Latest Updates
-
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್ -
ಸೂರ್ಯ ಬುಧನಿಂದ ಬುಧಾದಿತ್ಯ ಯೋಗ; ಈ ರಾಶಿಯವರ ಬದುಕಲ್ಲಿ ಬೆಳಕು, ಕಷ್ಟಗಳು ಪರಿಹಾರ -
ಯುಗಾದಿ ಹೊಸತೊಡಕು.. ಮಟನ್ ಖರೀದಿಸುವಾಗ ಮೋಸ ಹೋಗಬೇಡಿ! ಫ್ರೆಶ್ ಇದ್ಯಾ? ಅಥವಾ ನಿನ್ನೆಯದ್ದೇ? ಹೀಗೆ ಗುರುತಿಸಿ
ಒಣತ್ವಚೆಗೆ ಬೇಕು ಸೂಕ್ತ ರೀತಿಯ ಮನೆಮದ್ದಿನ ಉಪಚಾರ
ಸೌಂದರ್ಯದ ಕುರಿತಾಗಿ ನಾವು ಎಷ್ಟೇ ಕಾಳಜಿ ವಹಿಸಿದರೂ ಅದು ಕಡಿಮೆಯೇ. ಅದರಲ್ಲೂ ಒಣ ತ್ವಚೆ ಇರುವವರು ಈ ಸಮಸ್ಯೆಯನ್ನು ಹೆಚ್ಚು ಅನುಭವಿಸುತ್ತಿದ್ದು ಚಳಿಗಾಲದಲ್ಲಿ ಈ ಸಮಸ್ಯೆ ತುಸು ಗಂಭೀರವಾಗಿಯೇ ಅವರಿಗೆ ಕಾಡುತ್ತದೆ. ಸಾಮಾನ್ಯವಾಗಿ ಪೋಷಕಾಂಶಗಳ ಕೊರತೆ ಕಡಿಮೆಯಾದಾಗ ಒಣ ತ್ವಚೆ ಸಮಸ್ಯೆ ಕಂಡುಬರುತ್ತದೆ. ಚಳಿಗಾಲದಲ್ಲಿ ಒಣ ತ್ವಚೆಯಿಂದ ಚರ್ಮ ಒಡೆಯುವುದು, ತ್ವಚೆಯ ಬಣ್ಣ ಹಾಳಾಗುವುದು ಹೀಗೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಚಳಿಗಾಲದಲ್ಲಿ ಒಣ ಚರ್ಮಕ್ಕೆ ಫೇಸ್ ಪ್ಯಾಕ್
ಸೌಂದರ್ಯದ ವಿಷಯಕ್ಕೆ ಬಂದಾಗ ಒಣ ತ್ವಚೆ ಸಮಸ್ಯೆಯನ್ನು ನಿಯಂತ್ರಣದಲ್ಲಿಡಲು ಹಲವಾರು ಲೋಶನ್‌ಗಳು, ಮಾಯಿಶ್ಚರೈಸರ್‌ಗಳು ಮತ್ತು ಕ್ರೀಮ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಇವು ನಿಮಗೆ ಬರುವ ಒಣತ್ವಚೆ ಸಮಸ್ಯೆಯನ್ನು ಹೋಗಲಾಡಿಸುವುದಲ್ಲದೆ, ಈ ಮಾಯಿಶ್ಚರೈಸರ್‌ಗಳು ತ್ವಚೆಯಲ್ಲಿ ಗಟ್ಟಿಯಾಗಿ ನೆಲೆಯೂರಿರುವ ರಂಧ್ರಗಳನ್ನು ಮುಚ್ಚುತ್ತವೆ. ಆದರೆ ಈ ಕ್ರೀಮ್‌ಗಳು ಲೋಶನ್‌ಗಳು ರಾಸಾಯನಿಕಗಳನ್ನು ಒಳಗೊಂಡಿರುತ್ತವೆ ಇವುಗಳ ಬಳಕೆಯಿಂದ ಹೊರನೋಟಕ್ಕೆ ಸಮಸ್ಯೆ ನಿವಾರಣೆಯಾದರೂ ಅದರಿಂದ ಬೇರೆ ಕೆಲವು ಸಮಸ್ಯೆಗಳು ಉದ್ಭವವಾಗಬಹುದು. ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ
ಹಾಗಾಗಿ ಮಾರುಕಟ್ಟೆಯಲ್ಲಿರುವ ಉತ್ಪನ್ನಗಳಿಗೆ ಹೋಲಿಸಿದರೆ, ಮನೆಯಲ್ಲಿ ಇರುವ ಮನೆ ಮದ್ದುಗಳು ನಿಮ್ಮ ಒಣತ್ವಚೆಯನ್ನು ಹೋಗಲಾಡಿಸುವ ಅತ್ಯುತ್ತಮ ಉತ್ಪನ್ನಗಳಾಗಿರುತ್ತವೆ. ಇವು ತ್ವಚೆಗೆ ಆಹ್ಲಾದಕತೆಯನ್ನು ತರುತ್ತವೆ ಮತ್ತು ಅವುಗಳಿಗೆ ಪುನಃಶ್ಚೇತನವನ್ನು ನೀಡುತ್ತವೆ. ಈ ಸ್ವಾಭಾವಿಕ ಮೊಯಿಶ್ಚರೈಸರ್‌ಗಳಲ್ಲಿ ವಿಟಮಿನ್‌ಗಳು ಹೆಚ್ಚಾಗಿರುತ್ತವೆ ಮತ್ತು ಇವು ತ್ವಚೆಗೆ ಆರೋಗ್ಯವನ್ನು ನೀಡುತ್ತವೆ. ಈ ಲೇಖನದಲ್ಲಿ ಬೋಲ್ಡ್ ಸ್ಕೈ ನಿಮಗಾಗಿ ಒಣ ತ್ವಚೆಯಿಂದ ಪಾರಾಗುವ ಕೆಲವೊಂದು ಮನೆಮದ್ದುಗಳ ಸಲಹೆಗಳನ್ನು ನೀಡುತ್ತಿದ್ದು ಅವುಗಳ ಕುರಿತು ತಿಳಿದುಕೊಳ್ಳಲು ಮುಂದೆ ಓದಿ....

