ಸೌಂದರ್ಯದ ವಿಷಯದಲ್ಲಿ ಮಾತ್ರ ತಪ್ಪು ಮಾಡಿಕೊಳ್ಳಬೇಡಿ..!

ಸೌಂದರ್ಯ ಕಾಪಾಡಿಕೊಳ್ಳುವುದು ಎಲ್ಲರ ಕನಸು. ಅದರಲ್ಲೂ ಮಹಿಳೆಯರು ತಮ್ಮ ಹದಿಹರೆಯದ ಮುಖವನ್ನು ಬಹಳ ವರ್ಷಗಳವರೆಗೆ ಕಾಪಾಡಿಕೊಳ್ಳಲು ಇಚ್ಛಿಸುತ್ತಾರೆ. ಹದಿಹರೆಯದಲ್ಲಿ ಕಾಡುವ ಮೊಡವೆಗಳಿಗೆ ಸೂಕ್ತ ಆರೈಕೆಯಿಲ್ಲದಿದ್ದರೆ ಮುಖದ ಮೇಲೆ ಕಪ್ಪನೆಯ ಕಲೆಗಳು ಶಾಶ್ವತವಾಗಿ ಉಳಿಯಬಹುದು.

ಅಲ್ಲದೇ ಸೌಂದರ್ಯ ಉಳಿಸಲು ಬಳಸುವ ಪ್ರಸಾದನಗಳ ತಪ್ಪು ಉಪಯೋಗ ಅಥವಾ ಹೆಚ್ಚಿನ ಉಪಯೋಗದಿಂದ ಚರ್ಮ ನಿಧಾನವಾಗಿ ತನ್ನ ಸಹಜ ಆರೋಗ್ಯವನ್ನು ಕಳೆದುಕೊಂಡು ಹೆಚ್ಚಿನ ವಯಸ್ಸಾದಂತೆ ಕಾಣಿಸಲು ಪ್ರಾರಂಭಿಸುತ್ತದೆ. ಇನ್ನು ಬ್ಯೂಟಿ ಪಾರ್ಲರ್‌‌ಗೆ ಹಣ ಸುರಿಯುವುದನ್ನು ನಿಲ್ಲಿಸಿ!

ಸೌಂದರ್ಯ ವೃದ್ಧಿಸುವ ಭರದಲ್ಲಿ ಹಲವರು ತಪ್ಪು ವಿಧಾನಗಳನ್ನು ಅನುಸರಿಸಿ ವಿವಿಧ ಚರ್ಮದ ತೊಂದರೆಗಳಿಗೆ ಸಿಲುಕಿಕೊಳ್ಳುತ್ತಾರೆ. ಈ ಬಗ್ಗೆ ಅವರು ಅಜ್ಞಾನಿಗಳಾಗಿರುವುದು ಮುಖ್ಯ ಕಾರಣವಾಗಿದೆ.

ಸೂಕ್ತವಾದ ಆರೈಕೆ, ಸರಿಯಾದ ಕ್ರಮದಲ್ಲಿ ಪ್ರಸಾಧನಗಳ ಬಳಕೆ, ಉತ್ತಮ ಆಹಾರ, ನಿದ್ದೆಗಳಿಂದ ನಿಮ್ಮ ಚರ್ಮದ ಕಾಂತಿ, ಮೊಡವೆ, ಕಲೆಗಳಿಲ್ಲದೇ ಬಹಳಷ್ಟು ಕಾಲ ಉಳಿಯುವಂತೆ ಮಾಡಲು ಸಾಧ್ಯ. ಸಾಮಾನ್ಯವಾಗಿ ಸೌಂದರ್ಯವೃದ್ಧಿಯ ಭರದಲ್ಲಿ ಯಾವ ತಪ್ಪುಗಳಾಗುತ್ತವೆ ಎಂಬ ಮಾಹಿತಿಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ. ಸೌಂದರ್ಯ ಹಾಳು ಮಾಡುವ 5 ಮೇಕಪ್ ಮಿಸ್ಟೇಕ್ !

