Latest Updates
-
ಎಲ್ಜಿಪಿ ಬಳಸದೆ ನೀರಿನಿಂದ ಅಡುಗೆ ಮಾಡಿ: ರವಿಶಂಕರ್ ಗುರೂಜಿ ವಿಡಿಯೋ ವೈರಲ್ -
ಬೇಸಿಗೆಯ ಉರಿಗೆ ಪೈನಾಪಲ್ ರಸಂ ಮಾಡಿ: ಎಷ್ಟು ಸುಲಭ ಮಾಡೋದು ಗೊತ್ತಾ? -
ಅಕ್ಕಿ ಬೇಡ, ನೆನೆಸೋ ಸಮಯವೂ ಬೇಡ.. ತಕ್ಷಣ ಮಾಡಿ ಈ ದೋಸೆ! ಈ ಟ್ರಿಕ್ ಗೊತ್ತಿದ್ರೆ ಯಾರೂ ಮಾಡಬಹುದು -
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ
ತ್ವಚೆಯ ಅಂದಕ್ಕೆ-ಮೂಸಂಬಿ ಜ್ಯೂಸ್‌ನ ಲೇಪನ!
ಚೇತರಿಸಿಕೊಳ್ಳುತ್ತಿರುವ ರೋಗಿಗಳಿಗೆ ವೈದ್ಯರು ಸಲಹೆ ಮಾಡುವ ಆಹಾರಗಳಲ್ಲಿ ಪ್ರಮುಖವಾದವು ಎಳನೀರು ಮತ್ತು ಮೂಸಂಬಿ. ಏಕೆಂದರೆ ಇವೆರಡೂ ಪೋಷಕಾಂಶಗಳ ಆಗರವಾಗಿದ್ದು ರೋಗಿ ಕಳೆದುಕೊಂಡಿರುವ ನೀರಿನ ಪ್ರಮಾಣವನ್ನು ಸಮರ್ಥವಾಗಿ ಮರುಪೂರೈಸುವಲ್ಲಿ ಇತರ ಆಹಾರಗಳಿಗಿಂತ ಹೆಚ್ಚು ಸಕ್ಷಮವಾಗಿವೆ. ಮೂಸಂಬಿಯ ರಸ ದೇಹದೊಳಗೆ ಹೇಗೆ ಉತ್ತಮವೋ ಅಂತೆಯೇ ಚರ್ಮದ ಆರೈಕೆಗೂ ಸೂಕ್ತವಾಗಿದೆ. ತೂಕ ಇಳಿಸಿಕೊಳ್ಳಬೇಕೇ? ಮೂಸಂಬಿ ಜ್ಯೂಸ್ ಸೇವಿಸಿ!
ಏಕೆಂದರೆ ಇದರಲ್ಲಿರುವ ಹಲವು ಪೋಷಕಾಂಶಗಳು ಚರ್ಮದ ಪೋಷಣೆಗೆ ಪೂರಕವಾಗಿದ್ದು ಚರ್ಮ ಸುಲಭವಾಗಿ ಪಡೆಯುವಂತಿದೆ. ಚರ್ಮಕ್ಕೆ ಮೂಸಂಬಿ ಎಷ್ಟು ತರಹದಲ್ಲಿ ಪ್ರಯೋಜನಕಾರಿ ಎಂಬ ಪಟ್ಟಿ ಬಹಳ ಉದ್ದವಿದೆ. ಮೂಸ೦ಬಿ ಹಣ್ಣಿನಿ೦ದ ತ್ವಚೆ ಹಾಗೂ ಕೇಶರಾಶಿಗಾಗುವ ಲಾಭಗಳು
ಮೊಡವೆಯನ್ನು ನಿವಾರಿಸಲು, ಚರ್ಮದ ಕಾಂತಿ ಹೆಚ್ಚಿಸಲು, ಚರ್ಮದ ಊತವನ್ನು ಕಡಿಮೆಗೊಳಿಸಲು, ಚರ್ಮ ಪಕಳೆ ಏಳುವುದನ್ನು ತಡೆಯಲು, ಕೂದಲುಗಳನ್ನು ದೃಢಗೊಳಿಸಲು, ಹಿಮ್ಮಡಿಯ ಬಿರುಕುಗಳನ್ನು ತುಂಬಿಸಲು, ತಲೆಹೊಟ್ಟಿನ ತೊಂದರೆ ನಿವಾರಿಸಲು ಮೊದಲಾದ ಹತ್ತು ಹಲವು ಸಮಸ್ಯೆಗಳಿಗೆ ಮೂಸಂಬಿಯಲ್ಲಿ ಉತ್ತರವಿದೆ. ಆದರೆ ಇದರ ಪರಿಣಾಮವನ್ನು ಅರಿಯಲು ಕನಿಷ್ಠ ಒಂದು ವಾರವಾದರೂ ಅಗತ್ಯ. ಮೂಸಂಬಿ ಸೌಂದರ್ಯಕ್ಕೆ ಹೇಗೆ ಪ್ರಯೋಜನಕಾರಿ ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ:

