ಬರೀ ಒಂದೇ ದಿನದಲ್ಲಿ ಮೊಡವೆಗಳು ಮಂಗಮಾಯ..!

By Cm Prasad

ಈಗಿನ ದಿನಮಾನಸದಲ್ಲಿ ಮೊಡವೆಗಳು ಮತ್ತು ಮುಖದ ಕಲೆಗಳು ಹೆಚ್ಚಾಗಿ ಹುಡುಗಿಯರನ್ನು ಮತ್ತು ಮಹಿಳೆಯರನ್ನು ಕಾಡುತ್ತಿದೆ. ಪುರುಷರೂ ಸಹ ಇದಕ್ಕೆ ಹೊರತಾಗಿಲ್ಲ. ಅವು ಮುಖದ ಅಂದವನ್ನು ಕುಂದಿಸುವುದಲ್ಲದೇ ಅದರಿಂದ ಕಾಣುವ ಕೆಂಪು ಚಹರೆಗಳು ಒಂದು ರೀತಿಯಲ್ಲಿ ಭಯ ಹುಟ್ಟಿಸುವಂತೆ ಮಾಡುತ್ತದೆ. ಮುಖದ ಕಲೆಗಳನ್ನು ಹೋಗಲಾಡಿಸಿ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವ ಸಮಯ ಈಗ ಒದಗಿದೆ. ಹೌದು, ನಿಮ್ಮ ಮುಖವನ್ನು ಕಲೆಗಳಿಂದ ಮುಕ್ತಗೊಳಿಸಿ ಅಂದವನ್ನು ಹೆಚ್ಚಿಸಲು ನಿಮಗಾಗಿ ಕೆಲವು ಸಿದ್ಧಸೂತ್ರಗಳನ್ನು ನಾವು ನೀಡುತ್ತಿದ್ದೇವೆ.

ಮುಖದಲ್ಲಿ ಹೆಚ್ಚಿನ ಜಿಡ್ಡಿನ ಅಂಶದಿಂದ ಚರ್ಮವು ಬೇಗನೇ ಮೊಡವೆ ಹೊಂದಲು ಕಾರಣವಾಗುತ್ತದೆ. ಚರ್ಮದಲ್ಲಿರುವ ಚಿಕ್ಕಚಿಕ್ಕ ರಂಧ್ರಗಳು ಜಿಡ್ಡಿನಿಂದ ಮುಚ್ಚಿಕೊಂಡು ಮೊಡವೆಗಳು ಹೆಚ್ಚಾಗಲು ದಾರಿ ಮಾಡಿಕೊಡುತ್ತದೆ. ಹುಡುಗಿಯರು ಮೊಡವೆ ಹೊಂದಿದ ಮುಖವನ್ನು ತೋರಿಸಲು ಹಿಂಜರಿಯುತ್ತಾರೆ, ವಿಶೇಷ ಸಂದರ್ಭದಲ್ಲಿ ಇದು ಕಷ್ಟವೆನಿಸುತ್ತದೆ. ಇದರಿಂದ ಅವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಂಭವವೂ ಇದೆ.

ಹೆಚ್ಚಿನವರು ಮೊಡವೆಗಳನ್ನು ನಿವಾರಿಸಲು ಔಷಧೀಯ ಕ್ರೀಮ್ ಗಳನ್ನು ಬಳಸುತ್ತಿದ್ದು, ಈ ವಿಧಾನ ಸೂಕ್ತವಾದುದಲ್ಲ. ಒಂದು ವಾರ ಅವನ್ನು ಬಳಸಬಹುದು ಆದರೆ ಕಾಲಾನಂತರ ಅದು ಬೇರೆ ರೀತಿಯ ಅಡ್ಡಪರಿಣಾಮಕ್ಕೆ ಎಡೆಮಾಡಿಕೊಡುತ್ತದೆ. ಕ್ರೀಂ ಬಳಕೆಯ ನಂತರವೂ ಸಹ ಮೊಡವೆಗಳು ಬರುವ ಸಾಧ್ಯತೆಯಿರುತ್ತದೆ. ಆದ್ದರಿಂದ ನೈಸರ್ಗಿಕ ಚಿಕಿತ್ಸೆಯೇ ಸೂಕ್ತವಾದ ವಿಧಾನವಾಗಿದೆ. ಮೊಡವೆಗಳಿಗೆ ಚಿಂತಿಸದಿರಿ, ಕೆಲವೇ ದಿನಗಳಲ್ಲಿ ನಿಮ್ಮ ಮನೆಯಲ್ಲಿನ ಲಭ್ಯವಿರುವ ಅಡುಗೆ ಸಾಮಗ್ರಿಗಳಿಂದಲೇ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು. ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಮೊಡವೆ ನಿವಾರಕಗಳ ಕೆಲ ಸುಲಭವಾದ ವಿಧಾನಗಳನ್ನು ನಿಮಗಾಗಿ ನೀಡಲಾಗಿದೆ. ಓದಿ..