ಸೌಂದರ್ಯ ಪ್ರಸಾಧನಗಳ ಉಪಯೋಗ ಕ್ರಮಬದ್ಧವಾಗಿಲ್ಲದಿರುವುದು

ಸೌಂದರ್ಯ ಪ್ರಸಾಧನಗಳ ಉಪಯೋಗ ಕ್ರಮಬದ್ಧವಾಗಿಲ್ಲದಿರುವುದು

ಸೌಂದರ್ಯಕ್ಕೆ ಕ್ರಮಬದ್ಧವಾದ ಪ್ರಸಾಧನಗಳ ಉಪಯೋಗ ಮತ್ತು ಆರೈಕೆ ಅತಿ ಅಗತ್ಯವಾಗಿದೆ. ಉದಾಹರಣೆಗೆ ಮೇಕಪ್ ಮಾಡಿಕೊಂಡು ರಾತ್ರಿ ಹೊರಗೆ ಹೋಗಿದ್ದು ಬರುವ ವೇಳೆ ಸುಸ್ತಾಗಿ ಸೋಮಾರಿತನ ಆವರಿಸಿಕೊಂಡಿದ್ದರೆ ಮೇಕಪ್ ತೊಳೆದುಕೊಳ್ಳದೇ ಹಾಗೇ ಮಲಗುವ ಸಂಭವವಿರುತ್ತದೆ. ಇದು ಚರ್ಮಕ್ಕೆ ಅತ್ಯಂತ ಹಾನಿಕಾರಕವಾಗಿದೆ. ಎಷ್ಟೇ ಸುಸ್ತಾಗಿರಲಿ, ರಾತ್ರಿ ಮಲಗುವ ಮುನ್ನ ಮೇಕಪ್ ಸ್ವಚ್ಛವಾಗಿ ತೊಳೆದೇ ಮಲಗುವುದು ಅಗತ್ಯ. ಅಂತೆಯೇ ಸತ್ತ ಜೀವಕೋಶಗಳನ್ನು ನಿವಾರಿಸುವ ಕ್ರಮಗಳನ್ನು ವಾರಕ್ಕೆರಡು ಬಾರಿಯಾದರೂ ಅನುಸರಿಸಬೇಕು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸೌಂದರ್ಯದ ವಿಷಯದಲ್ಲಿ ಮಾತ್ರ ತಪ್ಪು ಮಾಡಿಕೊಳ್ಳಬೇಡಿ..!

ಸೌಂದರ್ಯದ ವಿಷಯದಲ್ಲಿ ಮಾತ್ರ ತಪ್ಪು ಮಾಡಿಕೊಳ್ಳಬೇಡಿ..!

ಕನಿಷ್ಠ ದಿನಕ್ಕೆರಡು ಬಾರಿ ಮುಖ ತೊಳೆದುಕೊಳ್ಳುವುದು, ಮಲಗುವ ಮುನ್ನ ಆರ್ದ್ರತೆ ನೀಡುವ ಕ್ರೀಂ ಅಥವಾ ಮಾಯಿಸ್ಚರೈಸರ್ ಹಚ್ಚಿಕೊಳ್ಳುವುದು ಮೊದಲಾದ ಕ್ರಮಬದ್ಧ ಅಭ್ಯಾಸಗಳನ್ನು ಅನುಸರಿಸಿದರೆ ಮಾತ್ರ ಚರ್ಮ ಸಹಜ ಕಳೆಯನ್ನು ಪಡೆಯುತ್ತದೆ. ಚಳಿಗಾಲದಲ್ಲಿ ಕೋಲ್ಡ್ ಕ್ರೀಂ ಬಳಸದಿರುವುದು, ಮುಖಕ್ಕೆ ಮೈಸೋಪು ಉಪಯೋಗಿಸುವುದು, ಹೊಸ ಪ್ರಸಾಧನವನ್ನು ದೇಹದ ಬೇರೆಡೆ ಹಚ್ಚಿ ಅಲರ್ಜಿಕಾರಕವೋ ಎಂದು ಪರೀಕ್ಷಿಸದೇ ಮುಖಕ್ಕೆ ಹಚ್ಚಿಕೊಳ್ಳುವುದು, ಅನಗತ್ಯ ಸಂದರ್ಭಗಳಲ್ಲಿಯೂ ಮೇಕಪ್ ಮಾಡಿಕೊಂಡಿರುವುದು ಮೊದಲಾದವು ಚರ್ಮದ ಕಾಂತಿ ಮತ್ತು ಆರೋಗ್ಯವನ್ನು ಕುಂಠಿತಗೊಳಿಸಬಹುದು.

