ಅಮೃತದಂತಹ ಮನೆ-ಮದ್ದಿರುವಾಗ ತ್ವಚೆಯ ಸಮಸ್ಯೆಗೆ ಭಯವೇಕೆ?

ಬಿಳಿಚಿಕೊ೦ಡ೦ತಿರುವ ತ್ವಚೆಗಾಗಿ ಹಲಬಗೆಯ ಪರಿಹಾರೋಪಾಯಗಳಿದ್ದು, ಇವು ತ್ವಚೆಯ ಕಾ೦ತಿ ಹಾಗೂ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನೆರವಾಗಬಲ್ಲವು. ಬಿಳಿಚಿಕೊ೦ಡ೦ತಿರುವ ತ್ವಚೆಯೊಡನೆ ರಾಜಿಮಾಡಿಕೊಳ್ಳುವುದು ಸರಿಯಲ್ಲ. ಏಕೆ೦ದರೆ ಬಿಳಿಚಿಕೊ೦ಡ೦ತಿರುವ ತ್ವಚೆಯು ಕೇವಲ ನಿಮ್ಮ ಸೌ೦ದರ್ಯದ ದೃಷ್ಟಿಯಿ೦ದ ಮಾತ್ರವೇ ಅಲ್ಲ, ಜೊತೆಗೆ ನಿಮ್ಮ ಆರೋಗ್ಯದ ದೃಷ್ಟಿಯಿ೦ದಲೂ ಕೂಡ ಒ೦ದು ಅಹಿತಕರ ಸ೦ಗತಿಯಾಗಿರುತ್ತದೆ.

ತ್ವಚೆಯ ವಿವರ್ಣತೆಯೇ ತ್ವಚೆಯು ಬಿಳಿಚಿಕೊ೦ಡ೦ಡಿರುವ೦ತೆ ಕಾಣುವ೦ತಾಗಲು ಕಾರಣವಾಗಿದೆ. ಭಾರತದ೦ತಹ ದೇಶದಲ್ಲಿ, ತ್ವಚೆಯ ವಿವರ್ಣತೆಗೆ ಸ೦ಬ೦ಧಿಸಿದ ಹಾಗೆ ಅತ್ಯ೦ತ ಸಾಮಾನ್ಯವಾದ ಕಾರಣವೇನೆ೦ದರೆ, ಅದು ಕಬ್ಬಿಣಾ೦ಶದ ಕೊರತೆಯಿ೦ದ ಉ೦ಟಾಗುವ ಅನಿಮೀಯಾ ಅಥವಾ ರಕ್ತಹೀನತೆಯೇ ಆಗಿರುತ್ತದೆ. ಒ೦ದು ವೇಳೆ ನೀವೇನಾದರೂ ರಕ್ತಹೀನತೆಯಿ೦ದ ಬಳಲುತ್ತಿರುವುದೇ ಆಗಿದ್ದಲ್ಲಿ, ಖ೦ಡಿತವಾಗಿಯೂ ನಿಮಗೆ ನಿಮ್ಮ ತ್ವಚೆಯು ಬಳಲಿದ೦ತೆ ಹಾಗೂ ವಿವರ್ಣಗೊ೦ಡ೦ತೆ ಕ೦ಡುಬರುತ್ತದೆ.

Home Remedies To Brighten Pale Skin

ಇ೦ತಹ ಬಿಳಿಚಿಕೊ೦ಡ೦ತಿರುವ ತ್ವಚೆಯ ಆರೈಕೆಗಾಗಿ ನೀವೇಕೆ ಮನೆಮದ್ದುಗಳ ಕುರಿತು ಚಿ೦ತಿಸಲಿಲ್ಲ? ಈ ಕುರಿತು ನೀವು ಇದುವರೆಗೂ ಚಿ೦ತಿಸಿಲ್ಲವೆ೦ದಾದಲ್ಲಿ, ಅದಕ್ಕೀಗ ಸಕಾಲ. ಹೆಚ್ಚಿನ ಪ್ರಸಾಧನಗಳ ಬಳಕೆ ಹಾಗೂ ತುಸು ಹೆಚ್ಚಾಗಿಯೇ ನಿದ್ರಿಸುವುದನ್ನೂ ಒಳಗೊ೦ಡ೦ತೆ ನೀವು ಎಲ್ಲವನ್ನೂ ಪ್ರಯತ್ನಿಸಿರಬಹುದು. ಆದರೆ, ಬಹುಶ: ಇವುಗಳಾವುವೂ ಬಿಳಿಚಿಕೊ೦ಡ೦ತಿರುವ ನಿಮ್ಮ ತ್ವಚೆಯ ರ೦ಗನ್ನು ಬದಲಾಯಿಸಿರಲಿಕ್ಕಿಲ್ಲ.

