Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಸೌಂದರ್ಯ ನಿಂತ ನೀರಲ್ಲ, ಎಚ್ಚರ ತಪ್ಪಿದರೆ ಮುಗಿಯಿತು..!
ಸೌಂದರ್ಯವೆಂಬುದು ಹೆಣ್ಣಿಗೆ ದೈವದತ್ತ ವರವಾಗಿದೆ. ಹೆಣ್ಣನ್ನು ಸೃಷ್ಟಿಸಲು ದೇವರು ಬಹಳ ಸಮಯಗಳನ್ನು ತೆಗೆದುಕೊಂಡಿದ್ದರು ಎಂಬುದಾಗಿ ವೇದ ಶಾಸ್ತ್ರದಲ್ಲಿ ಉಲ್ಲೇಖಿತವಾಗಿದೆ. ಕವಿಗಳಂತೂ ಹೆಣ್ಣನ್ನು ಹೂವಿಗೆ ಹೋಲಿಸಿ ಆಕೆಯ ನಾಜೂಕುತನವನ್ನು ಪದಗಳಲ್ಲಿ ವರ್ಣಿಸುತ್ತಾರೆ. ಹೆಣ್ಣಿನ ಸೌಂದರ್ಯವೆಂದರೆ ಎಂದೂ ಬತ್ತದ ಸೆಲೆಯಂತೆ ದಿನದಿಂದ ದಿನಕ್ಕೆ ಅದು ವೃದ್ಧಿಯಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ ಎಂಬುದು ಸೌಂದರ್ಯಾರಾಧಕರ ಮಾತಾಗಿದೆ. ಇಂತಹ ಬ್ಯೂಟಿ ಟಿಪ್ಸ್ ಯಾವಾಗಲೂ ನಿಮ್ಮ ಪಾಕೆಟ್‌ನಲ್ಲಿರಲಿ!
ಆದರೆ ಇತ್ತೀಚಿನ ಆಧುನಿಕ ಜೀವನ ಶೈಲಿ ಮತ್ತು ಇನ್ನಷ್ಟು ಚಂದಗಾಣಬೇಕೆಂಬ ಹಂಬಲದಿಂದಾಗಿ ಹೆಂಗಳೆಯರು ತಮ್ಮನ್ನು ವಿಷ ವರ್ತುಲಕ್ಕೆ ದೂಡಿಕೊಳ್ಳುತ್ತಿದ್ದಾರೆ. ರಾಸಾಯನಿಕಗಳ ಬಳಕೆ ಒಂದೆಡೆಯಾದರೆ ಹೈಫೈ ಸಮಾಜದಲ್ಲಿ ತಾವು ಮಿಂಚಬೇಕೆಂಬ ಬಯಕೆಯಿಂದ ದುರಾಭ್ಯಾಸಗಳನ್ನು ತಮ್ಮಲ್ಲಿ ರೂಢಿಸಿಕೊಂಡು ಆಮೇಲೆ ಬಹಳಷ್ಟು ಕಷ್ಟಪಡುತ್ತಿದ್ದಾರೆ. ಸೌಂದರ್ಯದ ವಿಷಯದಲ್ಲಿ ನಾವು ಅಸಡ್ಡೆ ಮಾಡಿದಷ್ಟೂ ಅದೊಂದು ನಿಧಾನಗತಿಯ ವಿಷದಂತೆ ನಮ್ಮನ್ನೇ ತಿಂದುಹಾಕಿಬಿಡುತ್ತದೆ ಎಂಬುದನ್ನು ನೀವು ಮನದಲ್ಲಿಟ್ಟುಕೊಂಡಿರಬೇಕು. ಅದಕ್ಕೆಂದೇ ಇಂದಿನ ಲೇಖನದಲ್ಲಿ ನೀವು ತ್ಯಜಿಸಲೇಬೇಕಾದ 7 ಅಭ್ಯಾಸಗಳನ್ನು ತಿಳಿಸುತ್ತಿದ್ದು ಇದರಿಂದ ನಿಮ್ಮ ಆರೋಗ್ಯ ಜೊತೆಗೆ ಹೆಣ್ತನಕ್ಕೆ ಎಷ್ಟೊಂದು ಹಾನಿಯಾಗುತ್ತಿದೆ ಎಂಬುದನ್ನು ಅರಿತುಕೊಳ್ಳಿ..

