Latest Updates
-
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ! -
ಭಾರಿ ಗಾಳಿ-ಮಳೆಯ ಎಚ್ಚರಿಕೆ: ಜೂನ್ 20ರಂದು ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯದಿರಿ! -
ಮಳೆಗಾಲದಲ್ಲಿ ಅಂತರಾಷ್ಟ್ರೀಯ ಯೋಗ ದಿನ: ಹಿರಿಯರು ಸುರಕ್ಷಿತವಾಗಿ ಯೋಗ ಮಾಡುವುದು ಹೇಗೆ? -
ವಿಶ್ವ ಸಂಗೀತ ದಿನ: ಸಂಗಾತಿಯೊಂದಿಗೆ ಮರೆಯಲಾಗದ ಕ್ಷಣ ಕಳೆಯಲು ಇಲ್ಲಿದೆ ಸಿಂಪಲ್ ಪ್ಲಾನ್! -
ಮುಂಬೈನಲ್ಲಿ ತೀವ್ರ ನೀರಿನ ಅಭಾವ: ಬಿಎಂಸಿ ಕಠಿಣ ನಿಯಮಗಳ ನಡುವೆ ನೀರು ಉಳಿಸಲು ಈ ಟಿಪ್ಸ್ ಪಾಲಿಸಿ -
ಮಳೆಗಾಲದಲ್ಲಿ ಸಿಕಲ್ ಸೆಲ್ ಸಮಸ್ಯೆ: ಆರೋಗ್ಯ ಕಾಪಾಡಲು ಈ ಆಹಾರ ಕ್ರಮ ಪಾಲಿಸಿ, ನೋವು ದೂರವಿಡಿ! -
ಟೆಲಿಗ್ರಾಂ ಬ್ಯಾನ್: ಜೂನ್ 22ರವರೆಗೆ ಈ ಆಪ್ಗಳನ್ನು ಬಳಸಿ, ಇಲ್ಲದಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ! -
ಮಳೆಗಾಲದಲ್ಲಿ 'ರನ್ ಫಾರ್ ಯೋಗ': ಜಾರುವ ರಸ್ತೆಯಲ್ಲಿ ಸುರಕ್ಷಿತವಾಗಿ ಓಡಲು ಈ ಟಿಪ್ಸ್ ಪಾಲಿಸಿ
ಮುದ್ದು ಮುಖ ಕೆಡಿಸುವ ಮೊಡವೆಗೆ ಇನ್ನು ವಿದಾಯ ಹೇಳಿ!
ಹದಿಹರೆಯದಲ್ಲಿ ಮುಖದ ಮೇಲೆ ಮೂಡುವ ಮೊಡವೆಗಳು ಚಿಂತೆಗೆ ಕಾರಣವಾಗುತ್ತವೆ. ಕೆಲವರಿಗಂತೂ ಇಪ್ಪತ್ತರ ಹರೆಯ ದಾಟಿದ ಬಳಿಕವೂ ಬೆನ್ನು ಬಿಡದ ಮೊಡವೆಗಳು ಮಾಗಿದ ಬಳಿಕ ಗಾಢವಾದ ಕಲೆಯನ್ನು ಶಾಶ್ವತವಾಗಿ ಉಳಿಸಿಯೇ ಹೋಗುತ್ತವೆ. ಮೊಡವೆಗಳಿಗೆ ಹಲವು ರಸದೂತಗಳ ಜೊತೆಗೇ ನಾವು ಸೇವಿಸುವ ಆಹಾರಗಳೂ ಕಾರಣವಾಗಿವೆ. ಮೊಡವೆ ಇರುವ ಸಮಯದಲ್ಲಿ ಈ ಆಹಾರಗಳಿಂದ ದೂರವಿರುವ ಮೂಲಕ ಮೊಡವೆಗಳನ್ನೂ ಸಾಕಷ್ಟು ದೂರವಿರಿಸಬಹುದು. ತ್ವಚೆಯ ಅಂದ ಕೆಡಿಸುವ ಮೊಡವೆಗೆ ಅರಿಶಿನದ ಲೇಪನ!
ಮೊಡವೆಗಳಿಗೆ ಹೆಚ್ಚಿನವರು ನೀಡುವ ಮದ್ದು ಎಂದರೆ ಚಿವುಟುವುದು. ಇದು ಅತ್ಯಂತ ಕೆಟ್ಟ ಕ್ರಮವಾಗಿದೆ. ಏಕೆಂದರೆ ಚಿವುಟಿದ ಬಳಿಕ ಮೊಡವೆಯ ಮೂಲದ ಭಾಗ ಒಳಗೇ ಉಳಿದು ತುದಿಯಲ್ಲಿದ್ದ ಕೊಂಚ ಗಟ್ಟಿಯಾಗಿದ್ದ ಕೀವು ಮಾತ್ರ ಹೊರಬರುತ್ತದೆ. ಒಳಗೇ ಉಳಿದ ಭಾಗ ಗಟ್ಟಿಯಾಗಿ ಬಳಿಕ ಕಲೆಯಾಗಲು ಕಾರಣವಾಗುತ್ತದೆ.
ಮೊಡವೆಗಳ ನಿಗ್ರಹಕ್ಕೆ ಹಲವು ಕ್ರೀಮ್ ಮತ್ತು ಔಷಧಿಗಳು ಇವೆಯಾದರೂ ಇವು ಹೊರಗಿನಿಂದ ಪೋಷಣೆ ನೀಡುವುದರಿಂದ ಪೂರ್ಣ ಪ್ರಮಾಣದ ಫಲ ಸಿಗಲು ಸಾಧ್ಯವಿಲ್ಲ. ಆದರೆ ನಿಮ್ಮ ಆಹಾರವನ್ನು ನಿಯಂತ್ರಿಸುವುದರಿಂದ ಒಳಗಿನಿಂದ ಪಡೆಯುವ ಪೋಷಣೆ ಮೊಡವೆಗಳನ್ನು ನಿವಾರಿಸಲು ಸಾಧ್ಯವಿದೆ. ಅಮೃತದಂತಹ ಮದ್ದಿರುವಾಗ ಮೊಡವೆಗೆ ಅಂಜುವುದೇಕೆ?
ಈ ಬಗ್ಗೆ ಸಂಶೋಧನೆ ನಡೆಸಿತ ತಜ್ಞರ ಪ್ರಕಾರ ಮೊಡವೆಗಳಿಗೆ ರಕ್ತದಲ್ಲಿ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಆಹಾರಗಳು ನೇರ ಕಾರಣವಾಗಿವೆ. ಉತ್ತಮ ನಿದ್ದೆ, ಒತ್ತಡದಿಂದ ದೂರವಿರುವುದು ಮೊದಲಾದ ಕ್ರಮಗಳಿಂದ ಮೊಡವೆಗಳಿಂದ ಮುಕ್ತಿ ಪಡೆಯಲು ಖಂಡಿತಾ ಸಾಧ್ಯವಿದೆ. ಇನ್ನೂ ಉತ್ತಮವೆಂದರೆ ಕೆಲವು ಆಹಾರಗಳಿಂದ ದೂರವಿರುವುದು ಅಥವಾ ಸೇವಿಸುವುದು. ಈ ಆಹಾರಗಳು ಯಾವುವು ಎಂಬುದನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡಿ..

