Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೌಂದರ್ಯ ಹೆಚ್ಚಿಸುವ, ಜೇನು ಎಂಬ ಅಮೃತ ದ್ರವ್ಯ
ಯಾರಿಗೆ ತಾನೆ ಜೇನು ತುಪ್ಪ ಇಷ್ಟವಾಗುವುದಿಲ್ಲ? ಬಹುಶಃ ನಾವು ಸೇವಿಸುವ ಆಹಾರಗಳಲ್ಲಿಯೇ ಅತ್ಯಂತ ಪ್ರಯೋಜನಕಾರಿಯಾದ ಪದಾರ್ಥವೆಂದರೆ ಜೇನು ತುಪ್ಪವೇ ಇರಬೇಕು. ಇದರ ಸಿಹಿಯನ್ನು ನಾವು ಊಹಿಸಿಕೊಂಡಿದ್ದಕ್ಕಿಂತ ಹೆಚ್ಚು ರೀತಿಯಲ್ಲಿ ಬಳಸಿಕೊಳ್ಳಬೇಕು. ಕುಂಬಳಕಾಯಿ ಬೀಜಗಳೊಂದಿಗೆ ಅದ್ದಿಕೊಂಡು ತಿನ್ನುವುದರಿಂದ ಹಿಡಿದು ಕಾಕ್‍ಟೇಲ್‍ವರೆಗೆ ಇದು ಬೇಕಾಗುತ್ತದೆ. ಇನ್ನು ನೆಗಡಿಯಾಗಿ ಕೆಮ್ಮು ಬಂದಾಗ ಇದು ಮನೆಮದ್ದಾಗುತ್ತದೆ. ತ್ವಚೆಗೆ ತಕ್ಕಂತೆ ಆರೈಕೆ ಹೆಚ್ಚಿಸುವುದು ಸೌಂದರ್ಯ
ಜೊತೆಗೆ ಸೆಣಬಿನ ಬೀಜಗಳು ಮತ್ತು ಚಿಯಾ ಬೀಜಗಳ ಜೊತೆಗು ಸಹ ಇದು ಮಧುರವಾಗಿ ಬೆರೆತು ರುಚಿ ನೀಡುತ್ತದೆ. ಇದೆಲ್ಲವು ನಮಗೆ ಒಂದು ಪ್ರಶ್ನೆಯನ್ನು ಮುಂದಿಡುತ್ತವೆ: ಈ ಜೇನು ತುಪ್ಪವು ನಾವು ಇನ್ನು ತಿಳಿಯದೆ ಇರುವ ಯಾವುದಾದರು ಕೆಲಸಗಳಿಗೆ ಪ್ರಯೋಜನಕ್ಕೆ ಬರುತ್ತದೆಯೇ?
ಹೌದು ಇದು ಮತ್ತಷ್ಟು ಪ್ರಯೋಜನಗಳನ್ನು ನೀಡುತ್ತದೆ. ಅದು ಸಾಬೀತು ಸಹ ಆಗಿದೆ. ಬನ್ನಿ ಅದನ್ನೇ ನಾವು ನಿಮಗೆ ಇಂದು ತಿಳಿಸುತ್ತಿರುವುದು. ಅದರಲ್ಲಿಯೂ ನೀವೇ ಮಾಡಿಕೊಳ್ಳಬಹುದಾದ ಕೆಲವೊಂದು ಸೌಂದರ್ಯ ಚಿಕಿತ್ಸೆಗಳನ್ನು ನಾವು ಇಲ್ಲಿ ನೀಡುತ್ತಿದ್ದೇವೆ..

ಓಟ್‍ಮೀಲ್ ಜೇನು ತುಪ್ಪದ ಸ್ಕ್ರಬ್
ಈ ಸ್ಕ್ರಬ್ ನಿಮ್ಮ ಪ್ರತಿದಿನದ ಕ್ಲೀನ್ಸರ್‌ನಂತೆಯೇ ನಿಮ್ಮ ಪ್ರಯೋಜನಕ್ಕೆ ಬರುತ್ತದೆ. ಅದರಲ್ಲೂ ಚಳಿಗಾಲದಲ್ಲಿ ತ್ವಚೆ ಒಡೆಯುವ ಸಮಯದಲ್ಲಿ ಇದು ಪರಿಣಾಮಕಾರಿಯಾಗಿ ತನ್ನ ಕಾರ್ಯಕ್ಷಮತೆಯನ್ನು ತೋರಿಸುತ್ತದೆ. ಜೊತೆಗೆ ತುರಿಕೆ ಬರುವ ತ್ವಚೆಯ ಸಮಸ್ಯೆಯನ್ನು ನೀಗಿಸುತ್ತದೆ.

