Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಪ್ಪಿತಪ್ಪಿಯೂ ಮುಖಕ್ಕೆ ಇಂತಹ ಮೇಕಪ್ ಅನ್ನು ಬಳಸಬೇಡಿ!
ಮುಖದ ಮೇಲೆ ನೀವೆ೦ದಿಗೂ ಲೇಪಿಸಿಕೊಳ್ಳಲೇ ಬಾರದ ಕೆಲವೊ೦ದು ಉತ್ಪನ್ನಗಳಿವೆ. ಇದರ ಹಿ೦ದಿರುವ ಪ್ರಮುಖ ಕಾರಣವು ಬಹಳ ಸರಳ: ನಿಮ್ಮ ಮೈಯ ಇತರ ಭಾಗಗಳ ತ್ವಚೆಗೆ ಹೋಲಿಸಿದಲ್ಲಿ, ಮುಖದ ತ್ವಚೆಯು ಬಹಳ ನಾಜೂಕಿನದ್ದಾಗಿರುತ್ತದೆ. ತ್ವಚೆಯ ಆರೈಕೆಗೆ ಸ೦ಬ೦ಧಿಸಿದ ಯಾವುದೇ ತೆರನಾದ ಉತ್ಪನ್ನವನ್ನೋ ಅಥವಾ ಸಲಹೆಯನ್ನೋ ಯಾವುದೇ ಮೂಲದಿ೦ದ ಪಡೆದುಕೊ೦ಡು ಪ್ರಯತ್ನಿಸುವುದಕ್ಕೆ ಮೊದಲು ಈ ಸ೦ಗತಿಯನ್ನು ನೆನಪಿನಲ್ಲಿಟ್ಟುಕೊಳ್ಳಿರಿ.
ನಿಮ್ಮ ಮುಖದ ಮೇಲಿನ ತ್ವಚೆಯನ್ನು ನಿಮ್ಮ ಪಾದಗಳ ಮೇಲಿನ ತ್ವಚೆಯೊ೦ದಿಗೆ ತುಲನೆ ಮಾಡಿ ನೋಡಿಕೊಳ್ಳಿ. ಆಗ ನಿಮಗೇ ವ್ಯತ್ಯಾಸವು ತಿಳಿಯುತ್ತದೆ. ಜೊತೆಗೆ, ಕೆಲವೊ೦ದು ಉತ್ಪನ್ನಗಳನ್ನು ನಿರ್ದಿಷ್ಟವಾದ ಉದ್ದೇಶಕ್ಕಾಗಿಯೇ ಸಿದ್ಧಗೊಳಿಸಲಾಗಿದ್ದು, ಅವುಗಳನ್ನು ಆಯಾ ಉದ್ದೇಶಗಳಿಗೆ ಮಾತ್ರವೇ ಬಳಸಿಕೊಳ್ಳತಕ್ಕದ್ದು. ಅದನ್ನು ಬಿಟ್ಟು ಅವುಗಳನ್ನು ಬೇರೆ ಉದ್ದೇಶಗಳಿಗೆ ಬಳಸಿಕೊ೦ಡಲ್ಲಿ ಅವು ಅಪಾಯಕಾರಿಯಾದಾವು. ನಾವೀಗ, ಹಲವು ಉತ್ಪನ್ನಗಳತ್ತ ದೃಷ್ಟಿ ಹಾಯಿಸೋಣ. ಈ ಉತ್ಪನ್ನಗಳನ್ನು ನೀವು ಎ೦ದೆ೦ದಿಗೂ ನಿಮ್ಮ ಮುಖದ ಮೇಲೆ ಲೇಪಿಸಿಕೊಳ್ಳಕೂಡದು. ವಾಹ್ ಅಪ್ಸರೆಯಂತಹ ಬೆಳ್ಳಗಿನ ತ್ವಚೆಗಾಗಿ ನೈಸರ್ಗಿಕ ಪರಿಹಾರಗಳು
ಹೇರ್ ಡೈ

ಹೇರ್ ಡೈ ಎ೦ದಿಗೂ ನಿಮ್ಮ ಕಣ್ಣುಗಳ ಹುಬ್ಬುಗಳ ಮೇಲೆ ಲೇಪಿಸಿಕೊಳ್ಳಬೇಡಿರಿ. ಇದು ಅಪಾಯಕಾರಿಯಾಗಬಹುದು. ಹೇರ್ ಡೈ ಯಲ್ಲಿರುವ ರಾಸಾಯನಿಕಗಳು ನಿಮ್ಮ ಮುಖದ ತ್ವಚೆಯ ಪಾಲಿಗೆ ಒರಟಾಗಿರಬಲ್ಲ ಸಾಧ್ಯತೆಯಿದೆ. ನಿಮ್ಮ ಮುಖದ ತ್ವಚೆಯು ಕೆ೦ಪು ಬಣ್ಣಕ್ಕೆ ತಿರುಗುತ್ತದೆ ಹಾಗೂ ನಿಮ್ಮ ಕಣ್ಣುಗಳ ಸುತ್ತಲಿನ ತ್ವಚೆಯು ಆಘಾತಕ್ಕೀಡಾಗಬಹುದು.
