Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೌಂದರ್ಯದ ರಹಸ್ಯ- ನಿಮ್ಮ ಬೆರಳ ತುದಿಯಲ್ಲೇ ಇದೆ!
ಇಂದಿನ ದುನಿಯಾವೇ ಹಾಗೆ. ಅಂದವಾಗಿರುವ ಪ್ರತಿಯೊಂದನ್ನು ಎಲ್ಲರೂ ಇಷ್ಟಪಡುತ್ತಾರೆ. ಅಂದವಿಲ್ಲದಿದ್ದರೆ ಅದಕ್ಕೆ ಮೌಲ್ಯವೇ ಇಲ್ಲವೆನ್ನುವಂತಾಗಿದೆ. ಮನುಷ್ಯ ಕೂಡ ಹಾಗೆ. ಆತ ಅಂದವಾಗಿದ್ದರೆ ಅವನಿಗೆ ಸಿಗುವ ರಾಜ ಮರ್ಯಾದೆ ಬೇರೆಯವರಿಗೆ ಸಿಗಲ್ಲ. ಆದರೆ ಅಂದವಾಗಿ ಕಾಣಲು ನಾವು ಕೆಲವೊಂದು ಸರಳ ವಿಧಾನಗಳನ್ನು ಪಾಲಿಸಬೇಕಾಗುತ್ತದೆ.
ನಾವು ನಿಜವಾಗಿ ಅಂದವಾಗಿ ಕಾಣುವ ವಿಧಾನಗಳನ್ನು ಕೈಬಿಟ್ಟು ಕೆಲವೊಂದು ಆಧುನಿಕ ವಿಧಾನಗಳನ್ನು ಪಾಲಿಸಿಕೊಂಡು ಹೋಗುತ್ತೇವೆ. ಆದರೆ ಕೆಲವೊಂದು ಸರಳ ವಿಧಾನಗಳಿಂದಲೂ ತುಂಬಾ ಸುಂದರವಾಗಿ ಕಾಣುವಂತಾಗಬಹುದು. ಮೇಕಪ್ ನಿಂದ ನಿಮ್ಮ ಸೌಂದರ್ಯಕ್ಕೆ ಅಡೆತಡೆಯಾಗಿರುವ ಕೆಲವೊಂದು ಕಲೆಗಳನ್ನು ಮರೆಮಾಚಬಹುದು. ಗೌರವರ್ಣ ತ್ವಚೆ - ಅದೂ ಹೆಚ್ಚಿನ ಖರ್ಚು, ಶ್ರಮವಿಲ್ಲದೇ!
ಹೌದು ಕೆಲವೊಂದು ನೈಸರ್ಗಿಕ ವಿಧಾನಗಳಿಂದ ಮೇಕಪ್ ಇಲ್ಲದೆಯೂ ನೀವು ಸುಂದರವಾಗಿ ಕಾಣಿಸಿಕೊಳ್ಳಬಹುದು, ಬನ್ನಿ ಅವು ಯಾವುದು ಎಂಬುದನ್ನು ನೋಡೋಣ..

ನೀರು ಕುಡಿಯುವುದು
ಇದು ಗುಟ್ಟಿನ ವಿಚಾರವಲ್ಲವೆಂದು ನಿಮಗೆ ಅಚ್ಚರಿಯಾಗುತ್ತಿದೆಯಾ? ಆದರೆ ದಿನಾಲೂ ಎಂಟು ಲೋಟ ನೀರು ಕುಡಿಯಬೇಕು ಎನ್ನುವುದನ್ನು ಪಾಲಿಸಬೇಕೆಂದಿಲ್ಲ. ಬದಲಿಗೆ ನಿಮ್ಮ ದೇಹದಲ್ಲಿ ನೀರಿನಾಂಶವಿರಲು ನೀವು ಸಾಧ್ಯವಿದ್ದಷ್ಟು ನೀರು ಕುಡಿಯಬೇಕು. ಇದರಿಂದ ನಿಮ್ಮ ಚರ್ಮವು ಒಣಗುವುದಿಲ್ಲ. ಇದು ಯಾವಾಗಲೂ ನಿಮ್ಮ ಚರ್ಮವನ್ನು ಮೃದುವಾಗಿಡುತ್ತದೆ.

