Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕುಂಬಳಕಾಯಿ ಜ್ಯೂಸ್‌ನಲ್ಲಿ ಅಡಗಿದೆ ಸಕಲ ಸೌಂದರ್ಯದ ರಹಸ್ಯ
ಕುಂಬಳಕಾಯಿಯಲ್ಲಿ ಸಮೃದ್ಧವಾದ ಆಂಟಿಆಕ್ಸಿಡೆಂಟ್‌ಗಳು, ಕ್ಯಾಲ್ಸಿಯಂ, ಕಬ್ಬಿಣಾಂಶ, ಪ್ರೋಟಿನ್, ಪೊಟಾಶಿಯಂ, ಪಾಸ್ಪರಸ್ ಮತ್ತು ವಿಟಮಿನ್‌ಗಳಾದ ಎ,ಇ,ಸಿ,ಡಿ,ಬಿ1 ಮತ್ತು ಬಿ2 ಇತ್ಯಾದಿಗಳು ಇರುತ್ತವೆ. ಇದರ ಜೊತೆಗೆ ಇದರಲ್ಲಿ ಫ್ಲಾವೊನಾಯ್ಡ್‌ಗಳು ಮತ್ತು ಕೆರೊಟಿನ್‌ಗಳು ಇರುತ್ತವೆ. ಕುಂಬಳಕಾಯಿ ರಸದಿಂದ ದೊರೆಯುವ ಸೌಂದರ್ಯ ಪ್ರಯೋಜನಗಳು ಯಾವುವು ಎಂದು ನಾವು ಇಂದು ನಿಮ್ಮೊಂದಿಗೆ ಚರ್ಚಿಸಲಿದ್ದೇವೆ.
ಕುಂಬಳಕಾಯಿಯನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಉತ್ತಮ ಪ್ರಭಾವ ಬೀರುತ್ತದೆ ಎಂದು ನಮಗೆ ಗೊತ್ತು. ಆದರೆ ಇದರ ಜೊತೆಗೆ ಇದು ಕೂದಲು ಮತ್ತು ತ್ವಚೆಯ ಮೇಲೂ ಸಹ ಪರಿಣಾಮ ಬೀರುತ್ತದೆ. ತ್ವಚೆಯ ಸಮಸ್ಯೆಗಳಿಗೆ ಇದು ಸ್ವಾಭಾವಿಕವಾದ ಪರಿಹಾರವನ್ನು ಒದಗಿಸುತ್ತದೆ. ಇದರ ಮತ್ತೊಂದು ವಿಶೇಷವೆಂದರೆ ಇದು ಒಣ ಮತ್ತು ಜಿಡ್ಡಿನಿಂದ ಕೂಡಿದ ತ್ವಚೆ ಎರಡಕ್ಕೂ ಹೊಂದಿಕೊಳ್ಳುತ್ತದೆ. ಇಂದು ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಕುಂಬಳಕಾಯಿ ರಸದಿಂದ ಕೇಶ ಮತ್ತು ತ್ವಚೆಗೆ ದೊರೆಯುವು ಸೌಂದರ್ಯ ಪ್ರಯೋಜನಗಳ ಕುರಿತು ತಿಳಿಸಿಕೊಡುತ್ತಿದೆ. ಅಪ್ಸರೆಯಂತಹ ಸೌಂದರ್ಯಕ್ಕಾಗಿ ಹೆಸರುಬೇಳೆಯೆಂಬ ಸಿದ್ಧೌಷಧ
ಹೊಳಪಿನಿಂದ ಕೂಡಿದ ತ್ವಚೆಗಾಗಿ

ಕುಂಬಳಕಾಯಿ ರಸವು ಮುಖದ ತ್ವಚೆ ಮೇಲೆ ಅದ್ಭುತ ಪ್ರಭಾವವನ್ನು ಬೀರುತ್ತದೆ. ಇದಕ್ಕೆ ಇದರಲ್ಲಿರುವ ವಿಟಮಿನ್ ಸಿ ಮತ್ತು ಇ ಅಂಶಗಳೇ ಕಾರಣ. ಇವುಗಳು ಮುಖಕ್ಕೆ ಹೊಳಪನ್ನು ನೀಡುತ್ತವೆ. ಕುಂಬಳಕಾಯಿ ರಸವನ್ನು ನೀವು ಮುಖಕ್ಕೆ ಹಾಕಿ ಸ್ವಲ್ಪ ಸಮಯ ಬಿಡಿ, ನಂತರ ಮುಖವನ್ನು ತೊಳೆಯಿರಿ. ಇದನ್ನು ಜ್ಯೂಸ್ ನಂತೆ ಮಾಡಿ ಕೂಡ ನೀವು ಕುಡಿಯಬಹುದು. ಇದು ಕುಂಬಳಕಾಯಿಯಿಂದ ದೊರೆಯುವ ಒಂದು ಸೌಂದರ್ಯದ ಪ್ರಯೋಜನವಾಗಿದೆ.
