Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಆರೋಗ್ಯಕ್ಕೆ ಮಾರಕವಾದ ವೋಡ್ಕಾ ಸೌಂದರ್ಯಕ್ಕೆ ಪೂರಕ!
ರಷ್ಯನ್ನರು ಅತಿ ಹೆಚ್ಚಾಗಿ ಸೇವಿಸುವ ಮದ್ಯವಾದ ವೋಡ್ಕಾ ನೋಡಲು ಪಾರದರ್ಶಕ ನೀರಿನಂತೆ ಕಂಡುಬಂದರೂ ಅಮಲೇರಿಸುವಲ್ಲಿ ಬೇರೆ ಯಾವುದೇ ಪಾನೀಯಾಗಳಿಗೆ ಕಡಿಮೆಯಿಲ್ಲ. ಆದರೆ ಈ ಪಾನೀಯವನ್ನು ಹೊಟ್ಟೆಗೆ ಹಾಕುವ ಬದಲಿಗೆ ಸೌಂದರ್ಯವೃದ್ಧಿಗೆ ಬಳಸಿಕೊಂಡರೆ ಹಲವು ವಿಧದಲ್ಲಿ ಪ್ರಯೋಜನಕಾರಿಯಾಗಿದೆ.
ವಿವಿಧ ಕಾಳುಗಳನ್ನು ಕೊಳೆಸಿ ಭಟ್ಟಿಯಿಳಿಸಿದ ವೋಡ್ಕಾದಲ್ಲಿ ಪ್ರಮುಖವಾಗಿರುವ ಧಾತುವೆಂದರೆ ಇಥನಾಲ್. ಇದು ಒಂದು ಪ್ರಬಲ ಮಾರ್ಜಕವಾಗಿದ್ದು ಮದ್ಯದ ಹೊರತಾಗಿ ಹಲವು ಇತರ ಉತ್ಪನ್ನಗಳಲ್ಲೂ ಬಳಸಲ್ಪಡುತ್ತದೆ. ತ್ವಚೆಯ ಕಾಂತಿ ಹೆಚ್ಚಬೇಕೇ? ಅಕ್ಕಿನೆನೆಸಿದ ನೀರನ್ನು ಬಳಸಿ
ಕೀಟಗಳನ್ನು ವಿಕರ್ಷಿಸುವ ದ್ರವಗಳಲ್ಲಿ, ಮನೆ ಮದ್ದುಗಳಲ್ಲಿ, ಸ್ವಚ್ಛಗೊಳಿಸುವ ದ್ರಾವಣಗಳಲ್ಲಿ ಈ ಇಥನಾಲ್ ಬಳಕೆಯಾಗುತ್ತದೆ. ಆದರೆ ಚರ್ಮಕ್ಕೆ ಸಂಬಂಧಿಸಿದಂತೆ ಇಥನಾಲ್ ಒಂದು ಉತ್ತಮ ನಂಜುನಿರೋಧಕ ಮತ್ತು ಸಂಕೋಚಕ (astringent)ವಾಗಿರುವ ಕಾರಣ ಹಲವು ಸೌಂದರ್ಯವೃದ್ಧಿ ಕಾರ್ಯಗಳಲ್ಲಿ ಬಳಕೆಯಾಗುತ್ತದೆ.
ಚರ್ಮದ ಮೇಲೆ ಇದನ್ನು ಬಳಸುವುದರಿಂದ ಚರ್ಮದ ಸೂಕ್ಷ್ಮರಂಧ್ರಗಳಲ್ಲಿರುವ ಕೊಳೆಯನ್ನು ತೆಗೆಯುವ ಮತ್ತು ಸೆಳೆತನೀಡಿ ಕಾಂತಿಹೆಚ್ಚಿಸಲೂ ಇದರ ಬಳಕೆಯಾಗುತ್ತದೆ. ಚರ್ಮದ ಆರೈಕೆಗೆ ಚರ್ಮದ ಸೂಕ್ಷ್ಮರಂಧ್ರಗಳಿಂದ ಹೊರಬರುವ ಸ್ರಾವ ಪೂರ್ಣವಾಗಿ ಹೊರಬರುವಂತಿರಬೇಕು. ಮಗುವಿನಂತಹ ಕೋಮಲ ತ್ವಚೆ ಪಡೆಯುವ ಇರಾದೆಯೇ?
ಇಲ್ಲದಿದ್ದರೆ ಅಲ್ಲಿಯೇ ಗಟ್ಟಿಯಾಗಿ ಮೊಡವೆ, ಕಲೆ ಮೊದಲಾದ ತೊಂದರೆಗಳು ಎದುರಾಗಬಹುದು. ವೋಡ್ಕಾಬಳಸಿ ಚರ್ಮವನ್ನು ಸ್ವಚ್ಛಗೊಳಿಸುವುದರಿಂದ ಚರ್ಮದ ಕೊಳೆಗಳು ಸುಲಭವಾಗಿ ಹೊರಬರುವ ಮೂಲಕ ಉತ್ತಮ ಪೋಷಣೆ ಪಡೆಯುತ್ತದೆ. ಕೂದಲಿಗೂ ಇದು ಉಪಯೋಗಕಾರಿಯಾಗಿದೆ. ಇದರ ಇತರ ಪ್ರಯೋಜನಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ:

