Latest Updates
-
ಬೆಂಗಳೂರಿನಲ್ಲಿ ಇಂದೇ ವಿದ್ಯುತ್ ಕಡಿತ: ನಿಮ್ಮ ಎಲೆಕ್ಟ್ರಾನಿಕ್ ಉಪಕರಣಗಳನ್ನು ಸುರಕ್ಷಿತವಾಗಿಡುವುದು ಹೇಗೆ? -
ಕರ್ಕ ಸಂಕ್ರಾಂತಿ ವಿಶೇಷ: ಮಳೆಗಾಲದಲ್ಲಿ ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಜಗನ್ನಾಥ ರಥಯಾತ್ರೆ 2026: ಸಂಚಾರ ಮಾರ್ಗ ಬದಲಾವಣೆ, ಭಕ್ತರಿಗಾಗಿ ಇಲ್ಲಿದೆ ಮಹತ್ವದ ಮಾಹಿತಿ! -
ನೀಟ್ ಪರೀಕ್ಷೆಯ ಆತಂಕವೇ? ಈ 6 ನಿಮಿಷದ ವ್ಯಾಯಾಮ ನಿಮ್ಮ ಒತ್ತಡವನ್ನು ಮರೆಸುತ್ತದೆ! -
ಮಧ್ಯಪ್ರದೇಶ UCC: ಲಿವ್-ಇನ್ ಜೋಡಿಗಳಿಗೆ ಕಡ್ಡಾಯ ನೋಂದಣಿ, ನಿಯಮ ಮೀರಿದರೆ ಕಾದಿದೆ ಸಂಕಷ್ಟ! -
ಹಾಲಿನಲ್ಲಿ ವಿಷಕಾರಿ ಕಲಬೆರಕೆ ಪತ್ತೆ: ನಿಮ್ಮ ಮನೆಯ ಹಾಲಿನ ಸುರಕ್ಷತೆ ಪರೀಕ್ಷಿಸುವುದು ಹೇಗೆ? -
ಬೆಂಗಳೂರಿನಲ್ಲಿ 12 ಗಂಟೆಗಳ ಕಾಲ ನೀರಿನ ಕಡಿತ: ನಾಳೆ ನೀರು ಉಳಿಸಲು ಈ ಟಿಪ್ಸ್ ಫಾಲೋ ಮಾಡಿ! -
ಮಳೆಗಾಲದಲ್ಲಿ ಜಿಮ್ಗೆ ಹೋಗಲು ಸಾಧ್ಯವಿಲ್ಲವೇ? ಮನೆಯಲ್ಲೇ ಫಿಟ್ ಆಗಿರಲು 8 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಮದುವೆಗೆ ಮುನ್ನ ಎಚ್ಚರ: ಸುಪ್ರೀಂ ಕೋರ್ಟ್ ತೀರ್ಪಿನ ಪ್ರಕಾರ ವರದಕ್ಷಿಣೆ ಮತ್ತು ಉಡುಗೊರೆಗಳ ನಡುವಿನ ವ್ಯತ್ಯಾಸವೇನು? -
ಬೆಂಗಳೂರಿನಲ್ಲಿ ಮಳೆ ಬಿಡುವು: ನಿಮ್ಮ ಬಾಲ್ಕನಿ ಗಾರ್ಡನ್ ಗಿಡಗಳನ್ನು ರಕ್ಷಿಸಲು ಈ ಸರಳ ಟಿಪ್ಸ್ ಪಾಲಿಸಿ
ಕೋಮಲ ತ್ವಚೆಗಾಗಿ ಮನೆಮದ್ದುಗಳನ್ನು ಆಶ್ರಯಿಸಿ..!
ತಾರುಣ್ಯಕ್ಕೆ ಕಾಲಿಡುತ್ತಿದ್ದಂತೆಯೇ ನಮ್ಮ ತ್ವಚೆಯ ಬಗ್ಗೆ ಸ್ವಲ್ಪ ಹೆಚ್ಚಾಗೇ ಕಾಳಜಿವಹಿಸಬೇಕಾಗುತ್ತದೆ. ಕೆಲವೊಮ್ಮೆ ನಮಗೆ ಸಮಯದ ಅಭಾವ ಇರುತ್ತದೆ. ಇನ್ನೂ ಕೆಲವೊಮ್ಮೆ ತಾಳ್ಮೆಯ ಅಭಾವ ಇರುತ್ತದೆ. ಹೇಗೆ ಕಾಳಜಿವಹಿಸಬೇಕು ಎನ್ನುವುದರ ಬಗ್ಗೆ ಸರಿಯಾದ ಮಾಹಿತಿ ಇರುವುದಿಲ್ಲ.
ಇವೆಲ್ಲ ಕಾರಣಗಳಿಂದಾಗಿ ನಾವು ಬ್ಯೂಟಿ ಪಾರ್ಲರ್‌ಗಳ ಮೊರೆಹೋಗುವುದು ಸಾಮಾನ್ಯ. ಆದರೆ ಅಲ್ಲಿ ಬಳಸುವ ಸೌಂದರ್ಯವರ್ಧಕಗಳು ಬಗ್ಗೆ ನಮಗೆ ಅಚ್ಚರಿ ಉಂಟು ಮಾಡಬಹುದು! ಹೌದು ಬ್ಯೂಟಿಷಿಯನ್‌ಗಳು ತಕ್ಷಣದ ಹೊಳಪಿಗಾಗಿ ರಾಸಾಯನಿಕಗಳ ಬಳಕೆ ಮಾಡುತ್ತಾರೆ. ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳು ನೈಜ ಸೌಂದರ್ಯವನ್ನು ಹಾಳು ಮಾಡುವುದಲ್ಲದೇ ತ್ವಚೆಯ ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತವೆ. ತ್ವಚೆಯ ಸೌಂದರ್ಯ ಹೆಚ್ಚಿಸಲು ಬರೀ 15 ದಿನಗಳು ಸಾಕು!
ನಿಮ್ಮ ಕೋಮಲ ತ್ವಚೆಯನ್ನು ರಾಸಾಯನಿಕಗಳಿಂದ ಘಾಸಿಗೊಳಿಸದೇ, ನೈಸರ್ಗಿಕ ಸೌಂದರ್ಯವರ್ಧಕ ಮೂಲಕ ಅದರಲ್ಲೂ ಮನೆಯಲ್ಲೇ ದೊರೆಯುವ ಪದಾರ್ಥಗಳನ್ನು ಬಳಸಿ ಶಾಶ್ವತ ಗೌರವರ್ಣ ಪಡೆಯುವುದರ ಜೊತೆಗೆ, ತ್ವಚೆಯು ಮೃದುವಾಗಿ ಆಕರ್ಷಕವಾಗಿ ಕಾಣುವಂತೆ ಕೂಡ ಮಾಡಿಕೊಳ್ಳಬಹುದು.
ಇದು ಮನೆಯ ಪದಾರ್ಥಗಳೇ ಆಗಿರುವುದರಿಂದ ಅವುಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇರುತ್ತದೆ ಹಾಗೂ ನಾವು ಮನೆಯಲ್ಲೇ ತಯಾರಿಸಿ ಬಳಸುವುದರಿಂದ ಖರ್ಚೂ ಕೂಡ ಕಡಿಮೆ ಇರುತ್ತದೆ. ಜೊತೆಗೆ ಎಣ್ಣೆ ಚರ್ಮ, ಒಣ ಚರ್ಮ... ಎಲ್ಲಾ ಬಗೆಯ ತ್ವಚೆಗಳಿಗೂ ಒಗ್ಗುತ್ತವೆ. ಯಾವುದೇ ದುಷ್ಪರಿಣಾಮಗಳನ್ನೂ ಉಂಟುಮಾಡುವುದಿಲ್ಲ. ಸುಂದರ, ಕಾಂತಿಯುತ ತ್ವಚೆಗಾಗಿ ಇಲ್ಲಿವೆ ಕೆಲವು ಸರಳ, ತ್ವರಿತ ಮಾರ್ಗೋಪಾಯಗಳು...