ನಿಮ್ಮ ಆಹಾರದಲ್ಲಿ ಮೀನು ಯಥೇಚ್ಛವಾಗಿರಲಿ
ಮೀನಿನಲ್ಲಿ ಒಮೆಗಾ 3 ಕೊಬ್ಬಿನ ತೈಲವಿದ್ದು ಇದು ಸ್ನಾಯುಗಳಲ್ಲಿ ಉರಿಯೂತವನ್ನು ನಿವಾರಿಸುತ್ತದೆ. ಅಲ್ಲದೇ ಮೀನಿನ ಮೂಲಕ ಲಭಿಸಿದ ಸತು (zinc) ದೇಹದಲ್ಲಿ ರಸದೂತಗಳ ಸ್ರವಿಕೆಯನ್ನು ನಿಯಮಿತಗೊಳಿಸಿ ದೇಹವು ವಿಟಮಿನ್ ಎ ಪ್ರಮಾಣವನ್ನು ಹೆಚ್ಚು ಹೀರಿಕೊಳ್ಳಲು ನೆರವಾಗುತ್ತದೆ. ಈ ವಿಟಮಿನ್ ಎ ಮೊಡವೆಗಳಾಗದಿರಲು ಮುಖ್ಯವಾದ ಪೋಷಕಾಂಶವಾಗಿದೆ.

