Latest Updates
-
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ
ಕಡಲೆಬೀಜದಿಂದ ಪಡೆಯಿರಿ ಕಾಂತಿಯುತ ತ್ವಚೆ
ಚಳಿಗಾಲ ಬಂತು ಅಂದ್ರೆ ತ್ವಚೆಯ ಒರಟುತನ ಹೆಚ್ಚಾಗುತ್ತೆ. ಡ್ರೈ ಸ್ಕಿನ್ ಇರುವವರಿಗೆ ಚರ್ಮ ಸಿಪ್ಪೆ ಸುಲಿದಂತಾಗುತ್ತೆ. ಹೇಳಿಕೇಳಿ ಚರ್ಮದ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳಬೇಕಾದ ಸಮಯ ಇದು. ಹಾಗಾಗಿ ನೀವು ನಿಮ್ಮ ತ್ವಚೆಯ ಬಗ್ಗೆ ಮುತುವರ್ತಿ ತೆಗೆದುಕೊಂಡಾಗ ಮಾತ್ರ ಬ್ಯೂಟಿಫುಲ್ ಆಗಿ ಕಾಣಲು ಸಾಧ್ಯವಾಗುತ್ತೆ. ಅದಕ್ಕಾಗಿ ಚಳಿಗಾಲಕ್ಕೆ ಎಷ್ಟು ಬಗೆಯ ಸ್ಕ್ರಬ್ ಗಳ ಬಗ್ಗೆ ತಿಳಿದಿದ್ರೂ ಸಾಕಾಗೋದಿಲ್ಲ.
ಆಯಾ ಹವಾಮಾನಕ್ಕೆ ತಕ್ಕಂತೆ ಪ್ರಕೃತಿಯೂ ಕೂಡ ನಮಗೆ ಕೊಡುಗೆಗಳನ್ನು ನೀಡಿದೆ ಮತ್ತು ಆಯಾ ಕಾಲಕ್ಕೆ ಅದನ್ನು ಬಳಕೆ ಮಾಡಿದಾಗ ನಾವು ನಮ್ಮ ಆರೋಗ್ಯವನ್ನು ಸರಿಯಾದ ಕ್ರಮದಲ್ಲಿ ಕಾಪಾಡಿಕೊಂಡಿರಲು ಸಾಧ್ಯವಾಗುತ್ತೆ.
ಹೌದು ಚಳಿಗಾಲದ ಚರ್ಮದ ಆರೈಕೆಗಾಗಿ ಈ ಕಾಲದಲ್ಲಿ ಎಲ್ಲೆಲ್ಲೂ ಲಭ್ಯವಿರುವ ಕಡಲೆಬೀಜವೇ ಸಾಕು. ಹೌದು. ಕಡೆಲೆಕಾಯಿ ನಿಮ್ಮ ಸೌಂದರ್ಯವರ್ಧಕಗಳಲ್ಲಿ ಒಂದು.. ಹಾಗಾದ್ರೆ ಕಡಲೆಕಾಯಿಯಿಂದ ಹೇಗೆ ನಿಮ್ಮ ಬ್ಯೂಟಿ ಹೆಚ್ಚಿಸಿಕೊಳ್ಳಬಹುದು ಅಂತ ತಿಳ್ಕೋಬೇಕು ಅಂದ್ರೆ ಈ ಸ್ಟೋರಿಯ ಮುಂದಿನ ಭಾಗ ನೀವು ಓದಲೇಬೇಕು.

ಬೇಕಾಗುವ ಸಾಮಗ್ರಿಗಳು
*ಕಡಲೆಬೀಜ ( ಪುಡಿ ಮಾಡಿಕೊಂಡಿರಿ)
* ಓಟ್ಸ್
*ಸಕ್ಕರೆ
*ಹಾಲು (ಕೆನೆ ಸಹಿತವೇ ಇದ್ದರೆ ಒಳಿತು)
*ಬಾದಾಮಿ ಎಣ್ಣೆ
*ಆಲಿವ್ ಆಯಿಲ್
*ರೋಸ್ ವಾಟರ್
ಯಾಕೆ ಬೇಕು ಈ ಎಲ್ಲಾ ಪದಾರ್ಥಗಳು
*ಓಟ್ಸ್ ನ ಗುಣವೇನೆಂದರೆ ತುರಿಕೆಯ ಲಕ್ಷಣಗಳನ್ನು ಕಡಿಮೆ ಮಾಡಿ, ಚಳಿಗಾಲದಲ್ಲಿ ಉಂಟಾಗುವ ಸ್ಟ್ರೆಚ್ ಮಾರ್ಕ್ ಗಳನ್ನು ಕಡಿಮೆ ಮಾಡುತ್ತೆ. ಅಷ್ಟೇ ಅಲ್ಲ ಓಟ್ಸ್ ನ ಅಂಟುವ ಗುಣ ದೇಹಕ್ಕೆ ಉತ್ತಮ ಸ್ಕ್ರಬ್ ಆಗಲು ನೆರವಾಗುತ್ತೆ.
