ಏಳು ಗಿಡಮೂಲಿಕೆಗಳಲ್ಲಿ ಅಡಗಿದೆ ಸೌಂದರ್ಯದ ಕೀಲಿಕೈ

By Manu

ಮುಖದ ಸೌಂದರ್ಯದ ವಿಷಯಕ್ಕೆ ಬಂದಾಗ ಅದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಾಗುತ್ತದೆ. ಮುಖದಲ್ಲಿ ಕಲೆಗಳು, ಮೊಡವೆಗಳು ನಿಮ್ಮ ಸೌಂದರ್ಯಕ್ಕೆ ಕಪ್ಪು ಚುಕ್ಕೆಯಂತಿರುವುದರಿಂದ ಅವುಗಳ ನಿವಾರಣೆಗೆ ನೀವು ಆದಷ್ಟು ಗಮನವನ್ನು ನೀಡಬೇಕಾಗುತ್ತದೆ. ರಾಸಾಯನಿಕ ಉತ್ಪನ್ನಗಳನ್ನು ಕಡಿಮೆ ಮಾಡಿ ನೈಸರ್ಗಿಕ ವಿಧಾನಗಳನ್ನು ನಿಮ್ಮದಾಗಿಸಿಕೊಂಡಲ್ಲಿ ಮಾತ್ರವೇ ಮುಖದ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತದಂತೆ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು. ಅಲ್ಲದೆ ಕ್ಲೀನ್ಸಿಂಗ್ ಮತ್ತು ಸ್ಕ್ರಬ್ಬಿಂಗ್ ಮಾಡುವುದು ಮಾತ್ರವಲ್ಲದೆ ಕೆಲವೊಂದು ಗಿಡಮೂಲಿಕೆಗಳಿಂದ ಕೂಡ ನಿಮ್ಮ ಮುಖವನ್ನು ದುಪ್ಪಟ್ಟು ಹೊಳೆಯುವಂತೆ ಮಾಡಬಹುದು.

ಇಂದಿನ ಲೇಖನಲ್ಲಿ ಮುಖದ ಸೌಂದರ್ಯವನ್ನು ವೃದ್ಧಿಸಲು ಸಹಕಾರಿಯಾಗಿರುವ ಗಿಡಮೂಲಿಕೆಗಳ ವಿವರಗಳನ್ನು ನಾವು ನೀಡುತ್ತಿದ್ದು ಆರೋಗ್ಯ ಸಮಸ್ಯೆಗಳಿಗೆ ಮಾತ್ರವೇ ಇವುಗಳನ್ನು ಬಳಸದೇ ಸೌಂದರ್ಯ ಸಮಸ್ಯೆಗಳಿಗೂ ಇವುಗಳ ಬಳಕೆಯನ್ನು ಮಾಡಿಕೊಳ್ಳಬಹುದಾಗಿದೆ. ಸೌಂದರ್ಯ ಉತ್ಪನ್ನಗಳಲ್ಲಿಯೂ ಈ ಗಿಡಮೂಲಿಕೆಗಳನ್ನು ಬಳಸುತ್ತಿದ್ದು ಇವುಗಳ ಬಳಕೆಯಿಂದ ನೀವು ವ್ಯತ್ಯಾಸವನ್ನು ಗಮನಿಸಿಕೊಳ್ಳಬಹುದಾಗಿದೆ. ಬನ್ನಿ ಕೆಳಗಿನ ಸ್ಲೈಡರ್‎ಗಳಲ್ಲಿ ಇದರ ಕುರಿತು ಇನ್ನಷ್ಟು ಮಾಹಿತಿ ನೀಡುತ್ತೇವೆ, ಮುಂದೆ ಓದಿ...

