Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಎಚ್ಚರ: ಇಂತಹ ಮೇಕಪ್ ನಿಮ್ಮನ್ನು ಮುಪ್ಪಿಗೆ ತಳ್ಳಬಹುದು!
ಇಂದು ಹಿರಿಯರಾಗಿರುವ ರಂಗಕರ್ಮಿಗಳ ಮುಖ ಇತರರಿಗಿಂತ ಹೆಚ್ಚೇ ಬಿಳಿಚಿ ನೆರಿಗೆಗಳಾಗಿರುವುದನ್ನು ನೀವು ಗಮನಿಸಿರಬಹುದು. ಇದಕ್ಕೆ ಕಾರಣವನ್ನು ಅವರಲ್ಲಿ ಕೇಳಿದರೆ ವರ್ಷಗಟ್ಟಲೇ ಬಣ್ಣ ಹಚ್ಚಿದ್ದಕ್ಕೆ ಈ ಸ್ಥಿತಿ ಬಂದಿದೆ ಎಂದು ವಿಷಾದದಿಂದ ನುಡಿಯುವುದು ನಮ್ಮೆಲ್ಲರಿಗೆ ಒಂದು ಎಚ್ಚರಿಕೆಯಾಗಿದೆ. ಪ್ರಥಮವಾಗಿ ಬಣ್ಣ ಹಚ್ಚಿಕೊಂಡರೇ ಸುಂದರವಾಗಿ ಕಾಣಿಸುತ್ತೇವೆ ಎಂದು ನಾವೆಲ್ಲಾ ಗಾಢವಾಗಿ ನಂಬಿದ್ದೇವೆ.
ವಾಸ್ತವವಾಗಿ ಬಣ್ಣ ಹಚ್ಚಿಕೊಂಡಾಗ ನಮ್ಮ ವ್ಯಕ್ತಿತ್ವದ ಸೌಂದರ್ಯಕ್ಕೆ ಕೊಂಚ ಕಳೆ ಬರಬಹುದೇ ವಿನಃ ಬಣ್ಣ ಹಚ್ಚಿಕೊಂಡಾಕ್ಷಣ ಸೌಂದರ್ಯ ಬರುವುದಿಲ್ಲ. ಡಾ. ರಾಜಕುಮಾರ್ ರವರು ಬಕ್ಕತಲೆಯವರಾಗಿದ್ದರಿಂದ ತಮ್ಮ ಎಲ್ಲಾ ಚಿತ್ರಗಳಲ್ಲಿ ವಿಗ್ ಧರಿಸುತ್ತಿದ್ದರು. ಆದರೆ ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅವರೆಂದೂ ವಿಗ್ ಧರಿಸುತ್ತಿದ್ದಿಲ್ಲ.
ಇದರ ಬಗ್ಗೆ ಅವರಲ್ಲಿಯೇ ಕೇಳಿದಾಗ ತಾನು ನಟಿಸುವ ಪಾತ್ರಕ್ಕೆ ನ್ಯಾಯ ದೊರಕಿಸಿಕೊಡುವುದು ನನ್ನ ಧರ್ಮ, ಇಲ್ಲಿ ನಾನೇ ನಿಮ್ಮ ಮುಂದಿದ್ದೇನೆ, ವಿಗ್ ಅಗತ್ಯವಿಲ್ಲ ಎನ್ನುತ್ತಿದ್ದರು. ಎಂತಹ ಮಾತು! ಅಪ್ಪಿತಪ್ಪಿಯೂ ಮುಖಕ್ಕೆ ಇಂತಹ ಮೇಕಪ್ ಅನ್ನು ಬಳಸಬೇಡಿ!
ಬಣ್ಣಗಳ ಸತತ ಬಳಕೆಯಿಂದ ಮುಖದ ಚರ್ಮ ಬಿಳಿಚಿಕೊಳ್ಳುವುದರ ಜೊತೆಗೇ ನೆರಿಗೆಗಳೂ ವಯಸ್ಸಿಗಿಂತ ಮುನ್ನವೇ ಮೂಡುತ್ತವೆ. ನಿಮ್ಮ ನೈಸರ್ಗಿಕ ಸೌಂದರ್ಯವನ್ನು ಪ್ರಕಟಿಸಲು ಗಾಢವಾದ ಬಣ್ಣದ ಲೇಪನದ ಅಗತ್ಯವೇ ಇಲ್ಲ. ಅಗತ್ಯವಿದ್ದಲ್ಲಿ ಮಾತ್ರ ಕೊಂಚ ಪ್ರಮಾಣದಲ್ಲಿ ಉಪಯೋಗಿಸುವುದರಿಂದ ಚರ್ಮದ ಆರೋಗ್ಯವೂ ಉಳಿದಂತಾಗುತ್ತದೆ ಹಾಗೂ ನಿಮ್ಮ ಸಹಜ ಸೌಂದರ್ಯವೂ ಪ್ರಕಟಗೊಳ್ಳುತ್ತದೆ. ಮಲಗುವ ಮುನ್ನ ತ್ವಚೆಯ ಮೇಕಪ್ ಅನ್ನು ತೆಗೆಯಲು ಮರೆಯದಿರಿ!
ಬನ್ನಿ ಮೇಕಪ್‌ನ ಭರದಲ್ಲಿ ಮಹಿಳೆಯರು ಎಲ್ಲಿ ಎಡವುತ್ತಿದ್ದಾರೆ, ಇದನ್ನು ತಡೆಯಲು ಏನು ಮಾಡಬಹುದು ಎಂಬ ವಿಷಯಗಳನ್ನು ಇಂದು ಈ ಸ್ಲೈಡ್ ಶೋ ಮೂಲಕ ತಿಳಿಸಲಾಗಿದೆ ಮುಂದೆ ಓದಿ....