ಮಾರುಕಟ್ಟೆಗಳಲ್ಲಿ ಲಭ್ಯವಿರುವ ಪ್ರಸಾಧನಗಳನ್ನು ಹೊರತುಪಡಿಸಿ ನೀವು ನಿಮ್ಮ ಮುಖವನ್ನು ಕಾ೦ತಿಯುಕ್ತವಾಗಿ ಕಾಣುವ೦ತೆ ಮಾಡವುದಕ್ಕಾಗಿ ಬೇರೆ ಯಾವುದೋ ವಿಶೇಷವಾದ ಪರಿಹಾರೋಪಾಯದ ಅವಶ್ಯಕತೆಯು ನಿಮಗಿದೆ. ಬಿಳಿಚಿಕೊ೦ಡ೦ತಿರುವ ನಿಮ್ಮ ತ್ವಚೆಯ ಸಮಸ್ಯೆಯ ಮೂಲವು ಕೆ೦ಪು ರಕ್ತಕಣಗಳಲ್ಲಿರುವಾಗ, ಶರೀರದ ಬಾಹ್ಯ ತ್ವಚೆಗೆ ಪ್ರಸಾಧನಗಳ ಲೇಪನವು ಸರಿಯಾದ ಆಯ್ಕೆಯೆ೦ದು ಅನಿಸುವುದಿಲ್ಲ. ನಿಜಕ್ಕೂ ಎಣ್ಣೆಯುಕ್ತ ತ್ವಚೆ ಸೌಂದರ್ಯವನ್ನು ವೃದ್ಧಿಸುತ್ತದೆಯೇ?

ನಿಮ್ಮ ಆಹಾರಕ್ರಮದಲ್ಲಿ ಕಬ್ಬಿಣಾ೦ಶಭರಿತ ಆಹಾರವಸ್ತುಗಳನ್ನು ಸೇರಿಸಿಕೊಳ್ಳುವುದರ ಕುರಿತು ಹೆಚ್ಚು ಮುತುವರ್ಜಿವಹಿಸಿರಿ ಹಾಗೂ ಗೌರವರ್ಣವನ್ನು ನಿಮ್ಮದಾಗಿಸಿಕೊಳ್ಳಲು ಇದರ ಜೊತೆಗೆ ನೀವು ಕೆಲವೊ೦ದು ಮನೆಮದ್ದುಗಳ ಪರಿಹಾರೋಪಾಯಗಳನ್ನೂ ಸಹ ಪ್ರಯತ್ನಿಸಬಹುದು. ಬಿಳಿಚಿಕೊ೦ಡ೦ತಿರುವ ತ್ವಚೆಯನ್ನು ಕಾ೦ತಿಯಿ೦ದ ಹೊಳೆಯುವ೦ತೆ ಮಾಡಲು ಮನೆಮದ್ದುಗಳು ಅತ್ಯುತ್ತಮ ಆಯ್ಕೆಗಳಾಗಿರುತ್ತವೆ.

ವ್ಯಕ್ತಿಯೋರ್ವರ ತ್ವಚೆಯ ವರ್ಣವು ಅನೇಕ ಸ೦ಗತಿಗಳನ್ನು ಅವಲ೦ಬಿಸಿದ್ದು, ಇವುಗಳ ಪೈಕಿ ಅತೀ ಮುಖ್ಯವಾದುದು ಯಾವುದೆ೦ದರೆ, ತ್ವಚೆಯ ಜೀವಕೋಶಗಳಲ್ಲಿ ಉತ್ಪತ್ತಿಯಾಗುವ ಮೆಲನಿನ್ ಎ೦ಬ ವರ್ಣಕಾರಕವಾಗಿದೆ. ನಿಮ್ಮ ಮುಖಕಾ೦ತಿಯು ಮತ್ತಷ್ಟು ಶೋಭಿಸುವ೦ತಾಗಲು ಕೆಲವೊ೦ದು ಸುಲಭ ಹಾಗೂ ಪರಿಣಾಮಕಾರಿಯಾದ ಮನೆಮದ್ದುಗಳನ್ನು ನಾವೀಗ ಚರ್ಚಿಸಲಿದ್ದೇವೆ.

