Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ಸೌಂದರ್ಯ ಟಿಪ್ಸ್ -ಇದು ಸೋಮಾರಿ ಹುಡುಗಿಯರಿಗೆ ಮಾತ್ರ!
ಯಾರಿಗೆ ತಾನೇ ತಮ್ಮ ತ್ವಚ್ಛೆಯ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಆಸೆಯಿರುವುದಿಲ್ಲ? ವಿಶೇಷವಾಗಿ ಹುಡುಗಿಯರು ತಮ್ಮ ತ್ವಚೆಯನ್ನು ಕಾಪಾಡಿಕೊಳ್ಳಲು ಹಾಗೂ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಅನೇಕ ರೀತಿಯಲ್ಲಿ ಪ್ರಯತ್ನಿಸುತ್ತಿರುತ್ತಾರೆ. ಆದರೆ ಕೆಲವು ಗುಂಪಿನ ಹುಡುಗಿಯರು ಮಾತ್ರ ಸೋಮಾರಿತನದಿಂದ ಕೂಡಿದ್ದು, ತಮ್ಮ ತ್ವಚೆಯ ಸೌಂದರ್ಯವನ್ನು ಕಾಪಾಡುವ ಗೋಜಿಗೆ ಹೋಗುವುದಿಲ್ಲ. ಆದರೂ ಸಹ ಈ ಸೋಮಾರಿ ಹುಡುಗಿಯರು ತಮಗೆ ಕಾಂತಿಯುತ ತ್ವಚೆ ಹಾಗೂ ಉತ್ತಮ ಸೌಂದರ್ಯದ ನಿರೀಕ್ಷೆಯಲ್ಲಿರುತ್ತಾರೆ. ನೀವೂ ಸಹ ಇದೇ ವರ್ಗದವರೇ?
ಹೌದು ಎಂದಾದಲ್ಲಿ ನೀವು ಸರಿಯಾದ ತಾಣದಲ್ಲೇ ಬಂದಿದ್ದೀರಿ. ಇಲ್ಲಿ ನಿಮ್ಮಂತಹ ಸೋಮಾರಿ ಹುಡುಗಿಯರಿಗೆ ತಮ್ಮ ಕಾಂತಿಯುತದ ತ್ವಚೆಯನ್ನು ಹೆಚ್ಚಿಸುವ ಸರಳ ವಿಧಾನಗಳನ್ನು ನಾವು ನಿಮಗಾಗಿ ನೀಡುತ್ತಿದ್ದೇವೆ. ತ್ವಚೆಯನ್ನು ಕಾಂತಿಯುತಗೊಳಿಸಲು ಹೆಚ್ಚಿನ ಶ್ರಮದ ಅಗತ್ಯವಿಲ್ಲ. ನಿಮ್ಮ ತ್ವಚೆಯ ಬಣ್ಣವು ಹಾಗೂ ಅದರ ವಿನ್ಯಾಸ ವ್ಯವಸ್ಥೆಯು ಉತ್ತಮವಾಗಿಸಲು ಅಗತ್ಯವಾದ ಕೆಲವು ಸರಳ ಆರೈಕೆಯ ಪದ್ಧತಿಯನ್ನು ಅನುಸರಿಸಿದರೆ ಸಾಕು.
ಹೌದು ನಿಮಗೆ ಒಣ ಅಥವಾ ಜಿಡ್ಡಿನ ತ್ವಚೆಯಿದ್ದರೆ ಸ್ವಲ್ಪ ಹೆಚ್ಚು ಆರೈಕೆಯ ಅವಶ್ಯಕತೆಯಿದೆ. ಇಲ್ಲವಾದರೆ ನಾವು ಹೇಳುವ ವಿಧಾನಗಳು ಅತ್ಯಂತ ಸರಳವಾಗಿದ್ದು ಸೋಮಾರಿ ಹುಡುಗಿಯರಿಗೆ ನಿಜಕ್ಕೂ ವರದಾನವಾಗಿದೆ. ಹಾಗಿದ್ದಲ್ಲಿ ತಡವೇಕೆ, ವಿವಿಧ ವಿಧಾನಗಳ ಪದ್ಧತಿಯನ್ನು ನಿಮಗಾಗಿ ನೀಡಿದ್ದು, ಮುಂದೆ ಓದಿ....

ನೀರನ್ನು ಹೆಚ್ಚೆಚ್ಚು ಕುಡಿಯಿರಿ
ನೀರು ದೇಹಕ್ಕೆ ಹಾಗೂ ತ್ವಚೆಗೆ ಅತ್ಯಂತ ಉಪಯುಕ್ತ. ನಿಮ್ಮ ಕಾಂತಿಯುತ ತ್ವಚೆಯನ್ನು ಕಾಪಾಡಲು ಹಾಗೂ ತ್ವಚೆಯ ವಿನ್ಯಾಸ ವ್ಯವಸ್ಥೆಯನ್ನು ಉತ್ತಮಗೊಳಿಸಲು ದಿನಕ್ಕೆ ಕನಿಷ್ಠ 8 ಗ್ಲಾಸ್ ನೀರನ್ನು ಕುಡಿಯಲು ಮರೆಯದಿರಿ. ಇದು ನಿಮ್ಮ ತ್ವಚೆಗೆ ಒಳಗಿನಿಂದ ತೇವಾಂಶ ನೀಡಿ ನಿಮ್ಮ ತ್ವಚೆಯನ್ನು ಮೃದುಗೊಳಿಸಿ ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.