ಸಾಸಿವೆ

ಸಾಸಿವೆ

ಸಾಸಿವೆ ಮತ್ತು ಜೇನುತುಪ್ಪದ ಮಿಶ್ರಣದಿಂದ ಮೊಡವೆಗಳು ಮತ್ತು ಮುಖದ ಕಲೆಗಳನ್ನು ಸುಲಭವಾಗಿ ನಿವಾರಣೆಯಾಗುತ್ತದೆ. ಚರ್ಮದ ಸೋಂಕು ಮತ್ತು ಮೊಡವೆಗಳನ್ನು ನಿವಾರಿಸಲು ಅವಶ್ಯಕವಿರುವ ನೈಸರ್ಗಿಕ ಸತ್ವವಾದ ಸಾಲಿಸಿಲಿಕ್ ಆಸಿಡ್ ಈ ಮಿಶ್ರಣದಲ್ಲಿ ಒಳಗೊಂಡಿದೆ. 1/4 ಚಮಚ ಸಾಸಿವೆಯೊಂದಿಗೆ 1 ಚಮಚ ಜೇನುತುಪ್ಪವನ್ನು ಚೆನ್ನಾಗಿ ಮಿಶ್ರಣಮಾಡಿ ಮುಖದ ಎಲ್ಲಾ ಭಾಗಕ್ಕೆ ಹಚ್ಚಿಕೊಳ್ಳಿ. 15 ನಿಮಿಷದ ನಂತರ ಶುದ್ಧ ನೀರಿನಿಂದ ಮುಖವನ್ನು ನಯವಾಗಿ ತೊಳೆಯಿರಿ.

 ಗ್ರೀನ್ ಟೀ

ಗ್ರೀನ್ ಟೀ

ಇತ್ತೀಚೆಗೆ ಪ್ರಚಲಿತಗೊಳ್ಳುತ್ತಿರುವ ಗ್ರೀನ್ ಟೀನಲ್ಲಿ ನೈಸರ್ಗಿಕವಾದ ಚಹಾ ಎಲೆಗಳು ಹೇರಳವಾಗಿದ್ದು, ತಯಾರಿಸಿದ ಗ್ರೀನ್ ಟೀ ಯನ್ನು ನಿಮ್ಮ ರೆಫ್ರಿಜರೇಟರ್ ನಲ್ಲಿರಿಸಿ ಮೊದಲು ಮಂಜುಗಡ್ಡೆಯಾಗಿಸಿ. ಈ ಗ್ರೀನ್ ಟೀಯ ಮಂಜುಗಡ್ಡೆಯನ್ನು ನಿಧಾನವಾಗಿ ಮೇಲಿಂದ ಕೆಳಕ್ಕೆ ಮೊಡವೆಗಳ ಮೇಲೆ ತಿಕ್ಕಿ. ಹೀಗೆ ಮಾಡುವುದರಿಂದ ನಿಮ್ಮ ಚರ್ಮದ ಜಿಡ್ಡನ್ನು ಸರಾಗವಾಗಿ ಹೊರಹಾಕುವುದಲ್ಲದೆ ಕಣ್ಣಿನ ಊತವನ್ನು ಸಹ ನಿವಾರಿಸುತ್ತದೆ.

