Latest Updates
-
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ!
ಇದು ಸಾಮಾನ್ಯ ಫೇಸ್‌ಪ್ಯಾಕ್ ಅಲ್ಲ, ನೀವೂ ಒಮ್ಮೆ ಪ್ರಯತ್ನಿಸಿ!
ನೀವು ತಾರುಣ್ಯವನ್ನು ಮುಗಿಸಿ ಯೌವನಕ್ಕೆ ಕಾಲಿಟ್ಟಾಗ, ನಿಮ್ಮ ಮುಖವು ಮತ್ತಷ್ಟು ಚಂದ ಕಾಣಲು ಸ್ವಲ್ಪ ಕಾಳಜಿಯನ್ನು ನಿಮ್ಮಿಂದ ಬಯಸುತ್ತದೆ. ಅದರಲ್ಲಿಯೂ ನೀವು 30 ವರ್ಷವನ್ನು ದಾಟಿದ ಮೇಲೆ ನಿಮ್ಮ ತ್ವಚೆಯಲ್ಲಿ ವಯಸ್ಸಿನ ಲಕ್ಷಣಗಳು ಕಾಣಿಸಿಕೊಳ್ಳಲು ಆರಂಭಿಸುತ್ತವೆ. ಇವುಗಳನ್ನು ನೀವು ಆರಂಭದಲ್ಲಿಯೇ ನಿಲ್ಲಿಸಲಿಲ್ಲವಾದಲ್ಲಿ ಇವು ನಿಮ್ಮ ಮುಖವನ್ನು ಸುಕ್ಕುಗಳು ಮತ್ತು ಗೆರೆಗಳಿಂದ ಹಾಳು ಮಾಡಿಬಿಡುತ್ತವೆ.
ನಿಮ್ಮ ತ್ವಚೆಯು ತನ್ನ ಹೊಳಪನ್ನು ಕಳೆದುಕೊಳ್ಳಲು ಆರಂಭಿಸುವುದರಿಂದ ತ್ವಚೆಯು ಕಳೆಗುಂದಲು ಆರಂಭಿಸುತ್ತದೆ. ಪರಿಸರ ಮಾಲಿನ್ಯ, ನಿಮ್ಮ ಜೀವನ ಶೈಲಿ, ಒತ್ತಡ ಮತ್ತು ತ್ವಚೆಯ ಬಗ್ಗೆ ಕಾಳಜಿವಹಿಸದೇ ಇರುವುದು ಮುಂತಾದ ಅಂಶಗಳು ಸಹ ತ್ವಚೆಯ ಮೇಲೆ ಪರಿಣಾಮವನ್ನು ಬೀರುತ್ತವೆ. ಆದರೂ ಕೆಲವೊಮ್ಮೆ ನೀವು ನಿಮ್ಮ ತ್ವಚೆಯ ವಿಚಾರದಲ್ಲಿ ಬಹಳಷ್ಟು ಸೋಮಾರಿಗಳಾಗಿರುತ್ತೀರಿ.
