Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಸೌಂದರ್ಯ ರಹಸ್ಯ-ಕಡಿಮೆ ವೆಚ್ಚ ಅಧಿಕ ಲಾಭ!
ಮಹಿಳೆಯರು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವ ಸಲುವಾಗಿ ಬಳಸುವ ಸೌಂದರ್ಯವರ್ಧಕ ಪದಾರ್ಥಗಳು ಒಂದೇ ಎರಡೇ, ಲಿಪ್ ಗ್ಲಾಸ್ಸ್, ಬಾಡಿ ಲೋಷನ್, ಶಾಂಪೂ ಇತ್ಯಾದಿ, ಇತ್ಯಾದಿ ಪಟ್ಟಿ ಹೀಗೆಯೇ ಮುಂದೆ ಸಾಗುತ್ತದೆ. ನಿಜಕ್ಕು ಈ ರಾಸಾಯನಿಕ ಯುಕ್ತ ಕ್ರೀಮ್‍ಗಳು ನಮ್ಮ ತ್ವಚೆ ಮತ್ತು ಕೂದಲಿಗೆ ನಿಜಕ್ಕು ಮುಂದೆ ಪ್ರಯೋಜನಕ್ಕೆ ಬರುತ್ತವೆಯೇ? ಇದಕ್ಕೆಲ್ಲ ಸುಮ್ಮನೆ ಹಣವನ್ನು ಏಕೆ ವ್ಯರ್ಥ ಮಾಡುವಿರಿ, ಇದಕ್ಕೆಂದೆ ನಮಗೆ ಪ್ರಕೃತಿಯು ಹಲವಾರು ಉತ್ಪನ್ನಗಳನ್ನು ನೀಡಿದೆ.
ನಮ್ಮ ತ್ವಚೆ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡುವ ಶಕ್ತಿಯನ್ನು ಹೊಂದಿರುವ ಈ ಉತ್ಪನ್ನಗಳು ರಾಸಾಯನಿಕ ಮುಕ್ತವಾಗಿದ್ದು, ವೆಚ್ಚವು ಸಹ ಕಡಿಮೆಯಾಗಿರುತ್ತವೆ. ಇಲ್ಲಿ ನಾವು ಪ್ರಾಕೃತಿಕವಾಗಿ ದೊರೆಯುವ ಬದಲಿ ಸೌಂದರ್ಯವರ್ಧಕಗಳ ಪಟ್ಟಿಯನ್ನು ನಿಮಗಾಗಿ ನೀಡಿದ್ದೇವೆ. ಓದಿ ತಿಳಿದುಕೊಳ್ಳಿ, ಬಳಸಲು ಆರಂಭಿಸಿ.

ತೆಂಗಿನ ಎಣ್ಣೆ - ಬಾಡಿ ಲೋಷನ್ ಮತ್ತು ತಲೆ ಹೊಟ್ಟು ನಿವಾರಕ
ತೆಂಗಿನ ಎಣ್ಣೆಯು ತನ್ನಲ್ಲಿರುವ ಕೊಬ್ಬಿನ ಆಮ್ಲಗಳ ದೆಸೆಯಿಂದ ತ್ವಚೆಯ ಮೇಲೆ ಅಭೂತಪೂರ್ವ ಪರಿಣಾಮಗಳನ್ನು ಬೀರುತ್ತದೆ. ಇದರಿಂದ ತ್ವಚೆಯ ಒಣಗುವಿಕೆ ಮತ್ತು ಸುಕ್ಕು ಬರುವಿಕೆಗಳು ನಿವಾರಣೆಯಾಗುವುದರ ಜೊತೆಗೆ ತ್ವಚೆಯ ಆರೋಗ್ಯವು ಸಹ ಉತ್ತಮವಾಗಿರುತ್ತದೆ. ನಿಮ್ಮ ತ್ವಚೆ ಅಥವಾ ಕೂದಲಿನ ಮೇಲೆ ತೆಂಗಿನ ಎಣ್ಣೆಯನ್ನು ನೇರವಾಗಿ ಅಥವಾ ಇತರೆ ಎಣ್ಣೆ ಇಲ್ಲವೇ ಗಿಡ ಮೂಲಿಕೆಯ ಜೊತೆಯಲ್ಲಿ ಮಿಶ್ರಣ ಮಾಡಿ ಬಳಸಿ. ಕೂದಲನ್ನು ಸಮೃದ್ಧಿಗೊಳಿಸುವ ಹಳ್ಳಿಗಾಡಿನ ತೈಲ
ತೆಂಗಿನ ಎಣ್ಣೆಯಲ್ಲಿರುವ ಸತ್ವಾಂಶಗಳು ಕೂದಲಿನ ಬುಡ ಮತ್ತು ತ್ವಚೆಯ ಆಂತರಿಕ ಕೋಶಗಳವರೆಗು ಸಾಗುವಷ್ಟು ಪ್ರಭಾವಶಾಲಿಯಾಗಿದ್ದು, ಕೂದಲು ಮತ್ತು ತ್ವಚೆಗೆ ಅತ್ಯುತ್ತಮವಾದ ಕಂಡೀಷನಿಂಗ್ ಮತ್ತು ಮೊಯಿಶ್ಚರೈಸ್ ಅನ್ನು ಒದಗಿಸುತ್ತವೆ. ವಿಶೇಷವೆಂದರೆ ಈ ಪರಿಣಾಮವು ದೀರ್ಘಕಾಲ ತಾಜಾವಾಗಿರುತ್ತದೆ. ಇದೆಲ್ಲದರ ಜೊತೆಗೆ ತೆಂಗಿನ ಎಣ್ಣೆಯಲ್ಲಿ ವಿಟಮಿನ್ ಇ ಮುಂತಾದ ಯಥೇಚ್ಛವಾದ ಆಂಟಿಆಕ್ಸಿಡೆಂಟ್‍ಗಳು ಇರುವುದರಿಂದ ತ್ವಚೆಯಲ್ಲಿ ಸುಕ್ಕುಗಳು ಬರುವುದನ್ನು ತಡೆಯುವುದರ ಜೊತೆಗೆ ವಯಸ್ಸಾದಂತೆ ಕಾಣುವುದನ್ನು ಸಹ ತಡೆಯುತ್ತದೆ.
