Latest Updates
-
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ -
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್
ಮುಖದ ಅಂದಕ್ಕೆ ದಾಳಿಂಬೆ ಹಣ್ಣಿನ ಫೇಸ್ ಪ್ಯಾಕ್
ದಾಳಿಂಬೆ ಹಣ್ಣು ಕೇವಲ ತನ್ನ ಕೆಂಪು ಕೆಂಪು ಬೀಜದಿಂದ ಮಾತ್ರವಲ್ಲ ಅದರ ಅತ್ಯತ್ಭುತವಾದ ಆರೋಗ್ಯಕಾರಿ ಸತ್ವಗಳಿಂದ ಕೂಡ ಹೆಚ್ಚು ಪ್ರಸಿದ್ಧಿ ಪಡೆದಿದೆ. ತಿನ್ನಲು ಬಲು ರುಚಿಯಾಗಿರುವ ದಾಳಿಂಬೆ ಒಂದು ಸೌಂದರ್ಯವರ್ಧಕವೂ ಹೌದು. ದಾಳಿಂಬೆಯ ರಸ ನಿಮ್ಮ ಚರ್ಮದ ಕಾಂತಿ ಹೆಚ್ಚಿಸಿ, ನೀವು ದಾಳಿಂಬೆಯಂತೆಯೇ ಕಂಗೊಳಿಸುವಂತೆ ಮಾಡುತ್ತೆ. ಇದರ ಈ ಚಮತ್ಕಾರಿ ಗುಣದಿಂದಾಗಿ ಹೆಚ್ಚಿನ ಮಹಿಳೆಯರು ತಮ್ಮ ಸೌಂದರ್ಯವರ್ಧಕವಾಗಿ ಬಳಕೆ ಮಾಡ್ತಾರೆ. ಆದರೆ ಇನ್ನೂ ಕೆಲವರಿಗೆ ದಾಳಿಂಬೆ ಬಳಕೆ ಹೇಗೆ ಅನ್ನೋದ್ರ ಬಗ್ಗೆ ತಿಳಿದಿಲ್ಲ. ಅಂತವರು ಈ ಲೇಖನವನ್ನು ಓದಲೇಬೇಕು. ದಾಳಿಂಬೆ ಆರೋಗ್ಯಕ್ಕೆ ಮಾತ್ರವಲ್ಲ, ಸೌಂದರ್ಯಕ್ಕೂ ಬೇಕು
ದಾಳಿಂಬೆಯಲ್ಲಿ ಫ್ಲೇವನಾಯಿಡ್ಸ್ ಮತ್ತು ಫೆನೋಲಿಕ್ಸ್ ಎಂಬ ಆಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿದೆ. ಅಷ್ಟೇ ಅಲ್ಲ ಇದ್ರಲ್ಲಿ ವಿಟಮಿನ್ ಎ, ಇ ಮತ್ತು ಸಿ ಅಂಶ ಕೂಡ ಇದೆ. ಎಲ್ಲರಿಗೂ ತಿಳಿದಿರುವ ಹಾಗೆ ದಾಳಿಂಬೆ ತಿಂದ್ರೆ, ರಕ್ತ ಪರಿಚಲನೆ ಚೆನ್ನಾಗಿರುತ್ತೆ ಮತ್ತು ರಕ್ತದಲ್ಲಿ ಕೆಂಪುರಕ್ತಕಣಗಳ ಅಭಿವೃದ್ಧಿಗೆ ಇದು ಸಹಕಾರಿ. ಎಲ್ಲಾ ರೀತಿಯ ಚರ್ಮದ ಸಮಸ್ಯೆಗಳಿಗೆ ದಾಳಿಂಬೆ ಪರಿಹಾರ ನೀಡಲಿದೆ. ನೆರಿಗೆ, ಮೊಡವೆ, ಪಿಗ್ಮೆಂಟೇಷನ್ ಇತ್ಯಾದಿ ಸಮಸ್ಯೆಗಳು ನಿವಾರಣೆಯಾಗಲಿದೆ.