ವಿಪರೀತ ಫೌಂಡೇಶನ್ ಉಪಯೋಗಿಸಬೇಡಿ
ಕೆಲವು ಸೌಂದರ್ಯ ಸ್ಪರ್ಧೆಗಳಲ್ಲಿ ಮುಖದ ಮೇಕಪ್ ಇಷ್ಟೊಂದು ಹೆಚ್ಚಿರುತ್ತದೆ ಎಂದರೆ ಹಳೆಯ ಸರ್ಕಸ್ಸಿನಲ್ಲಿ ಜೋಕರುಗಳು ಹಾಕಿಕೊಂಡು ಬಂದಷ್ಟಿರುತ್ತದೆ.ದಪ್ಪನೆಯ ಫೌಂಡೇಶನ್ ಹಾಕಿಕೊಂಡು ಅದರ ಮೇಲೆ ಇತರ ಪ್ರಸಾಧನಗಳನ್ನು ಹಚ್ಚಿಕೊಳ್ಳುವ ಮೂಲಕ ತಮ್ಮ ತ್ವಚೆಯ ಬಣ್ಣವನ್ನು ಮರೆಮಾಚಬಹುದು ಎಂದು ಹಲವರು ತಿಳಿದುಕೊಂಡಿದ್ದಾರೆ.ಆದರೆ ಫೌಂಡೇಶನ್ ದಪ್ಪವಿದ್ದಷ್ಟೂ ಚರ್ಮದ ಸೂಕ್ಷ್ಮರಂಧ್ರಗಳೆಲ್ಲಾ ಮುಚ್ಚಿಯೇ ಹೋಗಿ ಚರ್ಮದಿಂದ ಹೊರಬರುವ ದ್ರವಗಳಿಗೆ ಜಾಗವೇ ಇಲ್ಲದೇ ಒಳಗೇ ಗಟ್ಟಿಯಾಗತೊಡಗುತ್ತವೆ. ಮುಂದೆ ಓದಿ...

