Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತ್ವಚೆಯ ಅಂದವನ್ನು ಹೆಚ್ಚಿಸುವ ಅತ್ಯದ್ಭುತ ಫೇಸ್ ಮಾಸ್ಕ್‌ಗಳು
ಒಣ ಚರ್ಮದ ಸಮಸ್ಯೆಯಿಂದ ಬಹುತೇಕ ಮಂದಿ ಬಳಲುತ್ತಿರುತ್ತಾರೆ. ಅಂತಹವರಿಗಾಗಿ ನಾವು ಇಂದು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದಾದ ಫೇಸ್ ಮಾಸ್ಕ್‌ಗಳ ಕುರಿತು ತಿಳಿಸಿಕೊಡುತ್ತಿದ್ದೇವೆ. ಒಣ ಚರ್ಮವು ಮಾಮೂಲಿ ಚರ್ಮಕ್ಕಿಂತ ಹೆಚ್ಚಿನ ಆರೈಕೆಯನ್ನು ಬಯಸುತ್ತದೆ. ಇದು ಚರ್ಮ ಸುಲಿಯುವುದು, ಸುಕ್ಕುಗಳು ಮತ್ತು ನವಿರಾದ ಗೆರೆಗಳಂತಹ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ಒಣ ತ್ವಚೆಯು ತನ್ನಲ್ಲಿರುವ ಸ್ವಾಭಾವಿಕವಾಗಿ ಅಡಕವಾಗಿರುವ ಎಣ್ಣೆಯ ಅಂಶದಿಂದಾಗಿ ಬೇಗ ವಯಸ್ಸಾದ ರೀತಿ ಕಾಣುತ್ತದೆ. ಆದ್ದರಿಂದ ಇದಕ್ಕೆ ಹೆಚ್ಚಿನ ಕಾಳಜಿ ಅತ್ಯಾವಶ್ಯಕ. ನಿಮ್ಮ ತ್ವಚೆಯನ್ನು ಯಾವುದೇ ಕಾರಣಕ್ಕು ಒಣಗಲು ಬಿಡಬೇಡಿ. ಏಕೆಂದರೆ ಇದು ತನ್ನ ಒಣಗುವಿಕೆಯಿಂದಾಗಿ ಮತ್ತಷ್ತು ಹಾನಿಯನ್ನು ತಂದುಕೊಳ್ಳುತ್ತದೆ. ಇದರಿಂದ ಚರ್ಮ ಸುಲಿಯುವಿಕೆ ಮತ್ತು ತುರಿಕೆ ಸಹ ಕಂಡು ಬರುತ್ತದೆ. ಆದ್ದರಿಂದಲೇ ಬೋಲ್ಡ್‌ಸ್ಕೈ ಇಂದು ನಿಮಗೆ ಹೋಮ್ ಮೇಡ್ ಫೇಸ್ ಮಾಸ್ಕ್ ತಯಾರಿಸಿಕೊಳ್ಳುವ ಬಗ್ಗೆ ತಿಳಿಸಿಕೊಡುತ್ತಿದೆ. ಇವು ನಿಮ್ಮ ತ್ವಚೆಗೆ ತೇವಾಂಶವನ್ನು, ನೀರಿನಂಶವನ್ನು, ಆರೋಗ್ಯವನ್ನು ಮತ್ತು ಹೊಳಪನ್ನು ಸಹ ತಂದು ನೀಡುತ್ತವೆ. ಬನ್ನಿ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ....
