Latest Updates
-
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ?
ಚರ್ಮದ ಸೌಂದರ್ಯಕ್ಕೆ, ರೋಸ್‌ಹಿಪ್ ತೈಲದ ಚಿಕಿತ್ಸೆ
ಚರ್ಮದ ಸಮರ್ಪಕ ಆರೈಕೆ ನಮ್ಮೆಲ್ಲರ ಕರ್ತವ್ಯ. ಆರೋಗ್ಯವೇ ಜೀವನಕ್ಕೆ ಭಾಗ್ಯವಾದರೆ, ದೇಹಕ್ಕೆ ಚರ್ಮವೇ ಭಾಗ್ಯ. ಹಾಗಾಗಿ ತ್ವಚೆಯ ತಾರುಣ್ಯವನ್ನು ಕಾಪಾಡಲು ಸಾರಭೂತ ಎಣ್ಣೆಯನ್ನು ಬಳಸುವುದರಿಂದ ತುಂಬಾ ಸಹಕಾರಿಯಾಗಲಿದೆ. ನಿಮ್ಮ ತ್ವಚೆಯಲ್ಲಿ ಕಪ್ಪು ಕಲೆಗಳು ಕಂಡು ಬಂದರೆ ತಕ್ಷಣ ಅದನ್ನು ಹೋಗಲಾಡಿಸಿ. ಇದಕ್ಕೆ ರೋಸ್‌ಹಿಪ್ ತೈಲವು (rosehip oil)ಪ್ರಮುಖವಾದ ಸಾಧನವಾಗಿದೆ. ಈ ಎಣ್ಣೆ ಉಪಯೋಗಿಸಿದರೆ ಇದರಿಂದ ಉಪಕಾರವೇ ಹೊರತು ಯಾವುದೇ ಅಡ್ಡಪರಿಣಾಮ ಉಂಟಾಗುವುದಿಲ್ಲ.
ಇದನ್ನು ಗುಲಾಬಿ ಬೀಜಗಳಿಂದ ಉತ್ಪಾದಿಸಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಮತ್ತು ಔಷಧದ ಅಂಗಡಿಗಳಲ್ಲಿ ಸರಾಗವಾಗಿ ಸಿಗುತ್ತದೆ. ಈ ಎಣ್ಣೆಯಲ್ಲಿ ಚರ್ಮದ ಕೀವನ್ನು ತೆಗೆಯಲು ಉಪಕಾರಿಯಾದ ವಿಟಮಿನ್-ಇ, ವಿಟಮಿನ್-ಸಿ ಮತ್ತು ಬೀಟಾ-ಕಾರೊಟೀನ್ ಸತ್ವಗಳು ಹೇರಳವಾಗಿದೆ. ರೋಸ್‌ಹಿಪ್ ಎಣ್ಣೆಯ ಪ್ರಯೋಜನಗಳ ಕುರಿತು ತಿಳಿಯಲು ಮುಂದೆ ಓದಿ..

ರೋಸ್‌ಹಿಪ್ ಎಣ್ಣೆಯಲ್ಲಿ ಅಡಗಿರುವ ಸತ್ವಗಳು
*ವಿಟಮಿನ್ ಇ ಸತ್ವವು ಯಥೇಚ್ಛವಾಗಿರುವುದರಿಂದ ಜೀವಕೋಶಗಳನ್ನು ಉತ್ಪಾದಿಸಲು ಹೆಚ್ಚು ಸಹಕಾರಿಯಾಗಿದೆ.
*ಇದರಲ್ಲಿರುವ ಅವಶ್ಯಕ ಸ್ವಾಭಾವಿಕ ಕೊಬ್ಬಿನಂಶವು ಚರ್ಮವನ್ನು ಮೃದುಗೊಳಿಸಿ ಚರ್ಮದ ಸೋಂಕನ್ನು ಶಮನ ಮಾಡುತ್ತದೆ.
* ಇದರಲ್ಲಿ ಅಡಗಿರುವ ವಿಟಮಿನ್ ಎ ಸತ್ವದಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿ ನಾಜೂಕುಗೊಳಿಸಿ ಅಂದವನ್ನು ಇಮ್ಮಡಿಗೊಳಿಸುತ್ತದೆ.
