Latest Updates
-
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ!
ಬೀಟ್ರೂಟ್ ಎಂದಾಕ್ಷಣ ಮುಖ ಸಿಂಡರಿಸಬೇಡಿ..
ಕೇವಲ ತನ್ನ ಬಣ್ಣದ ಕಾರಣ ಹೆಚ್ಚಿನವರ ಅವಗಣನೆಗೆ ಒಳಗಾಗಿರುವ ತರಕಾರಿ ಎಂದರೆ ಬೀಟ್‌ರೂಟ್. ಹೆಚ್ಚಿನವರು ಕೆಂಪು ಬಣ್ಣವನ್ನು ತಮ್ಮ ಊಟದಲ್ಲಿ ಇಷ್ಟಪಡದಿರುವುದೇ ಇದೇ ಕಾರಣಕ್ಕೆ...!ವಾಸ್ತವವಾಗಿ ಜೀವ ಉಳಿಸುವ ಔಷಧಿ ಕಹಿಯಿರುವಂತೆ ಬಣ್ಣದಲ್ಲಿ ಆಕರ್ಷಕವಲ್ಲದಿದ್ದರೂ ಪೋಷಕಾಂಶಗಳ ಆಗರವಾಗಿರುವ ಬೀಟ್‌ರೂಟ್ ಅನ್ನು ನಮ್ಮ ಆಹಾರದಲ್ಲಿ ನಿಯಮಿತವಾಗಿ ಸೇರಿಸುವ ಮೂಲಕ ಇದರ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಈಗಾಗಲೇ ಸಾಬೀತಾಗಿದೆ. ಪೋಷಕಾಂಶಗಳ ಆಗರ ಕೆಂಪು ಕೆಂಪಾದ ಬೀಟ್‍ರೂಟ್
ಹಾಗೆಂದು ಅವು ಕೇವಲ ನಮ್ಮ ದೇಹಕ್ಕೆ ಪೋಷಕಾಂಶಗಳನ್ನು ಹೆಚ್ಚಿಸುವ ತರಕಾರಿಗಳಾಗಿ ಮಾತ್ರ ಪ್ರಯೋಜನಕ್ಕೆ ಬರುವುದಿಲ್ಲ..ಬದಲಿಗೆ ಸೌಂದರ್ಯದ ವಿಷಯಕ್ಕೆ ಬಂದಾಗ ಕೂಡ ತಾನು ಎಂದೂ ಒಂದು ಹೆಜ್ಜೆ ಮುಂದು, ಎನ್ನುವ ರೀತಿಯಲ್ಲಿ ಕಾರ್ಯನಿರ್ವಹಿಸುವ ಬೀಟ್‌ರೂಟ್ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವ ಜೊತೆಗೆ, ಚರ್ಮದ ನೆರಿಗೆಗಳನ್ನು ನಿವಾರಿಸಲು ಅತ್ಯುತ್ತಮವಾದ ಪೋಷಣೆಯನ್ನು ನೀಡಿ ವೃದ್ಧಾಪ್ಯವನ್ನು ಮುಂದೂಡುತ್ತದೆ, ಅಲ್ಲದೆ ಊದಿಕೊಂಡ ಕಣ್ಣುಗಳನ್ನು ಸಹ ಗುಣಪಡಿಸುತ್ತದೆ.
ಇದಕ್ಕೆಲ್ಲಾ ಮುಖ್ಯ ಕಾರಣ ಇದರಲ್ಲಿರುವ ವಿಟಮಿನ್ ಸಿ, ಪೊಟ್ಯಾಶಿಯಂ, ಮ್ಯಾಂಗನೀಸ್, ಕಬ್ಬಿಣ, ಕರಗುವ ನಾರು ಮತ್ತು ಫೋಲೇಟ್‌ಗಳೆಂಬ ಪೋಷಕಾಂಶಗಳಿವೆ. ಸಾಮಾನ್ಯವಾಗಿ ತ್ವಚೆಯಲ್ಲಿ ಮೊಡವೆಗಳು ಮಾಗಿದ ಬಳಿಕ ಉಳಿಯುವ ಕಲೆಗಳು, ಗೀರುಗಳು ಮತ್ತು ಕಣ್ಣುಗಳ ಸುತ್ತಲ ಕಪ್ಪು ವರ್ತುಲಗಳನ್ನೂ ನಿವಾರಿಸಲು ನೆರವಾಗುತ್ತವೆ. ನೋಡಲು ಏನೂ ಚೆನ್ನಾಗಿಲ್ಲದೇ ಇದ್ದರೂ ಸೌಂದರ್ಯವನ್ನು ಚೆನ್ನಾಗಿಸುವ ಈ ಅದ್ಭುತ ತರಕಾರಿಯ ಬಗ್ಗೆ ಹೆಚ್ಚಿನ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ...