ಮೊಟ್ಟೆ, ಸೂರ್ಯಕಾಂತಿ ಎಣ್ಣೆ ಮತ್ತು ಜೇನು ತುಪ್ಪದ ಫೇಸ್ ಮಾಸ್ಕ್

ಮೊಟ್ಟೆಯನ್ನು, ಎರಡು ಚಮಚ ಜೇನು ತುಪ್ಪ ಮತ್ತು ಒಂದು ಚಮಚ ಸೂರ್ಯಕಾಂತಿ ಎಣ್ಣೆಯ ಜೊತೆಗೆ ಒಂದು ಬಟ್ಟಲಿನಲ್ಲಿ ಬೆರೆಸಿಕೊಳ್ಳಿ. ಇದನ್ನು ಒಂದು ಪೇಸ್ಟ್ ರೀತಿ ತಯಾರಿಸಿಕೊಳ್ಳಿ. ಇದನ್ನು ನಿಮ್ಮ ತ್ವಚೆಯ ಮೇಲೆ ಮೃದುವಾಗಿ ಲೇಪಿಸಿ. 20 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮ ತ್ವಚೆಗೆ ಮೊಯಿಶ್ಚರ್ ನೀಡುತ್ತದೆ. ಒಣ ಚರ್ಮಕ್ಕೆ ಉಪ್ಪಿನ ಸ್ಕ್ರಬ್ ರೆಸಿಪಿ
ಬಾಳೆಹಣ್ಣು, ಮೊಸರು ಮತ್ತು ಜೇನು ತುಪ್ಪದ ಫೇಸ್ ಮಾಸ್ಕ್
ಚೆನ್ನಾಗಿ ಹಣ್ಣಾದ ಬಾಳೆಹಣ್ಣನ್ನು, ಸ್ವಲ್ಪ ಮೊಸರನ್ನು ಮತ್ತು ಸ್ವಲ್ಪ ಜೇನು ತುಪ್ಪವನ್ನು ತೆಗೆದುಕೊಳ್ಳಿ. ಇದನ್ನು ಪೇಸ್ಟ್ ರೀತಿ ರುಬ್ಬಿಕೊಳ್ಳಿ. ಇದನ್ನು ಮುಖದ ಮೇಲೆ ಲೇಪಿಸಿ 15 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ನಿಮ್ಮ ತ್ವಚೆಗೆ ಮೊಯಿಶ್ಚರ್ ಒದಗಿಸುತ್ತದೆ.
ಸೌತೆಕಾಯಿ ಮತ್ತು ಅಲೋವಿರಾ ಫೇಸ್ ಮಾಸ್ಕ್
ಒಣ ತ್ವಚೆಗೆ ಇದು ಹೇಳಿ ಮಾಡಿಸಿದ ಮನೆ ಮದ್ದಾಗಿದೆ. ಸೌತೆಕಾಯಿಯನ್ನು ಚೆನ್ನಾಗಿ ರುಬ್ಬಿಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ಅಲೋವಿರಾವನ್ನು ಹಾಕಿ ಜೆಲ್ ರೀತಿ ಮಾಡಿಕೊಳ್ಳಿ. ಇದನ್ನು ಮುಖದ ಮೇಲೆ ಲೇಪಿಸಿ, 25 ನಿಮಿಷ ಬಿಡಿ. ನಂತರ ತಣ್ಣೀರಿನಲ್ಲಿ ತೊಳೆಯಿರಿ. ಇದು ನಿಮ್ಮ ತ್ವಚೆಗೆ ನೀರಿನಂಶವನ್ನು ನೀಡುತ್ತದೆ ಮತ್ತು ಇಡೀ ದಿನ ಮೊಯಿಶ್ಚರ್ ಒದಗಿಸುತ್ತದೆ. ಕಲೆರಹಿತ ಕಾಂತಿಯುಕ್ತ ತ್ವಚೆಗಾಗಿ ಖರ್ಬೂಜ ಹಣ್ಣಿನ ಫೇಸ್ ಪ್ಯಾಕ್!
ಅವೊಕ್ಯಾಡೊ ಮತ್ತು ಜೇನು ಫೇಸ್ ಮಾಸ್ಕ್
ಒಣ ತ್ವಚೆಗೆ ಇದು ಹೇಳಿ ಮಾಡಿಸಿದ ಮನೆ ಮದ್ದಾಗಿದೆ. ಚೆನ್ನಾಗಿ ಹಣ್ಣಾದ ಅವೊಕ್ಯಾಡೊವೊಂದನ್ನು ತೆಗೆದುಕೊಳ್ಳಿ. ಅದನ್ನು ಜಜ್ಜಿ ಜೇನು ತುಪ್ಪದ ಜೊತೆಗೆ ಬೆರೆಸಿ ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ನಿಮ್ಮ ತ್ವಚೆಗೆ ಲೇಪಿಸಿ 20 ನಿಮಿಷ ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ. ಅವೊಕ್ಯಾಡೊವಿನಲ್ಲಿರುವ ಸ್ವಾಭಾವಿಕ ಎಣ್ಣೆಗಳು ನಿಮ್ಮ ತ್ವಚೆಗೆ ಆಹ್ಲಾದಕತೆಯನ್ನು, ಮೊಯಿಶ್ಚರ್ ಮತ್ತು ನೀರಿನಂಶವನ್ನು ನೀಡುತ್ತವೆ. ಜೇನು ತುಪ್ಪವು ಸಹ ಮೊಯಿಶ್ಚರ್ ಮಾಡುತ್ತದೆ. ಜೊತೆಗೆ ಸುಕ್ಕುಗಳನ್ನು ನಿವಾರಿಸಿ, ತ್ವಚೆಯನ್ನು ಆರೋಗ್ಯಕರ ಮಾಡುತ್ತದೆ.



Click it and Unblock the Notifications