ಬೆಣ್ಣೆ ಹಣ್ಣು ಸೇವಿಸಿ
ಬೆಣ್ಣೆಹಣ್ಣು (Avocado) ನಲ್ಲಿರುವ ವಿಟಮಿನ್ ಇ ಚರ್ಮಕ್ಕೆ ಅತ್ಯಂತ ಉಪಯುಕ್ತವಾದ ಪೋಷಕಾಂಶವಾಗಿದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಉರಿಯೂತವನ್ನು ಶಮನಗೊಳಿಸುತ್ತದೆ. ಈ ಹಣ್ಣು ಒಂದು ನೈಸರ್ಗಿಕ ಆರ್ದ್ರತೆ ನೀಡುವ ಆಹಾರವಾಗಿದೆ. ಚರ್ಮಕ್ಕೆ ದೊರಕಿದ ಆರ್ದ್ರತೆಯಿಂದ ಸೂಕ್ಷ್ಮ ರಂಧ್ರಗಳಿಂದ ಜಿಗುಟು ಹೊರಹೋಗಿ ಮೊಡವೆಗಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ.

ಸಾಕಷ್ಟು ನೀರು ಸೇವಿಸಿ
ಮೊಡವೆಗಳಿಂದ ಮುಕ್ತವಾಗಿರುವ ಚರ್ಮಕ್ಕೆ ಅಗತ್ಯವಾದುದೆಂದರೆ ನೀರು. ಮೊಡವೆಗಳಿದ್ದಾಗ ಸಾಕಷ್ಟು ಪ್ರಮಾಣದಲ್ಲಿ ನೀರು ಸೇವಿಸುತ್ತಲೇ ಇರಿ. ಘಂಟೆಗೊಂದು ಲೋಟ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಚರ್ಮದಿಂದ ಬೆವರು ಹೊರಹರಿಯುವ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ದೇಹದಲ್ಲಿ ಸಂಗ್ರಹವಾಗಿದ್ದ ವಿಷಕಾರಿ ವಸ್ತುಗಳು ಹೊರಹೋಗಲು ನೆರವಾಗುತ್ತದೆ.

ಕ್ಯಾರೆಟ್ ತಿನ್ನಿರಿ
ಕ್ಯಾರೆಟ್‌ಗಳಲ್ಲಿರುವ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಷ ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಮೊಡವೆಗಳಿಲ್ಲದಿರುವಂತೆ ನೋಡಿಕೊಳ್ಳಲು ನೆರವಾಗುತ್ತದೆ.ಇದಕ್ಕೆ ಅತ್ಯುತ್ತಮ ವಿಧಾನವೆಂದರೆ ಪ್ರತಿದಿನ ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಕ್ಯಾರೆಟ್ ಜ್ಯೂಸ್ ಕುಡಿಯುವುದು.

ಡೈರಿ ಆಹಾರಗಳಿಂದ ದೂರವಿರಿ
ಹಾಲು, ಗಿಣ್ಣು, ಚೀಸ್, ಮೊಸರು ಮೊದಲಾದ ಡೈರಿ ಉತ್ಪನ್ನಗಳಿಂದ ದೂರವಿದ್ದಷ್ಟೂ ಮೊಡವೆಯಿಲ್ಲದ ಚರ್ಮಕ್ಕೆ ಉತ್ತಮ. ಏಕೆಂದರೆ ಇದರಿಂದ ಲಭ್ಯವಾಗುವ ಕೊಬ್ಬು ಚರ್ಮದ ಅಡಿಯಲ್ಲಿ ಸಂಗ್ರಹವಾಗಿ ಮೊಡವೆ ಮೂಡಲು ನೆರವಾಗುತ್ತದೆ. ಶಾಶ್ವತವಾಗಿ ಅಲ್ಲದಿದ್ದರೂ ಮೊಡವೆಗಳ ಕಾಟ ಹೆಚ್ಚಿರುವ ಹದಿಹರೆಯದಲ್ಲಿ ಡೈರಿ ಆಹಾರದಿಂದ ದೂರವಿರುವುದು ಉತ್ತಮ.

ಸೋಯಾ ಉತ್ಪನ್ನಗಳಿಂದ ದೂರವಿರಿ
ಸೋಯಾ ಅವರೆ ಅಥವಾ ಸಾಸ್ ಸೇರಿಸಿದ ಆಹಾರಗಳ ಮೂಲಕ ಐಸೋಫ್ಲೇವೋನ್ಸ್ (isoflavones) ಎಂಬ ಪೋಷಕಾಂಶ ಲಭಿಸುತ್ತದೆ. ಇದು ಮೊಡವೆಗಳು ಮೂಡಲು ಮೂಲವಾಗಿದೆ. ನಿಮ್ಮ ಆಹಾರದಲ್ಲಿ ಸೋಯಾ ಇರದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.



Click it and Unblock the Notifications