Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾರುಣ್ಯಭರಿತ ತ್ವಚೆಗಾಗಿ ಬರೀ 15 ದಿನಗಳು ಸಾಕು!
ಯೌವನಭರಿತ ತ್ವಚೆಯೆಂದರೆ, ಸುಕ್ಕುಗಳು, ಕಪ್ಪು ಕಲೆಗಳು ಮತ್ತು ನವೀರಾದ ಗೆರೆಗಳಿಂದ ಮುಕ್ತವಾದ ತ್ವಚೆಯಾಗಿರುವುದರ ಜೊತೆಗೆ ಇದು ಮಗುವಿನಂತಹ ಮೃದುತ್ವವನ್ನು ಮತ್ತು ದೋಷರಹಿತವಾದ ಕೋಮಲತೆಯನ್ನು ಒಳಗೊಂಡಿರುತ್ತದೆ. ಆದರೆ ದುರದೃಷ್ಟವಶಾತ್ ಬಹುತೇಕ ಮಹಿಳೆಯರಲ್ಲಿ, ತಾರುಣ್ಯದಲ್ಲೇ ಯೌವನಭರಿತ ತ್ವಚೆ ಇರುವುದಿಲ್ಲ.
ಪರಿಸರ ಮಾಲಿನ್ಯ, ಆಹಾರದಲ್ಲಿರುವ ಕೀಟ ನಾಶಕಗಳು, ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವಿಕೆ ಮತ್ತು ಸರಿಯಾದ ತ್ವಚೆಯ ಆರೈಕೆಯನ್ನು ಪಾಲಿಸದೆ ಇರುವುದು. ಯೌವನಭರಿತ ತ್ವಚೆಯನ್ನು ಹಾಳುಮಾಡುತ್ತದೆ. ಇದರಿಂದಾಗಿ ತ್ವಚೆಯು ತನ್ನ ಹೊಳಪು ಮತ್ತು ವರ್ಚಸ್ಸನ್ನು ಕಳೆದುಕೊಳ್ಳುತ್ತದೆ ಮತ್ತು ನೀವು ವಯಸ್ಸಾದಂತೆ ಕಾಣಿಸಲು ಆರಂಭಿಸುತ್ತೀರಿ.
ಈಗ ಪ್ರಶ್ನೆ ಉದ್ಭವಿಸುವುದು ಶೀಘ್ರವಾಗಿ ಯೌವನಭರಿತ ತ್ವಚೆಯನ್ನು ಪಡೆಯುವ ಬಗೆ ಹೇಗೆ? ಅದಕ್ಕಾಗಿ ಹಲವಾರು ಸ್ಕಿನ್ ಕ್ರೀಮ್ ಮತ್ತು ಎಣ್ಣೆಗಳು ಇವೆ. ಇವು ಎಲ್ಲಾ ಕಲೆಗಳನ್ನು, ಗೆರೆಗಳನ್ನು ಮತ್ತು ತ್ವಚೆಯ ಮಂಕುತನವನ್ನು ನಿವಾರಿಸುತ್ತದೆ. ಈ ತ್ವಚೆಯ ರಕ್ಷಕ ಉತ್ಪನ್ನಗಳು ನಿಮಗೆ 15 ದಿನಗಳಲ್ಲಿ ನಿಮ್ಮ ತ್ವಚೆಗೆ ಕಾಣುವಂತಹ ಮೃದುತ್ವವನ್ನು ನೀಡುತ್ತವೆ. ನಿಮ್ಮ ತ್ವಚೆಯು ಮತ್ತೆ ತನ್ನ ಯೌವನವನ್ನು ಪಡೆಯುತ್ತದೆ. ಬನ್ನಿ ಆ ಉತ್ಪನ್ನಗಳು ಯಾವುವು ಎಂದು ಒಮ್ಮೆ ನೋಡೋಣ... ಅಮೃತದಂತಹ ಮನೆ-ಮದ್ದಿರುವಾಗ ತ್ವಚೆಯ ಸಮಸ್ಯೆಗೆ ಭಯವೇಕೆ?

ವಿಟಮಿನ್ ಎ ಕ್ರೀಮ್
ವಿಟಮಿನ್ ಎ ಯು ತ್ವಚೆಯ ಯೌವನವನ್ನು ರಕ್ಷಿಸಲು ಅತ್ಯಗತ್ಯವಾದ ವಿಟಮಿನ್ ಆಗಿರುತ್ತದೆ. ಇದರ ಕ್ರೀಮನ್ನು ಬಳಸುವುದರಿಂದಾಗಿ, ತ್ವಚೆಯು ಈ ವಿಟಮಿನ್ ಅನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಅವಕಾಶ ಮಾಡಿ ಕೊಡಬಹುದು. ಇದು ನಿಮ್ಮ ತ್ವಚೆಯಲ್ಲಿರುವ ಸಣ್ಣ ಗೆರೆಗಳನ್ನು ನಿವಾರಿಸಿ, ತ್ವಚೆಯ ಕೊಲ್ಲಾಜೆನ್ ಮರು ನಿರ್ಮಾಣಗೊಳ್ಳಲು ಸಹಾಯ ಮಾಡಿಕೊಡುತ್ತದೆ. ಇದು ಮುಖದಲ್ಲಿನ ಸುಕ್ಕುಗಳನ್ನು ಸಹ ನಿವಾರಿಸುವ ಒಂದು ಕ್ರೀಮ್ ಆಗಿರುತ್ತದೆ.

