Latest Updates
-
ಆರ್ಬಿಐ ಹೊಸ ಆಟೋ-ಪೇ ನಿಯಮ: ನಿಮ್ಮ OTT ಮತ್ತು SIP ಪಾವತಿಗಳು ಸ್ಥಗಿತಗೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ! -
ಸುಡುವ ಬಿಸಿಲಲ್ಲೂ ಮನೆ ತಂಪಾಗಿರಬೇಕೆ? ಕಡಿಮೆ ಖರ್ಚಿನಲ್ಲಿ ಕೂಲರ್ ಇಲ್ಲದೆ ತಂಪಾಗಿಸಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಬಿಸಿಲಿನ ಅಲೆ: ಸುಡುವ ಬಿಸಿಲಿನಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಈ ಪಾನೀಯಗಳೇ ಮದ್ದು! -
ಬಿಸಿಲ ಧಗೆಗೆ ಕಂಗಾಲಾಗಿದ್ದೀರಾ? ಸ್ಟೈಲಿಶ್ ಆಗಿ ಕೂಲ್ ಆಗಿರಲು ಇಲ್ಲಿದೆ ವೈರಲ್ ಸಮ್ಮರ್ ಹ್ಯಾಕ್ಸ್! -
ಬಿಸಿಗಾಳಿಯ ಅಬ್ಬರ: ಫಿಟ್ನೆಸ್ ಕಾಪಾಡಿಕೊಳ್ಳಲು ನಿಮ್ಮ ವರ್ಕೌಟ್ ಸಮಯ ಬದಲಾಯಿಸುವುದು ಅನಿವಾರ್ಯವೇ? -
ಡೇಟಿಂಗ್ ಆ್ಯಪ್ಗಳಲ್ಲಿ ಪ್ರೀತಿಯ ಬಲೆ: ಎಐ ಡೀಪ್ಫೇಕ್ ವಂಚನೆಯಿಂದ ಪಾರಾಗುವುದು ಹೇಗೆ? -
ಬಿಸಿಲ ಬೇಗೆಯಿಂದ ತತ್ತರಿಸಿದ್ದೀರಾ? ಎಸಿ ಇಲ್ಲದೆಯೇ ನಿಮ್ಮ ಮನೆಯನ್ನು ತಂಪಾಗಿಡಲು ಇಲ್ಲಿದೆ ಮ್ಯಾಜಿಕ್ ಟಿಪ್ಸ್! -
ಅಶ್ವಗಂಧದ ಎಲೆಗಳ ಬಳಕೆ ನಿಷೇಧ: ನಿಮ್ಮ ನೆಚ್ಚಿನ ಹೆಲ್ತ್ ಸಪ್ಲಿಮೆಂಟ್ಸ್ ಮಾರುಕಟ್ಟೆಯಿಂದ ಮಾಯವಾಗುತ್ತಾ? -
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ?
ಮುಖದ ಕಾಂತಿಯನ್ನು ಹೆಚ್ಚಿಸುವ 5 ಸರಳ ಮನೆಮದ್ದು
ಕಾಂತಿಯುತ ಮತ್ತು ತಾಜಾ ಮುಖವನ್ನು ಹೊಂದಿರಬೇಕೆಂದು ಎಲ್ಲರೂ ಬಯಸುತ್ತಾರೆ. ಅದಕ್ಕಾಗಿ ಹಲವು ಕೃತಕ ಔಷಧಿ/ಕ್ರೀಂ ಮುಂತಾದವುಗಳ ಮೊರೆಯನ್ನೂ ಹೋಗುತ್ತಾರೆ. ಕೃತಕ ವಸ್ತುಗಳು ತಕ್ಷಣಕ್ಕೆ ಪರಿಹಾರ ನೀಡುವುದಾದರೂ, ಅದರಿಂದಾಗುವ ಸೈಡ್ ಎಫೆಕ್ಟ್‌ಗಳೇ ಹೆಚ್ಚು. ಮನೆಮದ್ದು ಎಲ್ಲದಕ್ಕೂ ಪರಿಹಾರ ಎನ್ನುವಂತೆ ಕೆಲವೊಂದು ಸುಲಭವಾಗಿ ತಯಾರಿಸಬಹುದಾದ ಮನೆ ಔಷಧಿಗಳ ಪಟ್ಟಿಯನ್ನು ಬೋಲ್ಡ್ ಸ್ಕೈ ಈ ಲೇಖನದ ಮೂಲಕ ತಿಳಿಸುತ್ತಿದೆ.