ಅಲೋವೇರಾ

ಅಲೋವೇರಾ

ಆಲೋವೆರಾ ಅಥವಾ ಲೋಳೆಸರ ಮರಳಿನಲ್ಲಿ ಬೆಳೆಯುವ ಒಂದು ಸಸ್ಯವಾಗಿದ್ದು ಚರ್ಮದ ಆರೈಕೆಗೆ ಅತ್ಯುತ್ತಮವಾಗಿದೆ. ಒಂದು ವೇಳೆ ನಿಮಗೆ ಮೊಡವೆಗಳ ತೊಂದರೆಯಿದ್ದರೆ ಲೋಳೆಸರ ಉತ್ತಮ ಪರಿಹಾರ ನೀಡುತ್ತದೆ.ಬಿಸಿಲಿನಿಂದ ಚರ್ಮ ಕಳೆಗುಂದಿದ್ದರೆ ಅಥವಾ ಸುಟ್ಟಂತೆ ಆಗಿದ್ದರೆ ಲೋಳೆಸರದ ಆರೈಕೆಯಿಂದ ಶೀಘ್ರವೇ ತ್ವಚೆ ಮೊದಲಿನ ಹೊಳಪನ್ನು ಪಡೆಯುತ್ತದೆ. ಬಿಸಿಲಿನ ಝಳದಿಂದ ರಕ್ಷಿಸುವ ಮೂಲಕ ಚರ್ಮವನ್ನು ತಂಪಾಗಿಡಲೂ ನೆರವಾಗುತ್ತದೆ. ತಪ್ಪದೇ ಓದಿ ... ಲೋಳೆಸರ-ಸೌಂದರ್ಯದ ವಿಷಯದಲ್ಲಿ ಎತ್ತಿದ ಕೈ

ಲ್ಯಾವೆಂಡರ್

ಲ್ಯಾವೆಂಡರ್

ಚರ್ಮದ ಉರಿಯನ್ನು ತಗ್ಗಿಸಲು ಲ್ಯಾವೆಂಡರ್ ಹೂವಿನ ಎಣ್ಣೆ ಅತಿ ಸಮರ್ಥವಾಗಿದೆ. ಅಲ್ಲದೇ ಇದು ಗಾಯ ಮತ್ತು ಕಲೆಗಳನ್ನೂ ಶೀಘ್ರವಾಗಿ ಮಾಗಿಸುತ್ತದೆ. ಗಾಯದ ಗುರುತು, ದಟ್ಟನಾದ ಕಲೆಗಳನ್ನೂ ನಿವಾರಿಸಲು ಸಮರ್ಥವಾಗಿದೆ. ಈ ಎಣ್ಣೆಯನ್ನು ನಿತ್ಯವೂ ಹಚ್ಚಿಕೊಂಡು ಮಸಾಜ್ ಮಾಡಿದರೆ ಒಂದು ತಿಂಗಳ ಅವಧಿಯಲ್ಲಿಯೇ ಚರ್ಮದ ಕಾಂತಿ ಹೆಚ್ಚಿರುವುದನ್ನು ಸ್ಪಷ್ಟವಾಗಿ ಗಮನಿಸಬಹುದು. ಅದರಲ್ಲೂ ಈ ಎಣ್ಣೆಯನ್ನು ಕ್ಯಾಮೋಮೈಲ್ ಎಣ್ಣೆಯೊಂದಿಗೆ ಬೆರೆಸಿ ಬಳಸಿದರೆ ಇದರ ಗುಣಗಳು ಇನ್ನಷ್ಟು ಹೆಚ್ಚುತ್ತವೆ.

ಚೆಂಡು ಹೂವು (ಮಾರಿಗೋಲ್ಡ್ )

ಚೆಂಡು ಹೂವು (ಮಾರಿಗೋಲ್ಡ್ )

ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಗುಣವನ್ನು ಹೊಂದಿರುವ ಮಾರಿಗೋಲ್ಡ್ ಉರಿಯೂತ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಅಂಶಗಳನ್ನು ಒಳಗೊಂಡಿದೆ. ಈ ಹೂವಿನಲ್ಲಿರುವ ಉತ್ಕರ್ಷಣ ಗುಣಗಳು ಮುಕ್ತ ಕಣಗಳಿಂದ ಹಾನಿಯನ್ನು ಉಪಚರಿಸುವಲ್ಲಿ ನೆರವಾಗಲಿದೆ. ತಪ್ಪದೇ ಓದಿ - ಸೌಂದರ್ಯ ವೃದ್ಧಿಗೆ ಬಳಸಿ ಚೆಂಡು ಹೂವಿನ ಆರೋಗ್ಯಕಾರಿ ಸಲಹೆ

ಅರಿಶಿನ

ಅರಿಶಿನ

ಸೌಂದರ್ಯವರ್ಧಕ ಗುಣಗಳಿಂದ ಕೂಡಿರುವ ಅರಶಿನ ಬರಿಯ ಅಡುಗೆಮನೆಯ ಸಾಮಾಗ್ರಿಯಾಗಿರದೇ ಸೌಂದರ್ಯದ ವೃದ್ಧಿಯಲ್ಲೂ ಇದರ ಬಳಕೆ ಹೆಚ್ಚಿನದು. ಸುಟ್ಟಗಾಯಗಳನ್ನು ಪರಿಹರಿಸುವ ಚಮತ್ಕಾರೀ ಅಂಶವನ್ನು ಅರಿಶಿನ ಹೊಂದಿದ್ದು ಉತ್ಕರ್ಷಣ ಅಂಶಗಳನ್ನು ಒಳಗೊಂಡಿದೆ. ತಪ್ಪದೇ ಓದಿ... ಸೌಂದರ್ಯವರ್ಧಕ ಅರಿಶಿನದಲ್ಲಿ ಏನೇನಿದೆ?

