Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಣ್ಣ-ಪುಟ್ಟ ತಪ್ಪುಗಳು ತ್ವಚೆಯ ಅಂದವನ್ನೇ ಕೆಡಿಸಬಹುದು!
ಸುಂದರ ಮುಖದಲ್ಲಿ ಮೊಡವೆ ಆದರೆ ಅದೊಂದು ದೊಡ್ಡ ಸಮಸ್ಯೆಯೇ ಸರಿ. ಮೊಡವೆ ಹೋಗಲಾಡಿಸಲು ಸಾಕಷ್ಟು ಕಷ್ಟ ಪಡಬೇಕು, ಒಮ್ಮೆ ಮೊಡವೆ ಮುಖದಲ್ಲಿ ಕಾಣಿಸಿಕೊಂಡರೆ ಕನಿಷ್ಠ ಒಂದು ವಾರ ಹೋಗಲಾರದು ಜೊತೆಗೆ ಕೆಲವೊಮ್ಮೆ ಕಲೆ ಆಗುವ ಸಾಧ್ಯತೆ ಕೂಡ ಹೆಚ್ಚು. ಹೌದು ಮುಖದಲ್ಲಿ ಕಂಡುಬರುವ ಇಂತಹ ಮೊಡವೆಗಳು ಹಾಗೂ ಅವುಗಳು ಉಳಿಸಿ ಹೋಗುವ ಕಲೆಗಳು ನಿಜಕ್ಕೂ ದು:ಸ್ವಪ್ನದ೦ತೆ ಕಾಡುವ೦ತಹವುಗಳಾಗಿರುತ್ತವೆ. ನಿಮ್ಮ ಮುಖವನ್ನು ಮೊಡವೆಗಳಿಂದ ಮುಕ್ತವಾಗಿರಿಸುವುದು ಹೇಗೆ?
ತ್ವಚೆಯ ಎಣ್ಣೆಯುಕ್ತ ಚರ್ಮ, ಹಾರ್ಮೋನಿನ ಬದಲಾವಣೆ, ಬ್ಯಾಕ್ಟೀರಿಯಾ ಸೋಂಕು ಮತ್ತು ದಿನನಿತ್ಯ ಬಳಸುವ ಆಹಾರ ಪದ್ಧತಿ, ಇಂತಹವುಗಳೇ ಮೊಡವೆಗಳಿಗೆ ಮುಖ್ಯ ಕಾರಣವಾಗಿಬಿಡುತ್ತದೆ. ಹಾಗಾಗಿ ಎಣ್ಣೆಯುಕ್ತ ಚರ್ಮ ನಿಮ್ಮದಾಗಿದ್ದರೆ ಮೊಡವೆಗಳು ಬರದಂತೆ ಸರಿಯಾದ ರೀತಿಯಲ್ಲಿ ಕಾಳಜಿ ಮಾಡುವುದು ಅಗತ್ಯ. ಚರ್ಮದ ಸೋಂಕು ಅಧಿಕವಾದ ಎಣ್ಣೆ ಮತ್ತು ಚರ್ಮದಲ್ಲಿ ರಂದ್ರಗಳು ಇರುವುದರಿಂದ ಕಂಡು ಬರುತ್ತವೆ.
ಹಾಗೆಯೇ ದಿನನಿತ್ಯ ಮಾಡುವ ಕೆಲವು ತಪ್ಪುಗಳು ಸಾಕಷ್ಟು ತೊಂದರೆಗಳನ್ನು ತರುತ್ತವೆ ಅದರಲ್ಲಿ ಮೊಡವೆಯೂ ಒಂದು. ಮೊಡವೆಗಳನ್ನು ಹೋಗಲಾಡಿಸಲು ದಿನನಿತ್ಯ ಮಾಡುವ ಕೆಲವು ತಪ್ಪುಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ...

ಕರಿದ ಪದಾರ್ಥಗಳು
ಫ್ರೆಂಚ್ ಫ್ರೈ, ಬರ್ಗರ್, ಕರಿದ ತಿಂಡಿಗಳು ಇವುಗಳನ್ನು ಮೊಡವೆ ಇರುವವರು ಆದಷ್ಟು ದೂರವಿಡುವುದು ಒಳ್ಳೆಯದು. ಮೊಡವೆಗೆ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರೆ ಕರಿದ ಪದಾರ್ಥಗಳನ್ನು ಮುಟ್ಟಲೇಬೇಡಿ.

