ಅಂದದ ಕಣ್ಣಿನ ಚೆಂದದ ನೋಟಕ್ಕೆ ಸೂಕ್ತ ಮನೆಮದ್ದು

ಕಣ್ಣುಗಳ ಕೆಳಗಿನ ಕಪ್ಪು ವರ್ತುಲಗಳು ಕೆಲವೊಮ್ಮೆ ಇಷ್ಟೊಂದು ಗಾಢವಾಗಿರುತ್ತವೆಂದರೆ ದಪ್ಪನೆಯ ಮೇಕಪ್ ಹಚ್ಚಿದ ಬಳಿಕವೂ ಕೊಂಚವಾಗಿ ಕಾಣಿಸಿಯೇ ಇರುತ್ತವೆ. ಇದು ನಿಮ್ಮ ವಯಸ್ಸನ್ನು ಇರುವುದಕ್ಕಿಂತ ಹೆಚ್ಚಿಸುವುದು ಮಾತ್ರವಲ್ಲ, ನಿಮ್ಮ ಆರೈಕೆಯಲ್ಲಿ ಕೊರತೆಯನ್ನೂ ಎತ್ತಿ ತೋರಿಸುತ್ತದೆ. ಹಾಗಾದರೆ ಇದನ್ನು ಸುಲಭವಾಗಿ ನಿವಾರಿಸಲು ಮಾರ್ಗಗಳೇನು? ಕಣ್ಣಿನ ಸುತ್ತ ಕಪ್ಪು ಕಲೆಗಳಿಗೆ ಕಾರಣ

ಇದನ್ನು ನಿವಾರಿಸುವ ಮಾರ್ಗವನ್ನು ಹುಡುಕುವ ಮುನ್ನ ಇದು ಹೇಗೆ ಬಂದಿತು ಎಂಬುದನ್ನು ಅರ್ಥ ಮಾಡಿಕೊಂಡರೆ ಮಾರ್ಗ ಸುಲಭವಾಗುತ್ತದೆ. ಕಣ್ಣುಗಳ ಕೆಳಗಿನ ಚರ್ಮದ ಹೊರ ಮತ್ತು ಒಳಪದರಗಳ ನಡುವೆ ಅಂತರ ಬಹಳ ಕಡಿಮೆಯಿದ್ದು ಪೋಷಕಾಂಶಗಳು ಅತಿ ಕಡಿಮೆ ಪ್ರಮಾಣದಲ್ಲಿ ಲಭಿಸುವ ಕಾರಣ ಬಿಸಿಲಿನ ಅಥವಾ ಇತರ ಕಾರಣಗಳಿಂದ ಚರ್ಮ ಕಪ್ಪಗಾಗುವುದಿದ್ದರೆ ಮೊದಲು ಇಲ್ಲಿಯೇ ಕಪ್ಪಗಾಗುತ್ತದೆ. ತಗ್ಗಿರುವ ಕಡೆಗೆ ಮೊದಲು ನೀರು ತುಂಬುಕೊಳ್ಳುತ್ತದಲ್ಲಾ ಹಾಗೇ. ಕಣ್ಣಿನ ಕಪ್ಪು ವರ್ತುಲಕ್ಕೆ ಶಾಶ್ವತ ಪರಿಹಾರ

ಇದಕ್ಕೆ ಬಿಸಿಲಿನ ಹೊರತಾಗಿ ನಿದ್ದೆಯ ಕೊರತೆ, ಕುಡಿತದ ಅಭ್ಯಾಸ, ಆನಾರೋಗ್ಯದ ಅಡ್ಡ ಪರಿಣಾಮಗಳು, ಅಲರ್ಜಿಗಳು, ವಂಶಪಾರಂಪರ್ಯವಾಗಿ ಬಂದಿರುವ ಕಾರಣಗಳು, ರಕ್ತಹೀನತೆ, ಖಿನ್ನತೆ, ಒತ್ತಡ ಅಷ್ಟೇ ಏಕೆ ಅಗತ್ಯಕ್ಕಿಂತ ಹೆಚ್ಚು ನಿದ್ದೆ ಮಾಡಿದರೂ ಕಪ್ಪು ವರ್ತುಗಳು ಮೂಡುತ್ತವೆ. ಇದನ್ನು ನಿವಾರಿಸುವ ಅಥವಾ ಸಾಧ್ಯವಾದಷ್ಟು ಕಡಿಮೆಗೊಳಿಸಲು ಕೆಲವು ಸಲಹೆಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