ಮೆಹಂದಿ - ಹೇರ್ ಡೈ
ಬಿಳಿ ಕೂದಲನ್ನು ಮರೆ ಮಾಚಬೇಕು ಎಂಬ ಆಸೆ ಯಾರಿಗಿರುವುದಿಲ್ಲ. ನಮ್ಮ ಸೌಂದರ್ಯವನ್ನು ಹಾಳು ಮಾಡುವ ಈ ಬಿಳಿ ಕೂದಲುಗಳನ್ನು ರೇಷ್ಮೆಯಂತೆ ಕಂಗೊಳಿಸುವಂತೆ ಮಾಡಿ, ಅದರ ಮೂಲಕ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳಬೇಕೆಂದು ಬಯಸುವವರಿಗೆ ಮೆಹಂದಿ ಅತ್ಯುತ್ತಮ ಪ್ರಯೋಜನಕಾರಿ. ಮೆಹಂದಿ, ಹೆನ್ನಾ ಅಥವಾ ಗೋರಂಟಿ ಎಂದು ಸಹ ಕರೆಯಲ್ಪಡುವ ಇದು ನಿಮ್ಮ ಕೂದಲುಗಳಿಗಾಗಿ ಪ್ರಕೃತಿ ನೀಡಿರುವ ವರ ಎಂದು ಭಾವಿಸಿ.
ಮಾರುಕಟ್ಟೆಯಲ್ಲಿ ದೊರೆಯುವ ಸಂಕೀರ್ಣವಾದ ಹೇರ್ ಡೈಗಳಲ್ಲಿ ದ್ವಿತೀಯ ದರ್ಜೆ ಅಮೈನ್‍ಗಳು ಅಥವಾ ಟಾರ್ ಉತ್ಪನ್ನಗಳೆಂದು ಕರೆಯಲ್ಪಡುವ ಹಾನಿಕಾರಕ ಕ್ಯಾನ್ಸರ್‌ಕಾರಕಗಳು ಇರುತ್ತವೆ. ಆದರೆ ಮೆಹಂದಿಯಲ್ಲಿ ಅಂತಹ ಯಾವುದೇ ತರಹದ ರಾಸಾಯನಿಕಗಳು ಇರುವುದಿಲ್ಲ. ಇದನ್ನು ಶತ ಶತಮಾನಗಳಿಂದ ಕೂದಲಿನ ಪ್ರಾಕೃತಿಕ ಬಣ್ಣವಾಗಿ ಸಹ ಬಳಸಲಾಗುತ್ತಿದೆ.
ಮೆಹಂದಿಯನ್ನು ಎಳ್ಳೆಣ್ಣೆ ಅಥವಾ ಕರಿಬೇವು ಸೊಪ್ಪಿನ ಜೊತೆಗಾಗಲಿ ಅಥವಾ ಬೀಟ್ ರೂಟ್ ರಸದ ಜೊತೆಗಾಗಲಿ, ಇಲ್ಲವೆ ಮೊಸರು, ಲಿಂಬೆ ರಸ ಮತ್ತು ಟೀಯಂತಹ ನಿಮಗೆ ಸಹಿಹೊಂದುವ ಯಾವುದಾದರು ಒಂದು ಪದಾರ್ಥದೊಂದಿಗೆ ಮಿಶ್ರಣ ಮಾಡಿ ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಕೂದಲಿಗೆ ಬಣ್ಣ ಬರುವುದರ ಜೊತೆಗೆ, ದೇಹಕ್ಕು ಸಹ ತಂಪು ಒದಗುತ್ತದೆ. ವಿಸ್ಕಿಯ ಮ್ಯಾಜಿಕ್ ಚಿಕಿತ್ಸೆ- ತ್ವಚೆಯ ಮೊಡವೆ ಮಂಗಮಾಯ!
