Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮುಖದ ಕಾಂತಿಗೆ ಮನೆಯಲ್ಲೇ ಮಾಡಿ ಫೇಸ್ ಪ್ಯಾಕ್
ವಾತಾವರಣದ ಕಲುಷಿತದ ಕಾರಣದಿಂದ ಹೊಳೆಯುತ್ತಿರುವ ತ್ವಚೆ ದಿನದಿಂದ ದಿನಕ್ಕೆ ಬಾಡುತ್ತಿರುವುದು ನಿಮ್ಮ ಗಮನಕ್ಕೆ ಬಂದಿರಬಹುದು. ಧೂಳು ಮತ್ತು ಹಾನಿಯುಕ್ತ ಅಂಶಗಳನ್ನು ಹೊಂದಿರುವ ಕಲುಷಿತ ಗಾಳಿ ನಮ್ಮ ತ್ವಚೆಯಲ್ಲಿ ಬ್ಯಾಕ್ಟೀರಿಯಾಗಳನ್ನು ಉಂಟುಮಾಡಿ ಮೊಡವೆ ಮತ್ತು ಕಲೆಗಳ ಬೀಡಾಗಿ ನಮ್ಮ ಸುಂದರವಾದ ಮುಖ ಸೌಂದರ್ಯಕ್ಕೆ ಮಾರಕವಾಗಿ ಪರಿಣಮಿಸುತ್ತಿವೆ.
ಸುಮ್ಮನೆ ರಸ್ತೆಯಲ್ಲಿ ಸಂಚರಿಸಿ ಸ್ವಲ್ಪ ಹೊತ್ತಿನ ನಂತರ ನಿಮ್ಮ ಮುಖವನ್ನು ಟಿಶ್ಯೂ ಪೇಪರಿನಿಂದ ಒರೆಸಿ ನೋಡಿ ಆ ಟಿಶ್ಯೂ ಪೇಪರಿನಲ್ಲಿಯೇ ನಿಮಗೆ ಫಲಿತಾಂಶ ಗೊತ್ತಾಗಿ ಬಿಡುತ್ತದೆ. ಇದು ಸ್ವಲ್ಪ ಹೊತ್ತಿನ ಮಾತಾದರೆ ವರ್ಷ ಪೂರ್ತಿ ಇಂತಹ ವಾತಾವರಣದಲ್ಲಿ ನೀವು ಓಡಾಡುತ್ತೀರಿ ಎಂದಾದಲ್ಲಿ ಇದರ ಫಲಿತಾಂಶ ಎಷ್ಟು ಕೆಟ್ಟದ್ದಾಗಿರಬಹುದು ಅಲ್ಲವೇ?

ಹಾಗಿದ್ದರೆ ಮುಖದ ಸೌಂದರ್ಯದೊಂದಿಗೆ ನಿಮ್ಮ ತ್ವಚೆಯನ್ನು ಸೊಗಸಾಗಿರಿಸುವ ಕೆಲವೊಂದು ಅತ್ಯುತ್ತಮ ಸಲಹೆಗಳೊಂದಿಗೆ ನಾವು ಬಂದಿದ್ದು ಮುಖಕ್ಕೆ ಯಾವ ರೀತಿಯ ಫೇಸ್ ಪ್ಯಾಕ್ ಅನ್ನು ಮಾಡಬೇಕು ಎಂಬುದನ್ನು ಈ ಸಲಹೆಗಳು ಒಳಗೊಂಡಿವೆ. ತ್ವಚೆಯನ್ನು ಅಂದಗೊಳಿಸುವ ವಿಭಿನ್ನ ಮಾದರಿಯ ಫೇಸ್ ಪ್ಯಾಕ್ ಅನ್ನು ಪರಿಚಯಿಸಿದ್ದು, ಅವು ಯಾವುದು ಎಂಬುದನ್ನು ಮುಂದೆ ಓದಿ..
ಕಿತ್ತಳೆ ಮತ್ತು ಲಿಂಬೆ
ಒಣಗಿದ ಕಿತ್ತಳೆ ಸಿಪ್ಪೆ ಮತ್ತು ಲಿಂಬೆಯನ್ನು ಚೆನ್ನಾಗಿ ಹುಡಿ ಮಾಡಿಟ್ಟುಕೊಳ್ಳಿ ಮತ್ತು ಅದನ್ನು ಡಬ್ಬದಲ್ಲಿ ತೆಗೆದಿಡಿ. ಈ ಹುಡಿಗೆ ಮೊಸರನ್ನು ಸೇರಿಸಿ ವಿಟಮಿನ್ ಸಿಯುಕ್ತ ಅದ್ಭುತ ಫೇಸ್ ಪ್ಯಾಕ್ ಅನ್ನು ತಯಾರಿಸಿಕೊಳ್ಳಿ. ಎರಡು ಅಥವಾ ಮೂರು ವಾರಗಳಿಗೊಮ್ಮೆ 20 ನಿಮಿಷಗಳ ಕಾಲ ಈ ಫೇಸ್ ಪ್ಯಾಕ್ ಅನ್ನು ಬಳಸಿದಲ್ಲಿ ಮುಖದಲ್ಲಿರುವ ಕಲೆಗಳನ್ನು ನಿವಾರಿಸಿ ಹೊಳೆಯುವ ತ್ವಚೆಯನ್ನು ಇದು ನಿಮಗೆ ನೀಡುತ್ತದೆ.
