Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ಗೌರವರ್ಣ ತ್ವಚೆ - ಅದೂ ಹೆಚ್ಚಿನ ಖರ್ಚು, ಶ್ರಮವಿಲ್ಲದೇ!
ನಮ್ಮ ಶರೀರದ ಅತಿ ವಿಸ್ತಾರವಾದ ಮತ್ತು ಹವೆಗೆ ನೇರವಾಗಿ ಒಡ್ಡುವ ಅಂಗವೆಂದರೆ ಚರ್ಮ. ವಯಸ್ಸಿನೊಂದಿಗೇ ಚರ್ಮ ಹಲವು ಬದಲಾವಣೆಗಳನ್ನು ಪಡೆಯುತ್ತದೆ. ಬಿಸಿಲು, ಒಣಹವೆ, ಧೂಳು ಮೊದಲಾದ ಅಂಶಗಳಿಗೆ ಸತತವಾಗಿ ಒಡ್ಡುವ ಚರ್ಮಕ್ಕೆ ಹೆಚ್ಚಿನ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದೆ. ಇಂದಿನ ದಿನಗಳಲ್ಲಿ ಪ್ರದೂಷಣೆಯೂ ವಿಪರೀತವಾಗಿದ್ದು ಚರ್ಮದ ಆರೈಕೆಯಲ್ಲಿ ಹೆಚ್ಚಿನ ಕಾಳಜಿಯನ್ನೂ ವಹಿಸಬೇಕಾಗಿದೆ.
ತಪ್ಪಾದ ಚರ್ಮದ ಆರೈಕೆ ಅಥವಾ ಅಲರ್ಜಿಯುಂಟುಮಾಡಬಹುದಾದ ಕ್ರೀಂ ಅಥವಾ ಪ್ರಸಾಧನವನ್ನು ಬಳಸಿದರೆ ಅದರ ಪರಿಣಾಮ ವಿಪರೀತವೂ ಆಗಬಹುದು. ಇಂದು ಚರ್ಮದ ಆರೈಕೆಗಾಗಿ ನೂರಾರು ಪ್ರಸಾದನಗಳೂ ನುರಿತ ಚರ್ಮತಜ್ಞರೂ ಲಭ್ಯರಿದ್ದಾರೆ. ಆದರೆ ಇವುಗಳ ಸಹಾಯ ಪಡೆಯುವುದು ದುಬಾರಿಯಾಗಿ ಪರಿಣಮಿಸಬಹುದು. ಬದಲಿಗೆ ನಿಮಗೆ ಸೂಕ್ತವಾದ
ಪ್ರಸಾಧನದ ಆಯ್ಕೆ ಮತ್ತು ಇದನ್ನು ಉಪಯೋಗಿಸುವ ಸರಿಯಾದ ಕ್ರಮವನ್ನು ಅನುಸರಿಸುವ ಮೂಲಕ ಹೆಚ್ಚಿನ ಶ್ರಮ ಮತ್ತು ಖರ್ಚಿಲ್ಲದೇ ಉತ್ತಮ ಚರ್ಮದ ಆರೈಕೆ ಪಡೆಯಬಹುದು. ಇನ್ನು ಬ್ಯೂಟಿ ಪಾರ್ಲರ್‌ಗೆ ಹಣ ಸುರಿಯುವುದನ್ನು ನಿಲ್ಲಿಸಿ!
ಚರ್ಮದ ಸೂಕ್ತ ಆರೈಕೆಯಿಲ್ಲದಿದ್ದರೆ ಚರ್ಮದಲ್ಲಿ ನೆರಿಗೆಗಳು ಬೇಗನೇ ಮೂಡುವ ಮೂಲಕ ವೃದ್ಧಾಪ್ಯವನ್ನು ವಯಸ್ಸಿಗೂ ಮುನ್ನವೇ ಪರಿಚಯಿಸುತ್ತದೆ. ಆದ್ದರಿಂದ ಇದರಿಂದ ಪಾರಾಗಲು ಹದಿಹರೆಯದಿಂದಲೇ ಆರೈಕೆ ಮುಖ್ಯ. ಏಕೆಂದರೆ ಹದಿಹರೆಯ ದಾಟಿದ ಬಳಿಕ ಚರ್ಮದ ಸೆಳೆತ ಕಡಿಮೆಯಾಗುತ್ತಾ ಹೋಗುತ್ತದೆ. ಸೂಕ್ತ ಆರೈಕೆಯಿಂದ ಈ ವಿಧಿಯನ್ನು ನಿಧಾನಗೊಳಿಸುವ ಮೂಲಕ ವೃದ್ಧಾಪ್ಯವನ್ನು ಮುಂದೂಡಲು ಸಾಧ್ಯ. ಇಂತಹ ಸುಲಭ ವಿಧಾನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಸೌಂದರ್ಯದ ವಿಷಯದಲ್ಲಿ ಮಾತ್ರ ತಪ್ಪು ಮಾಡಿಕೊಳ್ಳಬೇಡಿ..!