ಧೂಮಪಾನ
ತ್ವಚೆಯ ಅತಿದೊಡ್ಡ ಶತ್ರುವಾಗಿದೆ ಧೂಮಪಾನ. ತ್ವಚೆಯ ರಕ್ತದ ಹರಿವನ್ನು ಕಡಿಮೆ ಮಾಡುವುದಲ್ಲದೆ, ನಿಮ್ಮ ತ್ವಚೆಗೆ ಮತ್ತು ರಕ್ತಕ್ಕೆ ವಿಷವನ್ನು ನುಗ್ಗಿಸುವ ರಕ್ಕಸನಾಗಿದೆ. ಮುಖದಲ್ಲಿ ಸುಕ್ಕುಗಳನ್ನು ಉಂಟುಮಾಡುವುದಲ್ಲದೆ ನಿಮ್ಮ ತ್ವಚೆಯನ್ನು ನಿಸ್ತೇಜಗೊಳಿಸುತ್ತದೆ.

ಬಿಸಿ ನೀರಿನ ಸ್ನಾನ
ನಿಮ್ಮನ್ನು ತಾಜಾವಾಗಿರಿಸುವ ಬಿಸಿ ನೀರ ಸ್ನಾನ ಯಾರಿಗೆ ತಾನೇ ಹಿತವಾಗಿರುವುದಿಲ್ಲ ಹೇಳಿ? ಆದರೆ ಬಿಸಿ ನೀರ ಸ್ನಾನ ಕೂಡ ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡಬಲ್ಲುದು. ನೀರಿನ ಬಿಸಿಯು ಚರ್ಮವನ್ನು ಸೂಕ್ಷ್ಮಗೊಳಿಸುತ್ತದೆ. ಇದರಿಂದ ತ್ವಚೆ ಮಂಕಾಗಿ ಒಣ ತ್ವಚೆಗೆ ಕಾರಣವಾಗುತ್ತದೆ. ಇನ್ನೊಮ್ಮೆ ಹಾಟ್ ಟಬ್ನಲ್ಲಿ ನಿಮ್ಮನ್ನು ನೀವು ತಾಜಾಗೊಳಿಸಬೇಕು ಎಂದಾದಲ್ಲಿ ಮುಖದ ಬಗ್ಗೆ ಜಾಗರೂಕತೆ ಇರಲಿ.

ಮಧ್ಯಪಾನ
ಇದು ನಿಜಕ್ಕೂ ಹಾನಿಕಾರಕ. ಮಹಿಳೆಯರ ಸ್ತನ ಕ್ಯಾನ್ಸರ್ಗೆ ಮದ್ಯಪಾನವು ಕಾರಣವಾಗಿದೆ ಎಂಬುದಾಗಿ ಅಧ್ಯಯನಗಳು ತಿಳಿಸಿದ್ದು 5000 ದಷ್ಟು ಮರಣಕ್ಕೂ ಈ ಹೆಮ್ಮಾರಿ ಕಾರಣವಾಗಿದೆ. ತ್ವಚೆಯನ್ನು ಹಾಳುಮಾಡಿ ನಿಸ್ತೇಜಗೊಳಿಸಿ ಅದರಲ್ಲಿರುವ ನೈಸರ್ಗಿಕ ಎಣ್ಣೆಯನ್ನು ಹೀರಿಕೊಳ್ಳುವಷ್ಟು ವಿಷಕಾರಿಯಾಗಿದೆ ಮದ್ಯಪಾನ. ಲೋಮನಾಳಗಳ ಹಿಗ್ಗುವಿಕೆ ಎಂದು ಕರೆಯಲಾದ ಮುಖದ ರಕ್ತನಾಳಗಳನ್ನು ಸಣ್ಣದಾಗಿಸುವುದು, ಸ್ತನದಲ್ಲಿ ಶಾಶ್ವತ ಹಾನಿಯನ್ನುಂಟು ಮಾಡುತ್ತದೆ.