*ಅದರಲ್ಲೂ ಒಣ ಚರ್ಮಕ್ಕೆ ಈ ಎಣ್ಣೆಯು ನಿಜಕ್ಕೂ ಹೆಚ್ಚು ಉಪಕಾರಿಯಾಗಲಿದೆ. ಇದರಲ್ಲಿರುವ ಅಂಶದಿಂದ ಚರ್ಮದ ಒಳಗಿನಿಂದಲೇ ತೇವಾಂಶ ನೀಡಿ ಚರ್ಮವನ್ನು ಆರೋಗ್ಯವಾಗಿರಿಸುತ್ತದೆ.
*ಇದರ ಇನ್ನೊಂದು ವಿಶೇಷವೇನೆಂದರೆ, ರೋಸಿಪ್ ಎಣ್ಣೆಲ್ಲಿ ಜಿಡ್ಡಿನಂಶ ಕಡಿಮೆಯಿದ್ದು ಚರ್ಮವು ಬಹುಬೇಗ ಹೀರಿಕೊಳ್ಳುತ್ತದೆ. ಇದರಿಂದ ಚರ್ಮದ ಸಣ್ಣ ಸಣ್ಣ ರಂಧ್ರಗಳು ಮುಚ್ಚಿಕೊಂಡು ಚರ್ಮದ ಪೋಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ.
ಇದನ್ನು ಬಳಸುವ ವಿಧಾನ:
*ಮೊದಲಿಗೆ ನಿಮ್ಮ ಮುಖವನ್ನು ನೀರಿನಿಂದ ಅಥವಾ ಸೋಪಿನಿಂದ ಸ್ವಚ್ಛಗೊಳಿಸಿ ವಸ್ತ್ರದಿಂದ ಒಣಗಿಸಿ.
*ನಂತರ ತೆಳುವಾಗಿಸದೆ ರೋಸಿಪ್ ಎಣ್ಣೆಯನ್ನು ಮುಖಕ್ಕೆ ನಯವಾಗಿ ಹಚ್ಚಿ.
*ನಿಮ್ಮ ಬೆರಳುಗಳಿಂದ ಚರ್ಮಕ್ಕೆ ನಯವಾಗಿ ತಿಕ್ಕಿ. ಚರ್ಮವು ಚೆನ್ನಾಗಿ ಹೀರುವವರೆಗೆ ತಿಕ್ಕಿ.
*ಇದನ್ನು ದಿನಕ್ಕೆ ಎರಡು ಬಾರಿ ಮಾಡಿಕೊಳ್ಳಿ. ನೀವು ಮಲಗುವ ಮುನ್ನ ಇದನ್ನು ಸೌಂದರ್ಯವರ್ಧಕದ ಹಾಗೆ ಬಳಸಬಹುದು.
ಸಲಹೆ:
ರೋಸಿಪ್ ಎಣ್ಣೆಯು ಜಿಡ್ಡಿನಂಶದ ಚರ್ಮಕ್ಕೆ ಅಥವಾ ಮೊಡವೆ ಆವರಿಸುವ ಚರ್ಮಗಳಿಗೆ ಹೆಚ್ಚು ಸೂಕ್ತವಲ್ಲ. ಆದ್ದರಿಂದ ಇದನ್ನು ಉಪಯೋಗಿಸುವ ಮುನ್ನ ಚರ್ಮರೋಗ ತಜ್ಞರಿಂದ ಒಮ್ಮೆ ಸಲಹೆ ಪಡೆಯಿರಿ.
ಸ್ವಲ್ಪ ಪ್ರಮಾಣದ ರೋಸಿಪ್ ಎಣ್ಣೆಯನ್ನು ನಿಮ್ಮ ಚರ್ಮಕ್ಕೆ ಹಚ್ಚಿ 24 ಗಂಟೆಗಳ ಕಾಲ ಹಾಗೆಯೇ ಬಿಡಿ. ನಿಮಗೆ ಯಾವುದೇ ನವೆ ಅಥವಾ ಉರಿ ಬರುವ ಅನುಭವವಾದರೆ ಇದನ್ನು ಉಪಯೋಸದೇ ಇರುವುದು ಒಳಿತು.



Click it and Unblock the Notifications

