Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಯ ಅಂದಕ್ಕೆ ಟೊಮೇಟೊ ಹಣ್ಣಿನ ಚಿಕಿತ್ಸೆ
ನಮ್ಮಲ್ಲಿ ಒಂದು ವಿಶಿಷ್ಟ ಗುಣವಿದೆ. ಅಂದರೆ ಸುಲಭವಾಗಿ ಲಭ್ಯವಾಗದುದಕ್ಕೆ ಹೆಚ್ಚು ಬೆಲೆ ನೀಡುವುದು ಮತ್ತು ಅದಕ್ಕೆ ಸಮನಾದ, ಸುಲಭವಾಗಿ ಲಭ್ಯವಾಗುವುದನ್ನು ಕಡೆಗಣಿಸುವುದು. ಉದಾಹರಣೆಗೆ ಹತ್ತು ಸಾವಿರ ರೂಪಾಯಿಯ ಸೀರೆಗಿಂತಲೂ ಸಾವಿರ ರೂಪಾಯಿಯ ಸೀರೆ ಚೆನ್ನಾಗಿದ್ದರೂ ಬೆಲೆ ನೋಡಿದವರು ಹತ್ತು ಸಾವಿರದ ಸೀರೆಯೇ ಚೆನ್ನಾಗಿದೆ ಎನ್ನುತ್ತಾರೆ.
ಅಂತೆಯೇ ನಮ್ಮೆಲ್ಲರ ಅಡುಗೆಮನೆಯ ನಿತ್ಯಸಂಗಾತಿ ಟೊಮೇಟೊ'ಹಣ್ಣು' ಸಹಾ. ಹೌದು, ಟೊಮೇಟೊ ಸಸ್ಯಶಾಸ್ತ್ರದ ಪ್ರಕಾರ ಒಂದು ಹಣ್ಣು, ಆದರೆ ನಾವು ಅದನ್ನು ಒಂದು ತರಕಾರಿಯಂತೆ ಬಳಸುತ್ತಿದ್ದೇವಷ್ಟೇ. ಸೌಂದರ್ಯಕ್ಕೂ ಟೊಮೇಟೊ ಹಣ್ಣಿಗೂ ಇರುವ ಸಾಮ್ಯವೆಂದರೆ ಲೈಕೋಪಿನ್ ಎಂಬ ಪೋಷಕಾಂಶ. ನಮ್ಮ ಚರ್ಮದ ಬಣ್ಣಕ್ಕೆ ಮೆಲನಿನ್ ಎಂಬ ವರ್ಣದ್ರವ್ಯ (pigment) ಕಾರಣವಾಗಿದೆ. ಈ ವರ್ಣದ್ರವ್ಯ ಸೂರ್ಯನ ಕಿರಣಗಳಲ್ಲಿರುವ ಕೆಲವು ಅತಿನೇರಳೆ ಪ್ರಭೆಗಳ ಪ್ರಭಾವಕ್ಕೆ ಸುಲಭವಾಗಿ ಗುರಿಯಾಗಿ ಗಾಢವಾಗುತ್ತದೆ. ಟೊಮೇಟೊ ಜ್ಯೂಸ್ ಮಿಸ್ ಮಾಡದೇ ದಿನಾ ಸೇವಿಸಿ!
ಸಾಮಾನ್ಯವಾಗಿ ನಿಮ್ಮ ಗಮನಕ್ಕೆ ಬಂದಿರಬಹುದು, ಬಿಸಿಲಿಗೆ ಒಡ್ಡಿರುವ ಚರ್ಮ ಕೊಂಚ ಗಾಢವಾಗಿದ್ದು ಬಟ್ಟೆಯಿಂದ ಮರೆಯಾಗಿದ್ದ ಭಾಗ ಕೊಂಚ ಬೆಳ್ಳಗಿರುವುದಕ್ಕೆ ಇದೇ ಕಾರಣ. ಟೊಮೇಟೊದಲ್ಲಿರುವ ಲೈಕೋಪಿನ್ ಮತ್ತು ಈ ಮಲನಿನ್ ಸುಲಭವಾಗಿ ಬೆರೆಯುವ ಸ್ನೇಹಿತರು. ಮೆಲನಿನ್ ಸೂರ್ಯನ ಪ್ರಭೆಗೆ ಗಾಢವರ್ಣಕ್ಕೆ ಅಷ್ಟು ಸುಲಭವಾಗಿ ತಿರುಗಲು ಈ ಮೆಲನಿನ್ ಬಿಡದಿರುವುದರಿಂದ ಚರ್ಮದ ಆರೈಕೆಗೆ ಪೂರಕವಾಗಿದೆ. ತ್ವಚೆಯ ಅಂದಕ್ಕಾಗಿ ಹಣ್ಣಿನ ರಸಗಳ ಟ್ರೀಟ್‌ಮೆಂಟ್
ಕೇವಲ ಚರ್ಮಕ್ಕೆ ಮಾತ್ರವಲ್ಲದೇ ಕೂದಲಿಗೂ ಉತ್ತಮ ಆರೈಕೆ ನೀಡಿ ಸೊಂಪಾಗಿ ಹಾಗೂ ಹೊಳಪಿನಿಂದ ಕೂಡಿರುವಂತೆ ಮಾಡಲು ಸಹಕರಿಸುತ್ತದೆ. ಟೊಮೇಟೊ ಹಣ್ಣು ನಮ್ಮ ಚರ್ಮದ ಕಾಂತಿಯನ್ನು ಯಾವ ರೀತಿಯಲ್ಲಿ ಹೆಚ್ಚಿಸುವುದು ಎಂಬ ವಿವರಗಳನ್ನು ಈಗ ನೋಡೋಣ...