 ಸಲಹೆ 1: ಬಾದಾಮಿ ಎಣ್ಣೆ ಬಳಸಿ

ಸಲಹೆ 1: ಬಾದಾಮಿ ಎಣ್ಣೆ ಬಳಸಿ

ನಿಯಮಿತವಾಗಿ ದಿನಕ್ಕೆ ಎರಡು ಬಾರಿ (ಬೆಳಿಗ್ಗೆದ್ದ ಬಳಿಕ ಮತ್ತು ರಾತ್ರಿ ಮಲಗುವ ಮುನ್ನ) ಬಾದಾಮಿ ಎಣ್ಣೆಯಿಂದ ನಯವಾಗಿ ಸುಮಾರು ಎರಡರಿಂದ ಮೂರು ನಿಮಿಷ ಮಸಾಜ್ ಮಾಡಿ. ಹತ್ತು ನಿಮಿಷ ಹಾಗೇ ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೋಪು ಅಥವಾ ಇತರ ಯಾವುದೇ ಪ್ರಸಾದನವನ್ನು ಬಳಸದಿರಿ. ಇದರಿಂದ ನಿಧಾನವಾಗಿ ಕಪ್ಪುವರ್ತುಲಗಳು ಕಡಿಮೆಯಾಗತೊಡಗುತ್ತದೆ. ಮೇಕಪ್ ಮಾಡಿಕೊಳ್ಳುವುದು ಅನಿವಾರ್ಯವಾಗಿದ್ದರೆ ಆದಷ್ಟು ತೆಳುವಾಗಿ ಮತ್ತು ಸಾಧ್ಯವಾದಷ್ಟು ತಡವಾಗಿ ಪ್ರಾರಂಭಿಸಿ ಆದಷ್ಟು ಬೇಗನೇ ನಿವಾರಿಸಿಬಿಡಿ.

ಸಲಹೆ 2: ಸತತವಾಗಿ ನೀರು ಕುಡಿಯುತ್ತಿರಿ

ಸಲಹೆ 2: ಸತತವಾಗಿ ನೀರು ಕುಡಿಯುತ್ತಿರಿ

ದಿನದ ಎಲ್ಲಾ ಹೊತ್ತಿನಲ್ಲಿ ನೀರು ಸತತವಾಗಿ ಕುಡಿಯುತ್ತಿರಿ. ನೀರಿನ ಕೊರತೆ ಕಪ್ಪು ವರ್ತುಲಗಳು ಕಡಿಮೆಯಾಗುವ ಗತಿಯನ್ನು ದಮನಿಸುತ್ತದೆ. ದಿನದ ಮೊದಲ ಪಾನೀಯವನ್ನಾಗಿ ಲಿಂಬೆರಸ ಸೇರಿಸಿದ ನೀರು ಕುಡಿಯಿರಿ.

ಸಲಹೆ 3: ಮೇಕಪ್ ನಿವಾರಿಸಲು ಸೌಮ್ಯ ದ್ರಾವಣ ಬಳಸಿ

ಸಲಹೆ 3: ಮೇಕಪ್ ನಿವಾರಿಸಲು ಸೌಮ್ಯ ದ್ರಾವಣ ಬಳಸಿ

ಮೇಕಪ್ ಅನಿವಾರ್ಯವಾಗಿದ್ದ ಸಂದರ್ಭದಲ್ಲಿ ಕಣ್ಣ ಕೆಳಗಿನ ಭಾಗದ ಮೇಕಪ್ ನಿವಾರಿಸಲು ಅತಿಸೌಮ್ಯವಾದ ದ್ರಾವಣ (cleanser) ಬಳಸಿ.

ಸಲಹೆ 4: ಸಂತುಲಿತ ಆಹಾರ ಸೇವಿಸಿ

ಸಲಹೆ 4: ಸಂತುಲಿತ ಆಹಾರ ಸೇವಿಸಿ

ನಿಮ್ಮ ಆಹಾರ ಹೆಚ್ಚು ಸಂತುಲಿತವಾಗಿರಲಿ. ಅಂದರೆ ವಿಟಮಿನ್ ಎ,ಸಿ,ಇ ಮತ್ತು ಕೆ ಹೆಚ್ಚಿರುವ ಹಸಿತರಕಾರಿಗಳು, ಮೊಸರು, ಚೀಸ್, ಹಸಿರು ಸೊಪ್ಪುಗಳು, ತಾಜಾ ಹಣ್ಣುಗಳು ಮತ್ತು ಹಣ್ಣುಗಳ ಜ್ಯೂಸ್ ಗಳನ್ನು ಸೇವಿಸಿ.

 ಸಲಹೆ 5: ಸೌತೆರಸವನ್ನು ಬಳಸಿ.