*ಕಡಲೆಬೀಜ ನಿಮ್ಮ ದೇಹದ ಮೇಲ್ಬಾಗದಲ್ಲಿರುವ ಡೆಡ್ ಸ್ಕಿನ್ ತೊಡೆದು ಹಾಕಲು ನೆರವಾಗುತ್ತೆ. ನಿಮ್ಗೆ ಎಷ್ಟು ಬೇಕೋ ಅಷ್ಟು ಸಣ್ಣ ಪುಡಿ ಮಾಡ್ಕೊಳ್ಳಿ. ತೀರಾ ಸೆನ್ಸಿಟೀವ್ ಚರ್ಮದವರು ನೀವಾಗಿದ್ರೆ ನಿಮ್ಮ ದೇಹಕ್ಕೆ ಯಾವ ಪ್ರಮಾಣದಲ್ಲಿರುವ ಕ್ರಷ್ಡ್ ಪುಡಿಯನ್ನು ಸಹಿಸಿಕೊಳ್ಳುವ ಸಾಮರ್ಥ್ಯವಿದೆ ಅನ್ನೋದನ್ನು ಗಮನಿಸಿಕೊಂಡು ಆ ನಿಟ್ಟಿನಲ್ಲಿ ಕಡಲೆಬೀಜದ ಪುಡಿ ತಯಾರಿಸಿಕೊಳ್ಳಿ.
*ಹಾಲು ಒಂದು ಅತ್ಯುತ್ತಮವಾದ ಕ್ಲೆನ್ಸರ್ ಆಗಿದ್ದು, ಚರ್ಮಕ್ಕೆ ಕಾಂತಿ ನೀಡುತ್ತೆ ಮತ್ತು ಚರ್ಮವನ್ನು ಮೃದುಗೊಳಿಸಲು ನೆರವಾಗುತ್ತೆ.
*ಸಕ್ಕರೆ ನಿಮ್ಮ ಚರ್ಮದಲ್ಲಿ ಉಂಟಾಗಿರುವ ಸಣ್ಣಸಣ್ಣ ಕಲೆಗಳ ನಿವಾರಣೆಗೆ ಸಹಕಾರಿಯಾಗಿರುತ್ತೆ.
*ಆಲಿವ್ ಆಯಿಲ್ ಮತ್ತು ಬಾದಾಮಿ ಎಣ್ಣೆಗೆ ತನ್ನದೇ ಆದ ವಿಭಿನ್ನ ಸಾಮರ್ಥ್ಯವಿದ್ದು, ಇವೆರಡೂ ಕೂಡ ಚರ್ಮದಲ್ಲಿ ಮಾಯ್ಚಿರೈಸರನ್ನು ಕಾಪಾಡಿಕೊಳ್ಳಲು ನೆರವು ನೀಡುತ್ತೆ. ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಇ, ಎ, ಬಿ1, ಬಿ2 ಮತ್ತು ಬಿ6 ಅಂಶವಿರುತ್ತೆ. ಅಷ್ಟೇ ಅಲ್ಲ, ಚರ್ಮದಲ್ಲಿ ಆಗುವ ಸುಕ್ಕುಗಳನ್ನು ತಡೆಗಟ್ಟುವ ಸಾಮರ್ಥ್ಯವಿದೆ.
ಸ್ಕ್ರಬ್ ತಯಾರಿಸಿಕೊಳ್ಳೋದು ಹೇಗೆ?