ದಾಳಿಂಬೆ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್
ಕೆಲವು ದಾಳಿಂಬೆ ಬೀಜಗಳನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿಕೊಳ್ಳಿ,. ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಆ ಮಿಶ್ರಣವನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಹಚ್ಚಿ 30 ನಿಮಿಷ ಹಾಗೆಯೇ ಬಿಟ್ಟು ನಂತ್ರ ವಾಷ್ ಮಾಡಿ. ವಾರಕ್ಕೆ ಎರಡರಿಂದ ಮೂರು ಬಾರಿ ಹೀಗೆ ಮಾಡಿದ್ರೆ, ನಿಮ್ಮ ಚರ್ಮಕ್ಕೆ ಕಾಂತಿ ಬರುವಲ್ಲಿ ಈ ಮಿಶ್ರಣ ಸಹಾಯ ಮಾಡಲಿದೆ.

ದಾಳಿಂಬೆ ಮತ್ತು ಗ್ರೀನ್ ಟೀ ಫೇಸ್ ಪ್ಯಾಕ್
ದಾಳಿಂಬೆ ಮತ್ತು ಗ್ರೀನ್ ಟೀ ಎರಡರಲ್ಲೂ ಕೂಡ ಆಂಟಿ ಆಕ್ಸಿಡೆಂಟ್ ಅಂಶ ಅತ್ಯಧಿಕವಾಗಿರುತ್ತೆ. ಸ್ಕಿನ್ ಟೋನ್ ಹೊಳಪು ಹೆಚ್ಚಿಸಲು ಈ ಫೇಸ್ ಪ್ಯಾಕ್ ಸಹಾಯ ಮಾಡಲಿದೆ. ಕೆಲವು ದಾಳಿಂಬೆಯ ಬೀಜಗಳನ್ನು ಪೇಸ್ಟ್ ಮಾಡ್ಕೊಳ್ಳಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಮೊಸರನ್ನು ಸೇರಿಸಿ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ
ನಂತ್ರ ಗ್ರೀನ್ ಟೀ ತಯಾರಿಸಿ ಒಂದು ಟೇಬಲ್ ಸ್ಪೂನ್ ಗ್ರೀನ್ ಟೀ ರಸವನ್ನು ಮಿಶ್ರಣ ಮಾಡಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ಗಟ್ಟಿ ಪೇಸ್ಟ್ ನ್ನು ಮುಖಕ್ಕೆ ಹಚ್ಚಿ. 30 ನಿಮಿಷದ ನಂತ್ರ ವಾಷ್ ಮಾಡಿ..

ದಾಳಿಂಬೆ ಮತ್ತು ಮೊಸರಿನ ಫೇಸ್ ಪ್ಯಾಕ್
ನಿಮ್ಮ ಚರ್ಮವನ್ನು ಸ್ಮೂತ್ ಮತ್ತು ಸಾಫ್ಟ್ ಆಗುವಂತೆ ಮಾಡಿ, ಹೊಳಪು ನೀಡುವ ಫೇಸ್ ಪ್ಯಾಕೇ ಈ ದಾಳಿಂಬೆ ಮತ್ತು ಮೊಸರಿನ ಮಿಶ್ರಣ. ಕೆಲವು ದಾಳಿಂಬೆ ಬೀಜಗಳನ್ನು ತೆಗೆದುಕೊಂಡು ಪೇಸ್ಟ್ ತಯಾರಿಸಿಕೊಳ್ಳಿ. ಅದಕ್ಕೆ ಒಂದು ಟೇಬಲ್ ಸ್ಪೂನ್ ಮೊಸರನ್ನು ಸೇರಿಸಿ ಚೆನ್ನಾಗಿ ಕಲಸಿ ಮುಖಕ್ಕೆ ಹಚ್ಚಿಕೊಳ್ಳಿ,. ಸುಮಾರು 20 ನಿಮಿಷದ ನಂತ್ರ ಮುಖ ತೊಳೆಯಿರಿ.

