ಸೋರೆಕಾಯಿ ಜ್ಯೂಸ್‌ನಲ್ಲಿ ಇಷ್ಟೆಲ್ಲಾ ಪ್ರಯೋಜನಗಳಿವೆಯೇ?

By
Subscribe to Boldsky

ಬೆಳಗ್ಗೆ ಎದ್ದು ಇಂದು ಸಾರು ಏನು ಮಾಡುವುದು ಎಂದು ಆಲೋಚಿಸುವಾಗ ಮೊದಲು ನಮಗೆ ನೆನಪಿಗೆ ಬರುವ ತರಕಾರಿಗಳಲ್ಲಿ ಸೋರೆಕಾಯಿಯು ಒಂದು. ಬೇಳೆ ಸಾರಿನ ಜೊತೆಗೆ ಸೋರೆಕಾಯಿಯನ್ನು ಹಾಕಿ ಸಾರು ಮಾಡಿಕೊಂಡು, ಬಿಸಿ ಬಿಸಿ ಅನ್ನದ ಜೊತೆಗೆ ತುಪ್ಪವನ್ನು ಹಾಕಿಕೊಂಡು ಸೇವಿಸುವುದು ಹಲವರಿಗೆ ತುಂಬಾ ಇಷ್ಟವಾಗುವ ಊಟದ ಕ್ರಮವಾಗಿರುತ್ತದೆ.   ಆಹಾ! ಬಿಸಿಬಿಸಿ ಸೋರೆಕಾಯಿ ಸೂಪ್!

ಹಾಗೆಂದು ಸೋರೆಕಾಯಿಯನ್ನು ಕೇವಲ ಸಾರಿಗೆ ಮತ್ತು ಪಲ್ಯಕ್ಕೆ ಮಾತ್ರ ಸೀಮಿತ ಮಾಡಬೇಡಿ. ಇದರಲ್ಲಿ ಹಲವಾರು ಸೌಂದರ್ಯದ ಪ್ರಯೋಜನಗಳು ಇರುತ್ತವೆ. ಇವು ನಿಮ್ಮ ತ್ವಚೆ ಮತ್ತು ಕೂದಲಿಗೆ ಉತ್ತಮ ಆರೈಕೆಯನ್ನು ನೀಡುತ್ತದೆ. ಅಲ್ಲದೆ ನಿಮ್ಮ ಸೌಂದರ್ಯ ಸುಮಾರು ವರ್ಷಗಳ ಕಾಲ ಕುಂದದೆ ಇರಲು ಬೇಕಾದ ಸಹಾಯವನ್ನು ಇದು ಮಾಡುತ್ತದೆ.

Beauty benefits of bottle gourd juice
 

ಬೆಳ್ಳಂಬೆಳಗ್ಗೆ ಎದ್ದ ಕೂಡಲೆ ಸೋರೆಕಾಯಿಯ ರಸವನ್ನು ಸೇವಿಸಿದರೆ ನಿಮ್ಮ ತ್ವಚೆಗೆ ಆರೋಗ್ಯಕರ ಹೊಳಪನ್ನು ನೀಡುತ್ತದೆ ಮತ್ತು ಮೊಡವೆಗಳು ಬರದಂತೆ ತ್ವಚೆಯ ಒಳಗಿನಿಂದಲೆ ರಕ್ಷಣೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬೆಳಗ್ಗೆ ಎದ್ದ ಕೂಡಲೆ ಇದನ್ನು ಸೇವಿಸುವ ಪರಿಪಾಠವನ್ನು ಇರಿಸಿಕೊಳ್ಳಿ. ಇದರಿಂದ ನಿಮ್ಮ ತ್ವಚೆಗೆ ಉತ್ತಮ ಪ್ರಯೋಜನ ದೊರೆಯುತ್ತದೆ. ಸೋರೆಕಾಯಿಯಲ್ಲಿದೆ ಅನೇಕ ಆರೋಗ್ಯಕರ ಗುಣಗಳು