ವಿಪರೀತ ಫೌಂಡೇಶನ್ ಉಪಯೋಗಿಸಬೇಡಿ
ಇದು ಮೊಡವೆಗಳಿಗೆ ಮೂಲವಾದರೆ ಉಸಿರಾಟ ಕಳೆದುಕೊಂಡ ಚರ್ಮ ಜಡಗಟ್ಟುತ್ತದೆ. ಅತ್ತ ನಗುವಾಗ ಸಹಜವಾಗಿ ಬೀಳುವ ಗುಳಿ ಮತ್ತು ನೆರಿಗೆಗಳು ದಪ್ಪನೆಯ ಫೌಂಡೇಶನ್ ಲೇಪನದಲ್ಲೂ ನೆರಿಗೆ ಮೂಡಿಸುತ್ತದೆ. ಈ ನೆರಿಗೆ ಚರ್ಮದ ನೆರಿಗೆಗಿಂತಲೂ ಆಳವಾಗಿರುವುದರಿಂದ ಮೇಕಪ್ ಇಲ್ಲದೇ ಎಷ್ಟು ವೃದ್ದರಾಗಿ ಕಾಣಿಸುತ್ತಿದ್ದಿರೋ ಅದಕ್ಕೆ ಹತ್ತು ವರ್ಷ ಹೆಚ್ಚು ವಯಸ್ಸಾದಂತೆ ಈ ನೆರಿಗೆ ತೋರಿಸುತ್ತದೆ. ಅದ್ದರಿಂದ ವಿಪರೀತ ಫೌಂಡೇಶನ್ ಬೇಡ.

ವಿಪರೀತ ಕಾಡಿಗೆ ಉಪಯೋಗಿಸಬೇಡಿ.
ಕಾಡಿಗೆ ಎಲ್ಲಾ ಮಹಿಳೆಯರ ಅನಿವಾರ್ಯ ಪ್ರಸಾದನ. ಕೆಲವರು ಕಾಡಿಗೆಯನ್ನು ಕಣ್ಣಿನ ಮೇಲಿನ ಮತ್ತು ಕೆಳಗಿನ ರೆಪ್ಪೆಗಳೆರಡಕ್ಕೂ ಢಾಳಾಗಿ ಹಚ್ಚುವುದಲ್ಲದೇ ಹಣೆಯ ಪಕ್ಕ ಒಂದು ರೇಖೆಯನ್ನೂ ಎಳೆದುಬಿಡುತ್ತಾರೆ. ಇದರಿಂದ ಮುಖದಲ್ಲಿ ಕಣ್ಣುಗಳೇ ದೊಡ್ಡದಾಗಿ ಕಾಣಿಸಿ ಹೆಚ್ಚು ವಯಸ್ಸಾಗಿರುವ ಲಕ್ಷಣದಂತೆ ತೋರುತ್ತದೆ. ಕಥಕ್ಕಳಿ ನರ್ತಕಿಯರಿಗೆ ಇದು ಅಗತ್ಯವಾದರೂ ಸಾಮಾನ್ಯವಾಗಿ ಇಷ್ಟು ಹೆಚ್ಚಿನ ಕಾಡಿಗೆ ಅಗತ್ಯವೇ ಇಲ್ಲ. ಕೆಳರೆಪ್ಪೆಗೆ ಕೊಂಚವಾಗಿ ಸವರಿ ಮೇಲ್ರೆಪ್ಪೆಗೆ ಕಂಡೂ ಕಾಣಿಸದಷ್ಟು ತೆಳುವಾಗಿ ಹೆಚ್ಚುವುದರಿಂದ ಕಣ್ಣುಗಳು ಚಿಕ್ಕದಾಗಿ ಕಂಡು ನಿಮ್ಮ ವದನದ ಸೌಂದರ್ಯವನ್ನು ಹೆಚ್ಚಿಸುತ್ತವೆ.

ನಿಮ್ಮ ಸಹಜವರ್ಣದ ಲಿಪ್ ಸ್ಟಿಕ್ ಬಳಸಿ
ಲಿಪ್ ಸ್ಟಿಕ್ ಯಾವ ಬಣ್ಣದ್ದು ಹಚ್ಚುವುದು ಎಂಬುದೇ ಹೆಚ್ಚಿನವರಿಗೆ ದೊಡ್ಡ ಸಂಕಟ. ಏಕೆಂದರೆ ಪ್ರಸಾದನ ಸಾಮಾಗ್ರಿಗಳಲ್ಲಿ ಅತಿ ಹೆಚ್ಚಿನ ಬಣ್ಣದ ಆಯ್ಕೆ ಇರುವುದೇ ಲಿಪ್ ಸ್ಟಿಕ್ ಗೆ. ಒಂದು ವೇಳೆ ಅತಿ ದಟ್ಟನೆಯ ವರ್ಣವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ತುಟಿಗಳನ್ನದು ಕಿರಿದಾಗಿಸಿ ಹೆಚ್ಚು ವಯಸ್ಸಿನ ಭಾವನೆ ಮೂಡಿಸುತ್ತದೆ. ಮುಖದ ಚರ್ಮದ ಬಣ್ಣಕ್ಕೆ ಹೋಲಿಕೆಯಾಗದ ಇತರ ಯಾವುದೇ ಬಣ್ಣ ಆಭಾಸ ಮೂಡಿಸುತ್ತದೆ. ನಿಮ್ಮ ಚರ್ಮದ ಬಣ್ಣವನ್ನು ಕೊಂಚವೇ ಸ್ಪುರಗೊಳಿಸುವ ಬಣ್ಣವನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಹಾಗೂ ಅತ್ಯಲ್ಪ ಪ್ರಮಾಣದಲ್ಲಿ ಹಚ್ಚುವ ಮೂಲಕ ನಿಮ್ಮ ಸಹಜ ಸೌಂದರ್ಯಕ್ಕೆ ಹೆಚ್ಚು ಮೆರುಗು ನೀಡಬಹುದು.

