Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಯ ಅಂದಕ್ಕೆ ಹಿತ್ತಲ ಗಿಡದ ತರಕಾರಿ ಜ್ಯೂಸ್ ಸಾಕು
ಸೌಂದರ್ಯಪ್ರಜ್ಞೆ ಇರುವ ಎಲ್ಲರಿಗೂ ತಮ್ಮ ತ್ವಚೆ ಗೌರವರ್ಣದ್ದಾಗಿರಬೇಕೆಂಬ ಬಯಕೆಯಿರುತ್ತದೆ. ಆದರೆ ಚರ್ಮದ ಬಣ್ಣವನ್ನು ಬದಲಿಸುವುದು ಸಾಧ್ಯವಿಲ್ಲ. ಜಾಣತನವೆಂದರೆ ಚರ್ಮವನ್ನು ಉತ್ತಮ ಆರೋಗ್ಯದಿಂದ, ಕಾಂತಿಯಿಂದ ಕೂಡಿರುವಂತೆ ಮಾಡುವ ಮೂಲಕ ಕಲೆಯಿಲ್ಲದ ಮತ್ತು ನೆರಿಗೆಯಿಲ್ಲದಂತೆ ಕಾಪಾಡಿಕೊಳ್ಳುವ ಮೂಲಕ ಸಹಜ ಸೌಂದರ್ಯವನ್ನು ಬೆಳಗುವಂತೆ ಮಾಡಬಹುದು. ಆದರೆ ಇದು ಅಷ್ಟು ಸುಲಭವಲ್ಲ. ಇದಕ್ಕೆ ಸತರ ಆರೈಕೆ ಮತ್ತು ಪೋಷಣೆ ಅಗತ್ಯ.
ಹಾಗಾಂತ ಇದಕ್ಕಾಗಿ ವರ್ಷಗಟ್ಟಲೇ ಆರೈಕೆ ನೀಡುವುದು ಅಗತ್ಯವಿಲ್ಲ, ಕೆಲವೊಂದು ನೈಸರ್ಗಿಕವಾದ ಮನೆಮದ್ದನ್ನು ನಿಯಮಿತವಾಗಿ ಪಾಲಿಸಿಕೊಂಡು ಬಂದರೆ ಖಂಡಿತಗಿಯೂ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು, ಅದು ಹೇಗೆ ಎಂಬುದು ಅಚ್ಚರಿವಾಯಿತೇ? ಬನ್ನಿ ಇಂದು ಬೋಲ್ಡ್ ಸ್ಲೈ ಕೆಲವೊಂದು ಆರೋಗ್ಯಕರವಾದ ಹಿತ್ತಲ ಗಿಡದ ತರಕಾರಿಗಳ ಜ್ಯೂಸ್‌ಗಳ ಪಟ್ಟಿಯನ್ನು ನಿಮಗೆ ಒದಗಿಸುತ್ತಿದ್ದು ಇದನ್ನು ಓದಿ, ಅನುಸರಿಸಿ, ನಿಮ್ಮ ತ್ವಚೆಯಲ್ಲಿ ಉಂಟಾಗುವ ಬದಲಾವಣೆಗಳನ್ನು ನೀವೇ ನೋಡಿ....! ಬೇವಿನ ಸೌಂದರ್ಯವರ್ಧಕ ಗುಣಗಳು ಒಂದೇ, ಎರಡೇ?
ಕ್ಯಾರೆಟ್ ಜ್ಯೂಸ್
ಹೊಳೆಯುವ ತ್ವಚೆಗೆ ನಿಮ್ಮ ತ್ವಚೆಯು ಸದಾ ಹೊಳಪಿನಿಂದ ಮತ್ತು ಆರೋಗ್ಯದಿಂದ ಕೂಡಿರಬೇಕೇ? ಹಾಗಾದರೆ ಪ್ರತಿ ನಿತ್ಯ ಕ್ಯಾರೆಟ್ ಜ್ಯೂಸ್ ಸೇವಿಸಿ. ಏಕೆಂದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ. ಕ್ಯಾರೆಟನ್ನು ಪೇಸ್ಟ್ ಮಾಡಿಕೊಂಡು ಜೇನು ತುಪ್ಪದ ಜೊತೆಗೆ ನಿಮ್ಮ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಸಹ ಬಳಸಬಹುದು. ಸುಮ್ಮನೆ ಕಾಸ್ಮೆಟಿಕ್‍ಗಳ ಮೇಲೆ ಹಣ ಚೆಲ್ಲುವ ಬದಲು ಕ್ಯಾರೆಟ್ ಜ್ಯೂಸ್ ಸೇವಿಸಲು ಆರಂಭಿಸಿ.