ಗ್ರೀನ್ ಟೀ
ಆಂಟಿ ಆಕ್ಸಿಡೆಂಟ್ಸ್ಗಳನ್ನು ತನ್ನಲ್ಲಿ ಹೇರಳವಾಗಿ ಹೊಂದಿರುವ ಗ್ರೀನ್ ಟೀ, ನಿಮ್ಮ ತ್ವಚೆಗೆ ಕಾಂತಿಯನ್ನು ನೀಡುವಲ್ಲಿ ಎತ್ತಿದ ಕೈಯಾಗಿದೆ. ಮೂರು ಚಮಚದಷ್ಟು ಗ್ರೀನ್ ಟೀಯನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಲಿಂಬೆ ರಸವನ್ನು ಹಿಂಡಿಕೊಳ್ಳಿ. ಒಂದು ಚಮಚದಷ್ಟು ಮುಲ್ತಾನಿ ಮಿಟ್ಟಿಯನ್ನು ಸೇರಿಸಿ. ತದನಂತರ ಈ ಪ್ಯಾಕ್ ಅನ್ನು ಮುಖಕ್ಕೆ ಲೇಪಿಸಿಕೊಂಡು ಸ್ವಲ್ಪ ಹೊತ್ತು ಹಾಗೆಯೇ ತ್ವಚೆಯಲ್ಲಿ ಒಣಗಲು ಬಿಡಿ. ಇದು ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ಚೆನ್ನಾಗಿ ಮುಖವನ್ನು ತೊಳೆದುಕೊಳ್ಳಿ. ತ್ವಚೆಯ ಕಾಂತಿ ಹೆಚ್ಚಿಸಲು ಬಳಸಿ ಗ್ರೀನ್ ಟೀ ಫೇಸ್ ಪ್ಯಾಕ್!
ಕೆಂಪು ಮಸೂರ್
3 ಚಮಚದಷ್ಟು ಹುಡಿ ಮಾಡಿದ ಮಸೂರ್ ಬೇಳೆಯನ್ನು ತೆಗೆದುಕೊಳ್ಳಿ ಇದಕ್ಕೆ 1/2 ಚಮಚದಷ್ಟು ಜೇನು ಮತ್ತು ತೆಂಗಿನ ನೀರನ್ನು ಸೇರಿಸಿಕೊಳ್ಳಿ. ಚೆನ್ನಾಗಿ ಕಲಸಿಕೊಂಡು ಮುಖಕ್ಕೆ ಲೇಪಿಸಿಕೊಳ್ಳಿ ನಂತರ 20 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ತಣ್ಣಗಿನ ನೀರಿನಲ್ಲಿ ಮುಖವನ್ನು ತೊಳೆದುಕೊಳ್ಳಿ. ಮಸೂರ್ ದಾಲ್ ಮುಖವನ್ನು ಹೊಳೆಯುವಂತೆ ಮಾಡುತ್ತದೆ ಅಂತೆಯೇ ತೆಂಗಿನ ಕಾಯಿಯ ನೀರು ಮುಖದ ಕಲೆಗಳನ್ನು ನಿವಾರಿಸುತ್ತದೆ, ಅಲ್ಲದೆ ಜೇನು ಮುಖಕ್ಕೆ ಹೊಳಪನ್ನು ನೀಡುತ್ತದೆ.
ಬಾದಾಮಿ ಹಾಲು
ರಾತ್ರಿ ನೀರಿನಲ್ಲಿ ನೆನೆಸಿಟ್ಟ ಬಾದಾಮಿಯನ್ನು ಚೆನ್ನಾಗಿ ಹುಡಿ ಮಾಡಿ. ಇದನ್ನು ಪೇಸ್ಟ್ನಂತೆ ಸಿದ್ಧಮಾಡಿಟ್ಟುಕೊಳ್ಳಿ. ನೀವು ಮಲಗುವ ಮುನ್ನ ಈ ಬಾದಾಮಿ ಹಾಲನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಮರುದಿನ ಮುಖವನ್ನು ತೊಳೆದುಕೊಳ್ಳಿ. ಒಣ ಮತ್ತು ಸೂಕ್ಷ್ಮ ತ್ವಚೆಗೆ ಬಾದಾಮಿ ಹಾಲು ಉಪಯೋಗಕಾರಿಯಾಗಿದೆ.
ತಾಜಾ ಅನಾನಸ್



Click it and Unblock the Notifications