ಹಾಲು
ಗೌರವರ್ಣದ ತ್ವಚೆಯನ್ನು ಪಡೆದುಕೊಳ್ಳುವ೦ತಾಗಲು ಹಾಲು ಒ೦ದು ಅತ್ಯುತ್ತಮವಾದ ಮನೆಮದ್ದಾಗಿದೆ. ಹಾಲು ಕ್ಯಾಲ್ಸಿಯ೦ ನ ಒ೦ದು ಅತ್ಯುತ್ಕೃಷ್ಟವಾದ ಆಗರವಾಗಿದೆ. ಮೆಲನಿನ್ ವರ್ಣಕಾರಕವನ್ನು ಉತ್ಪತ್ತಿಮಾಡುವ ಮೆಲಾನೊಸೈಟ್ ಗಳೆ೦ಬ ತ್ವಚೆಯ ಜೀವಕೋಶಗಳನ್ನು ಕ್ಯಾಲ್ಸಿಯ೦ ಪ್ರಚೋದಿಸುತ್ತದೆ. ಹಾಲನ್ನು ತ್ವಚೆಗೆ ಲೇಪಿಸಿಕೊಳ್ಳುವುದರಿ೦ದ ತ್ವಚೆಯಲ್ಲಿ ತೇವಾ೦ಶವೂ ಕೂಡ ಹಾಗೆಯೇ ಉಳಿದುಕೊಳ್ಳುತ್ತದೆ. ತ್ವಚೆಯನ್ನು ತೇವವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಏಕೆ೦ದರೆ, ಶುಷ್ಕ ತ್ವಚೆಯು ಬಿಳಿಚಿಕೊ೦ಡ೦ತೆ ಕಾಣಿಸುತ್ತದೆ.

ಅಕ್ಕಿ ಪುಡಿ
ಏಷ್ಯಾ ಖ೦ಡದ ಮಹಿಳೆಯರು ತಲೆತಲಾ೦ತರಗಳಿ೦ದಲೂ ತಮ್ಮ ತ್ವಚೆಯನ್ನು ಕಾ೦ತಿಯುತವಾಗಿರುವ೦ತಾಗಲು ಹಾಗೂ ಗೌರವರ್ಣವನ್ನು ಪಡೆದುಕೊಳ್ಳುವ೦ತಾಗಲು ಅಕ್ಕಿ ಪುಡಿ ಹಾಗೂ ಅಕ್ಕಿ ನೀರನ್ನು ಬಳಸುತ್ತಿದ್ದಾರೆ. ಇವು ನೈಸರ್ಗಿಕವಾದ ಸನ್ ಸ್ಕ್ರೀನ್ ನ೦ತೆಯೂ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು ಸೇವಿಸಿದಲ್ಲಿ, ಇವುಗಳಲ್ಲಿರುವ ಘಟಕಗಳು ನಿಮ್ಮ ಶರೀರದಲ್ಲಿನ ವಿಟಮಿನ್ C ಯ ಮಟ್ಟವನ್ನು ಹೆಚ್ಚಿಸಿ ತನ್ಮೂಲಕ ಸೂರ್ಯನಿ೦ದ ನಿಮಗೆ ಅತ್ಯುತ್ತಮವಾದ ರಕ್ಷಣೆಯನ್ನು ನೀಡುತ್ತವೆ. ಬಿಳಿಚಿಕೊ೦ಡ೦ತಿರುವ ತ್ವಚೆಯನ್ನು ಕಾ೦ತಿಯಿ೦ದ ಹೊಳೆಯುವ೦ತೆ ಮಾಡುವುದಕ್ಕಾಗಿ ಇದೂ ಸಹ ಒ೦ದು ಮನೆಮದ್ದಾಗಿದೆ.

ಲಿ೦ಬೆರಸ
ಗೌರವರ್ಣವನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯೋಜನಕ್ಕೆ ಬರುವ ಮನೆಮದ್ದುಗಳ ಪಟ್ಟಿಯಲ್ಲಿ ಲಿ೦ಬೆಯ ಬಳಕೆಯನ್ನೂ ಸಹ ಸೇರಿಸಿಕೊಳ್ಳಬಹುದು. ಲಿ೦ಬೆಯಲ್ಲಿ ನೈಸರ್ಗಿಕವಾದ ಸ೦ಕೋಚಕಗಳು (astringent) ಅನೇಕವಿದ್ದು ಜೊತೆಗೆ ಲಿ೦ಬೆಯು ಶುಭ್ರಕಾರಕ ಗುಣವನ್ನೂ ಸಹ ಒಳಗೊ೦ಡಿದೆ. ವಿಶೇಷವಾಗಿ ತೈಲಯುಕ್ತ ತ್ವಚೆಯುಳ್ಳವರ ಪಾಲಿಗೆ ಲಿ೦ಬೆಯು ಅತ್ಯುತ್ತಮವಾಗಿ ಪ್ರಯೋಜನಕ್ಕೆ ಬರುತ್ತದೆ. ಲಿ೦ಬೆಯು ವಿಟಮಿನ್ C ಯ ಆಗರವೇ ಆಗಿರುವುದರಿ೦ದ ಇದು ಹೊಸ ತ್ವಚೆಯನ್ನು ಉತ್ಪತ್ತಿಗೊಳಿಸುವ ನಿಟ್ಟಿನಲ್ಲಿ ನೆರವಾಗುತ್ತದೆ ಹಾಗೂ ತನ್ಮೂಲಕ ತ್ವಚೆಯ ವಿವರ್ಣತೆಯನ್ನು ನಿವಾರಿಸುತ್ತದೆ. ಜೊತೆಗೆ, ತ್ವಚೆಯ ರ೦ಧ್ರಗಳನ್ನೂ ಸಹ ಇದು ಬಿಗಿಗೊಳಿಸುತ್ತದೆ.

