Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ತ್ವಚೆಯ ಅಂದಕ್ಕಾಗಿ ಹಣ್ಣಿನ ರಸಗಳ ಟ್ರೀಟ್‌ಮೆಂಟ್
ನಾವು ತೆಗೆದುಕೊಳ್ಳುವ ಆಹಾರ ಪದಾರ್ಥಗಳು ನಮ್ಮ ದೈನಂದಿನ ಜೀವನ ಕ್ರಮದಲ್ಲಿ ಪ್ರಧಾನವಾದುದು. ದೈನಂದಿನ ಚಟುವಟಿಕೆಗಳನ್ನು ಯಾವುದೇ ತೊಡಕಿಲ್ಲದೆ ನಡೆಸುವಲ್ಲಿ ಈ ಆಹಾರಗಳ ಪಾತ್ರ ಹಿರಿದಾದುದು.
ಹೆಚ್ಚು ಪೋಷಕಾಂಶವುಳ್ಳ ಆಹಾರ ಪದಾರ್ಥಗಳನ್ನು ನೀವು ಸೇವಿಸುತ್ತೀರಿ ಎಂದಾದಲ್ಲಿ ನೀವು ಸುದೃಢರಾಗಿರುತ್ತೀರಿ ಮತ್ತು ಸುಸ್ತು, ರೋಗ ರುಜಿನಗಳಿಂದ ದೂರವಿರುತ್ತೀರಿ ಎಂದೇ ಅರ್ಥ. ಇನ್ನು ದೇಹದ ತೂಕ ವ್ಯವಸ್ಥೆಯನ್ನು ಈ ಆಹಾರಗಳು ಸಮತೋಲನದಲ್ಲಿರಿಸಿ ನಿಮ್ಮನ್ನು ಇನ್ನಷ್ಟು ಆರೋಗ್ಯವಂತರನ್ನಾಗಿರಿಸುತ್ತದೆ.
ಅಷ್ಟೇ ಏಕೆ, ದೇಹದ ಅಂದ ಚೆಂದ ಕಾಪಾಡುವಲ್ಲಿ ಈ ಆಹಾರಗಳು ಮಾಡುವ ಕಮಾಲು ನಿಮ್ಮ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ ಎಂಬುದನ್ನು ನೀವು ನಂಬಲೇಬೇಕು. ಅದರಲ್ಲೂ ಸಮತೋಲಿತ ಆಹಾರಗಳೆಂದೇ ಕರೆಯಲಾದ ಹಣ್ಣು ತರಕಾರಿಗಳು ನಿಮ್ಮ ಸೌಂದರ್ಯ ವರ್ಧಿಸುವಲ್ಲಿ ಪ್ರಧಾನವಾಗಿದೆ. ಹಣ್ಣಿನ ರಸವಂತೂ ನಿಮ್ಮ ತ್ವಚೆಯ ಕಾಂತಿಯನ್ನು ವೃದ್ಧಿಸಿ ಆರೋಗ್ಯಕರವಾಗಿ ನಳನಳಿಸುವಂತೆ ಮಾಡುತ್ತದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ. ಹಾಗಿದ್ದರೆ ಇಂದಿನ ನಮ್ಮ ಲೇಖನದಲ್ಲಿ ಹಣ್ಣಿನ ರಸಗಳ ಸಮೃದ್ಧತೆಯಿಂದ ನಿಮ್ಮ ತ್ವಚೆಯ ಸರ್ವ ದೋಷಗಳೂ ಪರಿಹಾರವಾಗುವುದು ಹೇಗೆ ಎಂಬುದನ್ನು ಕಂಡುಕೊಳ್ಳಿ.