ಅರಿಶಿನ ಮತ್ತು ಹಣ್ಣುಗಳು - ಆಹ್ಲಾದಕರವಾದ ಫೇಸ್ ಪ್ಯಾಕ್
ಬ್ಯೂಟಿ ಪಾರ್ಲರಿಗೆ ಹೋಗಿ ಫೇಸ್ ಪ್ಯಾಕ್ ಮಾಡಿಸಿಕೊಳ್ಳುವಷ್ಟು ಸಮಯ ನಿಮಗಿಲ್ಲದಿದ್ದಲ್ಲಿ, ಮನೆಯಲ್ಲಿಯೇ ನಿಮ್ಮ ಬಿಡುವಿನ ಅವಧಿಯಲ್ಲಿ ಫೇಸ್ ಪ್ಯಾಕ್ ಮಾಡಿಕೊಳ್ಳುವ ಸುಲಭವಾದ ಮಾರ್ಗಗಳು ಇವೆ. ಅದಕ್ಕೂ ಮೇಲಾಗಿ ಮಾರುಕಟ್ಟೆಯಲ್ಲಿ ದೊರೆಯುವ ಫೇಸ್ ಪ್ಯಾಕ್‍ಗಳಲ್ಲಿ ರಾಸಾಯನಿಕಗಳು ಇರುವ ಕಾರಣ, ಮುಖದ ತ್ವಚೆಯ ಮೇಲೆ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗಲು ಸಾಧ್ಯವಿಲ್ಲ.
ಇದಕ್ಕಾಗಿ ಯಾವುದೇ ದುಷ್ಪರಿಣಾಮಗಳಿಲ್ಲದ ನಿಮ್ಮ ಅಡುಗೆ ಮನೆಯಲ್ಲಿಯೇ ದೊರೆಯುವ ವಸ್ತುಗಳನ್ನು ಬಳಸಿ ಫೇಸ್ ಪ್ಯಾಕ್ ಮಾಡಿಕೊಳ್ಳುವುದು ಉತ್ತಮವಾದ ಆಲೋಚನೆಯಾಗಿರುತ್ತದೆ. ನಿಮ್ಮ ತ್ವಚೆಗೆ ಕಾಂತಿ ಮತ್ತು ಆಹ್ಲಾದಕತೆಯನ್ನು ತರಲು ಹೀಗೆ ಮಾಡಿ. ಸ್ವಲ್ಪ ಅರಿಶಿಣವನ್ನು ತೆಗೆದುಕೊಂಡು, ಅದಕ್ಕೆ ಸ್ವಲ್ಪ ಮೊಸರನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಂತರ ಮುಖಕ್ಕೆ ಲೇಪಿಸಿ. ಅಥವಾ ಪರಂಗಿ ಹಣ್ಣನ್ನು ಸ್ವಲ್ಪ ರುಬ್ಬಿ, ಪೇಸ್ಟ್ ತರ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಲೇಪಿಸಿ, ಇದರಿಂದಾಗಿ ನಿಮ್ಮ ಮುಖದಲ್ಲಿರುವ ಕಪ್ಪು ಕಲೆಗಳು ಮಾಯವಾಗಿ ತ್ವಚೆಯು ಕಾಂತಿಯಿಂದ ಮಿನುಗುತ್ತದೆ.
ನೆನೆಸಿದ ಬಾದಾಮಿ
ರಾತ್ರಿಯಿಡೀ ಬಾದಾಮಿಗಳನ್ನು ತಣ್ಣನೆಯ ನೀರಿನಲ್ಲಿ ಮುಳುಗಿಸಿಟ್ಟು ಬೆಳಿಗ್ಗೆ ನುಣ್ಣಗೆ ಅರೆದು ಲೇಪನ ತಯಾರಿಸಿಕೊಳ್ಳಿ. (ಕಲ್ಲಿನ ಮೇಲೆ ತೇದಿ ತಯಾರಿಸಿದರೆ ಉತ್ತಮ ಪರಿಣಾಮ ದೊರಕುತ್ತದೆ). ಈ ಲೇಪನವನ್ನು ದಿನಕ್ಕೆರಡು ಬಾರಿ ತ್ವಚೆಗೆ ಹಚ್ಚುವುದರಿಂದ ನೈಸರ್ಗಿಕ ವರ್ಣವನ್ನು ಶೀಘ್ರವಾಗಿ ಪಡೆಯಬಹುದು.



Click it and Unblock the Notifications