ಮೊಟ್ಟೆಯ ಬಿಳಿಭಾಗ
ನೀವು ಆಮ್ಲೆಟ್ ಮಾಡಲು ಮೊಟ್ಟೆಯನ್ನು ಒಡೆಯುತ್ತೀರಿ ಅಲ್ಲವೇ? ಅಂತೆಯೇ ಮೋಟೆಯ ಹಳದಿ ಭಾಗವನ್ನೆಲ್ಲಾ ಹಾಕಿದ ಮೇಲೆ ಅದರ ಒಳ ಕವಚಕ್ಕೆ ಅಂಟಿರುವ ಬಿಳಿಭಾಗವನ್ನು ನಿಮ್ಮ ಕಣ್ಣುಗಳ ಕೆಳಗೆ ಲೇಪಿಸಿಕೊಳ್ಳಿ. ಇದು ನಿಮ್ಮ ಕಣ್ಣ ಕೆಳಗಿನ ಸುಕ್ಕುಗಳನ್ನು ನಿವಾರಿಸುತ್ತದೆ. ಅಥವಾ ನೀವು ಮೊಟ್ಟೆಯ ಬಿಳಿಭಾಗವನ್ನು ಇಡೀ ಮುಖಕ್ಕೂ ಲೇಪಿಸಿಕೊಳ್ಳ ಬಹುದು. 15 ನಿಮಿಷಗಳ ನಂತರ ಮುಖ ತೊಳೆದರೆ ಮೃದುವಾದ, ನೆರಿಗೆಗಳಿಲ್ಲದ, ಹೊಳೆಯುವ ತ್ವಚೆ ಪಡೆಯಬಹುದು.