ಕ್ಯಾರೆಟ್ ಜ್ಯೂಸ್

ಹೊಳೆಯುವ ತ್ವಚೆಗೆ ನಿಮ್ಮ ತ್ವಚೆಯು ಸದಾ ಹೊಳಪಿನಿಂದ ಮತ್ತು ಆರೋಗ್ಯದಿಂದ ಕೂಡಿರಬೇಕೇ? ಹಾಗಾದರೆ ಪ್ರತಿ ನಿತ್ಯ ಕ್ಯಾರೆಟ್ ಜ್ಯೂಸ್ ಸೇವಿಸಿ. ಏಕೆಂದರೆ ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ. ಕ್ಯಾರೆಟನ್ನು ಪೇಸ್ಟ್ ಮಾಡಿಕೊಂಡು ಜೇನು ತುಪ್ಪದ ಜೊತೆಗೆ ನಿಮ್ಮ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಸಹ ಬಳಸಬಹುದು. ಸುಮ್ಮನೆ ಕಾಸ್ಮೆಟಿಕ್‍ಗಳ ಮೇಲೆ ಹಣ ಚೆಲ್ಲುವ ಬದಲು ಕ್ಯಾರೆಟ್ ಜ್ಯೂಸ್ ಸೇವಿಸಲು ಆರಂಭಿಸಿ.
ಕುಂಬಳಕಾಯಿ ಜ್ಯೂಸ್
ಕುಂಬಳಕಾಯಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರುತ್ತದೆ ಎಂದು ನಮಗೆ ಗೊತ್ತು. ಆದರೆ ಇದರ ಜೊತೆಗೆ ಇದು ಕೂದಲು ಮತ್ತು ತ್ವಚೆಯ ಮೇಲೂ ಸಹ ಪರಿಣಾಮ ಬೀರುತ್ತದೆ. ಹೌದು ತ್ವಚೆಯ ಸಮಸ್ಯೆಗಳಿಗೆ ಇದು ಸ್ವಾಭಾವಿಕವಾದ ಪರಿಹಾರವನ್ನು ಒದಗಿಸುತ್ತದೆ. ಇದರ ಮತ್ತೊಂದು ವಿಶೇಷವೆಂದರೆ ಇದು ಒಣ ಮತ್ತು ಜಿಡ್ಡಿನಿಂದ ಕೂಡಿದ ತ್ವಚೆ ಎರಡಕ್ಕೂ ಹೊಂದಿಕೊಳ್ಳುತ್ತದೆ. ಅಷ್ಟೇ ಏಕೆ, ಕುಂಬಳಕಾಯಿಯಲ್ಲಿರುವ ಸಮೃದ್ಧವಾದ ಆಂಟಿಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣಾಂಶ, ಪ್ರೋಟಿನ್, ಪೊಟಾಶಿಯಂ, ಪಾಸ್ಪರಸ್ ಮತ್ತು ವಿಟಮಿನ್‌ಗಳಾದ ಎ,ಇ,ಸಿ,ಡಿ,ಬಿ1 ಮತ್ತು ಬಿ2 ಇತ್ಯಾದಿಗಳು ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. ತ್ವಚೆಯ ಸರ್ವರೋಗಕ್ಕೂ, ಸೀಬೆಹಣ್ಣಿನ ಎಲೆಗಳೇ ಸಾಕು!