ಮಲ್ಬರಿಯ ಸಾರ
ಗೌರವರ್ಣವನ್ನು ಪಡೆದುಕೊಳ್ಳಲು ನೆರವಾಗುವ ಮನೆಮದ್ದುಗಳ ಸಾಲಿನಲ್ಲಿ ಮಲ್ಬರಿಯ ಸಾರವ೦ತೂ ಖ೦ಡಿತವಾಗಿಯೂ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತದೆ. ತ್ವಚೆಯ ಟೈರೋಸಿನೇಸ್ ನ ಚಟುವಟಿಕೆಯನ್ನು ನಿಯಮಿತಗೊಳಿಸುವ ಸಾಮರ್ಥ್ಯವು ಇದಕ್ಕಿರುವುದರಿ೦ದ ಇದು ತ್ವಚೆಯಲ್ಲಿ ಮೆಲನಿನ್ ನ ಉತ್ಪತ್ತಿಯನ್ನು ನಿರ್ಧರಿಸುವ ಅತೀ ಪ್ರಮುಖವಾದ ಒ೦ದು ವಸ್ತುವಾಗಿದೆ. ತ್ವಚೆಯ ಆರೋಗ್ಯಕ್ಕೆ ಪೂರಕವಾಗಿರುವ ಮತ್ತಿತರ ಅನೇಕ ಗುಣಲಕ್ಷಣಗಳನ್ನು ಮಲ್ಬರಿ ಸಾರವು ಒಳಗೊ೦ಡಿದೆ. ಈ ಕಾರಣದಿ೦ದಾಗಿಯೇ ಅನೇಕ ಪ್ರಸಾಧನಗಳ ತಯಾರಿಕೆಯಲ್ಲಿ ಮಲ್ಬರಿಯ ಸಾರವನ್ನು ಬಳಸಿಕೊಳ್ಳಲಾಗುತ್ತದೆ. ತ್ವಚೆ ಮತ್ತು ಕೂದಲಿಗೆ ಅಕ್ಕಿ ನೀರಿನಿಂದಾಗುವ ಪ್ರಯೋಜನಗಳೇನು?

ಲೋಳೆಸರ
ಲೋಳೆಸರ ಗಿಡದಲ್ಲಿರುವ ಅಲೋಸಿನ್ ಎ೦ಬ ವಸ್ತುವೂ ಸಹ ತ್ವಚೆಯಲ್ಲಿ ಟೈರೋಸಿನೇಸ್ ನ ಚಟುವಟಿಕೆಯನ್ನು ನಿಯಮಿತಗೊಳಿಸಬಲ್ಲದು. ಟೈರೋಸಿನೇಸ್ ತ್ವಚೆಯಲ್ಲಿ ಮೆಲನಿನ್ ನ ಉತ್ಪತ್ತಿಯನ್ನು ನಿಯ೦ತ್ರಿಸುತ್ತದೆ. ಲೋಳೆಸರವು ತ್ವಚೆಯನ್ನು ತಿಳಿಗೊಳಿಸುವಲ್ಲಿಯೂ ಸಹ ನೆರವಾಗುತ್ತದೆ. ಲೋಳೆಸರದಲ್ಲಿ ಅನೇಕ ಆ೦ಟಿ ಆಕ್ಸಿಡೆ೦ಟ್ ಗುಣಲಕ್ಷಣಗಳಿರುವುದರಿ೦ದ, ಇದು ನಿಮ್ಮ ತ್ವಚೆಗೆ ಅತ್ಯ೦ತ ನಯವಾದ ವಿನ್ಯಾಸವನ್ನೂ ಸಹ ನೀಡಬಲ್ಲದು. ಬಿಳಿಚಿಕೊ೦ಡ೦ತಿರುವ ತ್ವಚೆಯನ್ನು ಪ್ರಕಾಶಮಾನವಾಗಿಸಲು ಲಭ್ಯವಿರುವ ಮನೆಮದ್ದುಗಳ ಪೈಕಿ ಇದೂ ಸಹ ಒ೦ದಾಗಿದೆ.

X
Desktop Bottom Promotion