ಎಂದಿಗೂ ರಾತ್ರಿ ಕ್ರೀಂ ಹಚ್ಚದೇ ಮಲಗಬೇಡಿ
ಈಗ ರಾತ್ರಿ ಚರ್ಮಕ್ಕೆ ಹಚ್ಚುವ ಹಲವು ಕ್ರೀಂಗಳು ಲಭ್ಯವಿವೆ. ಇವುಗಳಲ್ಲಿ ಚರ್ಮದ ಆರೈಕೆಗೆ ಪೂರಕವಾದ ಹಲವು ಪೋಷಕಾಂಶಗಳಿದ್ದು ದಿನದ ಅವಧಿಯಲ್ಲಿ ಚರ್ಮ ಕಳೆದುಕೊಂಡಿದ್ದ ತಾಜಾತನವನ್ನು ಮರುಪಡೆಯಲು ಮತ್ತು ಹೊಸ ಜೀವಕೋಶಗಳ ನಿರ್ಮಾಣದಲ್ಲಿ ಸಹಕರಿಸುತ್ತದೆ. ಅಲ್ಲದೇ ರಾತ್ರಿಯ ಹೊತ್ತು ಚರ್ಮದಿಂದ ನಷ್ಟವಾಗುವ ಆರ್ದ್ರತೆಯನ್ನೂ ಉಳಿಸಿ ಚರ್ಮದ ತಾಜಾತನವನ್ನು ಉಳಿಸುತ್ತದೆ.

ಸದಾ ಸೂಕ್ತ ಪಿಎಚ್ ಇರುವ ಚರ್ಮದ ಟೋನರ್ ಬಳಸಿ
ವಿವಿಧ ವಿಧಗಳ ಚರ್ಮದ ಸ್ರಾವವನ್ನನುಸರಿಸಿ ಚರ್ಮದಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಗತಿ ಹೆಚ್ಚು ಅಥವಾ ಕಡಿಮೆಯಾಗುತ್ತದೆ. ಎಣ್ಣೆ ಚರ್ಮದವರಿಗೆ ಮತ್ತು ಹೆಚ್ಚು ಬೆವರುವವರ ಚರ್ಮದಲ್ಲಿ ಬ್ಯಾಕ್ಟೀರಿಯಾ ಬೆಳೆಯುವ ಸಂಭವವೂ ಹೆಚ್ಚು. ಇದನ್ನು ತಡೆಯಲು ಸ್ಕಿನ್ ಟೋನರ್ ಎಂಬ ಪ್ರಸಾಧನವನ್ನು ಬಳಸುವುದು ಅಗತ್ಯ. ಆದರೆ ನಿಮ್ಮ ಚರ್ಮದ ವಿಧವನ್ನು ಅನುಸರಿಸಿ ಇವನ್ನು ಆರಿಸುವುದು ಅಗತ್ಯ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸದಾ ಸೂಕ್ತ ಪಿಎಚ್ ಇರುವ ಚರ್ಮದ ಟೋನರ್ ಬಳಸಿ
ಆದರೆ ಇದಕ್ಕೆ ಪರ್ಯಾಯವಾಗಿ ಗುಲಾಬಿನೀರು ಸಹಾ ಉತ್ತಮ ಆರೈಕೆ ನೀಡುತ್ತದೆ. ಇದಕ್ಕಾಗಿ ಹತ್ತಿಯ ಉಂಡೆಯೊಂದನ್ನು ಗುಲಾಬಿ ನೀರಿನಲ್ಲಿ ಮುಳುಗಿಸಿ ಮುಖವನ್ನು ಒರೆಸಿಕೊಂಡ ಬಳಿಕ ಲೋಷನ್ ಹಚ್ಚಿ. ಇದರಿಂದ ನಿಮ್ಮ ಚರ್ಮ ಸ್ವಚ್ಛ, ಕೀಟಾಣುರಹಿತವಾಗುವ ಮೂಲಕ ಕಾಂತಿಯುತ, ಸುಂದರ ಮತ್ತು ಸ್ವಚ್ಛ ಚರ್ಮ ನಿಮ್ಮದಾಗುತ್ತದೆ.