ಸುಟ್ಟ ಗಾಯಗಳು, ಕೀಟದ ಕಡಿತಗಳು ಮತ್ತು ತ್ವಚೆಯ ಉರಿಬಾವು
ಸುಟ್ಟ ಗಾಯಕ್ಕೆ ಇದು ಆರಾಮವನ್ನು ಒದಗಿಸುತ್ತದೆ ಮತ್ತು ಗಾಯಗೊಂಡ ತ್ವಚೆಗೆ ಉಪಶಮನವನ್ನು ನೀಡುತ್ತದೆ. ಜೊತೆಗೆ ಆ ಭಾಗದ ಚರ್ಮ ಮತ್ತೆ ಯಥಾಸ್ಥಿತಿಗೆ ಬರಲು ಇದು ಸಹಾಯ ಮಾಡುತ್ತದೆ. ಇದರಲ್ಲಿ ಸತು ಮತ್ತು ವಿಟಮಿನ್ ಸಿ ಇರುವುದರಿಂದ, ಅವುಗಳು ಗಾಯವಾದ ಪ್ರದೇಶವನ್ನು ಮತ್ತೆ ಯಥಾಸ್ಥಿತಿಗೆ ತರಲು ಶ್ರಮಿಸುತ್ತದೆ. ಆದ್ದರಿಂದ ಸಮಸ್ಯೆಯಿರುವ ಭಾಗಕ್ಕೆ ಕುಂಬಳಕಾಯಿ ರಸವನ್ನು ಲೇಪಿಸಿ ಅಥವಾ ಅದರ ರಸವನ್ನು ಸೇವಿಸಿ. ತ್ವಚೆಯ ಅಂದವನ್ನು ಹೆಚ್ಚಿಸುವ ಅತ್ಯದ್ಭುತ ಫೇಸ್ ಮಾಸ್ಕ್‌ಗಳು
ಸುಕ್ಕು ನಿವಾರಕ ಮತ್ತು ನೀರಿನಂಶ ಒದಗಿಸುತ್ತದೆ
ಕುಂಬಳ ಕಾಯಿ ರಸವನ್ನು ಜೇನು ತುಪ್ಪ, ವಿಟಮಿನ್ ಇ ಎಣ್ಣೆ, ಮೊಸರು ಮತ್ತು ಲಿಂಬೆರಸದ ಜೊತೆಗೆ ಬೆರೆಸಿ ಗಟ್ಟಿಯಾದ ಪೇಸ್ಟ್ ರೀತಿ ಮಾಡಿಕೊಳ್ಳಿ. ಇದನ್ನು ತ್ವಚೆಯ ಮೇಲೆ ಲೇಪಿಸಿ. ಇದು ತ್ವಚೆಯನ್ನು ಬಿಗಿಗೊಳಿಸುತ್ತದೆ, ಸುಕ್ಕುಗಳನ್ನು ನಿವಾರಿಸುತ್ತದೆ ಮತ್ತು ತ್ವಚೆಗೆ ಮೊಯಿಶ್ಚರೈಸ್ ಮಾಡುತ್ತದೆ. ಇದು ಸಹ ಕುಂಬಳಕಾಯಿಯಿಂದ ದೊರೆಯುವ ಒಂದು ಅದ್ಭುತ ಪ್ರಯೋಜನವಾಗಿದೆ.
ಕೂದಲಿನ ಬೆಳವಣಿಗೆಗೆ ಸಹಕರಿಸುತ್ತದೆ
ಕುಂಬಳಕಾಯಿ ರಸದಲ್ಲಿ ವಿಟಮಿನ್ ಎ ಮತ್ತು ಪೊಟಾಶಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇವುಗಳು ಕೂದಲಿನ ಬೆಳವಣಿಗೆಯನ್ನು ಪ್ರೋತ್ಸಾಹಿಸುತ್ತವೆ. ಕುಂಬಳಕಾಯಿಯ ರಸವನ್ನು ಕೂದಲಿನ ಬುಡಕ್ಕೆ ಲೇಪಿಸಿ, ಬೆರಳುಗಳಿಂದ ಮೃದುವಾಗಿ ಮಸಾಜ್ ಮಾಡಿ. ಇದನ್ನು 30 ನಿಮಿಷ ಬಿಟ್ಟು, ನಂತರ ಸ್ನಾನ ಮಾಡಿ.



Click it and Unblock the Notifications