ದಾಳಿಂಬೆ ಚೋಕೋ ಫೇಸ್ ಪ್ಯಾಕ್
ಕೆಲವು ದಾಳಿಂಬೆ ಬೀಜಗಳನ್ನು ಅರೆದು ಪೇಸ್ಟ್ ತಯಾರಿಸಿಕೊಂಡು ಅದಕ್ಕೆ ಕೋಕೋ ಪೌಡರ್ ಸೇರಿಸಿ. ಸ್ಮೂತ್ ಪೇಸ್ಟ್ ತಯಾರಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ. ಕೋಕೋಪೌಡರ್ ಮತ್ತು ದಾಳಿಂಬೆ ಎರಡರಲ್ಲೂ ಕೂಡ ಆಂಟಿ ಆಕ್ಸಿಡೆಂಟ್ ಅಂಶಗಳು ಅಧಿಕವಾಗಿರುತ್ತೆ ಮತ್ತು ಅದು ನಿಮ್ಮ ಚರ್ಮದಲ್ಲಿರುವ ಕಲೆಗಳನ್ನು ನಿವಾರಿಸಲು ಸಹಕಾರಿಯಾಗಿರುತ್ತೆ. ಚರ್ಮದಲ್ಲಿರುವ ಕೊಳೆಯನ್ನು ನಿವಾರಿಸಿ, ಹೊಳಪು ಬರುವಂತೆ ಮಾಡುತ್ತೆ.

ದಾಳಿಂಬೆ ಮತ್ತು ಲಿಂಬೆಯ ಫೇಸ್ ಪ್ಯಾಕ್
ವಿಟಮಿನ್ ಸಿಯಿಂದ ಕೂಡಿರುವ ಒಂದು ಬೆಸ್ಟ್ ಫೇಸ್ ಪ್ಯಾಕ್ ಇದು. ದಾಳಿಂಬೆ ಬೀಜದ ಪೇಸ್ಟಿಗೆ ಫ್ರೆಶ್ ಆಗಿರುವ ಒಂದೆರಡು ಹನಿ ಲಿಂಬೆಯ ರಸವನ್ನು ಸೇರಿಸಿ ಮಿಕ್ಸ್ ಮಾಡಿ ಕುತ್ತಿಗೆ ಮತ್ತು ಮುಖದ ಭಾಗಕ್ಕೆ ಹಚ್ಚಿ. 30 ನಿಮಿಷದ ನಂತ್ರ ಕಾಟನ್ ಬಟ್ಟೆಯಿಂದ ಒರೆಸಿ, ತಣ್ಣನೆಯ ನೀರಿನಿಂದ ವಾಷ್ ಮಾಡಿದ್ರೆ ಚರ್ಮದಲ್ಲಿ ಟ್ಯಾನ್ ಆಗಿದ್ರೆ ರಿಮೂವ್ ಮಾಡಲು ಇದು ನೆರವಾಗುತ್ತೆ. ಅಷ್ಟೇ ಅಲ್ಲ ಫ್ರೆಸ್ ಚರ್ಮವನ್ನು ಪಡೆಯಲು ಕೂಡ ಇದು ಸಹಕಾರಿಯಾಗಿರುವ ಫೇಸ್ ಪ್ಯಾಕ್

ನೆನಪಿನಲ್ಲಿಡಿ
ದಾಳಿಂಬೆ ಪೇಸ್ಟ್ ತಯಾರಿಸಿಕೊಳ್ಳೋದು ಕಷ್ಟ ಅಂತ ಪ್ರಿಸರ್ವ್ ಮಾಡಿರುವ ದಾಳಿಂಬೆ ಜ್ಯೂಸ್ ಬಳಸ್ಬೇಡಿ.ನೀವೇ ನಿಮ್ಮ ಕೈಯಾರೆ ದಾಳಿಂಬೆ ಬೀಜಗಳನ್ನು ಬಿಡಿಸಿ ಪೇಸ್ಟ್ ತಯಾರಿಸಿಕೊಂಡು ಅಪ್ಲೈ ಮಾಡಿಕೊಂಡ್ರೆ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಅನ್ನೋದು ನೆನಪಿರಲಿ..



Click it and Unblock the Notifications