ಬಿಸಿಲಿಗೆ ಒಡ್ಡಿಕೊಳ್ಳುವಾಗ ಸನ್ ಸ್ಕ್ರೀನ್ ಹಚ್ಚಿಕೊಳ್ಳದಿರುವುದು

ಬಿಸಿಲಿಗೆ ಒಡ್ಡಿಕೊಳ್ಳುವಾಗ ಸನ್ ಸ್ಕ್ರೀನ್ ಹಚ್ಚಿಕೊಳ್ಳದಿರುವುದು

ಬಿಸಿಲು ಪ್ರಖರವಾಗಿರಲಿ, ಮೋಡದ ನೆರಳಿರಲಿ, ಬಿಸಿಲಿನಲ್ಲಿರುವ ಅತಿನೇರಳೆ ಕಿರಣಗಳು ಚರ್ಮದ ಬಣ್ಣವನ್ನು ಗಾಢಗೊಳಿಸುತ್ತದೆ. ಆದ್ದರಿಂದ ಪ್ರತಿಬಾರಿ ಬಿಸಿಲಿಗೆ ಹೋಗುವ ಮೊದಲು ಉತ್ತಮ SPF (sun protection factor) ಇರುವ ಅಂದರೆ ಮೂವತ್ತಕ್ಕೂ ಹೆಚ್ಚಿರುವ ಕ್ರೀಂ ಹಚ್ಚಿಕೊಂಡೇ ಹೊರನಡೆಯಿರಿ. ಇಲ್ಲದಿದ್ದರೆ ಮೂವತ್ತಕ್ಕೇ ಐವತ್ತರ ಚರ್ಮ ಬೋನಸ್ ಆಗಿ ಪಡೆಯಿರಿ!

ಅವಧಿಮುಗಿದ ಪ್ರಸಾಧನಗಳನ್ನು ಬಳಸುವುದು

ಅವಧಿಮುಗಿದ ಪ್ರಸಾಧನಗಳನ್ನು ಬಳಸುವುದು

ನಿಮ್ಮ ಆಹಾರವಸ್ತುಗಳಿಗಿರುವಂತೆ ಸೌಂದರ್ಯ ಪ್ರಸಾದನಗಳಿಗೂ ಬಳಕೆಯ ಗರಿಷ್ಟ ದಿನಾಂಕವಿರುತ್ತದೆ. ಈ ದಿನಾಂಕ ಕಳೆದ ಬಳಿಕ ಎಂದಿಗೂ ಹಚ್ಚಿಕೊಳ್ಳಬೇಡಿ. ಇದು ನಿಮ್ಮ ಚರ್ಮಕ್ಕೆ ಹಿಂದೆಬರಲಾರದಷ್ಟು ಹಾನಿಯುಂಟುಮಾಡಬಹುದು. ಚರ್ಮದಲ್ಲಿ ನೆರಿಗೆ, ಅಲರ್ಜಿ ಮೊದಲಾದ ತೊಂದರೆಗಳು ಎದುರಾಗಬಹುದು. ಅದರಲ್ಲೂ ಅವಧಿ ಮೀರಿದ ಕಣ್ಣಿನ ಪ್ರಸಾದನಗಳು ಕಣ್ಣುಗಳ ಕೆಳಗೆ ಕಪ್ಪು ವರ್ತುಲವನ್ನೂ ಕಣ್ಣುಗಳಲ್ಲಿ ತುರಿಕೆ ಮೊದಲಾದ ತೊಂದರೆಗಳನ್ನೂ ತರಬಹುದು.