ತುಳಸಿ

ತುಳಸಿ

ಅನಾದಿ ಕಾಲದಿಂದಲೂ ತುಳಸಿಯು ಬಳಕೆಯಲ್ಲಿದೆ. ಮುಖದ ಕ್ರೀಮ್‌ಗಳು, ಶಾಂಪೂ ಮತ್ತು ಸುಗಂಧ ದ್ರವ್ಯಗಳಲ್ಲಿ ತುಳಸಿಯನ್ನು ಬಳಸುತ್ತಿದ್ದು ಉತ್ಕರ್ಷಣ ಗುಣಗಳಿಂದ ತುಳಸಿಯು ಹೆಚ್ಚು ಮಹತ್ವಪೂರ್ಣವಾದ ಗಿಡಮೂಲಿಕೆ ಎಂದೆನಿಸಿದೆ. ಮುಖದ ಕೂದಲಿನ ನಿವಾರಣೆಗೆ ಇದನ್ನು ನಿಯಮಿತವಾಗಿ ಬಳಸಿದರೆ ನಿಮಗೆ ಉತ್ತಮ ಪರಿಹಾರ ದೊರೆಯುತ್ತದೆ. ಮೊಡವೆಯ ಬಾಧೆಗೆ ತುಳಸಿಯ ನಲ್ಮೆಯ ಆರೈಕೆ

ರೋಸ್‌ಮೇರಿ

ರೋಸ್‌ಮೇರಿ

ತೂಕ ಇಳಿಸಲು ಮಾತ್ರವಲ್ಲದೆ ರೋಸ್ ಮೇರಿ ಬಳಕೆಯನ್ನು ಸೌಂದರ್ಯ ಉತ್ಪನ್ನಗಳಲ್ಲಿಯೂ ಮಾಡಲಾಗುತ್ತಿದೆ. ನಿಮ್ಮ ಕೂದಲನ್ನು ಮೃದು ಮತ್ತು ಹೊಳೆಯಿಸುವ ಕಂಡೀಶನರ್‌ನಂತೆ ರೋಸ್‌ಮೇರಿಯನ್ನು ಬಳಸಿಕೊಳ್ಳಬಹುದು. ಒತ್ತಡ ನಿವಾರಣೆಗೆ, ನೆನಪಿನ ಶಕ್ತಿಯನ್ನು ವೃದ್ಧಿಸಲು ಮತ್ತು ಏಕಾಗ್ರತೆಯನ್ನು ಹೆಚ್ಚಿಸಲು ರೋಸ್‌ಮೇರಿ ಸಹಕಾರಿ.

ಚಾಮೊಲಿ

ಚಾಮೊಲಿ

ಪ್ರಸಾಧನ ಸಾಮಾಗ್ರಿಗಳಲ್ಲಿ ಇದರ ಬಳಕೆಯನ್ನು ಮಾಡಲಾಗುತ್ತಿದ್ದು, ಸನ್ ಸ್ಕ್ರೀನ್ ಮತ್ತು ಕ್ಲೆನ್ಸರ್‌ಗಳಲ್ಲಿಯೂ ಇದನ್ನು ಬಳಸಲಾಗುತ್ತದೆ. ಉರಿಯೂತದ ಮತ್ತು ಔಷಧೀಯ ಗುಣಗಳನ್ನು ಹೊಂದಿರುವ ಚಾಮೊಲಿ ಚರ್ಮದ ಉರಿಯೂತ ಚಿಕಿತ್ಸೆಯಲ್ಲಿ ಬಳಸುತ್ತಾರೆ. ತ್ವಚೆಯನ್ನು ಕಾಂತಿಯುಕ್ತಗೊಳಿಸುವ ಗುಣವನ್ನು ಹೊಂದಿರುವ ಚಾಮೊಲಿ ಸೌಂದರ್ಯ ವೃದ್ಧಿಗೆ ಅನುಕೂಲಕಾರಿಯಾಗಿದೆ.

English summary

Top 7 Herbs Used To Enhance Beauty

we are here to share the top herbs that you can use to enhance your beauty externally. Herbs are not only used for health problems and to cure rashes or stomach aches.
X
Desktop Bottom Promotion