ಬಿಸಿಲಿನ ತಾಪದಿಂದ ತ್ವಚೆಯ ರಕ್ಷಣೆಗೆ
ಬಿಸಿಲಿಗೊಡ್ಡಿರುವ ಚರ್ಮ ಗಾಢವಾಗಲು ಸೂರ್ಯ ರಶ್ಮಿಯಲ್ಲಿರುವ ಅತಿನೇರಳೆ ಪ್ರಭೆಗಳಿಗೆ ಚರ್ಮದ ವರ್ಣದ್ರವ್ಯ ಮೆಲನಿನ್ ಒಳಗಾಗಿ ಗಾಢವಾಗುವುದು ಕಾರಣ. ಟೊಮೇಟೊ ಹಣ್ಣನ್ನು ತೆಳುವಾಗಿ ಬಿಲ್ಲೆಗಳಂತೆ ಕತ್ತರಿಸಿಕೊಂಡು ಬಿಸಿಲಿಗೆ ಗಾಢವಾಗಿರುವ ಭಾಗಕ್ಕೆ ಸವರಿ ಒಣಗಲು ಬಿಡಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಿಸಿಲಿನ ತಾಪದಿಂದ ತ್ವಚೆಯ ರಕ್ಷಣೆಗೆ
ಕೆಲ ನಿಮಿಷಗಳ ಆ ಭಾಗ ಒಣಗಿದ ಬಳಿಕ ಮತ್ತೊಮ್ಮೆ ಹಚ್ಚಬೇಕು, ಇದೂ ಒಣಗಿದ ಬಳಿಕ ಮತ್ತೊಮ್ಮೆ ಹಚ್ಚಬೇಕು. ಹೀಗೇ ಸುಮಾರು ನಾಲ್ಕೈದು ಬಾರಿ ಹಚ್ಚಿ ಒಣಗಲು ಬಿಡಬೇಕು. ಸುಮಾರು ಒಂದು ಗಂಟೆಯ ಬಳಿಕ ಸ್ವಚ್ಛ ನೀರಿನಲ್ಲಿ ತೊಳೆದುಕೊಳ್ಳಬೇಕು. ಕೆಲವೇ ದಿನಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬರುತ್ತದೆ. ಟೊಮೇಟೊದಲ್ಲಿರುವ ವಿಟಮಿನ್ ಸಿ ಚರ್ಮವನ್ನು ಹೊಳೆಯಲು ಸಹಕರಿಸುತ್ತದೆ.