ಆದ್ದರಿಂದ ನಿಮ್ಮ ಫೇಶಿಯಲ್ ಮಾಡಿಸಿಕೊಳ್ಳಲು, ನೀವು ಸಲೂನ್‌ಗಳಿಗೆ ಹೋಗುತ್ತೀರಿ. ಅವರು ನಿಮ್ಮ ಮುಖಕ್ಕೆ ರಾಸಾಯನಿಕಗಳನ್ನು ಲೇಪಿಸಿ, ಅಧಿಕ ಪ್ರಮಾಣದ ಹಣವನ್ನು ನಿಮ್ಮಿಂದ ಪಡೆಯುತ್ತಾರೆ. ಇಂತಹ ಸಲೂನ್ ಚಿಕಿತ್ಸೆಗಳು ಕಾಲಾನುಕ್ರಮೇಣ ನಿಮ್ಮ ತ್ವಚೆಯನ್ನು ಹಾಳು ಮಾಡಿಬಿಡುತ್ತವೆ. ನಿಮ್ಮ ತ್ವಚೆಯು ಅತ್ಯಂತ ಸೂಕ್ಷ್ಮವಾಗಿರುತ್ತದೆ, ಒಂದು ವೇಳೆ ನಿಮಗೆ ನಿಮ್ಮ ತ್ವಚೆಯು ಯಾವತ್ತಿಗೂ ತಾಜಾ ಆಗಿರಬೇಕು, ಆರೋಗ್ಯಕರವಾಗಿರಬೇಕು ಮತ್ತು ಹೊಳಪಿನಿಂದ ಕೂಡಿರಬೇಕು ಎಂದಾದರೆ, ಇದಕ್ಕಾಗಿ ಯಾವಾಗಲೂ ಸ್ವಾಭಾವಿಕ ಉತ್ಪನ್ನಗಳನ್ನು ಮಾತ್ರ ಬಳಸಿ.
ಮನೆಯಲ್ಲಿಯೇ ತಯಾರಿಸಿಕೊಳ್ಳುವ ಸೌಂದರ್ಯ ಉತ್ಪನ್ನಗಳು ನಿಮ್ಮ ತ್ವಚೆಯನ್ನು ರಿಪೇರಿ ಮಾಡುತ್ತವೆ ಮತ್ತು ಅವುಗಳಿಗೆ ಆಹ್ಲಾದಕತೆಯನ್ನು ಒದಗಿಸುತ್ತವೆ, ಜೊತೆಗೆ ತ್ವಚೆಯನ್ನು ಯೌವನಭರಿತವಾಗಿ ಸಹ ಇರಿಸುತ್ತವೆ. ಈ ಫೇಸ್ ಪ್ಯಾಕ್‌ಗಳು ಎಲ್ಲಾ ಬಗೆಯ ತ್ವಚೆಗಳಿಗೆ ಹೊಂದಿಕೊಳ್ಳುತ್ತವೆ. ಜೊತೆಗೆ ಇವುಗಳಿಂದ ಯಾವುದೇ ಅಲರ್ಜಿ ಅಥವಾ ತುರಿಕೆ ಉಂಟಾಗುವುದಿಲ್ಲ. ಬನ್ನಿ ಇಲ್ಲಿ ನಿಮಗಾಗಿ ಕೆಲವೊಂದು ಫೇಸ್ ಪ್ಯಾಕ್‌ಗಳನ್ನು ತಯಾರಿಸಿಕೊಳ್ಳುವ ಮಾಹಿತಿ ನೀಡಿದ್ದೇವೆ. ಇವು ನಿಮ್ಮ ತ್ವಚೆಯನ್ನು ಯೌವನಭರಿತವಾಗಿ ಮತ್ತು ಹೊಳಪಿನಿಂದ ಮತ್ತು ಸೌಂದರ್ಯದಿಂದ ಇರಿಸುತ್ತವೆ.