ಮುಖವನ್ನು ನಯವಾಗಿ ಉಜ್ಜಿ ತೊಳೆದುಕೊಳ್ಳಿರಿ
ದಿನದ ಅವಧಿಯಲ್ಲಿ ಮನೆಯಿಂದ ಹೊರಗಿದ್ದಾಗ ಪ್ರದೂಷಣೆ, ಧೂಳು, ಬಿಸಿಲು ಮೊದಲಾದವುಗಳಿಂದ ಮುಖ, ಕುತ್ತಿಗೆ ಮತ್ತು ಕೈಗಳ ಚರ್ಮ ಇತರೆಡೆಗಳಿಗಿಂತ ಹೆಚ್ಚು ಬಾಧೆಗೊಳಗಾಗಿರುತ್ತದೆ. ಮನೆಗೆ ಬಂದು ತಲುಪಿದ ಬಳಿಕ ತಡಮಾಡದೇ ಈ ಭಾಗಗಳನ್ನು ಮುಖತೊಳೆಯಲು ಇರುವ ಫೇಸ್ ವಾಶ್ ಅಥವಾ ಫೇಸ್ ಸೋಪನ್ನು ಹಚ್ಚಿ ನಯವಾದ ಬ್ರಷ್‌ನಿಂದ ಉಜ್ಜಿಕೊಂಡು ತೊಳೆದುಕೊಳ್ಳಿರಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮುಖವನ್ನು ನಯವಾಗಿ ಉಜ್ಜಿ ತೊಳೆದುಕೊಳ್ಳಿರಿ
ಇದರಿಂದ ಚರ್ಮದ ಮೇಲೆ ಲೇಪಿತವಾಗಿದ್ದ ಧೂಳು, ಹೊಗೆಯ ಕಣಗಳು, ಪರಾಗ ಮೊದಲಾದ ಕಣಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ. ಜೊತೆಗೇ ಮುಚ್ಚಿಹೋಗಿದ್ದ ಚರ್ಮದ ಸೂಕ್ಷ್ಮರಂಧ್ರಗಳು ತೆರೆಯಲ್ಪಟ್ಟು ಚರ್ಮದ ಸ್ರಾವ ಸುಲಭವಾಗುತ್ತದೆ.

ಬಿಸಿಲಿಗೆ ಹೋಗುವ ಒಂದು ಗಂಟೆ ಮೊದಲೇ ಸನ್ ಸ್ಕ್ರೀನ್ ಹಚ್ಚಿ
ನಿತ್ಯವೂ ಕೆಲಸಕ್ಕೆ ಅಥವಾ ಬೇರಾವುದೋ ಕಾರ್ಯಕ್ಕೆ ಹೊರಹೋಗುವ ಮೊದಲು ಸುಮಾರು ಒಂದು ಘಂಟೆ ಮೊದಲೇ ನಿಮ್ಮ ಚರ್ಮಕ್ಕೆ ಅನುಗುಣವಾದ ಸನ್ ಸ್ಕ್ರೀನ್ ಹಚ್ಚಿಕೊಳ್ಳುವುದು ಜಾಣತನ. ಏಕೆಂದರೆ ಈಗ ತಾನೇ ಹಚ್ಚಿದ ಕ್ರೀಂ ಚರ್ಮವನ್ನು ಪೂರ್ಣವಾಗಿ ವ್ಯಾಪಿಸುವ ಮೊದಲೇ ಸೂರ್ಯನ ಪ್ರಖರ ಕಿರಣಗಳಿಗೆ ಒಡ್ಡಿದರೆ ಅದರ ಅತಿನೇರಳೆ ಕಿರಣಗಳಿಂದ ಸೂಕ್ತವಾದ ರಕ್ಷಣೆ ದೊರಕುವುದಿಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಬಿಸಿಲಿಗೆ ಹೋಗುವ ಒಂದು ಗಂಟೆ ಮೊದಲೇ ಸನ್ ಸ್ಕ್ರೀನ್ ಹಚ್ಚಿ
ಅಲ್ಲದೇ ಈ ಸ್ಕ್ರೀನ್ ಅನ್ನು ಮಳೆಯಿರಲಿ, ಚಳಿಯಿರಲಿ, ಪ್ರತಿದಿನವೂ, ಯಾವಾಗ ಹೊರಹೋಗುತ್ತೀರೋ ಆಗೆಲ್ಲಾ ಹಚ್ಚುವುದು ಅಗತ್ಯ. ಒಂದು ದಿನ ಮರೆಗೆ ಬಿಸಿಲಿಗೆ ಹೋದರೂ ಇಷ್ಟು ದಿನ ಜತನದಿಂದ ಕಾಪಾಡಿಕೊಂಡು ಬಂದಿದ್ದ ಶ್ರಮವೆಲ್ಲಾ ಒಂದೇ ಘಳಿಗೆಯಲ್ಲಿ ಹೋಮವಾಗುವುದು ಖಂಡಿತ.