ಘಾಸಿಗೊಂಡ ಕೂದಲಿಗೆ ಫಲಕಾರಿಯಾಗಿದೆ
ಒಂದು ವೇಳೆ ನಿಮ್ಮ ತಲೆಗೂದಲು ವಿಪರೀತವಾಗಿ ಘಾಸಿಗೊಂಡು ಸಿಕ್ಕು ಸಿಕ್ಕಾಗಿದ್ದರೆ ಸ್ವಲ್ಪ ಪ್ರಮಾಣದ ನಿಮ್ಮ ನೆಚ್ಚಿನ ಕಂಡೀಶನರ್ ಗೆ ಎರಡು ಚಿಕ್ಕ ಚಮಚ ವೋಡ್ಕಾ ಸೇರಿಸಿ ಎರಡೂ ಕೈಗಳಿಗೆ ಹಚ್ಚಿಕೊಳ್ಳಿ. ಬಳಿಕ ಎರಡೂ ಕೈಗಳಿಂದ ತಲೆಗೂದಲಿಗೆ ಮೇಲಿನಿಂದ ಕೆಳಗೆ ಬರುವಂತೆ ಸವರುತ್ತಾ ಬನ್ನಿ. ನಿಯಮಿತವಾಗಿ ಬಳಸುವುದರಿಂದ ನಿಮ್ಮ ಕೂದಲು ಉತ್ತಮ ಪೋಷಣೆ ಪಡೆಯುವ ಜೊತೆಗೇ ಹೊಳಪನ್ನು ಸಹಾ ಪಡೆಯುತ್ತದೆ.

ಪಾದಗಳ ದುರ್ವಾಸನೆಯನ್ನು ತಡೆಯುತ್ತದೆ
ಒಂದು ವೇಳೆ ನಿಮ್ಮ ಪಾದಗಳು ದುರ್ವಾಸನೆಯಿಂದ ಕೂಡಿದ್ದರೆ ಒಂದು ಅಗಲವಾದ ಬಕೆಟ್ ನಲ್ಲಿ ಉರುಗುಬೆಚ್ಚನೆಯ ನೀರು ಹಾಕಿ ಸುಮಾರು ಐದು ಚಿಕ್ಕ ಚಮಚ ವೋಡ್ಕಾ ಹಾಕಿ ಪಾದಗಳನ್ನು ಐದು ನಿಮಿಷ ಮುಳುಗಿಸಿಡಿ. ಬಳಿಕ ಪಾದದ ದುರ್ವಾಸನೆ ಇಲ್ಲವಾಗುತ್ತದೆ

ಬಾಯಿಯ ದುರ್ವಾಸನೆಯನ್ನು ನಿವಾರಿಸುತ್ತದೆ
ವೋಡ್ಕಾದ ಜೀವಿರೋಧಿ (antibacterial) ಗುಣ ಬಾಯಿಯಲ್ಲಿ ಧಾಳಿಯಿಟ್ಟಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ನೆರವಾಗುತ್ತದೆ. ಇದಕ್ಕಾಗಿ ಒಂದು ಚಿಕ್ಕಚಮಚ ವೋಡ್ಕಾವನ್ನು ನೇರವಾಗಿ ಬಾಯಿಗೆ ಹಾಕಿ ಮುಕ್ಕಳಿಸಿ ಉಗುಳಿ. ಬಳಿಕ ಉಗುರುಬೆಚ್ಚನೆಯ ನೀರಿನಿಂದ ಮುಕ್ಕಳಿಸಿ.