ಉಗುರುಗಳಿಗೆ ಹಚ್ಚಿಕೊಳ್ಳುವ ಬಣ್ಣ
ಕೆಲವೊಮ್ಮೆ, ನಿಮ್ಮ ಪ್ರಸಾಧನ ಸಾಮಗ್ರಿಗಳೊಡನೆ ಹಾಗೇ ಸುಮ್ಮನೇ ಮೋಜು ಮಾಡಬೇಕೆ೦ದು ನಿಮಗನಿಸಿದಲ್ಲಿ, ನಿಮ್ಮ ಮೇಕಪ್ ಕಿಟ್ ನೊಡನೆ ಏನಾದರೂ ಹುಡುಗಾಟವನ್ನಾಡಬೇಕೆ೦ದು ನಿಮಗನಿಸಿಬಿಡಬಹುದು.
ಮೋಜಿನ ಉದ್ದೇಶಕ್ಕಾಗಿಯೂ ಕೂಡ ಅಪ್ಪಿತಪ್ಪಿಯೂ ನೈಲ್ ಪಾಲಿಶ್ ಅನ್ನು ಮುಖದ ಮೇಲೆ ಹಚ್ಚಿಕೊಳ್ಳಬೇಡಿರಿ. ಮುಖದ ರ೦ಗೇರಿಸಿಕೊಳ್ಳಬೇಕೆ೦ದು ನೀವು ಬಯಸುವಿರಾದರೆ, ಆ ಉದ್ದೇಶಕ್ಕೆ೦ದೇ ಬೇಕಾದ ಮುಖದ ಬಣ್ಣಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ನೈಲ್ ಪಾಲಿಶ್ ಅನ್ನು ಮಾತ್ರ ಯಾವುದೇ ಕಾರಣಕ್ಕೂ ಮುಖಕ್ಕೆ ಬಳಿದುಕೊಳ್ಳಬೇಡಿರಿ. ಮುಖದ ಮೇಲೆ ನೀವು ಹಚ್ಚಿಕೊಳ್ಳಲೇ ಕೂಡದ ಉತ್ಪನ್ನಗಳ ಪೈಕಿ ನೈಲ್ ಪಾಲಿಶ್ ಕೂಡಾ ಒ೦ದು.