ಸನ್ ಸ್ಕ್ರೀನ್ ಮರೆಯಬೇಡಿ
ಪ್ರತೀ ದಿನ ಒಳ್ಳೆಯ ಗುಣಮಟ್ಟದ ಸನ್ ಸ್ಕ್ರೀನ್ ಅನ್ನು ಬಳಸಿ. ಮಳೆಗಾಲವಾಗಿದ್ದರೆ ಆಗ ಮರೆಯದೆ ಸನ್ ಸ್ಕ್ರೀನ್ ಹಚ್ಚಿಕೊಂಡು ಹೊರಗಡೆ ಹೋಗಿ. ಇದರಿಂದ ಸೂರ್ಯನ ಕಿರಣಗಳಿಂದ ನಿಮ್ಮ ಚರ್ಮಕ್ಕೆ ಹಾನಿಯಾಗುವುದು ತಪ್ಪುತ್ತದೆ. ಮನೆಯಿಂದ ಹೊರಗಡೆ ಹೋಗುವ 15 ನಿಮಿಷಕ್ಕೆ ಮೊದಲು ಸನ್ ಸ್ಕ್ರೀನ್ ಹಚ್ಚಿಕೊಳ್ಳಿ.

ಮೊಯಿಶ್ಚರೈಸರ್
ನಿಮ್ಮ ತ್ವಚೆಯನ್ನು ಒಣಗಲು ಬಿಡಬೇಡಿ. ನಿಮ್ಮ ಚರ್ಮಕ್ಕೆ ಅನುಗುಣವಾಗಿ ಪ್ರತೀ 3-4 ಗಂಟೆಗೊಮ್ಮೆ ಮೊಯಿಶ್ಚರೈಸರ್ ಹಚ್ಚಿಕೊಳ್ಳಿ. ಇದು ನಾವು ತಿಳಿದುಕೊಳ್ಳಬೇಕಾದ ಆರು ಸೌಂದರ್ಯ ವಿಧಾನಗಳಲ್ಲಿ ಒಂದಾಗಿದೆ. ಇದು ನಿಮ್ಮ ಚರ್ಮಕ್ಕೆ ವಯಸ್ಸಾಗದಂತೆ ಮಾಡಿ ಯುವಕರಂತೆ ಕಾಣುವಂತೆ ಮಾಡುತ್ತದೆ.

ಆರೋಗ್ಯಕರ ಆಹಾರ ತಿನ್ನಿ
ಸುಂದರವಾಗಿ ಕಾಣಿಸಿಕೊಳ್ಳಲು ಆರೋಗ್ಯಕರವಾಗಿರುವ ಆಹಾರವನ್ನು ತಿನ್ನಿ ಮತ್ತು ಆರೋಗ್ಯಕರವಾಗಿರಿ. ನಿಮ್ಮ ಆಹಾರದಲ್ಲಿ ಹೆಚ್ಚಿನ ಹಣ್ಣು ಮತ್ತು ತರಕಾರಿಗಳನ್ನು ಸೇರಿಸಿಕೊಳ್ಳಿ. ಇದರಿಂದ ದೇಹವು ಬಲಿಷ್ಠವಾಗಿರುತ್ತದೆ ಮತ್ತು ಚರ್ಮವು ಆರೋಗ್ಯಕರವಾಗಿ ಕಾಣಿಸುತ್ತದೆ.

ವ್ಯಾಯಾಮ
ವ್ಯಾಯಾಮ ಮಾಡುವಾಗ ಹೆಚ್ಚಿನ ಬೆವರು ಹೊರಗೆ ಹೋಗುತ್ತದೆ. ಇದರಿಂದ ನಿಮ್ಮ ಚರ್ಮವು ಯುವಕರಂತೆ ಮತ್ತು ಆರೋಗ್ಯಯುತವಾಗಿರುತ್ತದೆ. ಇದು ನಿಮ್ಮ ಮುಖವನ್ನು ಹೊಳೆಯುವಂತೆ ಮಾಡುತ್ತದೆ. ಫಿಟ್ ಮತ್ತು ಸುಂದರವಾಗಿ ಕಾಣಿಸಿಕೊಳ್ಳಲು ಯಾವಾಗಲು ವ್ಯಾಯಾಮ ಮಾಡುತ್ತಿರಿ.



Click it and Unblock the Notifications
