ದೇಹದ ಕೊಬ್ಬು ಅವರ ಸಿನಿ ಪ್ರಯಾಣಕ್ಕೆ ಅಂತ್ಯವನ್ನು ಹಾಡಬಹುದಾಗಿದೆ. ಸೆಲೆಬ್ರಿಟಿಗಳ ಸೌಂದರ್ಯವನ್ನು ನಿಮ್ಮದಾಗಿಸಿ ಕೊಳ್ಳಬೇಕೇ?
ದೈನಂದಿನ ಜೀವನದಲ್ಲಿ ನಾವು ಸಾಕಷ್ಟು ಕೆಲಸ ಕಾರ್ಯಗಳನ್ನು ಮಾಡುವುದರಿಂದ ಪ್ರೊಟೀನ್ಯುಕ್ತ ಆಹಾರಗಳನ್ನು ನಾವು ಸೇವಿಸಬೇಕಾಗುತ್ತದೆ. ಆದರೆ ನಾವು ಸೇವಿಸುವುದು ಮಿತ ಪ್ರಮಾಣದಲ್ಲಿ ಮಿತಿಮೀರದಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಾಗಿದೆ. ಸಿನಿ ನಟಿಯರು ಪಾಲಿಸುವ ಬ್ಯೂಟಿ ಟಿಪ್ಸ್ಗಳನ್ನು ನಮಗೆ ಅನುಕೂಲಕರವಾದ ರೀತಿಯಲ್ಲಿ ನಾವು ಕೂಡ ಅಳವಡಿಸಿಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ ಸಿನಿ ತಾರೆ ಸನ್ನಿ ಲಿಯೋನ್ ಸೌಂದರ್ಯ ಮತ್ತು ಫಿಟ್ನೆಸ್ ಸಲಹೆಗಳತ್ತ ಗಮನ ಕೊಡೋಣ. ಸನ್ನಿ ನಮಗಾಗಿ ತಾವು ಅನುಸರಿಸುವ ಬ್ಯೂಟಿ ಸೀಕ್ರೇಟ್ಗಳನ್ನು ಇಲ್ಲಿ ನೀಡಿದ್ದು ಇದನ್ನು ನೀವು ಅಳವಡಿಸಿಕೊಳ್ಳಬಹುದಾಗಿದೆ.

ಜಿಮ್ನಲ್ಲಿ ಸ್ವಲ್ಪ ಬೆವರಿಳಿಸಿ....
ಜಿಮ್ನಲ್ಲಿ ಸ್ವಲ್ಪ ಬೆವರಿಳಿಸಿ ಸುಂದರ ಆಕಾರವನ್ನು ಪಡೆದುಕೊಳ್ಳುವುದರಿಂದ ನಿಮ್ಮಲ್ಲಿನ ಕೀಳರಿಮೆ ದೂರಾಗುತ್ತದೆ ಎಂಬುದು ಸನ್ನಿ ಮಾತಾಗಿದೆ. ವಾರಕ್ಕೆ ಮೂರು ಬಾರಿ ಜಿಮ್ನಲ್ಲಿ ಬೆವರಿಳಿಸುವ ಸನ್ನಿ ಇದರಿಂದ ಕೂಡ ನಮ್ಮ ಸೌಂದರ್ಯ ವೃದ್ಧಿಯಾಗುತ್ತದೆ ಎಂಬುದಾಗಿ ಸಲಹೆ ನೀಡುತ್ತಾರೆ.

ಉತ್ತಮ ತ್ವಚೆಗಾಗಿ ಯೋಗ
ತಾವು ಪ್ರಯಾಣದಲ್ಲಿರುವಾಗ ಯೋಗವನ್ನು ಅಭ್ಯಾಸ ಮಾಡುವ ಈ ಹಾಟ್ ನಟಿ, ತಮ್ಮ ಹೊಳೆಯುವ ಯವ್ವೌನ ಪೂರ್ಣ ತ್ವಚೆಯ ರಹಸ್ಯ ಯೋಗ ಎಂಬುದಾಗಿ ನುಡಿದಿದ್ದಾರೆ.

ಆರೋಗ್ಯಪೂರ್ಣ ಆಹಾರ ಸೇವನೆ
ಜಂಕ್ ಫುಡ್ ಬದಲಿಗೆ ಸನ್ನಿ ನಿತ್ಯವೂ ಹಸಿರು ತರಕಾರಿ, ತಾಜಾ ಹಣ್ಣುಗಳು ಮತ್ತು ಸಲಾಡ್ಗಳನ್ನು ಸೇವಿಸುತ್ತಾರೆ. ಇಂತಹ ಆಹಾರಗಳಲ್ಲಿರುವ ಉತ್ಕರ್ಷಣ ನಿರೋಧಿ ಅಂಶಗಳು ಆಕೆಗೆ ಅದ್ಭುತ ಮೈಕಾಂತಿಯನ್ನು ನೀಡಿವೆ.

ಹಾಲಿನ ಬಳಕೆ
ತಮ್ಮ ನಿಯಮಿತ ಆಹಾರದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳು ಇರುವಂತೆ ಈ ಸುಂದರಿ ಗಮನ ನೀಡುತ್ತಾರೆ. ಹಾಲು ಆಕೆಯ ತ್ವಚೆಯನ್ನು ಹೊಳೆಯುವಂತೆ ಮಾಡಿ ಒಳಗಿನಿಂದಲೇ ರೇಡಿಯೆಂಟ್ ಆಗಿರುವಂತೆ ಮಾಡುತ್ತದೆ.

ಮೇಕಪ್ ರಹಿತ ತ್ವಚೆ
ಆಕೆ ಸೆಲೆಬ್ರಿಟಿಯಾಗಿರುವುದರಿಂದ ಮೇಕಪ್ ಮೊರೆ ಹೋಗಲೇಬೇಕು. ಆದರೆ ಸಾಧ್ಯವಾದಷ್ಟು ಮೇಕಪ್ ರಹಿತವಾಗಿರಲು ಆಕೆ ಪ್ರಯತ್ನಪಡುತ್ತಾರೆ. ಅತಿಯಾದ ಮೇಕಪ್ ತ್ವಚೆಯನ್ನು ನಾಶ ಮಾಡುತ್ತದೆ ಎಂಬುದು ಸನ್ನಿ ಕಿವಿಮಾತಾಗಿದೆ.

ನೀರು ಸೇವನೆ
ಸನ್ನಿ ತಮ್ಮೊಂದಿಗೆ ನಿತ್ಯವೂ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗುತ್ತಾರೆ, 8 ಲೋಟದಷ್ಟು ನೀರು ಪ್ರತೀ ದಿನ ಕುಡಿಯುವುದರ ಕಡೆಗೆ ಆಕೆ ಗಮನ ಹರಿಸುತ್ತಾಳೆ.

ಆತ್ಮವಿಶ್ವಾಸ
ನಮ್ಮ ನಮ್ಮ ಸೌಂದರ್ಯದ ಕೀಲಿಕೈ ಆತ್ಮವಿಶ್ವಾಸವಾಗಿದೆ ಎಂಬುದು ಸನ್ನಿ ಮಾತಾಗಿದೆ. ಆದಷ್ಟು ನೈಸರ್ಗಿಕ ಸೌಂದರ್ಯದಿಂದ ಕಂಗೊಳಿಸಿ ಮತ್ತು ಆತ್ಮವಿಶ್ವಾಸದಿಂದ ಇರಿ ಎಂಬುದಾಗಿ ಆಕೆ ಸಲಹೆ ನೀಡುತ್ತಾರೆ.



Click it and Unblock the Notifications