ಗ್ಲಿಸೆರಿನ್, ಲಿಂಬೆಹಣ್ಣು ಮತ್ತು ರೋಸ್ ವಾಟರ್
ಒಂದು ಟೇಬಲ್ ಚಮಚ ಗ್ಲಿಸೆರಿನ್, ಒಂದು ಟೇಬಲ್ ಚಮಚ ಲಿಂಬೆಹಣ್ಣು ಮತ್ತು ಒಂದು ಟೇಬಲ್ ಚಮಚ ರೋಸ್ ವಾಟರ್ ಎಲ್ಲವನ್ನೂ ಒಟ್ಟಿಗೆ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖದ ಮೇಲೆ ಮತ್ತು ಕತ್ತಿನ ಮೇಲೆ ಲೇಪಿಸಿಕೊಂಡು 10 ನಿಮಿಷಗಳ ಕಾಲ ಮಸಾಜ್ ಮಾಡಿ. 20 ನಿಮಿಷಗಳ ನಂತರ ಇದನ್ನು ತಣ್ಣೀರಿನಿಂದ ತೊಳೆಯಿರಿ.

ಸೌತೆಕಾಯಿ ಮತ್ತು ಓಟ್ ಮೀಲ್
ನಿಮ್ಮ ಮುಖವನ್ನು ರೋಸ್ ವಾಟರ್‌ನಿಂದ ಮೊದಲು ನೆನೆಸಿ. ನಂತರ ಇದರ ಮೇಲೆ ಓಟ್ ಮೀಲ್‌ನಿಂದ 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿ. ಅದಾದ ಮೇಲೆ ನಿಮ್ಮ ಮುಖದ ಮೇಲೆ ಸೌತೆಕಾಯಿ ತುಂಡುಗಳಿಂದ ಉಜ್ಜಿಕೊಳ್ಳಿ. ಇದೆಲ್ಲ ಮುಗಿದ ಮೇಲೆ ಸ್ವಲ್ಪ ಮೊಯಿಶ್ಚರೈಸರ್ ಲೇಪಿಸಿಕೊಳ್ಳಿ.

ಹಾಲಿನ ಕೆನೆ ಮತ್ತು ರೋಸ್ ವಾಟರ್
ಹಾಲಿನ ಕೆನೆಯು ನಿಮ್ಮ ತ್ವಚೆಗೆ ಮೊಯಿಶ್ಚರೈಸರ್ ಮಾಡುವ ಉತ್ತಮ ಅಂಶವಾಗಿರುತ್ತದೆ. ಒಂದು ಟೇಬಲ್ ಚಮಚ ಹಾಲಿನ ಕೆನೆಯ ಜೊತೆಗೆ ಒಂದು ಟೇಬಲ್ ಚಮಚ ರೋಸ್ ವಾಟರ್ ಬೆರೆಸಿಕೊಳ್ಳಿ. ಇದನ್ನು ನಿಮ್ಮ ಮುಖದ ಮೇಲೆ ಲೇಪಿಸಿಕೊಂಡು ಐದು ನಿಮಿಷ ಕಾಲ ಮಸಾಜ್ ಮಾಡಿ, ನಂತರ 15 ನಿಮಿಷಗಳ ಕಾಲ ಬಿಡಿ. ಅದಾದ ನಂತರ ಇದನ್ನು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ.

ವಿಟಮಿನ್ ಇ ಕ್ಯಾಪ್ಸೂಲ್‌ಗಳು ಮತ್ತು ರೋಸ್ ವಾಟರ್
ಇದು ತ್ವಚೆಯ ರಕ್ಷಣೆ ಮಾಡಲು ಇರುವ ಸರಳವಾದ ಮಾರ್ಗವಾಗಿರುತ್ತದೆ. ವಿಟಮಿನ್ ಇ ಕ್ಯಾಪ್ಸೂಲ್‌ಗಳು ಮತ್ತು ರೋಸ್ ವಾಟರ್ ನಿಮ್ಮ ತ್ವಚೆಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಈ ಪ್ಯಾಕ್ ಮಾಡಲು ವಿಟಮಿನ್ ಇ ಕ್ಯಾಪ್ಸೂಲ್‌ಗಳನ್ನು ಔಷಧಿ ಅಂಗಡಿಯಿಂದ ಖರೀದಿಸಿ. ಎರಡು ಕ್ಯಾಪ್ಸೂಲ್‌ಗಳನ್ನು ಒಡೆದು ಅದರಲ್ಲಿರುವ ಪುಡಿಯನ್ನು ರೋಸ್ ವಾಟರ್ ಜೊತೆಗೆ ಬೆರೆಸಿಕೊಳ್ಳಿ. ಈ ಮಿಶ್ರಣದಿಂದ ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ 10-15 ನಿಮಿಷಗಳ ಕಾಲ ಮಸಾಜ್ ಮಾಡಿ.

ಮೊಟ್ಟೆಯ ಬಿಳಿ ಭಾಗ ಮತ್ತು ಮೊಸರು
ಒಂದು ಮೊಟ್ಟೆಯ ಬಿಳಿ ಭಾಗವನ್ನು ಮತ್ತು ಎರಡು ಟೇಬಲ್ ಚಮಚ ಮೊಸರು ಎರಡನ್ನೂ ಸೇರಿಸಿ ಬೆರೆಸಿಕೊಳ್ಳಿ. ಈ ಮಿಶ್ರಣದಿಂದ ನಿಮ್ಮ ಮುಖ ಮತ್ತು ಕುತ್ತಿಗೆ ಮೇಲೆ 10-15 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ಇದನ್ನು ಚೆನ್ನಾಗಿ ತೊಳೆಯಿರಿ.



Click it and Unblock the Notifications