ನಿಮ್ಮ ಪ್ರಸಾಧನಗಳ ಮುಖ್ಯ ಘಟಕಗಳ ವಿವರಗಳನ್ನು ಗಮನಿಸಿ
ಈಗ ಎಲ್ಲಾ ಪ್ರಸಾದನಗಳಲ್ಲಿ ಅಡಕವಾಗಿರುವ ಘಟಕಗಳ ವಿವರಗಳನ್ನು ನೀಡುವುದು ಕಡ್ಡಾಯವಾಗಿದೆ. ಇದು ಸುಲಭವಾಗಿ ಅಳಿಸಿಹೋಗದಂತಿದ್ದು ಗರಿಷ್ಟ ಬಳಕೆಯ ದಿನಾಂಕವನ್ನೂ ನಮೂದಿಸುವುದು ಕಡ್ಡಾಯವಾಗಿದೆ. ಯಾವುದೇ ಪ್ರಸಾಧನವನ್ನು ಕೊಳ್ಳುವ ಮೊದಲು ಈ ದಿನಾಂಕವನ್ನು ಗಮನಿಸಿ ಬಳಸಲು ಇನ್ನೂ ಸಾಕಷ್ಟು ಸಮಯವಿರುವ ವಸ್ತುಗಳನ್ನೇ ಖರೀದಿಸಿ. ದಿನಾಂಕದ ಕಡೆಯ ದಿನ ಹತ್ತಿರಾಗುತ್ತಿರುವ ವಸ್ತುಗಳನ್ನು ಸಾಮಾನ್ಯವಾಗಿ ಮುಂದೆ ಇಟ್ಟು ಹೆಚ್ಚಿನ ಕಾಲಾವಧಿಯಿರುವ ವಸ್ತುಗಳನ್ನು ಹಿಂದೆ ಇಡುವುದು ಎಲ್ಲರೂ ಅನುಸರಿಸುವ ವಿಧಾನ.

ನಿಮ್ಮ ಪ್ರಸಾಧನಗಳ ಮುಖ್ಯ ಘಟಕಗಳ ವಿವರಗಳನ್ನು ಗಮನಿಸಿ
ಆದ್ದರಿಂದ ಹಿಂದಿರುವ, ಗರಿಷ್ಟ ದಿನಾಂಕವಿರುವ ಪ್ರಸಾಧನಗಳನ್ನೇ ಕೊಳ್ಳಿ. ಇದರಲ್ಲಿರುವ ಮೂರು ಪ್ರಮುಖ ಘಟಕಗಳ ವಿವರಗಳನ್ನು ಗಮನಿಸಿ. ವಿಟಮಿನ್ ಸಿ (ಆಂಟಿ ಆಕ್ಸಿಡೆಂಟಿನ ಕಾರ್ಯ), ರೆಟಿನಾಯ್ಡ್ (ಚರ್ಮದ ಸಡಿಲತೆಯನ್ನು ಹೆಚ್ಚಿಸುವ ಘಟಕ) ಮತ್ತು alpha hydroxy acid(AHA) -(ಇದು ಸತ್ತ ಜೀವಕೋಶಗಳನ್ನು ನಿವಾರಿಸುವ ಘಟಕ) ಇವು ಮೂರೂ ಇವೆ ಎಂದು ಖಾತರಿಪಡಿಸಿಕೊಂಡೇ ಖರೀದಿಸಿ. ಅಗ್ಗ ಎಂಬ ಕಾರಣಕ್ಕೆ ಎಂದಿಗೂ ಅನಾರೋಗ್ಯಕರ ಅಥವಾ ನಕಲಿ ಪ್ರಸಾಧನಗಳನ್ನು ಕೊಳ್ಳಬೇಡಿ.



Click it and Unblock the Notifications