ಕೊಳಕು ಮೇಕಪ್ ಬ್ರಶ್ಗಳ ಬಳಕೆ
ಕೊಳಕು ಮೇಕಪ್ ಬ್ರಶ್ಗಳನ್ನು ನೀವು ಬಳಸುತ್ತಿದ್ದೀರಿ ಎಂದಾದಲ್ಲಿ ಮುಖದಲ್ಲಿ ಮೊಡವೆ ಕಲೆಗಳು ಸಾಮಾನ್ಯವಾಗಿಬಿಡುತ್ತದೆ. ಶಾಂಪೂವಿನಿಂದ ಬ್ರಶ್ಗಳನ್ನು ಆಗಾಗ್ಗೆ ತೊಳೆಯುವುದು ಉತ್ತಮ ಕ್ರಿಯೆಯಾಗಿದ್ದು ಇದನ್ನು ಚೆನ್ನಾಗಿ ಒಣಗಿಸಿಕೊಳ್ಳುವುದು ಮುಖ್ಯವಾಗಿದೆ.

ಸಾಕಷ್ಟು ನಿದ್ದೆ ಇಲ್ಲದಿರುವುದು
ಚರ್ಮಶಾಸ್ತ್ರಜ್ಞರ ಪ್ರಕಾರ ನಿದ್ದೆಯ ಅಭಾವವು ಒತ್ತಡಕ್ಕೆ ಕಾರಣವಾಗಿರುವುದರಿಂದ ಮುಖದಲ್ಲಿ ಮೊಡವೆ ಸೋರಿಯಾಸಿಸ್ ಉಂಟಾಗುತ್ತದೆಯಂತೆ. ದಿನದಲ್ಲಿ ಕೋಶಗಳಿಗೆ ಉಂಟಾದ ಹಾನಿಯ ರಿಪೇರಿಯನ್ನು ದೇಹವು ರಾತ್ರಿ ವೇಳೆಯಲ್ಲಿ ನಡೆಸುವುದರಿಂದ ಎಂಟು ಗಂಟೆಗಳ ನಿದ್ದೆ ಬೇಕು. ಈ ಸಮಯದಲ್ಲಿ ತ್ವಚೆಯು ಪುನಶ್ಚೇತನಗೊಳ್ಳುತ್ತದೆ.

ಮೊಡವೆಗಳನ್ನು ಕೀಳುವುದು
ಮೊಡವೆಗಳನ್ನು ನಿಮಗೆ ಒಡೆಯಲು ಮನಸ್ಸಾಗುವುದು ಸಹಜವೇ. ಆದರೆ ಮೊಡವೆಗಳನ್ನು ಕೀಳುವುದು ಅದನ್ನು ತ್ವಚೆಯ ಒಳಭಾಗಕ್ಕೆ ಸೇರಿಕೊಳ್ಳುವಂತೆ ಮಾಡುತ್ತದೆ. ಇದರಿಂದ ಬ್ಯಾಕ್ಟೀರಿಯಾ ಮೊಡವೆಗಳ ಆಳಕ್ಕೆ ಇಳಿಯುತ್ತದೆ. ಧೂಳು ಮತ್ತು ಎಣ್ಣೆಯ ಅಂಶಗಳೂ ಮೊಡವೆಗೆ ಕಾರಣವಾಗಿದೆ. ಆದ್ದರಿಂದ ದಿನಕ್ಕೆ ಎರಡು ಬಾರಿ ಮುಖವನ್ನು ತಣ್ಣನೆಯ ನೀರಿನಿಂದ ತೊಳೆದುಕೊಳ್ಳಿ.

ಫೋನ್ ಬಳಕೆ
ನೀವು ನಂಬುತ್ತೀರೋ ಇಲ್ಲವೋ ಅತಿಯಾದ ಫೋನ್ ಬಳಕೆ ಕೂಡ ನಿಮ್ಮ ತ್ವಚೆಗೆ ಹಾನಿಯನ್ನುಂಟು ಮಾಡುತ್ತದೆ. ಫೋನ್ ಅನ್ನು ಕೆನ್ನೆಯ ಮೇಲ್ಭಾಗದಲ್ಲಿ ಬಹಳಷ್ಟು ಹೊತ್ತು ಇರಿಸುವುದರಿಂದ ಮೊಡವೆ ಒಡೆಯುವುದು, ಫೋನ್ನಲ್ಲಿರುವ ಬ್ಯಾಕ್ಟೀರಿಯಾ ತ್ವಚೆಯನ್ನು ಸೇರಿಕೊಳ್ಳುವುದು ಹೀಗೆ ನಡೆಯುತ್ತದೆ.



Click it and Unblock the Notifications