ಜೇನು ತುಪ್ಪ ಮತ್ತು ಮೊಟ್ಟೆಯ ಹಳದಿ ಭಾಗ
ಈ ಸಲಹೆಗಳಲ್ಲಿ ಅಗ್ರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದು ಜೇನು ತುಪ್ಪ ಮತ್ತು ಮೊಟ್ಟೆಯ ಹಳದಿ ಭಾಗ. ಇವುಗಳ ಮಿಶ್ರಣವು ನಿಮ್ಮ ಒಣ ತ್ವಚೆಗೆ ಅಗತ್ಯವಾದ ಮೊಯಿಶ್ಚರೈಸರ್ ಅನ್ನು ನೀಡುತ್ತದೆ. ಇದಕ್ಕಾಗಿ ಜೇನು ತುಪ್ಪ ಮತ್ತು ಮೊಟ್ಟೆಯ ಹಳದಿ ಭಾಗ ಎರಡನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದನ್ನು ನಿಮ್ಮ ಒಣ ತ್ವಚೆಗೆ ಲೇಪಿಸಿ ಸ್ವಲ್ಪ ಸಮಯ ಬಿಡಿ, ನಂತರ ಇದನ್ನು ಬೆಚ್ಚಗಿನ ನೀರಿನಿಂದ ತೊಳೆಯಿರಿ.

ಎಳ್ಳೆಣ್ಣೆ
ಎಳ್ಳೆಣ್ಣೆಯು ನಿಮ್ಮ ತ್ವಚೆಗೆ ಈ ಚಳಿಗಾಲದ ಸಮಯದಲ್ಲಿ ಉತ್ತಮ ಆರೈಕೆಯನ್ನು ನೀಡುತ್ತದೆ. ಇದರಲ್ಲಿ ಉತ್ತಮವಾದ ಮೊಯಿಶ್ಚರೈಸಿಂಗ್ ಗುಣಗಳು ಇರುತ್ತವೆ. ಎಳ್ಳೆಣ್ಣೆಯಲ್ಲಿ ಅಧಿಕ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟ್‌ಗಳು, ಖನಿಜಾಂಶಗಳು ಮತ್ತು ಪ್ರೋಟಿನ್‌ಗಳು ಇರುತ್ತವೆ. ಇವು ತ್ವಚೆಗೆ ಉತ್ತಮ ಪ್ರಯೋಜನವನ್ನು ನೀಡುತ್ತವೆ. ಇವು ತ್ವಚೆಯ ಒಣ ಅಂಶವನ್ನು ನಿವಾರಿಸುತ್ತದೆ ಮತ್ತು ತ್ವಚೆಯಲ್ಲಿರುವ ಮಚ್ಚೆಗಳಂತಹ ಕಲೆಗಳನ್ನು ಸಹ ನಿವಾರಿಸುತ್ತದೆ. ಹಾಗಾಗಿ ಎಳ್ಳೆಣ್ಣೆಯನ್ನು ನಿಮ್ಮ ತ್ವಚೆಗೆ ಲೇಪಿಸಿ ಸ್ವಲ್ಪ ಸಮಯ ಬಿಡಿ. ನಂತರ ಅದನ್ನು ತೊಳೆಯಿರಿ.