ರಾತ್ರಿ ಮೇಕಪ್ ನಿವಾರಿಸದೇ ಮಲಗುವುದು

ರಾತ್ರಿ ಮೇಕಪ್ ನಿವಾರಿಸದೇ ಮಲಗುವುದು

ರಾತ್ರಿ ಮನೆಸೇರಿದ ಬಳಿಕ ಸುಸ್ತಾಗಿ ಮೇಕಪ್ ನಿವಾರಿಸಲು ತ್ರಾಣವಿಲ್ಲದೇ ಹಾಗೇ ಮಲಗಿದರೆ ಮುಖದ ಚರ್ಮ ಅತಿಹೆಚ್ಚು ಘಾಸಿಗೊಳ್ಳುತ್ತದೆ. ಎಷ್ಟೇ ಕಷ್ಚವಾದರೂ ರಾತ್ರಿ ಮಲಗುವ ಮುನ್ನ ಮೇಕಪ್ ತೆಗೆದೇ ಮಲಗಬೇಕು. ಇಲ್ಲದಿದ್ದರೆ ಚರ್ಮದ ಸೂಕ್ಷ್ಮರಂಧ್ರಗಳಿಂದ ಬೆವರು, ತೈಲ ಮತ್ತು ಇತರ ದ್ರವಗಳು ಹೊರಬರದೇ ಒಳಗೇ ಗಟ್ಟಿಯಾಗಿಬಿಡುತ್ತವೆ. ಇದು ಮೊಡವೆ, ಕೀವುಗುಳ್ಳೆ, ಬ್ಲಾಕ್ ಹೆಡ್ ಮೊದಲಾದ ತೊಂದರೆಗಳಿಗೆ ಮೂಲವಾಗಿದೆ.

ನಿಮ್ಮ ಚರ್ಮದೊಡನೆ ಒರಟಾಗಿ ವರ್ತಿಸುವುದು

ನಿಮ್ಮ ಚರ್ಮದೊಡನೆ ಒರಟಾಗಿ ವರ್ತಿಸುವುದು

ಕೆಲವರಿಗೆ ಟವೆಲ್ಲನ್ನು ಮುಖಕ್ಕೂ ದೇಹದ ಇತರಭಾಗಗಳಿಗೂ ಗಸಗಸ ಉಜ್ಜಿ ಒರೆಸುವ ಅಭ್ಯಾಸವಿರುತ್ತದೆ. ಅದರಲ್ಲೂ ಸ್ನಾನದ ಬಳಿಕ ಈ ರೀತಿ ಉಜ್ಜಿಕೊಂಡರೆ ಮುಖದ ಚರ್ಮ ಶೀಘ್ರವೇ ನೆರಿಗೆಗೆ ಒಳಗಾಗುತ್ತದೆ. ಚಮಕ್ಕೆ ಹಿತವಾಗುವಷ್ಟು ಮಾತ್ರ ಆರೈಕೆ ಸಾಕು. ಹಬೆಸ್ನಾನ, ರಾಸಾಯನಿಕಗಳನ್ನು ಉಪಯೋಗಿಸಿಕೊಂಡು ಚರ್ಮವನ್ನು ಬಿಳಿಚಿಸುವ ಪ್ರಯತ್ನ ಮೊದಲಾದವು ಚರ್ಮವನ್ನು ಘಾಸಿಗೊಳಿಸಬಹುದು. ಚರ್ಮವನ್ನು ಸಾಕಷ್ಟು ಜತನದಿಂದ ಮತ್ತು ಕೋಮಲತೆಯಿಂದ ಆರೈಕೆಮಾಡಿ ಕಾಪಾಡಿಕೊಂಡು ಬಂದರೆ ಐವತ್ತರಲ್ಲಿಯೂ ಇಪ್ಪತ್ತರ ಸೌಂದರ್ಯ ಉಳಿಸಿಕೊಳ್ಳಬಹುದು.

X
Desktop Bottom Promotion