ನಿಮ್ಮ ಮುಖವನ್ನು ಆಗಾಗ ಸ್ವಚ್ಛಗೊಳಿಸಿ
ನಮ್ಮ ಸುತ್ತಮುತ್ತಲಿನ ಗಾಳಿಯು ಹೆಚ್ಚು ರಾಸಾಯನಿಕಯುಕ್ತ ಹಾಗೂ ವಿಷಕಾರಿಯಾಗಿರುವುದರಲ್ಲಿ ಸಂದೇಹವೇ ಇಲ್ಲ. ನೀವು ಮನೆಯ ಒಳಗಿರಲಿ ಅಥವಾ ಹೊರಗಿರಲಿ, ಗಾಳಿಯಲ್ಲಿರುವ ದೂಳಿನ ಅಂಶವು ಮುಖದ ತ್ವಚೆಯಲ್ಲಿರುವ ಚಿಕ್ಕ ಚಿಕ್ಕ ರಂಧ್ರಗಳನ್ನು ಮುಚ್ಚುವುದರಿಂದ ಹೆಚ್ಚು ನೋವುಂಟು ಮಾಡುತ್ತದೆ. ಇದರಿಂದ ಮುಖದಲ್ಲಿನ ಕಲೆಗಳು ಹೆಚ್ಚಾಗಿ ಹಾಗೆಯೇ ಉಳಿಯುವಂತೆ ಮಾಡುತ್ತದೆ. ಮುಖವನ್ನು ದಿನಕ್ಕೆ ಕನಿಷ್ಠ 3 ಬಾರಿ ತೊಳೆಯುವಂತೆ ನೋಡಿಕೊಳ್ಳಿ. ನಂತರ ನೀರನ್ನು ಮುಖಕ್ಕೆ ಎರಚಿಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ತ್ವಚೆಯನ್ನು ಮೃದುಗೊಳಿಸಲು ನೆರವಾಗುತ್ತದೆ.

ಮಲಗುವ ಮುನ್ನ ಮೇಕಪ್ ತೆಗೆಯಿರಿ
ಹೆಚ್ಚಿರಲಿ ಅಥವಾ ಕಡಿಮೆಯಿರಲಿ ಮೇಕಪ್ ಎಂಬುದು ರಾಸಾಯನಿಕ ಪ್ರಕ್ರಿಯೆ. ಮೇಕಪ್ ನೊಂದಿಗೆ ಮಲಗಿದರೆ ಅದು ತ್ವಚೆಯನ್ನು ಹಿಂಸಿಸುತ್ತದೆ. ಇದನ್ನು ನೀವು ನಂಬಲೇಬೇಕು. ಹೌದು, ಕೆಲವು ಸೋಮಾರಿ ಹುಡುಗಿಯರು ತಾವು ಮಲಗುವ ಮುನ್ನ ಮೇಕಪ್ ತೆಗೆಯಲು ಹಿಂಜರಿಯುತ್ತಾರೆ. ಆದರೆ ಇದು ತಮ್ಮ ತ್ವಚೆಗೆ ಸಹಕಾರಿಯೆಂದು ಅವರಿಗೆ ಅರಿವೇ ಇರುವುದಿಲ್ಲ.

ಸಾಕಷ್ಟು ನಿದ್ರಿಸುವುದನ್ನು ಅಭ್ಯಾಸ ಮಾಡಿ
ಸೋಮಾರಿ ಹುಡುಗಿಯರಿಗೆ ತಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಇದೊಂದು ಸರಳ ವಿಧಾನ. ನೀವು ಹೆಚ್ಚು ಮಲಗಿದಷ್ಟು ನಿಮಗೆ ಹೆಚ್ಚು ಉಪಯೋಗಕರ. ಇದರಿಂದ ನಿಮ್ಮ ದೇಹದ ಸಂಚಲನ ವ್ಯವಸ್ಥೆಯು ಸುಧಾರಿಸುತ್ತದೆ. ನೀವು ಕಣ್ಮುಚ್ಚಿ ಮಲಗಿದಾಗ ನಿಮ್ಮ ದೇಹವನ್ನು ಒಳಗಿನಿಂದ ಉಲ್ಲಸಿತಗೊಳಿಸಿ ತ್ವಚೆಯ ಅಂದವನ್ನು ಹೆಚ್ಚಿಸುವುದಲ್ಲದೆ ಮುಂದಿನ ದಿನದ ಸವಾಲುಗಳನ್ನು ಸುಲಭವಾಗಿ ಸ್ವೀಕರಿಸಲು ನೆರವಾಗುತ್ತದೆ.



Click it and Unblock the Notifications