ಪ್ರಯೋಜನ #1
ಮೂಸಂಬಿಯಲ್ಲಿರುವ ಬ್ಯಾಕ್ಟೀರಿಯಾ ನಿವಾರಕಾ ಗುಣ ಚರ್ಮದಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಿವಾರಿಸಲು ಉಪಯುಕ್ತವಾಗಿದೆ. ಆದ್ದರಿಂದ ಮೂಸಂಬಿ ಜ್ಯೂಸ್ ನಿಂದ ನೇರವಾಗಿ ಮುಖ ತೊಳೆಯುವುದರಿಂದ ಮುಖದ ಕೊಳೆ ತೊಳೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ಈಗತಾನೇ ಹಿಂಡಿದ ಮೂಸಂಬಿ ರಸವನ್ನು ತೆಳುವಾಗಿ ಹಚ್ಚಿ. ಇದಕ್ಕೆ ಹತ್ತಿಯುಂಡೆ ಅಥವಾ ತೆಳುವಾದ ಬಟ್ಟೆ ಉಪಯೋಗಿಸಬಹುದು. ಸುಮಾರು ಮೂರು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ಮುಖದ ಚರ್ಮದ ರಂಧ್ರಗಳ ಒಳಗೆ ಹೋಗಿ ಕೊಳೆಯನ್ನು ನಿವಾರಿಸುತ್ತದೆ.

ಪ್ರಯೋಜನ #2
ಮೂಸಂಬಿ ರಸದಲ್ಲಿ ಹಲವಾರು ವಿಟಮಿನ್ ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳಿರುವುದರಿಂದ ಚರ್ಮದ ಸೋಂಕುಗಳನ್ನು ರಕ್ಷಿಸಲು ಸಮರ್ಥವಾಗಿದೆ. ಇದಕ್ಕಾಗಿ ಮೂಸಂಬಿ ರಸವನ್ನು ರಾತ್ರಿ ಮಲಗುವ ಮುನ್ನ ಮುಖದ ಮೇಲೆ ದಪ್ಪನಾಗಿ ಲೇಪಿಸಿ ಹತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳುವ ಮೂಲಕ ಚರ್ಮಕ್ಕೆ ಸೋಂಕು ಉಂಟಾಗುವುದನ್ನು ತಪ್ಪಿಸಬಹುದು. ಇಡಿಯ ದಿನ ಬಿಸಿಲು, ಹೊಗೆ ಮತ್ತು ಇತರ ಪ್ರದೂಷಣೆಯಿಂದ ಬಳಲಿದ ಚರ್ಮಕ್ಕೆ ಈ ಆರೈಕೆ ಉತ್ತಮವಾಗಿದೆ.

ಪ್ರಯೋಜನ#3
ನಿಮ್ಮ ಕೂದಲಿಗೆ ಶಾಂಪೂವಿನ ಆರೈಕೆ ನೀಡಿದ ಬಳಿಕ ಉಳಿದ ಶಾಂಪೂವನ್ನು ನಿವಾರಿಸಲು ಹೆಚ್ಚು ನೀರು ಬಳಸಬೇಕಾಗುತ್ತದೆ. ಇದು ಶಾಂಪೂ ನೀಡಿದ ಪೋಷಣೆಯನ್ನೂ ತೊಳೆದುಕೊಂಡು ಹೋಗುತ್ತದೆ. ಬದಲಿಗೆ ಶಾಂಪೂ ಉಪಯೋಗಿಸಿದ ಬಳಿಕ ಒಂದು ಬಾರಿ ಮಾತ್ರ ನೀರು ಹಾಕಿ ಬಳಿಕ ಮೂಸಂಬಿ ರಸವನ್ನು ಹಚ್ಚಿ ತೊಳೆದುಕೊಂಡರೆ ಸುಲಭವಾಗಿ ಶಾಂಪೂವಿನ ಎಲ್ಲಾ ಅಂಶಗಳು ತೊಳೆದುಹೋಗುತ್ತವೆ.