ಚರ್ಮ ಸ್ವಚ್ಛಗೊಳಿಸುವ ಟೋನರ್ ಆಗಿ ಬಳಸಬಹುದು
ಚರ್ಮದ ಸೂಕ್ಷ್ಮರಂಧ್ರಗಳಲ್ಲಿರುವ ಕೊಳೆಯನ್ನು ನಿವಾರಿಸಲು ನೀರು ಸಾಕಾಗುವುದಿಲ್ಲ. ಇದಕ್ಕೆ ಕೊಂಚ ಆಮ್ಲೀಯವಾದ ಟೋನರ್ ಅಗತ್ಯವಿದೆ. ಇದಕ್ಕಾಗಿ ನೀರು ಮತ್ತು ವೋಡ್ಕಾವನ್ನು ಸಮಪ್ರಮಾಣದಲ್ಲಿ ಮಿಶ್ರಣ ಮಾಡಿ ಎರಡು ಚಿಕ್ಕಚಮಚ ದಷ್ಟು ಪ್ರಮಾಣವನ್ನು ಒಂದು ಹತ್ತಿಯಿಂಡೆಯಲ್ಲಿ ಅದ್ದಿ ಮುಖದ ಚರ್ಮವನ್ನು ಒರೆಸಿಕೊಳ್ಳಿ. ಇದರಿಂದ ಚರ್ಮದ ಕೊಳೆ ಆಳದಿಂದ ಹೊರಬಂದು ಸೂಕ್ಷ್ಮರಂಧ್ರಗಳು ತೆರೆದುಕೊಳ್ಳುತ್ತವೆ ಹಾಗೂ ಅಡಗಿಕೊಂಡಿದ್ದ ಬ್ಯಾಕ್ಟೀರಿಯಾ ಮತ್ತು ಹೊರಚರ್ಮದ ಸತ್ತ ಜೀವಕೋಶಗಳನ್ನು ನಿವಾರಿಸಲು ಸಾಧ್ಯವಾಗುತ್ತದೆ.

ಶೇವಿಂಗ್ ಬ್ಲೇಡ್ ಸ್ವಚ್ಛಗೊಳಿಸಲು ನೆರವಾಗುತ್ತದೆ
ಪ್ರತಿ ಬಾರಿ ಶೇವ್ ಮಾಡಿದ ಬಳಿಕ ವೋಡ್ಕಾದಲ್ಲಿ ಬ್ಲೇಡ್ ನ ಭಾಗ ಮುಳುಗುವಂತಿಟ್ಟರೆ ಮುಂದಿನ ಶೇವ್ ಸಮಯದವರೆಗೆ ಯಾವುದೇ ಸೋಂಕು ಇಲ್ಲದೆ ಸ್ವಚ್ಛವಾಗಿರುತ್ತದೆ.

ನೆತ್ತಿಯ ಕೊಳೆಯನ್ನು ತೆಗೆಯುತ್ತದೆ
ನೆತ್ತಿಯ ಕೊಳೆಯನ್ನು ಶಾಂಪೂ ಸೋಪುಗಳಿಗಿಂಗಲೂ ಸ್ವಚ್ಛವಾಗಿ ವೋಡ್ಕಾ ತೆಗೆಯುತ್ತದೆ. ಇದಕ್ಕಾಗಿ ಒಂದು ಚಿಕ್ಕ ಚಮಚ ಶಾಂಪೂ ಜೊತೆ ಎರಡು ಚಿಕ್ಕ ಚಮಚ ವೋಡ್ಕಾ ಸೇರಿಸಿ ನೆತ್ತಿಗೆ ಹಚ್ಚಿಕೊಳ್ಳಿ. ಚೆನ್ನಾಗಿ ನೊರೆಬರಿಸಿ ಬಳಿಕ ತೊಳೆದುಕೊಳ್ಳಿ. ಇದರಿಂದ ನೆತ್ತಿಯ ಕೊಳೆ ಹೋಗುವ ಜೊತೆಗೇ ಅಂಟಿಕೊಂಡಿದ್ದ ಎಣ್ಣೆಯಪಸೆ ಮತ್ತು ಸತ್ತ ಮತ್ತು ಒಣಗಿದ ಚರ್ಮದ ಜೀವಕೋಶಗಳು ನಿವಾರಣೆಯಾಗುತ್ತವೆ.



Click it and Unblock the Notifications