ಜೇನು ತುಪ್ಪದ ಶಾಂಪೂ
ನೀರು ಮತ್ತು ಜೇನು ತುಪ್ಪದಿಂದ ಮಾಡಿದ ಶಾಂಪೂ ತನ್ನಲ್ಲಿರುವ ಸ್ವಾಭಾವಿಕ ತೈಲಗಳ ದೆಸೆಯಿಂದ ನಿಮ್ಮ ಕೂದಲನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ. ಅಲ್ಲದೆ ಕೂದಲು ಸಿಕ್ಕಾಗದಂತೆ ಮತ್ತು ತಲೆ ಹೊಟ್ಟು ಬರದಂತೆ ಕಾಪಾಡಿ, ನಿಮ್ಮ ಕೂದಲನ್ನು ಮೃದುವಾಗಿ, ರೇಷ್ಮೆಯಂತೆ ಹೊಳಪಿನಿಂದ ಕಂಗೊಳಿಸುವಂತೆ ಮಾಡುತ್ತದೆ. ಇದನ್ನು ಕೇಳಿದರೆ ನಿಮಗೆ ಈ ಶಾಂಪೂವಿನ ಮೇಲೆ ಅಕ್ಕರೆ ಬರುವುದಿಲ್ಲವೇನು?

ಜೇನು ತುಪ್ಪ ಹೇರ್ ಮಾಸ್ಕ್
ಒಂದು ವೇಳೆ ನೀವು ಜೇನು ತುಪ್ಪದ ಶಾಂಪೂವನ್ನು ಬಿಡಲು ನಿರ್ಧರಿಸಿದಲ್ಲಿ, ಹೇರ್ ಮಾಸ್ಕ್ ನಿಮಗೆ ಒಳ್ಳೆಯ ಆಯ್ಕೆಯಾಗಿರುತ್ತದೆ. ಇದು ದುಬಾರಿ ಅಲ್ಲ, ಆದರೆ ಅತ್ಯಂತ ಪ್ರಯೋಜನಕಾರಿ. ನಿಮ್ಮ ಕೂದಲಿಗೆ ಅಗತ್ಯವಾದ ಮೊಯಿಶ್ಚರೈಸಿಂಗ್ ನೀಡುತ್ತದೆ ಮತ್ತು ಅದರ ಸೌಂದರ್ಯವನ್ನು ಇದು ವೃದ್ಧಿಸುತ್ತದೆ.

ಜೇನು ತುಪ್ಪ ಬಾಡಿ ವಾಷ್
ನಾಲ್ಕು ಸರಳ ಪದಾರ್ಥಗಳು, ಒಂದು ಬಾಟಲ್ ಅಷ್ಟೇ. ಸ್ವಾಭಾವಿಕವಾದ ಈ ಎಲ್ಲಾ ಅಂಶಗಳು ನಿಮ್ಮ ಸೂಕ್ಷ್ಮ ತ್ವಚೆಗೆ ಸರಿಸಾಟಿಯಿಲ್ಲದ ಪರಿಪೂರ್ಣವಾದ ಆರೈಕೆ ಮತ್ತು ಸ್ವಚ್ಛತೆಯನ್ನು ಒದಗಿಸುತ್ತವೆ.

ಅವೊಕ್ಯಾಡೊ ಜೇನು ತುಪ್ಪದ ಮಾಸ್ಕ್
ನಾವು ಸಾಮಾನ್ಯವಾಗಿ ನಮ್ಮ ಸೌಂದರ್ಯದ ಬಗ್ಗೆ ಎಲ್ಲರ ಮುಂದೆ ಜಂಭಕೊಚ್ಚಿಕೊಳ್ಳುವುದಿಲ್ಲ. ಆದರೆ ಈ ಜೇನು ತುಪ್ಪ ಮತ್ತು ಅವೊಕ್ಯಾಡೊಗಳ ಮಾಸ್ಕ್ ನಿಸ್ಸಂಶಯವಾಗಿ ನಿಮ್ಮ ಸೌಂದರ್ಯಕ್ಕೆ ಗರಿ ಮೂಡಿಸುತ್ತದೆ. ಇದನ್ನು ಬಳಸುವುದು ಸ್ವಲ್ಪ ಗೋಜಲಾದರು, ಬಳಸಿದ ನಂತರ ಸಿಗುವ ಫಲಿತಾಂಶವು ನಿಸ್ಸಂಶಯವಾಗಿ ನಿಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.



Click it and Unblock the Notifications