ಪ್ರಯೋಜನ #4
ಮೂಸಂಬಿರಸ ಮತ್ತು ಜೇನಿನ ಜೋಡಿ ನಿಮ್ಮ ಕೂದಲ ಆರೈಕೆಗೆ ಉತ್ತಮವಾಗಿದೆ. ಇದಕ್ಕಾಗಿ ಈಗ ತಾನೇ ಹಿಂಡಿದ ಒಂದು ದೊಡ್ಡ ಗಾತ್ರದ ಮೂಸಂಬಿಯ ರಸ ಮತ್ತು ಅಷ್ಟೇ ಪ್ರಮಾಣದ ನೀರು ಹಾಕಿ ಬೆರೆಸಿ. ಇದಕ್ಕೆ ಒಂದು ಚಿಕ್ಕ ಚಮಚ ಜೇನು ಸೇರಿಸಿ ಚೆನ್ನಾಗಿ ಕಲಕಿ. ಈಗತಾನೇ ಶಾಂಪೂ ಉಪಯೋಗಿಸಿ ತೊಳೆದುಕೊಂಡ ಕೂದಲಿಗೆ ಹಚ್ಚಿ, ವಿಶೇಷವಾಗಿ ಕೂದಲ ಬುಡದಲ್ಲಿ ಮಸಾಜ್ ಮಾಡಿ. ಸುಮಾರು ಐದರಿಂದ ಹತ್ತು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಇದರಿಂದ ಆರೋಗ್ಯವಂತ, ದೃಧ ಮತ್ತು ಕಾಂತಿಯುಕ್ತ ಕೂದಲು ನಿಮ್ಮದಾಗುತ್ತದೆ.

ಪ್ರಯೋಜನ #5
ಪ್ರತಿದಿನ ಎರಡು ಬಾರಿ ಮೂಸಂಬಿ ರಸದಿಂದ ತುಟಿಗಳನ್ನು ಸವರಿಕೊಳ್ಳುವ ಮೂಲಕ ತುಟಿಗಳಿಗೆ ಲಿಪ್ ಬಾಮ್ ಮೂಲಕ ದೊರಕುವ ಆರೈಕೆ ದೊರಕುತ್ತದೆ.

ಪ್ರಯೋಜನ #6
ಒಂದು ಚಿಕ್ಕ ಚಮಚ ಕಡ್ಲೆಹಿಟ್ಟಿಗೆ ಕೊಂಚ ಮೂಸಂಬಿ ರಸ ಸೇರಿಸಿ ನಯವಾದ ಲೇಪನ ತಯಾರಿಸಿ. ಈಗ ತಾನೇ ತೊಳೆದುಕೊಂಡ ಮುಖಕ್ಕೆ ನಯವಾಗಿ ಲೇಪಿಸಿ ಹತ್ತು ನಿಮಿಷ ಬಿಟ್ಟು ತೊಳೆದುಕೊಳ್ಳಿ. ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.

ಪ್ರಯೋಜನ #7
ಮುಖದ ಮೇಲಿನ ಕಲೆಗಳಿಗೆ ಮೂಸಂಬಿ ರಸವನ್ನು ನೇರವಾಗಿ ಹಚ್ಚಿಕೊಳ್ಳುವ ಮೂಲಕ ಕೆಲವೇ ದಿನಗಳಲ್ಲಿ ಉತ್ತಮ ಪರಿಣಾಮ ಕಾಣಬಹುದು. ಮೂಸಂಬಿ ರಸವನ್ನು ಹತ್ತಿಯ ಚಿಕ್ಕ ಉಂಡೆ ಪೂರ್ತಿಯಾಗಿ ಹೀರಿಕೊಳ್ಳುವಂತೆ ಸ್ವಲ್ಪವೇ ಹಿಂಡಿ ಮಾಡಿ ಚಿಕ್ಕ ಪ್ಲಾಸ್ಟರ್ ಒಂದನ್ನು ಗಾಯಕ್ಕೆ ಹಚ್ಚುವಂತೆ ಹತ್ತಿಯುಂಡೆಯನ್ನು ಕಲೆಯ ಮೇಲಿಟ್ಟು ಸುಮಾರು ಎರಡು ಘಂಟೆಗಳಾದರೂ ಇರಿಸಿ.