ಮಸಾಲೆಯುಕ್ತ ಪದಾರ್ಥಗಳು
ನೀವು ಈಗಾಗಲೇ ಮೊಡವೆ ಹೊಂದಿದ್ದರೆ ಅದನ್ನು ಹೆಚ್ಚಿಸಲು ಮಸಾಲೆ ಪದಾರ್ಥಗಳು ಕಾರಣವಾಗದಿರಬಹುದು,ಆದರೆ ಮೊಡವೆ ಬರಲು ಇದು ಕೂಡ ಒಂದು ಕಾರಣ.ಏಕೆಂದರೆ ಮಸಾಲೆ ಪದಾರ್ಥಗಳು ದೇಹದ ಉಷ್ಣತೆ ಹೆಚ್ಚಿಸುತ್ತದೆ ಮತ್ತು ಚರ್ಮದ ಉರಿಯೂತಕ್ಕೆ ಕಾರಣವಾಗುತ್ತದೆ ಇದರಿಂದ ಮೊಡವೆ ಹೆಚ್ಚಬಹುದು.

ಕೊಬ್ಬಿನಾಂಶ ಹೆಚ್ಚಿರುವ ಆಹಾರಗಳು
ಕೊಬ್ಬಿನ ಅಂಶವನ್ನು ಹೊಂದಿರುವ ಜಿಡ್ಡಿನ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆ ಹೆಚ್ಚುತ್ತದೆ.ಕೊಬ್ಬಿನ ಅಂಶ ಹೆಚ್ಚಿರುವ ಈ ರೀತಿಯ ಪದಾರ್ಥಗಳನ್ನು ತಿನ್ನುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚುತ್ತದೆ ಇದರಿಂದ ಹಾರ್ಮೋನ್ ಏರುಪೇರು ಉಂಟಾಗಿ ಮೊಡವೆಗಳು ಏಳುವ ಸಾಧ್ಯತೆಯಿದೆ. ಹೆಚ್ಚು ಕೊಬ್ಬಿನಂಶ ಇರುವ ಆಹಾರ ಪದಾರ್ಥಗಳು ದೇಹದಲ್ಲಿ ರಕ್ತ ಪ್ರವಾಹ ಕಡಿಮೆ ಮಾಡಿ ಆಮ್ಲಜನಕ ಮತ್ತು ಇತರ ಪೋಷಕಾಂಶಗಳ ಸಂಚಲನವನ್ನು ನಿಧಾನಗೊಳಿಸುತ್ತದೆ.ಚರ್ಮಕ್ಕೆ ಆ ಪೋಷಕಾಂಶಗಳ ಅಗತ್ಯವಿದೆ ಆದ್ದರಿಂದ ಕೊಬ್ಬಿನಂಶ ಇರುವ ಜಿಡ್ಡಿನ ಪದಾರ್ಥಗಳನ್ನು ತಿನ್ನುವುದರಿಂದ ಮೊಡವೆಗಳು ಹೆಚ್ಚುತ್ತವೆ.

ಕಾಫಿಯ ಚಟ
ಅಧಿಕವಾಗಿ ಕಾಫಿ ಕುಡಿಯುವುದರಿಂದ ತ್ವಚೆಯಲ್ಲಿ ಮೊಡವೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕಾಫಿ ನಿಮ್ಮ ಮೆದುಳನ್ನು ಸಕ್ರಿಯವಾಗಿಯೇನೋ ಇರಿಸುತ್ತದೆ ಆದರೆ ಅಧಿಕವಾಗಿ ಬಳಸುವುದರಿಂದ ಮುಖದಲ್ಲಿ ಮೊಡವೆಗಳನ್ನು ಹೆಚ್ಚಿಸುತ್ತದೆ.