ವಯಸ್ಸಾದಂತೆ ಕಾಣುವುದನ್ನು ತಡೆಯುತ್ತದೆ

ನಿಮ್ಮ ಕೂದಲು ಅಕಾಲಿಕವಾಗಿ ಬೆಳ್ಳಗಾಗುವುದನ್ನು ತಡೆಯಲು ಪ್ರತಿದಿನ ಸೋರೆಕಾಯಿಯ ರಸವನ್ನು ಸೇವಿಸಿ. ಇದು ತಲೆ ಬೋಳಾಗುವುದನು ಸಹ ತಡೆಯುತ್ತದೆ. ಜೊತೆಗೆ ಕೂಡಲು ಬೆಳ್ಳಗಾಗುವುದನ್ನು ಸಹ ತಡೆಯುತ್ತದೆ. ಕೂದಲಿಗೆ ಸ್ವಾಭಾವಿಕ ಹೊಳಪು ಮತ್ತು ಸಿಕ್ಕಾಗುವಿಕೆಯನ್ನು ತಡೆಯುವ ಅಂಶವನ್ನು ಸೋರೆಕಾಯಿ ಹೊಂದಿರುತ್ತದೆ ಎಂದು ತಿಳಿದು ಬಂದಿದೆ.

Beauty benefits of bottle gourd juice
 

ತ್ವಚೆಯನ್ನು ವರ್ಧಿಸುತ್ತದೆ

ಸೋರೆಕಾಯಿ ರಸವು ಆಂತರಿಕವಾಗಿ ಶುದ್ಧಿಗೊಳಿಸುವ ಅಂಶಗಳನ್ನು ಹೊಂದಿರುತ್ತದೆ. ಇದು ನಿಮ್ಮ ತ್ವಚೆಯಲ್ಲಿ ಮೊಡವೆಗಳು ಮತ್ತು ಗುಳ್ಳೆಗಳು ಉಂಟಾಗದಂತೆ ತಡೆಯುತ್ತದೆ. ಈ ರಸವು ರಕ್ತವನ್ನು ಶುದ್ಧಗೊಳಿಸುತ್ತದೆ ಮತ್ತು ಮುಖವನ್ನು ಮೊಡವೆಗಳಿಂದ ಮುಕ್ತವಾಗಿ ಇರಿಸುತ್ತದೆ. ಜೊತೆಗೆ ತ್ವಚೆಗೆ ಮೃದುತ್ವವನ್ನು ಸಹ ಇದು ನೀಡುತ್ತದೆ.

Beauty benefits of bottle gourd juice
 

ಸೋರೆಕಾಯಿ ಸೇವಿಸಿ ಬಿಳಿ ಕೂದಲು ಇಲ್ಲವಾಗಿಸಿ

ಆರ್ಯುರ್ವೇದದಲ್ಲಿ ಸೋರೆಕಾಯಿಯು ಬಿಳಿ ಕೂದಲು ಬರದಂತೆ ತಡೆಯುವ ಸಾಧನವಾಗಿ ಉಲ್ಲೇಖಿಸಲ್ಪಟ್ಟಿದೆ. ಇದರ ರಸವನ್ನು ಪ್ರತಿದಿನ ಸೇವಿಸುವುದರಿಂದ ಬಿಳಿಕೂದಲು ಬರುವುದಿಲ್ಲವಂತೆ. ಮೆಂತ್ಯೆಯು ಹೇಗೆ ಬಿಳಿ ಕೂದಲು ಬರದಂತೆ ತಡೆಯುತ್ತದೆಯೋ, ಹಾಗೆ ಸೋರೆಕಾಯಿಯು ಸಹ ನಿಮ್ಮ ಕೂದಲಿಗೆ ರಕ್ಷಣೆಯನ್ನು ನೀಡುತ್ತದೆಯಂತೆ.

For Quick Alerts
ALLOW NOTIFICATIONS
For Daily Alerts

    English summary

    Beauty benefits of bottle gourd juice

    Did you know that bottle gourd is not just great for your everyday health, it also has some amazing beauty benefits. From hair to skin, bottle gourd juice makes sure to upkeep your beauty quotient and maintains it for years to come.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more