ಪ್ರಯೋಜನ #7
ಇದು ಉತ್ತಮ ಪರಿಣಾಮ ಬೀರುತ್ತದೆ. ಪರ್ಯಾಯವಾಗಿ ಮೂಸಂಬಿಯ ಸಿಪ್ಪೆಗಳನ್ನು ಚೆನ್ನಾಗಿ ಒಣಗಿಸಿ ಬಳಿಕ ಕುಟ್ಟಿ ಪುಡಿ ಮಾಡಿ ಈ ಪುಡಿಯನ್ನು ಮೊಸರು ಅಥವಾ ಹಸಿಹಾಲಿನಲ್ಲಿ ಬೆರೆಸಿ ಲೇಪನ ಮಾಡಿ ಕಲೆಯ ಮೇಲೆ ದಪ್ಪನಾಗಿ ದಿನಕ್ಕೆರಡು ಬಾರಿ ಹಚ್ಚುವ ಮೂಲಕ ಒಂದು ವಾರದಲ್ಲಿಯೇ ಗಣನೀಯವಾದ ಪರಿಣಾಮವನ್ನು ಪಡೆಯಬಹುದು.

ಪ್ರಯೋಜನ #8
ಬ್ಲಾಕ್ ಹೆಡ್ ನಿವಾರಣೆಗೆ: ಒಂದು ಅಥವಾ ಎರಡು ಮೂಸಂಬಿಗಳ ರಸ ಹಿಂಡಿ ಫ್ರಿಜ್ ನಲ್ಲಿರುವ ಐಸ್ ಟ್ರೇನೊಳಗೆ ತುಂಬಿಸಿಡಿ. ಬೆಳಗ್ಗಿನ ಸ್ನಾನದ ಬಳಿಕ ಇದರಲ್ಲಿ ಒಂದು ಚಿಕ್ಕ ತುಂಡನ್ನು ಹೊರತೆಗೆದು ನೇರವಾಗಿ ಮುಖದ ಚರ್ಮದ ಮೇಲೆ ಉಜ್ಜಿಕೊಳ್ಳಿ. ಇದು ಚರ್ಮದ ಎಣ್ಣೆಯಂಶವನ್ನು ಹೀರಿಕೊಳ್ಳುತ್ತದೆ ಹಾಗೂ ಬ್ಲಾಕ್ ಹೆಡ್ ಗಳನ್ನು ಬುಡಸಹಿತ ನಿವಾರಿಸಲು ನೆರವಾಗುತ್ತದೆ. ಇದರಿಂದ ಮುಖದ ಮೇಲೆ ಮೊಡವೆಗಳಾಗುವ ಸಾಧ್ಯತೆಗಳೂ ಕಡಿಮೆಯಾಗುತ್ತದೆ. ಈ ಆರೈಕೆ ಎಣ್ಣೆಚರ್ಮದವರಿಗೆ ಅತ್ಯುತ್ತಮವಾಗಿದೆ.

ಪ್ರಯೋಜನ #9
ದಿನಕ್ಕೊಂದು ಲೋಟ ಮೂಸಂಬಿಯ ಜ್ಯೂಸ್ ಕುಡಿಯುವ ಮೂಲಕ ತೂಕವೂ ಕಡಿಮೆಯಾಗುತ್ತದೆ ಹಾಗೂ ಚರ್ಮಕ್ಕೆ ಒಳಗಿನಿಂದ ದೊರಕುವ ಆರೈಕೆಯ ಕಾರಣ ಚರ್ಮದಲ್ಲಿ ನೆರಿಗೆ ಮೂಡುವ ಪ್ರಕ್ರಿಯೆ ಮುಂದೂಡಲ್ಪಡುತ್ತದೆ. ಪರಿಣಾಮವಾಗಿ ತಾರುಣ್ಯ ಹೆಚ್ಚಿನ ಕಾಲದವರೆಗೆ ಉಳಿಯುತ್ತದೆ.



Click it and Unblock the Notifications