ಸಲಹೆ 5: ಸೌತೆರಸವನ್ನು ಬಳಸಿ.

ಎಳೆಯ ಸೌತೆಕಾಯಿಯನ್ನು ಅಡ್ಡಲಾಗಿ ಕತ್ತರಿಸಿದಾಗ ಒಸರುವ ರಸದಲ್ಲಿ ಸಂಕೋಚಕ (astringent) ಗುಣವಿದೆ. ಇದು ನಿಮ್ಮ ಚರ್ಮವನ್ನು ಸಂಕುಚಿಸಲು ನೆರವಾಗುತ್ತದೆ. ಈ ರಸವನ್ನು ತೆಗೆಯುವ ಅತ್ಯುತ್ತಮ ವಿಧಾನವೆಂದರೆ ಸೌತೆಯ ತುದಿಯಲ್ಲಿ ಅಡ್ಡಲಾಗಿ ಬಿಲ್ಲೆಯೊಂದನ್ನು ಕತ್ತರಿಸಿ ಕತ್ತರಿಸಿದ ಭಾಗಕ್ಕೇ ಮತ್ತೆ ಅಂಟಿಸಿ ನಯವಾಗಿ ಉಜ್ಜಿ, ಸ್ವಲ್ಪ ಸಮಯದ ಬಳಿಕ ಎರಡೂ ಬದಿಗಳಿಂದ ಚಮಚದಿಂದ ರಸವನ್ನು ಕೆರೆದು ತೆಗೆಯಿರಿ. ಇದೇ ರೀತಿ ನಾಲ್ಕಾರು ಬಿಲ್ಲೆಗಳನ್ನು ಉಜ್ಜುತ್ತಾ ಬಂದರೆ ಒಂದು ಚಮಚದಷ್ಟು ರಸ ಸಂಗ್ರಹವಾಗುತ್ತದೆ. ಈ ರಸವನ್ನು ಮಲಗಿಕೊಂಡು ಕಣ್ಣುಗಳ ವರ್ತುಲಗಳ ಮೇಲೆ ದಪ್ಪನಾಗಿ ಹಚ್ಚಿ. ಸುಮಾರು ಹತ್ತು ಅಥವಾ ಹದಿನೈದು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಸೌತೆಯನ್ನು ಜ್ಯೂಸರಿನಲ್ಲಿ ಕಡೆದು ರಸ ಹಿಂಡಿಯೂ ಬಳಸಬಹುದು, ಆದರೆ ಇದರ ಪರಿಣಾಮ ನಿಧಾನವಾಗಿರುತ್ತದೆ.

 ಸಲಹೆ 6: ಟೊಮೇಟೋ ರಸ ಹಚ್ಚಿ

ಸಲಹೆ 6: ಟೊಮೇಟೋ ರಸ ಹಚ್ಚಿ

ಟೊಮೇಟೋ ಹಣ್ಣಿನ ರಸವೂ ಉತ್ತಮ ಪರಿಣಾಮ ಬೀರುತ್ತದೆ. ಇದನ್ನು ಸೌತೆಕಾಯಿಯ ರಸದೊಂದಿಗೆ ಮಿಶ್ರಣ ಮಾಡಿ ಕಪ್ಪುವರ್ತುಲಗಳಿಗೆ ದಿನಕ್ಕೆರಡು ಬಾರಿ ಹಚ್ಚಿ ಹದಿನೈದು ನಿಮಿಷದ ಬಳಿಕ ತೊಳೆದುಕೊಳ್ಳಿ.

ಸಲಹೆ 7: ಸನ್ ಸ್ಕ್ರೀನ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಬಳಸಿ

ಸಲಹೆ 7: ಸನ್ ಸ್ಕ್ರೀನ್ ಅನ್ನು ನೀರಿನೊಂದಿಗೆ ಮಿಶ್ರಣ ಮಾಡಿ ಬಳಸಿ

ಒಂದು ವೇಳೆ ಬಿಸಿಲಿನಿಂದ ರಕ್ಷಣೆ ಪಡೆಯಲು ಸನ್ ಸ್ಕ್ರೀನ್ ಬಳಸುವುದು ಅನಿವಾರ್ಯವಾದರೆ ಕಪ್ಪು ವರ್ತುಲಗಳಿಗೆ ಹಚ್ಚುವ ಸಂದರ್ಭದಲ್ಲಿ ಕೊಂಚ ನೀರಿನೊಂದಿಗೆ ಬೆರೆಸಿ ಹಚ್ಚಿ.

Story first published: Monday, September 14, 2015, 10:26 [IST]
X
Desktop Bottom Promotion