ತ್ವಚೆಯನ್ನು ಹೊಳಪಿನಿಂದ ಕಂಗೊಳಿಸುವಂತೆ ಮಾಡಲು
ಒಂದು ಬೀಟ್‌ರೂಟ್ ಅನ್ನು 1/2 ಕಪ್ ಎಲೆಕೋಸಿನ ಜೊತೆಗೆ ಬೆರೆಸಿಕೊಂಡು ರುಬ್ಬಿಕೊಳ್ಳಿ. ಇದಕ್ಕೆ 1/4 ಕಪ್ ನೀರನ್ನು ಸೇರಿಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟ್ ಐಸ್ ಟ್ರೇಯಲ್ಲಿ ಹಾಕಿ ಐಸ್ ಕ್ಯೂಬ್ ಆಗಿ ಪರಿವರ್ತಿಸಿಕೊಳ್ಳಲು ಫ್ರಿಡ್ಜ್‌ನಲ್ಲಿಡಿ. ಈ ಐಸ್ ಕ್ಯೂಬ್‌ಗಳನ್ನು ನಿಮ್ಮ ಮುಖದ ಮೇಲೆ ಉಜ್ಜಿ. ಇದು ಎರಡು ಫೇಶಿಯಲ್‌ಗಳಿಗೆ ಸಮವಾದ ಹೊಳಪನ್ನು ನಿಮ್ಮ ತ್ವಚೆಗೆ ನೀಡುತ್ತದೆ.

ಸುಕ್ಕುಗಳಿಗೆ ಒಳ್ಳೆಯದು
ಬೀಟ್‌ರೂಟ್‌ಗಳು ಒಳ್ಳೆಯ ಆಂಟಿಆಕ್ಸಿಡೆಂಟ್‌ಗಳಾಗಿವೆ, ಇವು ತ್ವಚೆಯಲ್ಲಿರುವ ಟಾಕ್ಸಿನ್‌ಗಳನ್ನು ನಿವಾರಿಸಿ, ತ್ವಚೆಗೆ ತೇವಾಂಶವನ್ನು ಒದಗಿಸಲು ಸಹಾಯ ಮಾಡುವುದರ ಜೊತೆಗೆ, ತ್ವಚೆಯಲ್ಲಿರುವ ಸುಕ್ಕುಗಳನ್ನು, ಗೆರೆಗಳನ್ನು ಮತ್ತು ವಯಸ್ಸಿನ ಕಲೆಗಳನ್ನು ನಿವಾರಿಸುತ್ತದೆ. ಒಂದು ಸಣ್ಣ ಬೀಟ್‌ರೂಟ್ ಅನ್ನು ಪೇಸ್ಟ್ ರೀತಿ ಮಾಡಿಕೊಳ್ಳಿ ಅದಕ್ಕೆ ಆಲೀವ್ ಎಣ್ಣೆಯನ್ನು, ಬೆಳ್ಳುಳ್ಳಿ ಮತ್ತು ಸ್ವಲ್ಪ ಮೊಸರನ್ನು ಬೆರೆಸಿಕೊಳ್ಳಿ. ಇದನ್ನು ನಿಮ್ಮ ತ್ವಚೆಯ ಮೇಲೆ 5 ನಿಮಿಷಗಳ ಕಾಲ ಉಜ್ಜಿಕೊಳ್ಳಿ. ನಂತರ ಬೆಚ್ಚಗಿನ ನೀರಿನಲ್ಲಿ ಇದನ್ನು ತೊಳೆಯಿರಿ.

