Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆನ್ನುಬಿಡದೇ ಕಾಡುವ ತ್ವಚೆಯ ಸಮಸ್ಯೆಯ ಬಗ್ಗೆ ಎಚ್ಚರ ತಪ್ಪದಿರಿ!
ನೀವು ತ್ವಚೆಯ ಸಮಸ್ಯೆಗಳಿಂದ ಬಳಲುತ್ತಿದ್ದೀರಾ? ಅನೇಕ ಔಷಧೋಪಚಾರಗಳ ನಂತರ ಸಹ ನಿಮಗೆ ಪರಿಹಾರ ದೊರೆಯಲಿಲ್ಲವೇ? ಒಣ ತ್ವಚೆ ನಿಮಗಿದೆಯೇ? ಆದರೆ ಅದನ್ನು ಪರಿಹರಿಸಲು ನಿಮ್ಮಿಂದ ಆಗುತ್ತಿಲ್ಲವೇ, ಯಾವುದಾದರು ಗಂಭೀರ ಪ್ರಮಾಣದ ಇನ್‍ಫೆಕ್ಷನ್ ನಿಮಗಿದೆಯೇ?
ಈ ಲೇಖನದಲ್ಲಿ ಅಂತಹ ಸಮಸ್ಯೆಗಳಿಗೆ ನಾವು ಪರಿಹಾರಗಳನ್ನು ಸೂಚಿಸುತ್ತೇವೆ. ಎಂತಹ ಇನ್‍ಫೆಕ್ಷನ್‍ಗಳು ನಿಮ್ಮನ್ನು ಭಾದಿಸುತ್ತವೆ ಎಂಡು ತಿಳಿದುಕೊಳ್ಳಲು ನೀವು ಬಯಸುವಿರಾ? ಮುಂದೆ ಓದಿ
ಸ್ಕಿನ್ ಟ್ಯಾಗ್
ಇವು ಸಣ್ಣ ಪ್ರಮಾಣ, ಮೃದುವಾವಿಗಿರುವ ಇದು ಸಾಮಾನ್ಯವಾಗಿ ಮಧ್ಯ ವಯಸ್ಕರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಗೆ 1-100 ಸ್ಕಿನ್ ಟ್ಯಾಗ್ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಇದು ಸಾಮಾನ್ಯವಾಗಿ ಕತ್ತು, ಕಂಕುಳು, ಕಣ್ಣಿನ ಪಕ್ಕ, ಎದೆ ಭಾಗದ ಕೆಳಗೆ ಕಾಣಿಸಿಕೊಳ್ಳುತ್ತದೆ.

ರ‍್ಯಾಷಸ್
ಒಣ ತ್ವಚೆ ಇರುವವರಲ್ಲಿ ಸಾಮಾನ್ಯವಾಅಗಿ ರ‍್ಯಾಷಸ್ ಕಂಡು ಬರುತ್ತದೆ. ಇದು ಸಾಮಾನ್ಯವಾಗಿ ಇನ್‍ಫೆಕ್ಷನ್ ಎಂದು ಪರಿಗಣಿಸಲ್ಪಡುವುದಿಲ್ಲ. ಕೆಂಪು ಬಣ್ಣದ ಉಕ್ಕಿದಂತಹ ತ್ವಚೆಯ ಸಮಸ್ಯೆಯನ್ನು ನಾವು ರ‍್ಯಾಷಸ್ ಎಂದು ಕರೆಯುತ್ತೇವೆ. ರ‍್ಯಾಷಸ್‍ನಲ್ಲಿ ಕಜ್ಜಿ, ಉಷ್ಣದ ರ‍್ಯಾಷಸ್ ಮತ್ತು ಪಾಯಿಸನ್ ಐವಿ ರ‍್ಯಾಷಸ್ ಎಂಬ ಹಲವು ಬಗೆಗಳಿವೆ.