ಚರ್ಮದ ತೊಂದರೆಗಳನ್ನು ಗುಣಪಡಿಸುತ್ತದೆ
ವಯಸ್ಸಾಗುತ್ತಿದ್ದಂತೆ ಚರ್ಮ ಕಾಂತಿ ಕಳೆದುಕೊಳ್ಳುತ್ತಾ ಬರುತ್ತದೆ. ನೆರಿಗೆಗಳು ಸ್ಪಷ್ಟವಾಗುತ್ತಾ ಹೋಗುತ್ತವೆ. ಕೂದಲು ನೆರೆಯತೊಡಗುತ್ತದೆ. ಕಲೆಗಳು ಮೂಡತೊಡಗುತ್ತವೆ. ಇದಕ್ಕೆಲ್ಲಾ ಶರೀರದಲ್ಲಿ ಉತ್ಪತ್ತಿಯಾಗುವ ಫ್ರೀ ರಾಡಿಕಲ್ (free radicals) ಎಂಬ ರಾಸಾಯನಿಕಗಳು ಕಾರಣ. ಟೊಮೇಟೊದಲ್ಲಿರುವ ಹಲವು ಪೋಷಕಾಂಶಗಳು ಈ ಶತ್ರುಗಳ ವಿರುದ್ಧ ಹೋರಾಡುತ್ತಾ ವೃದ್ಧಾಪ್ಯವನ್ನು ಮುಂದೂಡುಡುತ್ತವೆ.

ಚರ್ಮದ ತೊಂದರೆಗಳನ್ನು ಗುಣಪಡಿಸುತ್ತದೆ
ಟೊಮೇಟೊ ಬೀಜಗಳಿಂದ ತೆಗೆಯಲಾದ ಟೊಮೇಟೊ ಎಣ್ಣೆ ಚರ್ಮದ ಆರೈಕೆಗೆ ಅತ್ಯುತ್ತಮವಾಗಿದೆ. ಈ ಎಣ್ಣೆಯನ್ನು ನಯವಾಗಿ ಮಸಾಜ್ ಮಾಡುವುದರಿಂದ ಚರ್ಮದ ಇತರ ಕಾಯಿಲೆಗಳಾದ ತುರಿಕೆ ಮತ್ತು ಸೋರಿಯಾಸಿಸ್ (psoriasis) ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತದೆ. ಅಲ್ಲದೇ ಸತತವಾಗಿ ಹಚ್ಚುತ್ತಾ ಇರುವುದರಿಂದ ಘಾಸಿಗೊಂಡಿದ್ದ ಚರ್ಮ ಪುನಃಶ್ಚೇತನ ಪಡೆಯಲು ಸಾಧ್ಯವಾಗುತ್ತದೆ.

ಟೊಮೇಟೊ ಹಾಗೂ ಜೇನಿನ ಮಿಶ್ರಣ
ನಯವಾದ ಚರ್ಮವನ್ನು ನೀಡುತ್ತದೆ ಚರ್ಮವು ಮೊದಲಿನ ನಯವನ್ನು ಪಡೆಯಲು ಟೊಮೇಟೊ ಹಣ್ಣಿನ ರಸವನ್ನು ಜೇನುತುಪ್ಪದೊಂದಿಗೆ ಸಮಪ್ರಮಾಣದಲ್ಲಿ ಬೆರೆಸಿ ದಟ್ಟನಾದ ದ್ರಾವಣ ತಯಾರಿಸಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿ ಸುಮಾರು ಹದಿನೈದು ನಿಮಿಷಗಳ ಕಾಲ ಒಣಗಲು ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಕಾಲಕ್ರಮೇಣ ನಯವಾದ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.