ಮುರುಕಲು ಗುಪ್ಪೆಯಂತಾಗಿರುವ ಹಳೆ ಚರ್ಮ, ದಣಿದಂತಿರುವ ಮತ್ತು ಗಟ್ಟಿಯಾದ ಚರ್ಮವನ್ನು ಕೆಲವು ಪ್ರಭಾವಶಾಲಿ ದೇಹ ಲೋಷನದ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿದೆ. ಎಣ್ಣೆಯುಕ್ತ ಚರ್ಮ ಹೊಂದಿರುವವರು, ಚರ್ಮವನ್ನು ಕನಿಷ್ಠ ವಾರಕ್ಕೊಮ್ಮೆಯಾದರೂ ಉಜ್ಜಿದರೆ ಮನೆ ಔಷಧಿಯ ಫಲಿತಾಂಶ ಕಾಣಬಹುದಾಗಿದೆ. ಒಣಗಿದ ಚರ್ಮವನ್ನು ಹೊಂದಿರುವವರು ತಿಂಗಳಿಗೆ ಎರಡು ಬಾರಿ ಇದನ್ನು ಪ್ರಯೋಗಿಸಿ ಪರಿಹಾರ ಕಂಡುಕೊಳ್ಳಬಹುದು.

ಅತ್ಯಂತ ಸುಲಭ ವಿಧಾನದ ಮೂಲಕ ಮನೆಯಲ್ಲೇ ತಯಾರಿಸ ಬಹುದಾದ ಕೆಲವೊಂದು ಔಷಧಿಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ, ಇದರಿಂದ ಯೌವ್ವನಯುತರಾಗಿ ಕಾಣಬಹುದಾಗಿದೆ. ಇದರ ಜೊತೆಗೆ ಕೆಲವೊಂದು ಪಥ್ಯಗಳನ್ನು ಪಾಲಿಸಿದರೆ, ಇದರೆ ಪರಿಣಾಮ ಇನ್ನೂ ಹೆಚ್ಚಾಗಿರುವುದರ ಜೊತೆಗೆ, ಹೇಗೆ ಕಾಂತಿಯುತವಾಗಿ ಕಾಣಬೇಕೆಂದು ನಾವು ಬಯಸಿದಂತೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಇದಕ್ಕೆ ಬೇಕಾಗಿರುವ ಪದಾರ್ಥಗಳು ಅಡುಗೆ ಮನೆಯಲ್ಲಿ ಸುಲಭವಾಗಿ ಸಿಗುವಂತದ್ದು, ಇದಕ್ಕಾಗಿ ಪರಿಶ್ರಮ ಪಡುವಂತಹ ತೊಂದರೆಯಿಲ್ಲದೇ ಸಿಗುವ ಪದಾರ್ಥಗಳು ಇವಾಗಿವೆ. ಇಲ್ಲಿ ಕೆಲವು ಅತ್ಯುತ್ತಮ ನೈಸರ್ಗಿಕ ಮತ್ತು ಮನೆಯಲ್ಲಿ ತಯಾರಿಸಬಹುದಾದ ಔಷಧಿಗಳ ಪಟ್ಟಿಯನ್ನು ನೀಡುತ್ತಿದ್ದೇವೆ. ಇದಕ್ಕೆ ಬೇಕಾಗುವ ಪದಾರ್ಥಗಳನ್ನು ರೆಡಿ ಮಾಡಿಟ್ಟುಕೊಂಡು, ಪಥ್ಯಯಲ್ಲಿದ್ದರೆ ಸಾಕು.
ಒಣಗಿದ ಕಿತ್ತಳೆ ಸಿಪ್ಪೆಯ ಪೌಡರ್ + ಗೋಧಿ ಹೊಟ್ಟು
ಎರಡು ಟೇಬಲ್ ಚಮಚ ಒಣಗಿದ ಕಿತ್ತಳೆ ಸಿಪ್ಪೆಯ ಪೌಡರ್, ಎರಡು ಟೇಬಲ್ ಚಮಚ ಗೋಧಿ ಹೊಟ್ಟು ಅಥವಾ ಗಂಜಿ ಕಾಳನ್ನು ಸಿದ್ಧಪಡಿಸಿಟ್ಟುಕೊಳ್ಳಿ. ಇವೆಲ್ಲವನ್ನೂ ಮಿಶ್ರಣ ಮಾಡಿ, ಇದಕ್ಕೆ ಅರ್ಥ ಚಮಚ ಜೇನುತುಪ್ಪ ಜೊತೆಗೆ ಸ್ವಲ್ಪ ಹಾಲನ್ನು ಸೇರಿಸಿ ಗಟ್ಟಿಯಾಗಿ ಅಂದರೆ ಪೇಸ್ಟ್ ರೀತಿಯಲ್ಲಿ ಸಿದ್ಧಪಡಿಸಿ. ಇದನ್ನು ಕುತ್ತಿಗೆ, ಕೈ, ದೇಹದ ಕೆಳಗಿನ ಭಾಗ ಮತ್ತು ಕಾಲಿಗೆ ಹಚ್ಚಿ ಚೆನ್ನಾಗಿ ಉಜ್ಜಿಕೊಳ್ಳಿ. ಇದೊಂದು ಅತ್ಯಂತ ಸುಲಭವಾಗಿ ಮತ್ತು ಅದ್ಭುತ ಮನೆಮದ್ದಾಗಿದ್ದು, ಇದರ ಪರಿಣಾಮ ತಕ್ಷಣ ಗೋಚರಿಸುತ್ತದೆ. ಒಂದು ವೇಳೆ ಎಣ್ಣೆಯುಕ್ತ ಚರ್ಮಹೊಂದಿರುವವರಿಗೆ ಇದೊಂದು ಉಪಗೋಗವಾಗುವ ಔಷಧಿಯಾಗಿದ್ದು, ಇದನ್ನೊಮ್ಮೆ ಪ್ರಯತ್ನಿಸುವುದು ಸೂಕ್ತ.
