ಚೆಂದುಳ್ಳಿ ಚೆಲುವಿಗಾಗಿ ಚಹಾ ಪುಡಿ ಚರಟದ ಚಮತ್ಕಾರ

By Su.Ra

ಮನೆಯಲ್ಲಿ ಟೀ ಮಾಡಿ ಆಯ್ತು. ಸಕ್ಕರೆ, ಹಾಲು ಹಾಕಿ ಬೊಂಬಾಟ್ ಚಹಾ ಮನೆಯವರೆಲ್ಲರೂ ಸವಿದೂ ಆಯ್ತು. ನಂತ್ರ ಉಳಿದ ಟೀ ಪುಡಿಯ ಚರಟವನ್ನು ಏನು ಮಾಡಿದ್ರಿ? ಸುಮ್ಮನೆ ಕಸದ ಬುಟ್ಟಿಗೆ ಹಾಕಿದ್ರಾ? ಇಲ್ಲ ಪಾತ್ರೆ ತೊಳೆಯುವಾಗ ಆ ಚರಟ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಯ್ತಾ? ಎಷ್ಟಂದ್ರೂ ನಿಮ್ಮ ಪ್ರಕಾರ ಅದು ವೇಸ್ಟ್ ಅಲ್ವಾ? ಸಕ್ಕರೆ ಹಾಕಿರ್ತೀರಿ. ಈಗಾಗಲೇ ಒಮ್ಮೆ ಹಾಲಿನಲ್ಲಿ ಕುದಿಸಿ ಟೀ ಮಾಡಿರ್ತೀರಿ.

ಇನ್ಯಾಕೆ ಅದು ಅನ್ನೋ ಭಾವನೆ ನಿಮ್ಮದು. ಆದ್ರೆ ಈ ಚರಟ ನಿಮ್ಮ ಚರ್ಮದ ಸೌಂದರ್ಯ ಹೆಚ್ಚಿಸಲು ಸಹಕಾರಿ ಅಂದ್ರೆ ನಂಬ್ತೀರಾ? ಹೌದು. ಅದೆಷ್ಟೋ ನಮ್ಮ ಸುತ್ತಲುಮುತ್ತಲೂ ನಾವು ಬಳಸುವ ಮತ್ತು ಬಳಸಿ ಎಸೆಯುವ ವೇಸ್ಟ್ ವಸ್ತುಗಳು ನಮ್ಮ ಸೌಂದರ್ಯದ ಕೈಗನ್ನಡಿಗಳಾಗಲಿವೆ. ನಮ್ಮ ಅನೇಕ ಚರ್ಮದ ಸಮಸ್ಯೆಗಳಿಗೆ ಈ ನೈಸರ್ಗಿಕ ವಸ್ತುಗಳು ಪರಿಹಾರ ನೀಡಲಿವೆ. ಇಂತಹ ಸೂಕ್ಷ್ಮ ವಿಚಾರವನ್ನು ಅರಿಯದ ಅದೆಷ್ಟೋ ಮಹಿಳೆಯರು ಪ್ರತಿನಿತ್ಯ ಬಳಸುವ ಇಂತಹ ವಸ್ತುಗಳನ್ನು ವೇಸ್ಟ್ ಅಂತ ಪರಿಗಣಿಸಿಬಿಡ್ತಾರೆ...