ಊದಿಕೊಂಡಿರುವ ಕಣ್ಣುಗಳಿಗೆ
ಬೀಟ್‌ರೂಟ್‌ನ ಪೇಸ್ಟ್ ಅನ್ನು ಮಾಡಿಕೊಂಡು ಅದನ್ನು ಊದಿಕೊಂಡ ಕಣ್ಣುಗಳ ಮೇಲೆ ಲೇಪಿಸಿ. ಇವು ನಿಮ್ಮ ತ್ವಚೆಯಲ್ಲಿರುವ ಮತ್ತು ಕಣ್ಣುಗಳಲ್ಲಿರುವ ಟಾಕ್ಸಿನ್‌ಗಳನ್ನು ಹೀರಿಕೊಳ್ಳುತ್ತದೆ. ಇದರ ಜೊತೆಗೆ ನೀವು ಬೀಟ್‌ರೂಟ್ ರಸವನ್ನು ಸಹ ಸೇವಿಸಬಹುದು. ಇದು ನಿಮ್ಮ ರಕ್ತ ಕೋಶಗಳನ್ನು ಹೆಚ್ಚಿಸುತ್ತದೆ. ರಕ್ತ ಕೋಶಗಳ ಕೊರತೆಯಿಂದ ಸಹ ಕಣ್ಣುಗಳು ಊದಿಕೊಳ್ಳುತ್ತದೆ.

ಲಿಪ್‌ಸ್ಟಿಕ್ ಮಾಡಿಕೊಳ್ಳಿ
ಕೆಲವೊಂದು ಬೀಟ್‌ರೂಟ್‌ಗಳನ್ನು ಪೇಸ್ಟ್ ಮಾಡಿಕೊಳ್ಳಿ. ಅದನ್ನು ನಿಮ್ಮ ತುಟಿಯ ಮೇಲೆ ಲೇಪಿಸಿ, ಐದು ನಿಮಿಷಗಳ ಕಾಲ ಬಿಡಿ. ನಂತರ ಇದನ್ನು ತೊಳೆಯಿರಿ. ಆಗ ನೋಡಿ ನಿಮ್ಮ ತುಟಿಗಳು ಕಡುಗೆಂಪು ಬಣ್ಣದಿಂದ ಹೊಳೆಯುತ್ತವೆ. ಈ ಬಣ್ಣದ ಲಿಪ್‍ಸ್ಟಿಕ್ ಈಗ ಟ್ರೆಂಡ್ ಆಗಿದೆ.

ಸ್ವಾಭಾವಿಕವಾದ ಬ್ಲಶ್ ಮಾಡಿ
ಒಂದು ತ್ವಚೆಯ ಮಾಯಿಶ್ಚರೈಸರ್ ಜೊತೆಗೆ ಬೀಟ್‌ರೂಟ್‌ಗಳನ್ನು ಬೆರೆಸಿಕೊಳ್ಳಿ ಮತ್ತು ಅದನ್ನು ನಿಮ್ಮ ಕೆನ್ನೆಗಳ ಮೇಲೆ ಲೇಪಿಸಿ, ನಿಧಾನವಾಗಿ ಐದು ನಿಮಿಷಗಳ ಕಾಲ ಉಜ್ಜಿ. ನಂತರ ಇದನ್ನು ತೊಳೆಯಿರಿ, ಆಗ ನೋಡಿ ನಿಮ್ಮ ಕೆನ್ನೆ ಹೇಗೆ ಸ್ವಾಭಾವಿಕವಾದ ಕೆಂಪು ಬಣ್ಣದಿಂದ ಹೊಳೆಯುತ್ತಿರುತ್ತದೆ. ಹೀಗೆ ಬೀಟ್‌ರೂಟ್ ನಿಮ್ಮ ತ್ವಚೆಗೆ ಬ್ಲಶ್ ಆಗಿ ಸಹ ಪ್ರಯೋಜನಕ್ಕೆ ಬರುತ್ತದೆ.



Click it and Unblock the Notifications