ಪಾಲಾಕ್ ಸೊಪ್ಪಿನ ಜ್ಯೂಸ್
ಪಾಲಾಕ್ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ತಡೆಯುವ ಗುಣಗಳೆರಡೂ ಇರುವುದರಿಂದ ಇದು ಆರೋಗ್ಯಕರ ಚರ್ಮ ಪಡೆಯಲು ಸಹಾಯಕ. ಪಾಲಾಕ್ ಸೊಪ್ಪಿನ ಜ್ಯೂಸ್ ಮಾಡಿ ಪ್ರತಿದಿನ ಸೇವಿಸುವುದರಿಂದ ಕಾಂತಿಯುತ ಚರ್ಮ ಪಡೆಯಬಹುದು. ಹಾಗಾಗಿ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೆ ಕಾಫಿ ಕುಡಿಯುವ ಬದಲು ಪಾಲಕ್ ಸೊಪ್ಪಿನ ಜ್ಯುಸ್ ಕುಡಿಯಿರಿ, ಮೊಡವೆಗಳಿಂದ ಮುಕ್ತರಾಗುವುದರ ಜೊತೆಗೆ ತ್ವಚೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ತ್ವಚೆಯ ಅಂದಕ್ಕೆ-ಮೂಸಂಬಿ ಜ್ಯೂಸ್‌ನ ಲೇಪನ!
ಟೊಮೇಟೊ ಜ್ಯೂಸ್
ಕಲೆ ನಿವಾರಣೆ ಚಿಕಿತ್ಸೆಗೆ ಕೆಂಪು ಮತ್ತು ರಸ ಹೊಂದಿರುವ ಈ ಹಣ್ಣು ತುಂಬಾ ಉಪಯೋಗಿ. ಟೊಮೇಟೊ ಜ್ಯೂಸ್ ತೆಗೆದು ಅದನ್ನು ಕಲೆ ಮೇಲೆ ಹಚ್ಚಬೇಕು. ಇದನ್ನು 10-15 ನಿಮಿಷ ಹಾಗೆ ಬಿಟ್ಟು ಬಳಿಕ ನೀರಿನಲ್ಲಿ ತೊಳೆಯಿರಿ. ಟೊಮೇಟೊದಲ್ಲಿ ಕಲೆಗಳನ್ನು ನಿವಾರಿಸುವಂತಹ ನೈಸರ್ಗಿಕ ಗುಣಗಳಿವೆ. ಟೊಮೇಟೊವನ್ನು ನಿಯಮಿತವಾಗಿ ಬಳಸುವುದು ತ್ವಚೆಗೆ ಒಳ್ಳೆಯದು. ಟೊಮೇಟೊ ಕೇವಲ ಮಚ್ಛೆ ನಿವಾರಿಸುವುದು ಮಾತ್ರವಲ್ಲದೆ, ಚರ್ಮವು ಆರೋಗ್ಯಕರ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!
ಸೌತೆಕಾಯಿ ರಸ
ಸೌತೆಕಾಯಿಯಲ್ಲಿ ವಿಟಮಿನ್ A ಹಾಗೂ ವಿಟಮಿನ್ C ಗಳಿದ್ದು ಇವು ನಿಮ್ಮ ಆರೋಗ್ಯಕ್ಕೆ ಬಹಳ ಹಿತಕಾರಿಯಾಗಿವೆ. ಈ ವಿಟಮಿನ್‌ಗಳು ನಿಮ್ಮ ಶರೀರದ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುವುದರ ಜೊತೆಗೆ ದೇಹದಿಂದ ಟಾಕ್ಸಿನ್‌ಗಳನ್ನು ಕೂಡ ಹೊರ ಹಾಕುತ್ತದೆ. ಆ ಮೂಲಕ ತ್ವಚೆಯನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ.



Click it and Unblock the Notifications