ತುರಿಕೆ
ತುರಿಕೆಯ ವೈಧ್ಯಕೀಯ ಹೆಸರು ಪ್ರುರಿಟಸ್. ಕಡಿತಗಳು, ಮುಳ್ಳುಗಳು, ಇನ್‍ಫೆಕ್ಷನ್‍ಗಳು, ಇನ್‍ಫೆಸ್ಟೇಷನ್ಸ್, ಬಿಸಿಲಿಗೆ ಹೆಚ್ಚಾಗಿ ಒಡ್ಡಿಕೊಳ್ಳುವುದು ಮುಂತಾದ ಸಮಸ್ಯೆಗಳು ತುರಿಕೆಯನ್ನು ಉಂಟು ಮಾಡುತ್ತವೆ. ತುರಿಕೆಯನ್ನು ನಿವಾರಿಸಲು ವಿಶೇಷವಾದ ಕ್ರಿಮ್‍ಗಳು ಲಭ್ಯವಿವೆ. ಬಾಳೆಹಣ್ಣಿನ ಕರಾಮತ್ತಿನಲ್ಲಿದೆ ಶುಷ್ಕ ತ್ವಚೆ ಸಮಸ್ಯೆಗೆ ಪರಿಹಾರ!
ಅಥ್ಲೆಟ್ಸ್ ಫೂಟ್
ಪಾದ ಮತ್ತು ಕಾಲ್ಬೆರಳುಗಳ ಜಾಗದಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆ ಇದು. ಕಾಲಿನಲ್ಲಿ ಕಾಣಿಸಿಕೊಳ್ಳುವ ಶಿಲೀಂಧ್ರ ಅಥವಾ ಫಂಗಸ್ ಇದಕ್ಕೆ ಕಾರಣವಾಗುತ್ತದೆ. ಇದು ದೇಹದ ಇತರೆ ಭಾಗಗಳಿಗು ಸಹ ಹಬ್ಬುತ್ತದೆ. ಇದೊಂದು ಬಗೆಯ ಇನ್‍ಫೆಕ್ಷನ್ ಸ್ಥಿತಿಯಾಗಿದ್ದು, ಮೊದಲು ಇದನ್ನು ನಿವಾರಿಸಬೇಕು. ಈ ಸಮಯದಲ್ಲಿ ಈ ಇನ್‍ಫೆಕ್ಷನ್ ಇತರರಿಗೆ ಹಬ್ಬದಂತೆ ನೀವು ಬರಿಗಾಲಿನಲ್ಲಿ ಓಡಾಡಬೇಡಿ. ಇದು ನೋವಿನಿಂದ ಕೂಡಿರುತ್ತದೆ. ಜೊತೆಗೆ ಉರಿ, ತುರಿಕೆ, ಹರಡುವ ಸಮಸ್ಯೆ ಸಹ ಇರುತ್ತದೆ. ದಿನಕ್ಕೆರಡು ಬಾರಿ ಮುಖ ತೊಳೆಯಿರಿ, ವ್ಯತ್ಯಾಸ ನೀವೇ ನೋಡಿ!
ಅಟೊಪಿಕ್ ಡರ್ಮಟಿಟಿಸ್
ಈ ತ್ವಚೆಯ ಸ್ಥಿತಿಯನ್ನು ಜೆನೆಟಿಕ್ ಎಕ್ಸ್ಜಿಮಾ ಅಥವಾ ವಂಶವಾಹಿ ಕಜ್ಜಿ ಎಂದು ಕರೆಯುತ್ತಾರೆ. ಸಿಕ್ಕಾಪಟ್ಟೆ ಸೂಕ್ಷ್ಮವಾಗಿರುವ ತ್ವಚೆಯನ್ನು ಹೊಂದಿರುವವರಿಗೆ ಈ ಸಮಸ್ಯೆ ಕಂಡು ಬರುತ್ತದೆ. ಒಣ ಮತ್ತು ಹರಡಿಕೊಂಡು ಹೋಗುವ ತ್ವಚೆಯ ಕಲೆಗಳು ಇದರಿಂದ ಬರುತ್ತವೆ. ಇದು ಸಹ ಸಿಕ್ಕಾಪಟ್ಟೆ ತುರಿಕೆಯಿಂದ ಕೂಡಿರುತ್ತದೆ. ಕೆರೆದುಕೊಳ್ಳಲು ಸಹ ಇದರಿಂದ ಕಷ್ಟವಾಗುತ್ತದೆ.



Click it and Unblock the Notifications