ದಾಳಿಂಬೆ ಜ್ಯೂಸ್
ದಾಳಿಂಬೆ ಹಣ್ಣುಗಳ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ನಮಗೆ ಗೊತ್ತೇ ಇದೆ, ಆದರೆ, ಪ್ರತಿನಿತ್ಯ ದಾಳಿಂಬೆ ಜ್ಯೂಸ್ ಸೇವಿಸಿದರೆ, ತ್ವಚೆಯ ಮೊಡವೆ, ಮತ್ತು ಚರ್ಮದ ಒರಟುತನದ ವಿರುದ್ಧ ತ್ವರಿತವಾಗಿ ಶಮನಗೊಳ್ಳುತ್ತದೆ. ಸಾಮಾನ್ಯವಾಗಿ ಹದಿಹರೆಯದಲ್ಲಿ ಕಾಡುವ ಮುಖದ ಮೊಡವೆ ಮತ್ತು ದದ್ದುಗಳನ್ನು ಸಮರ್ಪಕವಾಗಿ ಹತೋಟಿಯಲ್ಲಿಡದೇ ಇದ್ದರೆ ಅವು ಒಣಗಿದ ಬಳಿಕ ಶಾಶ್ವತವಾದ ಕಲೆಗಳನ್ನು ಉಳಿಸುತ್ತವೆ. ಈ ತೊಂದರೆಯಿಂದ ಪಾರಾಗಲು ದಾಳಿಂಬೆ ಜ್ಯೂಸ್ ನಲ್ಲಿರುವ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಬ್ಯಾಕ್ಟೀರಿಯಾಗಳನ್ನು ಹೊಡೆದೋಡಿಸುವ ಶಕ್ತಿ ನೆರವಿಗೆ ಬರುತ್ತದೆ. ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಲಭ್ಯವಾಗುವ ಪರಿಣಾಮವಾಗಿ ಸುಂದರವಾದ ಮತ್ತು ಕಾಂತಿಯುಕ್ತ ಚರ್ಮ ನಿಮ್ಮದಾಗುತ್ತದೆ.
ಕಿತ್ತಳೆ ಹಣ್ಣಿನ ಜ್ಯೂಸ್
ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಗಳು ಚರ್ಮಕ್ಕೆ ತುಂಬಾ ಉಪಯೋಗಿ. ಕಲೆಗಳ ಮೇಲೆ ಕಿತ್ತಳೆ ಜ್ಯೂಸ್‌ನ್ನು ಹಚ್ಚಿದಾಗ ಅದು ಆ ಪ್ರದೇಶದಲ್ಲಿ ಚರ್ಮವನ್ನು ಪುನರುಜ್ಜೀವನಗೊಳಿಸಿ, ಮತ್ತೆ ಸುಂದರವಾಗಿ ಕಾಣುವಂತೆ ಮಾಡುತ್ತದೆ. ಚರ್ಮದ ಮೇಲೆ ಕಿತ್ತಳೆ ಹಣ್ಣಿನ ಜ್ಯೂಸ್ ಹಚ್ಚಿ 10-15 ನಿಮಿಷ ಹಾಗೆ ಬಿಡಿ, ಇದರ ಬಳಿಕ ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಅದನ್ನು ತೊಳೆಯಿರಿ. ತ್ವಚೆಯ ಅಂದ ಕೆಡಿಸುವ ಇಂತಹ ಆಹಾರಗಳಿಂದ ದೂರವಿರಿ
ಟೊಮೇಟೊ ಜ್ಯೂಸ್
ಕಲೆ ನಿವಾರಣೆ ಚಿಕಿತ್ಸೆಗೆ ಕೆಂಪು ಮತ್ತು ರಸ ಹೊಂದಿರುವ ಈ ಹಣ್ಣು ತುಂಬಾ ಉಪಯೋಗಿ. ಟೊಮೇಟೊ ಜ್ಯೂಸ್ ತೆಗೆದು ಅದನ್ನು ಕಲೆ ಮೇಲೆ ಹಚ್ಚಬೇಕು. ಇದನ್ನು 10-15 ನಿಮಿಷ ಹಾಗೆ ಬಿಟ್ಟು ಬಳಿಕ ನೀರಿನಲ್ಲಿ ತೊಳೆಯಿರಿ. ಟೊಮೇಟೊದಲ್ಲಿ ಕಲೆಗಳನ್ನು ನಿವಾರಿಸುವಂತಹ ನೈಸರ್ಗಿಕ ಗುಣಗಳಿವೆ. ಟೊಮೇಟೊವನ್ನು ನಿಯಮಿತವಾಗಿ ಬಳಸುವುದು ತ್ವಚೆಗೆ ಒಳ್ಳೆಯದು. ಟೊಮೇಟೊ ಕೇವಲ ಮಚ್ಛೆ ನಿವಾರಿಸುವುದು ಮಾತ್ರವಲ್ಲದೆ, ಚರ್ಮವು ಆರೋಗ್ಯಕರ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.



Click it and Unblock the Notifications