ಟೊಮೇಟೊ ಹೋಳು

ಟೊಮೇಟೊ ಹೋಳು

ಟೊಮೇಟೊನಲ್ಲಿ ಉತ್ಕರ್ಷಣ ನಿರೋಧಕ (antioxidant) ಸತ್ವಗಳು ಹೇರಳವಾಗಿದ್ದು, ಇದು ನಿಮ್ಮ ಚರ್ಮವನ್ನು ಮೃದುಗೊಳಿಸಲು ಹೆಚ್ಚು ಸಹಕಾರಿ. ಮೊಡವೆಗಳನ್ನು ಹೋಗಲಾಡಿಸಲು ಇದೂ ಸಹ ಒಂದು ಉತ್ತಮ ವಿಧಾನವಾಗಿದ್ದು ಇದರಿಂದ ಚರ್ಮದ ಸೋಂಕಿನ ಸಮಸ್ಯೆಗಳು ಕಡಿಮೆಯಾಗುತ್ತದೆ. ದಿನಕ್ಕೆ ಎರಡು ಬಾರಿ ಟೊಮೆಟೋ ಹೋಳಿನ ರಸ ಅಥವಾ ಅದರೊಳಗಿನ ಅಂಶದಿಂದ ನಯವಾಗಿ ಮೊಡವೆಗಳಿಗೆ ತಿಕ್ಕಿದರೆ ಕಲೆಗಳು ವಾಸಿಯಾಗುತ್ತದೆ. ಚಿತ್ರಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

ಬೆಳ್ಳುಳ್ಳಿ ರಸ

ಬೆಳ್ಳುಳ್ಳಿ ರಸ

ಚರ್ಮದ ಗಾಯಗಳನ್ನು ವಾಸಿ ಮಾಡಿ ಮೊಡವೆಗಳು ಬರದಂತೆ ತಡೆಯುವ ವಿಶಿಷ್ತ ಗುಣ ಇದರಲ್ಲಿದೆ. ಸ್ವಲ್ಪ ಬೆಳ್ಳುಳ್ಳಿ ರಸವನ್ನು ಮೊಡವೆಯ ಜಾಗಕ್ಕೆ ಹಚ್ಚಿ ಹೆಚ್ಚು ಹೊತ್ತು ಹಾಗೆಯೇ ಬಿಡಿ. ನಂತರ ನೀರಿನಿಂದ ಸ್ವಚ್ಛಗೊಳಿಸಿ. ಇದು ಮೊಡವೆಗಳನ್ನು ಬೇಗ ನಿವಾರಿಸಲು ನಿಜಕ್ಕೂ ಪರಿಣಾಮಕಾರಿ ವಿಧಾನ.

ಮೊಟ್ಟೆಯ ಬಿಳಿತಿರುಳು

ಮೊಟ್ಟೆಯ ಬಿಳಿತಿರುಳು

ಮೊಟ್ಟೆಯನ್ನು ಬೇಯಿಸುವಾಗ, ಮೊಟ್ಟೆಯ ಒಳಭಾಗದಲ್ಲಿ ಇರುವ ಹಳದಿ ಅಂಶವನ್ನು ಮೊದಲು ಸುರಿದು, ಉಳಿದಂತಹ ಬಿಳಿಯ ದ್ರವವನ್ನು ಪ್ರತ್ಯೇಕಿಸಿ, ಅದನ್ನು ಮೊಡವೆಯ ಜಾಗಕ್ಕೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದಕ್ಕೂ ಮುನ್ನ ನಿಂಬೆ ರಸವನ್ನು ಹಚ್ಚಿ ನಂತರ ಮೊಟ್ಟೆಯ ಬಿಳಿ ಭಾಗವನ್ನು ಹಚ್ಚಿದರೆ ಇನ್ನೂ ಹೆಚ್ಚಿನ ಫಲಿತಾಂಶ ದೊರೆಯುತ್ತದೆ. ಇದೊಂದು ಮೊಡವೆ ನಿವಾರಿಸಲು ವಿಶೇಷ ವಿಧಾನವಾಗಿದೆ.

X
Desktop Bottom Promotion