ಮೊಡವೆಯಿಂದ ಮುಕ್ತಿ ದೊರೆಯುತ್ತದೆ
ಹದಿಹರೆಯದಲ್ಲಿ ಪ್ರಾರಂಭವಾದ ಮೊಡವೆ ಮತ್ತು ಕೀವುತುಂಬಿದ ಬೊಕ್ಕೆ (zit) ಗಳು ನೋವು, ತುರಿಕೆ ಮತ್ತು ಮಾಗಿದ ಬಳಿಕ ಕಲೆಯನ್ನುಳಿಸುತ್ತವೆ. ಇದರಿಂದ ಪಾರಾಗಲು ಒಂದು ಟೊಮೇಟೊ ಹಣ್ಣನ್ನು ಅರ್ಧ ಕತ್ತರಿಸಿ ಮುಖದ ತುಂಬಾ ನಯವಾಗಿ ಹಚ್ಚಿಕೊಳ್ಳಿ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ (ನೋವು ಉಂಟಾದರೆ) ಟೊಮೇಟೊ ಹಣ್ಣಿನ ಸಿಪ್ಪೆಯನ್ನು ಸುಲಿದು, ಬೀಜ ತೆಗೆದು ನುಣ್ಣಗೆ ಅರೆದಿಟ್ಟುಕೊಂಡು ಒಂದು ನಯವಾದ ಬ್ರಶ್ ಉಪಯೋಗಿಸಿ ಹಚ್ಚಿಕೊಳ್ಳಿ. ಒಂದು ಗಂಟೆ ಕಾಲ ಹಾಗೇ ಬಿಟ್ಟು ಬಳಿಕ ತೊಳೆದುಕೊಳ್ಳಿ. ಕ್ರಮೇಣ ನೋವು ನೀಡುತ್ತಿದ್ದ ಮೊಡವೆಗಳು ಕಲೆಯಿಲ್ಲದೇ ಮಾಯವಾಗುವುವು.

ತಲೆಹೊಟ್ಟು ನಿವಾರಿಸುತ್ತದೆ
ಸಾಮಾನ್ಯವಾಗಿ ಚಳಿಗಾಲದಲ್ಲಿ ತಲೆಹೊಟ್ಟು ಹೆಚ್ಚಾಗುತ್ತದೆ. ಹವೆಯಲ್ಲಿರುವ ಆರ್ದ್ರತೆ ಕಡಿಮೆಯಾಗಿ ಚರ್ಮ ಒಣಗುವುದು ಇದಕ್ಕೆ ಪ್ರಮುಖ ಕಾರಣ. ಈ ತೊಂದರೆಯಿಂದ ಹೊರಬರಲು ಕೆಲವು ಟೊಮೇಟೊ ಹಣ್ಣುಗಳ ಬೀಜ ತೆಗೆದು ಕೇವಲ ತಿರುಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ಗೊಟಾಯಿಸಿ ತಲೆಗೂದಲು ಮುಳುಗುವಂತೆ ಹಚ್ಚಿಕೊಳ್ಳಬೇಕು. ಸುಮಾರು ಒಂದರಿಂದ ಎರಡು ಗಂಟೆಗಳ ಬಳಿಕ ಸ್ವಚ್ಛ ತಣ್ಣೀರಿನಲ್ಲಿ ತೊಳೆದುಕೊಳ್ಳುವ ಮೂಲಕ ತಲೆಹೊಟ್ಟು ನಿವಾರಣೆಯಾಗುತ್ತದೆ. ಈ ಪ್ರಕ್ರಿಯೆಯನ್ನು ವಾರಕ್ಕೆ ಒಂದು ಸಲ, ಹೆಚ್ಚು ಹೊಟ್ಟಾಗಿದ್ದರೆ ಎರಡು ಸಲ ಪುನರಾವರ್ತಿಸಬೇಕು



Click it and Unblock the Notifications