ಚರ್ಮದ ರಂದ್ರಗಳ ಸರಾಗ ಉಸಿರಾಟಕ್ಕೆ ಟೀ ಪುಡಿ

ಚರ್ಮದ ರಂದ್ರಗಳ ಸರಾಗ ಉಸಿರಾಟಕ್ಕೆ ಟೀ ಪುಡಿ

ಟೀ ತಯಾರಿಸಿದ ನಂತ್ರ ಅದ್ರ ಚರಟವನ್ನು ವೇಸ್ಟ್ ಎಂದು ಎಸೆಯುವ ಮುನ್ನ ಇನ್ನೊಮ್ಮೆ ಆ ಚರಟಕ್ಕೆ ನೀರು ಹಾಕಿ ಕೆಲವು ನಿಮಿಷ ಕುದಿಸಿ.. ಕುದಿಯುವಾಗ ಬರುವ ಹಬೆಯನ್ನು ನಿಮ್ಮ ಮುಖಕ್ಕೆ ಇಟ್ಟುಕೊಳ್ಳಿ. ಈ ಹಬೆ ನಿಮ್ಮ ಮುಖದ ಚರ್ಮದ ರಂದ್ರಗಳು ತೆರೆದುಕೊಳ್ಳುವಂತೆ ಮಾಡುತ್ತೆ ಮತ್ತು ಚರ್ಮದ ಸರಾಗ ಉಸಿರಾಟಕ್ಕೆ ಕಾರಣವಾಗುತ್ತೆ. ಈ ರೀತಿ ಮಾಡೋದ್ರಿಂದ ಮುಖದಲ್ಲಿ ರಕ್ತಸಂಚಾರ ಉತ್ತಮವಾಗಿ ನಿಮ್ಮ ಮುಖ ಯಾವಾಗಲೂ ಸ್ವಚ್ಛ ಮತ್ತು ಸುಂದರವಾಗಿರುವಂತೆ ಮಾಡುತ್ತೆ.

ಬಾಡಿ ಸ್ಕ್ರಬ್ ಆಗಿ ಬಳಸಿ ಚಹಾ ಪುಡಿ

ಬಾಡಿ ಸ್ಕ್ರಬ್ ಆಗಿ ಬಳಸಿ ಚಹಾ ಪುಡಿ

ಟೀ ಪುಡಿ ಎಲ್ಲರಿಗೂ ಗೊತ್ತಿರೋ ಹಾಗೆ ತರಿತರಿಯಾಗಿರುತ್ತೆ. ಈ ಚಳಿಗಾಲ ಅಂದ್ರೆ ಡ್ರೈ ಸ್ಕಿನ್ ಇರುವವರಿಗೆ ಕೇಳೋದೆ ಬೇಡ. ಚರ್ಮ ಸಿಪ್ಪೆ ಸುಲಿದಂತಾಗಿರುತ್ತೆ. ಚರ್ಮದ ಮೇಲ್ಪದರ ಎದ್ದು, ಡ್ರೈ ಡ್ರೈ ಅನ್ನಿಸುತ್ತೆ.ಇದನ್ನು ನಿವಾರಿಸಬೇಕು ಅಂದ್ರೆ ಚರ್ಮದ ಸ್ಕ್ರಬ್ಬಿಂಗ್ ಮಾಡಿಕೊಳ್ಳಬೇಕು. ಅದಕ್ಕಾಗಿ ನೀವು ಯಾವುದೇ ಕೆಮಿಕಲ್ ಮಿಶ್ರಿತ ಸ್ಕ್ರಬ್ಬಿಂಗ್ ಪ್ರೊಡಕ್ಟ್ ಗಳನ್ನು ಅಂಗಡಿಯಲ್ಲಿ 200, 300 ರುಪಾಯಿ ಕೊಟ್ಟು ಖರೀದಿಸಬೇಕು ಅಂತೇನಿಲ್ಲ. ಬದಲಾಗಿ ಚಹಾ ಮಾಡಿ ನಂತ್ರ ಸೋಸಿದ ಟೀ ಪುಡಿಯ ಚರಟವೇ ಸಾಕಾಗುತ್ತೆ. ಟೀ ಪುಡಿಯನ್ನು ಸುಮ್ಮನೆ ಎಸೆಯುವ ಬದಲು ಒಮ್ಮೆ ಕುದಿಸಿದ ಈ ಟೀ ಪುಡಿ ನಿಮ್ಮ ಚರ್ಮಕ್ಕೆ ಬೆಸ್ಟ್ ಬಾಡಿ ಸ್ಕ್ರಬ್ ಆಗಿ ಕೆಲಸ ಮಾಡಲಿದೆ. ಸುಮ್ಮನೆ ಉಳಿದಿರುವ ಈ ಟೀ ಪುಡಿಯನ್ನು ಸ್ನಾನಕ್ಕೂ ಮುನ್ನ ಮೈಗೆ ಹಚ್ಚಿಕೊಂಡು ಒಮ್ಮೆ ಮಸಾಜ್ ಮಾಡ್ಕೊಂಡು ಸ್ನಾನ ಮಾಡಿ ನೋಡಿ. ರಿಸಲ್ಟ್ ಏನು ಅನ್ನೋದು ನಿಮ್ಗೆ ನೀವೇ ಅರಿತುಕೊಳ್ಳಬಹುದು.