ತೆಂಗಿನ ಎಣ್ಣೆ
ತೆಂಗಿನ ಎಣ್ಣೆಯು ಸ್ವಾಭಾವಿಕವಾದ ಮೊಯಿಶ್ಚರೈಸರ್ ಗುಣಗಳನ್ನು ಹೊಂದಿರುವ ತೈಲವಾಗಿದೆ. ಇದು ಒಣ ತ್ವಚೆಗೆ ಹೇಳಿ ಮಾಡಿಸಿದ ಮನೆ ಮದ್ದಾಗಿರುತ್ತದೆ. ನಿಮಗೆ ಒಣ ತ್ವಚೆ ಸಮಸ್ಯೆ ಇದ್ದಲ್ಲಿ, ತೆಂಗಿನ ಎಣ್ಣೆಯನ್ನು ಲೇಪಿಸಿ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಗುಣಗಳು ನಿಮ್ಮ ತ್ವಚೆಯನ್ನು ಮೊಯಿಶ್ಚರೈಸ್ ಮಾಡುವುದರ ಜೊತೆಗೆ ನಿಮ್ಮ ತ್ವಚೆಗೆ ಸ್ವಾಭಾವಿಕವಾಗಿ ಹೊಳಪನ್ನು ಸಹ ನೀಡುತ್ತವೆ.

ಜೇನು ತುಪ್ಪ ಮತ್ತು ಹಾಲು
ಇದು ಒಣ ತ್ವಚೆಯನ್ನು ನಿವಾರಿಸಲು ಇರುವ ಅತ್ಯುತ್ತಮ ಮನೆ ಮದ್ದಾಗಿರುತ್ತದೆ. ಈ ಮಿಶ್ರಣವು ನಿಮ್ಮ ತ್ವಚೆಗೆ ಟೋನರ್ ಆಗಿ ಸಹ ವರ್ತಿಸುತ್ತದೆ. ಇದಕ್ಕಾಗಿ 2 ಟೇಬಲ್ ಚಮಚ ಜೇನು ತುಪ್ಪವನ್ನು 2 ಟೇಬಲ್ ಚಮಚ ಹಾಲಿನ ಜೊತೆಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಿಮ್ಮ ತ್ವಚೆಗೆ ಲೇಪಿಸಿ, ಸ್ವಲ್ಪ ಸಮಯ ಬಿಡಿ, ಆ ನಂತರ ತೊಳೆಯಿರಿ.

ಕಡಲೆ ಹಿಟ್ಟಿನ ಪ್ಯಾಕ್
ಕಡಲೆ ಹಿಟ್ಟು ಒಣ ತ್ವಚೆಯನ್ನು ಹೈಡ್ರೇಟ್ ಮಾಡುತ್ತದೆ ಹಾಗು ಸುಕ್ಕು ಮತ್ತು ಗೆರೆಗಳನ್ನು ನಿವಾರಿಸುತ್ತದೆ. ಈ ಪ್ಯಾಕನ್ನು ತಯಾರಿಸಲು ಎರಡು ಟೇಬಲ್ ಸ್ಪೂನ್ ಕಡಲೆ ಹಿಟ್ಟು, ಒಂದು ಟೀ ಸ್ಪೂನ್ ಅರಿಶಿಣ, ಒಂದು ಟೀ ಚಮಚ ಜೇನು ತುಪ್ಪ ಮತ್ತು ಸ್ವಲ್ಪ ಹಾಲನ್ನು ತೆಗೆದುಕೊಳ್ಳಿ. ಇದರ ಜೊತೆಗೆ ಸ್ವಲ್ಪ ನಿಂಬೆ ರಸವನ್ನು ಸಹ ಇದಕ್ಕೆ ಬೆರೆಸಿ, ನಂತರ ಮುಖದ ಮೇಲೆ ಲೇಪಿಸಿ, ನಂತರ ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.

ಬಾಳೆಹಣ್ಣಿನ ಮಾಸ್ಕ್
ಎರಡು ಬಾಳೆಹಣ್ಣನ್ನು ತೆಗೆದುಕೊಳ್ಳಿ, ಸಿಪ್ಪೆ ಸುಲಿದು ಅದನ್ನು ಮಿಕ್ಸರ್‌ನಲ್ಲಿ ರುಬ್ಬಿಕೊಳ್ಳಿ. ನಂತರ ಇದನ್ನು ಮುಖಕ್ಕೆ ಲೇಪಿಸಿಕೊಳ್ಳಿ ಮತ್ತು ಒಂದು ಗಂಟೆ ಬಿಟ್ಟು ಬೆಚ್ಚನೆಯ ನೀರಿನಿಂದ ತೊಳೆಯಿರಿ.



Click it and Unblock the Notifications