ಅರಿಶಿನ, ರೋಸ್ ವಾಟರ್ ಮತ್ತು ಹಾಲು
ಓಟ್ಸ್ ಮತ್ತು ಮಜ್ಜಿಗೆ
ಮಜ್ಜಿಗೆ ಅರ್ಧ ಲೀಟರ್ ಅಥವಾ ಮೊಸರು ಅರ್ಧ ಲೀಟರ್ ತೆಗೆದುಕೊಳ್ಳಬೇಕು. ಅರ್ಧ ಕಪ್ಪು ದಪ್ಪಗಿರುವ ಅಥವಾ ಪುಡಿ ರೂಪದಲ್ಲಿವ ಓಟ್ಸ್ ತೆಗೆದುಕೊಂಡು ಇವೆಲ್ಲವನ್ನೂ ಸೇರಿಸಿ ಪೇಸ್ಟ್ ತರಹ ಮಾಡಿಕೊಂಡು ದೇಹದ ಎಲ್ಲಾ ಭಾಗಗಳಿಗೆ ಹಚ್ಚಿಕೊಳ್ಳಬೇಕು. ಮೊದಲು ಕತ್ತಿನ ಕೆಳ ಭಾಗದಿಂದ ಕೈಗಳಿಗೆ, ಹೊಟ್ಟೆ ಮತ್ತು ಕಾಲುಗಳಿಗೆ ಹಚ್ಚಬೇಕು. ದೇಹದ ಎಲ್ಲಾ ಭಾಗಗಳಿಗೆ ಹಚ್ಚಿದ ನಂತರ ಇಪ್ಪತ್ತು ನಿಮಿಷಗಳ ಕಾಲ ಹಾಗೇ ಒಣಗಲು ಬಿಟ್ಟು ನಂತರ ತೊಳೆದುಕೊಳ್ಳಬೇಕು. ಇದು ಜಿಡ್ಡಿನಿಂದ ಕೂಡಿದ ತ್ವಚೆ ಉಳ್ಳವರಿಗೆ ಒಂದು ಉತ್ತಮವಾದ ಪರಿಹಾರ.
ಗಜ್ಜರಿ ಪುಡಿ ಮತ್ತು ಹಾಲು
ಒಂದು ಟೇಬಲ್ ಚಮಚ ಗಜ್ಜರಿ ಪುಡಿಯನ್ನು ಸ್ವಲ್ಪ ಹಾಲಿನ ಜೊತೆ ಸೇರಿಸಿ ಕಲಸಿಕೊಂಡು ಪೇಸ್ಟ್ ತರಹ ಮಾಡಿಕೊಂಡು ಅದನ್ನು ದುಂಡಾಗಿ ಉಜ್ಜಿಕೊಳ್ಳಬೇಕು. ಇದು ನಿಮ್ಮ ಸತ್ವವಿಲ್ಲದಂತಹ ಚರ್ಮವನ್ನು ಪುನಶ್ಚೇತನಗೊಳಿಸಲು ಇರುವ ಉತ್ತಮ ಪರಿಹಾರ ಮತ್ತು ಕಲೆಗಳಿರುವ ಚರ್ಮಕ್ಕೆ ಕಾಂತಿಯನ್ನು ತರುವಲ್ಲಿ ಉಪಯುಕ್ತವಾಗುತ್ತದೆ. ಈ ವಿಧಾನದಿಂದ ಹೆಚ್ಚು ನವಿರಾದ ಚರ್ಮವನ್ನು ಪಡೆಯಲು ಪರಿಹಾರ ಕಂಡುಕೊಳ್ಳಬಹುದಾಗಿದೆ.
ಗೋಧಿ ಹಿಟ್ಟು, ಜೇನುತುಪ್ಪ, ಹಾಲು



Click it and Unblock the Notifications