ಫೇಸ್ ಮಾಸ್ಕ್ ಆಗಿಯೂ ಬಳಸ್ಬಹುದು ಟೀ ಪುಡಿ

ಫೇಸ್ ಮಾಸ್ಕ್ ಆಗಿಯೂ ಬಳಸ್ಬಹುದು ಟೀ ಪುಡಿ

ಟೀ ಪುಡಿಯ ಚರಟಕ್ಕೆ ಒಂದು ಸ್ಪೂನ್ ಜೇನುತುಪ್ಪ ಮತ್ತು ಲಿಂಬೆರಸವನ್ನು ಸೇರಿಸಿ ಮುಖಕ್ಕೆ ಮಾಸ್ಕ್ ರೀತಿ ಹಚ್ಚಿಕೊಳ್ಳಿ. ಮುಖದಲ್ಲಿರುವ ಕಪ್ಪು ಕಲೆಗಳು, ಮೊಡವೆಗಳ ನಿವಾರಣೆಗೆ ಈ ಫೇಸ್ ಮಾಸ್ಕ್ ನಿಮ್ಗೆ ನೆರವಾಗಲಿದೆ. ಈ ಮಿಶ್ರಣ ಮುಖದ ಕಾಂತಿ ಹೆಚ್ಚಿಸುವಲ್ಲಿ ನೆರವಾಗುತ್ತೆ.

ಸ್ಕಿನ್ ಟ್ಯಾನ್ ಸಮಸ್ಯೆಗೆ ಪರಿಹಾರ ಟೀ ಪುಡಿಯ ಚರಟ

ಸ್ಕಿನ್ ಟ್ಯಾನ್ ಸಮಸ್ಯೆಗೆ ಪರಿಹಾರ ಟೀ ಪುಡಿಯ ಚರಟ

ಉಳಿದ ಟೀ ಪುಡಿಯ ಚರಟವನ್ನು ಹಾಗೆಯೇ ಸುಮ್ಮನೆ ಎಸೆಯದೆ ಅದಕ್ಕೆ ಮೂರರಿಂದ ನಾಲ್ಕು ಲೋಟದಷ್ಟು ನೀರು ಹಾಕಿ ಕುದಿಸಿ. ಆ ನೀರನ್ನು ಸೋಸಿ ಆರಿದ ನಂತ್ರ ಒಂದು ಬಾಟಲಿಯಲ್ಲಿ ಹಾಕಿ ಫ್ರೀಝರ್ ನಲ್ಲಿ ಇಟ್ಟುಕೊಳ್ಳಿ. ಬಿಸಿಲಿನಿಂದ ಸುಸ್ತಾಗಿ ಬಂದಾಗ ಆ ನೀರಿನಿಂದ ಫೇಸ್ ವಾಷ್ ಮಾಡಿದ್ರೆ ಸ್ಕಿನ್ ಟ್ಯಾನ್ ಆಗೋದನ್ನು ತಪ್ಪಿಸಿಕೊಳ್ಳಬಹುದು.