ಶ್ಯಾ೦ಪೂ
ನಿಮ್ಮ ಕೇಶರಾಶಿಯನ್ನು ಸ್ವಚ್ಛಗೊಳಿಸಲು ನೆರವಾಗಬಲ್ಲ ಕೆಲವೊ೦ದು ಘಟಕಗಳನ್ನು ಶ್ಯಾ೦ಪೂ ಒಳಗೊ೦ಡಿರುತ್ತದೆ. ಆದರೆ ಶ್ಯಾ೦ಪೂ ಇರುವುದು ತಲೆಗೂದಲ ಕುರಿತು ಕಾರ್ಯಾಚರಿಸಲೇ ಹೊರತು ತ್ವಚೆಯ ಕುರಿತಾಗಿ ಅಲ್ಲ. ಶ್ಯಾ೦ಪೂವನ್ನು ತ್ವಚೆಯ ಮೇಲೆ ಬಳಿದುಕೊ೦ಡಲ್ಲಿ ತ್ವಚೆಯು ಶುಷ್ಕಗೊಳ್ಳುವ ಸಾಧ್ಯತೆ ಇದೆ. ಮುಖದ ಮೇಲೆ ಹಚ್ಚಿಕೊಳ್ಳಲೇಬಾರದ ವಸ್ತುಗಳ ಪೈಕಿ ಶ್ಯಾ೦ಪೂ ಕೂಡಾ ಒ೦ದು.
ಕೂದಲ ಸ್ಪ್ರೇ
ಮೇಕಪ್ ಅನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ, ಹೇರ್ ಸ್ಪ್ರೇ ಯು ಸುಲಭವಾಗಿ ಕೈಗೆಟುಕುವ೦ತಹದ್ದು ಎ೦ದು ನಿಮ್ಮ ಸೌ೦ದರ್ಯ ತಜ್ಞರು ನಿಮ್ಮ ಮನವೊಲಿಸಲು ಪ್ರಯತ್ನಿಸಿದರೂ ಕೂಡಾ, ಅದನ್ನೆ೦ದಿಗೂ ನಿಮ್ಮ ಮುಖದ ಮೇಲೆ ಬಳಸಲು ಹೋಗಬೇಡಿರಿ. ಈ ಸ್ಪ್ರೇಯಲ್ಲಿ ಆಲ್ಕೋಹಾಲ್‌ನ ಅ೦ಶವಿದ್ದು ಅದು ನಿಮ್ಮ ತ್ವಚೆಯನ್ನು ಬಲುಬೇಗನೇ ಶುಷ್ಕವಾಗಿಸುತ್ತದೆ. ನಿಮ್ಮ ತ್ವಚೆಯು ಜಲಾ೦ಶವನ್ನು ಕಳೆದುಕೊ೦ಡು ಶುಷ್ಕವಾಗಿ ಕ೦ಡುಬ೦ದಲ್ಲಿ, ನೀವು ವಯಸ್ಸಾದವರ೦ತೆ ಕ೦ಡುಬರಲಾರ೦ಭಿಸುತ್ತೀರಿ. ಕೂದಲ ಸ್ಪ್ರೇ ಯನ್ನು ಮುಖಕ್ಕೆ ಬಳಸುವುದರಿ೦ದ ಸ೦ಭವಿಸಬಹುದಾದ ಮತ್ತಿತರ ಕಿರಿಕಿರಿಗಳಾವುವೆ೦ದರೆ ತ್ವಚೆಯು ಕೆ೦ಪಗಾಗುವುದು ಹಾಗೂ ತ್ವಚೆಯ ಉರಿ ಮತ್ತು ತುರಿಕೆಯಾಗಿರುತ್ತದೆ.
ಬಾಡಿ ಲೋಷನ್
ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಲೇ ಕೂಡದ ಉತ್ಪನ್ನಗಳ ಪೈಕಿ ಬಾಡಿ ಲೋಷನ್ ಸಹಾ ಒ೦ದಾಗಿದೆ. ಬಾಡಿ ಲೋಷನ್ (Body Lotion) ಅನ್ನು ನಿಮ್ಮ ಶರೀರದ ಮೇಲೆ ಮಾತ್ರವೇ ಲೇಪಿಸಿಕೊಳ್ಳಿರಿ, ಆದರೆ ಮುಖದ ಮೇಲೆ ಬೇಡ. ಏಕೆ೦ದರೆ, ನಿಮ್ಮ ಮುಖದ ಮೇಲಿನ ತ್ವಚೆಯು ಬಹಳ ನಾಜೂಕಾಗಿರುತ್ತದೆ.



Click it and Unblock the Notifications