ಪೆಂಟಾ-ಪೆಪ್ಟೈಡ್ ಸುಕ್ಕು ನಿವಾರಕ ಕ್ರೀಮ್
ಮಾರುಕಟ್ಟೆಯಲ್ಲಿ ಹಲವಾರು ಸುಕ್ಕು ನಿವಾರಕ ಕ್ರೀಮ್‌ಗಳು ಲಭ್ಯವಿರುತ್ತವೆ. ಯಾವುದು ಚೆನ್ನಾಗಿ ಕೆಲಸ ಮಾಡುತ್ತದೆ, ಯಾವುದು ಮಾಡುವುದಿಲ್ಲ ಎಂದು ಗೊಂದಲಕ್ಕೆ ಒಳಗಾಗಬೇಡಿ. ಅತಿ ದುಬಾರಿಯಾದ ಕ್ರೀಮ್ ಚೆನ್ನಾಗಿ ಕೆಲಸ ಮಾಡುತ್ತದೆ ಎಂದು ಊಹಿಸಬೇಡಿ, ತ್ವಚೆಯ ರಕ್ಷಣೆಗು ದುಬಾರಿ ಕ್ರೀಮ್‌ಗೂ ಯಾವುದೇ ಸಂಬಂಧವಿಲ್ಲ. ಕ್ರೀಮ್ ಕೊಳ್ಳುವಾಗ ಲೇಬಲ್‌ನಲ್ಲಿ ಪೆಂಟಾ ಪೆಪ್ಟೈಡ್ ಎಂದು ಬರೆಯಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಪೆಂಟಾ ಪೆಪ್ಟೈಡ್ ಕ್ರೀಮ್‌ಗಳು ತ್ವಚೆಯಲ್ಲಿ ಎಲಾಸ್ಟಿನ್ ಮತ್ತು ಕೊಲ್ಲಾಜೆನ್ ಉತ್ಪಾದನೆಗೆ ಸಹಾಯ ಮಾಡುತ್ತವೆ.

ಕಲೆಗಳಿಗೆ ಮತ್ತು ತ್ವಚೆಗೆ ಪಿಗ್‌ಮೆಂಟೇಶನ್‌ಗೆ ಹೈಡ್ರೊಕ್ವಿನೋನ್ ಕ್ರೀಮ್
ಈ ಕ್ರೀಮ್ ನಿಮ್ಮ ತ್ವಚೆಯಲ್ಲಿರುವ ಎಲ್ಲಾ ಕಲೆಗಳನ್ನು ಮತ್ತು ಪಿಗ್‍ಮೆಂಟೇಶನ್ ಅನ್ನು ಕೆಲವೇ ದಿನಗಳಲ್ಲಿ ನಿವಾರಿಸುತ್ತದೆ. ಆದರೂ ಇದನ್ನು ಗರ್ಭಿಣಿಯಾಗಿರುವಾಗ ಅತಿ ಹೆಚ್ಚಾಗಿ ಬಳಸಬೇಡಿ. ಈ ಕ್ರೀಮನ್ನು ನೀವು ಔಷಧಿ ಅಂಗಡಿಗಳಲ್ಲಿ ಖರೀದಿಸಬಹುದು.

ಬೊಟೊಕ್ಸ್ ಕ್ರಿಮ್ ಬೊಟೊಕ್ಸ್ ಇಂಜೆಕ್ಷನ್
ಇದನ್ನು ಮುಖದಲ್ಲಿರುವ ಎಲ್ಲಾ ಸುಕ್ಕುಗಳು ಮತ್ತು ಗೆರೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಜೊತೆಗೆ ಇದು ನಿಮ್ಮ ಮುಖದಲ್ಲಿರುವ ತ್ವಚೆಯನ್ನು ಬಿಗಿ ಮಾಡುತ್ತದೆ ಮತ್ತು ಯೌವನಭರಿತವಾಗಿ ಕಾಣುವಂತೆ ಮಾಡುತ್ತದೆ. ಆದರೂ ಇದು ಒಂದು ದುಬಾರಿ ಪ್ರಕ್ರಿಯೆಯಾಗಿರುತ್ತದೆ. ಈಗ ಬೊಟೊಕ್ಸ್ ಕ್ರೀಮ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದನ್ನು ಮೃದುವಾಗಿ ನಿಮ್ಮ ಮುಖದ ಮೇಲೆ ಮಸಾಜ್ ಮಾಡಿ, ಇದರಿಂದ ನಿಮ್ಮ ತ್ವಚೆಯು ಯೌವನದಿಂದ ನಳನಳಿಸುತ್ತದೆ.

ವಿಟಮಿನ್ ಇ ಕ್ರೀಮ್
ಔಷಧಿ ಅಂಗಡಿಗಳಲ್ಲಿ, ವಿಟಮಿನ್ ಇ ಯನ್ನು ಸಹ ನೀವು ಖರೀದಿಸಬಹುದು. ಇದು ನಿಮ್ಮ ಮುಖಕ್ಕೆ ಹೊಳಪನ್ನು ತರುತ್ತದೆ. ವಿಟಮಿನ್ ಇ ಕ್ರೀಮ್ ನಿಮ್ಮ ಮುಖದಲ್ಲಿರುವ ಸುಕ್ಕುಗಳನ್ನು ಮತ್ತು ಸೂಕ್ಷ್ಮ ಗೆರೆಗಳನ್ನು ನಿವಾರಿಸುತ್ತದೆ. ಜೊತೆಗೆ ತ್ವಚೆಗೆ ಅಗತ್ಯವಾದ ಮೊಯಿಶ್ಚರನ್ನು ಸಹ ನೀಡುತ್ತದೆ.



Click it and Unblock the Notifications