ಕೂದಲಿನ ಆರೋಗ್ಯಕ್ಕೂ ಬಳಸ್ಬಹುದು ಟೀ ಪುಡಿಯ ಚರಟ

ಕೂದಲಿನ ಆರೋಗ್ಯಕ್ಕೂ ಬಳಸ್ಬಹುದು ಟೀ ಪುಡಿಯ ಚರಟ

ಕೂದಲಿಗೂ ಈ ಚರಟವನ್ನು ಅಪ್ಲೈ ಮಾಡಿಕೊಳ್ಳಬಹುದು. ಆದ್ರೆ ಸಕ್ಕರೆಯನ್ನು ಹೆಚ್ಚು ಕೂದಲಿಗೆ ಬಳಸದೇ ಇರೋದು ಒಳ್ಳೇದು. ಹಾಗಾಗಿ ಒಮ್ಮೆ ಚರಟವನ್ನು ನೀರಿನಲ್ಲಿ ತೊಳೆದು ಸೋಸಿಕೊಂಡು ಸಕ್ಕರೆಯ ಪ್ರಮಾಣ ಚರಟದಲ್ಲಿ ಕಡಿಮೆಯಾದ ನಂತ್ರ ಅದನ್ನು ಮತ್ತೊಮ್ಮೆ ಒಂದೆರಡು ಲೋಟ ನೀರು ಹಾಕಿ ಕುದಿಸಿ. ನೀರನ್ನು ಸೋಸಿ ಆರಿಸಿ ಇಟ್ಟುಕೊಳ್ಳಿ. ಆ ನೀರನ್ನು ಕೂದಲು ತೊಳೆಯುವಾಗ ಬಳಸಿದ್ರೆ ಕೂದಲು ಶೈನಿಯಾಗಲು ಮತ್ತು ಸ್ಮೂತ್ ಆಗಲು ನೆರವಾಗುತ್ತೆ. ಪ್ಯಾಕ್ ರೀತಿಯೂ ಬಳಸ್ಬಹುದು. ಟೀ ಪುಡಿಯ ಚರಟಕ್ಕೆ ಒಂದು ಮೊಟ್ಟೆಯ ಬಿಳಿಯ ಭಾಗ ಮತ್ತು ಸ್ವಲ್ಪ ಆಲಿವ್ ಆಯಿಲ್ ಮತ್ತು ಬಾದಾಮಿ ಎಣ್ಣೆ ಮಿಕ್ಸ್ ಮಾಡಿ ಹೇರ್ ಪ್ಯಾಕ್ ತಯಾರಿಸಿಕೊಂಡು ಅಪ್ಲೈ ಮಾಡಿಕೊಂಡ್ರೆ ಹೊಳೆಯುವ ಕೂದಲು ನಿಮ್ಮದಾಗುತ್ತೆ. ಅಷ್ಟೇ ಅಲ್ಲ ಕೂದಲುದುರುವಿಕೆ ಸಮಸ್ಯೆಯೂ ನಿಯಂತ್ರಣಕ್ಕೆ ಬರುತ್ತೆ. ಇದು ನಿಮ್ಮ ಕೂದಲಿಗೆ ಕಂಡೀಷನರ್ ನಂತೆ ವರ್ಕ್ ಆಗುತ್ತೆ.

ಕಣ್ಣಿನ ಆರೋಗ್ಯಕ್ಕಾಗಿ ಬಳಸ್ಬಹುದು ಟೀ ಪುಡಿ

ಕಣ್ಣಿನ ಆರೋಗ್ಯಕ್ಕಾಗಿ ಬಳಸ್ಬಹುದು ಟೀ ಪುಡಿ

ಟೀ ಪುಡಿಯ ಚರಟವನ್ನು ಫ್ರಿಡ್ಜ್ ನಲ್ಲಿಟ್ಟು ತಣ್ಣಗಾದ ನಂತ್ರ ಒಂದು ಕಾಟನ್ ಬಟ್ಟೆಯಲ್ಲಿ ಸುತ್ತಿಕೊಂಡು ಕಣ್ಣಿನ ಮೇಲೆ ಇಟ್ಟುಕೊಂಡ್ರೆ ಕಣ್ಣುಗಳಿಗೆ ತಂಪಾಗುತ್ತೆ ಮತ್ತು ಡಾರ್ಕ್ ಸರ್ಕಲ್ ನಿವಾರಣೆಗೆ ಇದು ಸಹಾಯ ಮಾಡುತ್ತೆ. ಒಂದು ವೇಳೆ ನೀವು ಟೀ ಬ್ಯಾಗ್ ನಲ್ಲಿ ಚಹಾ ತಯಾರಿಸಿದ್ದೀರಾದ್ರೆ ಈ ರೀತಿ ಬಟ್ಟೆಯಲ್ಲಿ ಸುತ್ತುವ ಅಗತ್ಯವಿಲ್ಲ. ಹಾಗೆಯೇ ಬ್ಯಾಗ್ ಗಳನ್ನು ಫ್ರೀಡ್ಜ್ ನಲ್ಲಿ ಇಟ್ಟು ಕೂಲ್ ಆದ ನಂತ್ರ ಅದನ್ನು ಕಣ್ಣುಗಳ ಮೇಲೆ ಇಟ್ಟುಕೊಳ್ಳಬಹುದು.

X
Desktop Bottom Promotion