ವಿಟಮಿನ್ ಇ ಕ್ಯಾಪ್ಸೂಲ್ ಮತ್ತು ರೋಸ್ ವಾಟರ್
ಯಾವುದೇ ಮೆಡಿಕಲ್ ಅಂಗಡಿಯಲ್ಲಿ ವಿಟಮಿನ್ ಇ ಗುಳಿಗೆಗಳು ದೊರೆಯುತ್ತವೆ. 2 ವಿಟಮಿನ್ ಇ ಗುಳಿಗೆಗಳನ್ನು ಒಡೆದು ರಸತೆಗೆದು ಅದಕ್ಕೆ ಒಂದು ಚಮಚ ರೋಸ್ ವಾಟರ್ ಬೆರೆಸಿ ಚನ್ನಾಗಿ ಕಲಿಸಿಕೊಂಡು, ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಲೇಪಿಸಿ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ತದನಂತರ 10 - 15 ನಿಮಿಷಗಳ ನಂತರ ಮುಖ ತೊಳೆಯಿರಿ.

ಲೋಳೆಸರದ ರಸ ಮತ್ತು ಆಲಿವ್ ಎಣ್ಣೆ
ಲೋಳೆಸರದ ರಸ ಮತ್ತು ಆಲಿವ್ ಎಣ್ಣೆ ಎರಡನ್ನೂ ಒಂದೊಂದು ಚಮಚ ಹಾಕಿ ಕಲಸಿ ಮುಖಕ್ಕೆ ಲೇಪಿಸಿ. ರಾತ್ರಿ ಮಲಗುವಾಗ ಹಚ್ಚಿ ಇಡೀ ರಾತ್ರಿ ಬಿಟ್ಟು ಬೆಳಿಗ್ಗೆ ಮುಖ ತೊಳೆದರೆ ನುಣುಪಾದ ನೈಜ ತ್ವಚೆ ನಿಮ್ಮದಾಗುವುದು.

ಮೊಸರು ಹಾಗು ಕಡಲೆ ಹಿಟ್ಟು
ಇವೆರಡೂ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುವಂತಹೆ ಪದಾರ್ಥಗಳೇ. ಎರಡನ್ನೂ ಒಂದೊಂದು ಚಮಚದಷ್ಟು ಹಾಕಿ ಕಲಸಿ ಮುಖ ಹಾಗೂ ಕುತ್ತಿಗೆಗೆ ಹಚ್ಚಿ 15 ನಿಮಿಷಗಳ ನಂತರ ತಣ್ಣೀರಿನಲ್ಲಿ ಮುಖ ತೊಳೆಯಿರಿ. ತ್ವರಿತ ಹಾಗೂ ಆರೋಗ್ಯಕರ ಗೌರವರ್ಣಕ್ಕೆ ಇದಕ್ಕಿಂತ ಒಳ್ಳೆಯ ಉಪಾಯ ಇರಲಾರದು.

ಸೌತೆಕಾಯಿ ಮತ್ತು ಓಟ್ ಮೀಲ್
ಮುಖವನ್ನು ರೋಸ್ ವಾಟರ್‌ನಿಂದ ಒದ್ದೆ ಮಾಡಿ ಓಟ್ ಮೀಲ್‌ನಿಂದ 10 ನಿಮಿಷ ಉಜ್ಜಿರಿ. ನಂತರ ಮುಖ ತೊಳೆದು ಸೌತೆಕಾಯಿ ಚೂರುಗಳಿಂದ ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. ಅನಂತರ ಮುಖಕ್ಕೆ ಸ್ವಲ್ಪ ಮೊಯಿಶ್ಚರೈಜರ್ ಹಚ್ಚಿ. ಈ ಸರಳ ಮಾರ್ಗೋಪಾಯಗಳನ್ನು ಬಳಸಿ ಕಾಂತಿಯುತ ತ್ವಚೆಯನ್ನು ನಿಮ್ಮದಾಗಿಸಿಕೊಳ್ಳಿ.



Click it and Unblock the Notifications