*ಓಟ್ಸ್ ಮತ್ತು ಕಡಲೆಪುಡಿಯನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ. ಇದರ ಅರ್ಧ ಪ್ರಮಾಣದಷ್ಟು ಸಕ್ಕರೆಯನ್ನು ತೆಗೆದುಕೊಂಡು ಮೂರನ್ನು ಮಿಕ್ಸ್ ಮಾಡಿ. ಸ್ಕ್ರಬ್ ಆಗುವಷ್ಟು ಪ್ರಮಾಣದಲ್ಲಿ ಹಾಲನ್ನು ಸೇರಿಸಿ ಕಲಸಿ. ಒಂದೆರಡು ಹನಿ ಬಾದಾಮಿ ಎಣ್ಣೆ ಮತ್ತು ಆಲಿವ್ ಆಯಿಲ್ ಸೇರಿಸಿ ಮತ್ತು ರೋಸ್ ವಾಟರ್ ಕೂಡ ಮೂರು ನಾಲ್ಕು ಹನಿಗಳಷ್ಟು ಮಿಕ್ಸ್ ಮಾಡಿ.
*ಎಲ್ಲವೂ ಚೆನ್ನಾಗಿ ಬೆರಕೆಯಾದ ನಂತ್ರ ಮುಖ ಮತ್ತು ದೇಹಕ್ಕೆ ಹಚ್ಚಿಕೊಂಡು, ಮಸಾಜ್ ಮಾಡ್ಕೊಳ್ಳಿ. ಕೆಲವು ನಿಮಿಷಗಳ ಮಸಾಜ್ ನಂತ್ರ ವಾಷ್ ಮಾಡ್ಕೊಳ್ಳಿ. ಚರ್ಮ ಫಳಫಳ ಅಂತ ಹೊಳೆಯಲು ಈ ಸ್ಕ್ರಬ್ ನಿಮಗೆ ನೆರವಾಗುತ್ತೆ. ಟ್ರೈ ಮಾಡಿ ನೋಡಿ.
ನೆನಪಿನಲ್ಲಿ ಇಡಬೇಕಾದ ಅಂಶಗಳು
*ಸ್ಕ್ರಬ್ ತಯಾರಿಸಿದ ಕೂಡಲೇ ಹಚ್ಚಿಕೊಳ್ಳಿ..ಪ್ರಿಸರ್ವ್ ಮಾಡಿದ್ರೆ ಸತ್ವ ಕಳೆದುಕೊಳ್ಳುವ ಸ್ಕ್ರಬ್ ನಿಮ್ಗೆ ಯಾವುದೇ ಪರಿಣಾಮವನ್ನೂ ಮಾಡದೇ ಇರಬಹುದು ಅಥವಾ ಅಡ್ಡಪರಿಣಾಮಗಳಿಗೂ ಕಾರಣವಾಗ್ಬಹುದು.
*ಫ್ರಿಡ್ಜ್ ನಲ್ಲಿ ಇಟ್ಟು ಯಾವುದೇ ಕಾರಣಕ್ಕೂ ಸ್ಕ್ರಬ್ ಬಳಸಬೇಡಿ. ಸಹಜ ತಾಪಮಾನದಲ್ಲಿರುವಂತೆಯೇ ಸ್ಕ್ರಬ್ ತಯಾರಿಸಿಕೊಂಡು ಅಪ್ಲೈ ಮಾಡ್ಕೊಳ್ಳಿ.
*ಮಸಾಜ್ ಮಾಡಿಕೊಳ್ಳುವಾದ ತೀರಾ ಪ್ರೆಸ್ ಮಾಡಿಕೊಳ್ಳುವ ಅಗತ್ಯವಿಲ್ಲ. ಸಹಜವಾಗೇ ಮಸಾಜ್ ಮಾಡ್ಕೊಳ್ಳಿ. ತೀರಾ ಪ್ರೆಸ್ ಮಾಡಿಕೊಂಡ್ರೆ ಚರ್ಮದಲ್ಲಿ ಕಲೆಗಳಾಗುತ್ತೇ ವಿನಃ ಅತೀ ಹೆಚ್ಚು ಡೆಡ್ ಸ್ಕಿನ್ ಗಳು ಮಾಯಾವಾಗುತ್ತೆ ಅಂತ ಭಾವಿಸಬೇಡಿ
*ಮಸಾಜ್ ಮಾಡಿಕೊಳ್ಳೋದಕ್ಕೆ ಬೇರೆಯವರ ಸಹಾಯವನ್ನೂ ಪಡೀಬಹುದು. ಆದ್ರೆ ಅವರು ಮಾಡುವ ಮಸಾಜ್ ಟೆಕ್ನಿಕ್ ನಿಮ್ಮ ದೇಹಕ್ಕೆ ಹಿಡಿಸುತ್ತಿದೆಯಾ ಅನ್ನೋದು ಮುಖ್ಯ.



Click it and Unblock the Notifications