ಬಟ್ಟೆಗಳು
ನೈಲಾನ್, ಪಾಲಿಸ್ಟರ್ ಬಟ್ಟೆಗಳನ್ನು ಬಳಸುವುದರಿಂದ ಇದು ಬ್ಯಾಕ್ಟೀರಿಯಾವನ್ನು ಹೆಚ್ಚಿಸಿ, ಜೀವಕೋಶಗಳು ಸಾಯುವಂತೆ ಮಾಡುತ್ತದೆ. ಈ ಬಟ್ಟೆಗಳಿಂದ ಗಾಳಿ ಹೊರಹೋಗಲು ಸಾಧ್ಯವಿಲ್ಲವಾದುದುದರಿಂದ ಬ್ಯಾಕ್ಟೀರಿಯಾಗಳು ಅಲ್ಲೇ ಉಳಿದು ಚರ್ಮದ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಇದು ಮುಖಕ್ಕೆ ತಗುಲಿ ಮೊಡವೆಗಳಾಗುವ ಸಂಭವವಿರುತ್ತದೆ.

ಮೊಬೈಲ್ ಕ್ಲೀನ್ ಮಾಡದಿರುವುದು
ಮೊಬೈಲ್‌ನಲ್ಲಿ ಬ್ಯಾಕ್ಟೀರಿಯಗಳು ಅಧಿಕವಾಗಿರುತ್ತವೆ. ಸೆಲ್ ಫೋನ್ ಎಲ್ಲೆಂದರಲ್ಲಿ ಇಡುವುದರಿಂದ ಬೇರೆಬೇರೆ ರೀತಿಯ ಬ್ಯಾಕ್ಟೀರಿಯಾಗಳು ತಗುಲುತ್ತವೆ. ಆದ್ದರಿಂದ ಮೊಬೈಲ್ ಕೈಗೆ ತೆಗೆದುಕೊಳ್ಳುವ ಮೊದಲು ಸ್ವಚ್ಛಗೊಳಿಸಿಕೊಳ್ಳುವುದು ಸೂಕ್ತ.

ಸೂರ್ಯನ ಕಿರಣ
ತುಂಬಾ ಹೊತ್ತು ಬಿಸಿಲಿನಲ್ಲಿದ್ದು ಅಧಿಕ ಸೂರ್ಯನ ಕಿರಣಗಳಿಗೆ ಮುಖವನ್ನು ಒಡ್ಡುವುದರಿಂದ ಮೊಡವೆಗಳಾಗುತ್ತವೆ.ಹೊರಗೆ ಹೋಗುವ ಮೂರು ಗಂಟೆಗಳ ಮೊದಲು ಸನ್ ಸ್ಕ್ರೀನ್ ಲೋಷನ್ ಹಚ್ಚಿಕೊಳ್ಳಿ.ಸೂರ್ಯನ ಕಿರಣಗಳಿಗೆ ಹಾನಿಗೊಳಗಾದ ಚರ್ಮವು ಬೇಗ ಬ್ಯಾಕ್ಟೀರಿಯ ಸೋಂಕಿಗೆ ಒಳಗಾಗುತ್ತದೆ ಮತ್ತು ಮೊಡವೆಗಳಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಪ್ರತಿದಿನ ಅದೇ ದಿಂಬನ್ನು ಉಪಯೋಗಿಸುವುದು
ಆಗಾಗ ತಲೆ ದಿಂಬನ್ನು ಸ್ವಚ್ಛಗೊಳಿಸದಿದ್ದಲ್ಲಿ ಚರ್ಮದ ಸೋಂಕು ಕಂಡುಬರುತ್ತದೆ. ದಿಂಬಿನ ಕವರ್‌ನಲ್ಲಿ ಬ್ಯಾಕ್ಟೀರಿಯಾಗಳು ಸೇರಿಕೊಂಡು ಅವು ಸೋಂಕನ್ನು ತಂದು ಮೊಡವೆಗಳಾಗುವಂತೆ ಮಾಡುತ್ತವೆ. ನಿಮ್ಮ ಮುಖ ಇಡೀ ರಾತ್ರಿ ದಿಂಬಿನ ಮೇಲಿರುವುದರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಆಗಾಗ ದಿಂಬಿನ ಹೊದಿಕೆಯನ್ನು ಬದಲಿಸುತ್ತಿರಿ.



Click it and Unblock the Notifications