ಕೆನ್ನೆ ಕೆಂಪಗಾಗಿಸುವುದರಿಂದ ವಯಸ್ಸು ಕಡಿಮೆಯಾಗದು
ಕೆನ್ನೆಗಳನ್ನು ಕೆಂಪಗಾಗಿಸಿ ತಾರುಣ್ಯದ ಕಳೆಯನ್ನು ಪ್ರಕಟಿಸುವುದು ಹಳೆಯದಾಯಿತು. ಇಂದು ಈ ಪರಿಯ ಮೇಕಪ್ ಮಾಡಿಕೊಂಡರೆ ನಗೆಪಾಟಲಿಗೆ ಈಡಾಗುವುದು ಮಾತ್ರವಲ್ಲ, ಅಡುಗೂಲಜ್ಜಿ ಹದಿಹರೆಯವನ್ನು ಪಡೆಯಲು ನಡೆಸುವ ಪ್ರಯತ್ನದಂತೆ ಕಂಡುಬರುತ್ತದೆ. ಇದು ನಿಮ್ಮನ್ನು ಹೆಚ್ಚು ವಯಸ್ಸಾದಂತೆಯೂ ಚರ್ಮ ಜೂಲುಜೂಲಾಗಿರುವಂತೆಯೂ ಕಾಣಿಸುತ್ತದೆ.

ಕೆನ್ನೆಯನ್ನು ಮಿನುಗಿಸುವ ಪುಡಿ ಹಚ್ಚಿಕೊಳ್ಳಬೇಡಿ
ಒಂದು ವೇಳೆ ಮುಖದ ಕಳೆಯನ್ನು ಹೆಚ್ಚಿಸಲು ಮಿನುಗುವ ಪುಡಿಯನ್ನು ಹಚ್ಚಿಕೊಂಡರೆ ಅದಕ್ಕಿಂತ ತಪ್ಪು ಇನ್ನೊಂದಿಲ್ಲ. ವೇದಿಕೆಯಲ್ಲಿ ಬಣ್ಣಗಳ ಪ್ರದರ್ಶನದಲ್ಲಿ ಅನಿವಾರ್ಯವಾದ ಹೊರತು ಇತರ ಸಮಯದಲ್ಲಿ ಇದನ್ನು ಹಚ್ಚಿಕೊಳ್ಳುವುದರಿಂದ ಇದು ನಿಮ್ಮನ್ನು ಈಗಿನ ವಯಸ್ಸಿಗಿಂತ ಕನಿಷ್ಟ ಹತ್ತು ವರ್ಷ ಹೆಚ್ಚಾಗಿ ಪ್ರಕಟಿಸುತ್ತದೆ. ಏಕೆಂದರೆ ಕೆನ್ನೆಯ ಮೇಲೆ ಪ್ರಖರವಾಗಿ ಗೋಚರಿಸುವ ಇವು ನೋಡುವವರ ದೃಷ್ಟಿಯನ್ನು ತಮ್ಮೆಡೆಗೆ ಸೆಳೆದು ನಿಮ್ಮ ಕಣ್ಣುಗಳೆಗೆ ನೋಡುವುದನ್ನು ತಪ್ಪಿಸುತ್ತದೆ.



Click it and Unblock the Notifications











