Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಗೌರವರ್ಣದ ತ್ವಚೆಗಾಗಿ ಹೇಳಿ ಮಾಡಿಸಿದ ತರಕಾರಿಗಳು
ನೈಸರ್ಗಿಕವಾಗಿ ದೊರೆಯುವ ತರಕಾರಿ, ಹಣ್ಣುಗಳು ಒಂದಿಲ್ಲೊಂದು ವಿಸ್ಮಯಕಾರಿ ಅಂಶಗಳಿಂದ ಸಮ್ಮಿಳಿತವಾಗಿದೆ. ಅದರಲ್ಲಿಯೂ ಕೆಲವೊಂದು ತರಕಾರಿಗಳು ಚರ್ಮದ ಕಾಂತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ಅಂತಹ ತರಕಾರಿಗಳನ್ನು ಸ್ಕಿನ್ ಫ್ರೆಂಡ್ಲಿ ವೆಜಿಟೇಬಲ್ ಎಂದೇ ಕರೆಯಬಹುದು. ಇಂತಹ ತರಕಾರಿಗಳನ್ನು ದಿನನಿತ್ಯ ಬಳಸುವುದರಿಂದ ಚರ್ಮಕ್ಕೆ ಬೇಕಾಗುವ ಪೋಷಕಾಂಶಗಳು ದೊರೆಯುತ್ತವೆ. ಅಲ್ಲದೆ ತ್ವಚೆಯ ಕಾಂತಿಯನ್ನು ಕೂಡ ಹೆಚ್ಚಿಸುತ್ತದೆ. ದೇಹಕ್ಕೆ ಹೇಗೆ ಪ್ರತಿದಿನ ಅಗತ್ಯ ಪೋಷಕಾಂಶಗಳನ್ನು ನೀಡುತ್ತೇವೆಯೋ ಹಾಗೆಯೇ ಚರ್ಮಕ್ಕೂ ಕೂಡ ಅಗತ್ಯ ಪೋಷಕಾಂಶಗಳು ಬೇಕು. ಕುಂಬಳಕಾಯಿ ಜ್ಯೂಸ್‌ನಲ್ಲಿ ಅಡಗಿದೆ ಸಕಲ ಸೌಂದರ್ಯದ ರಹಸ್ಯ
ನೈಸರ್ಗಿಕ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ತರಕಾರಿಗಳಲ್ಲಿ ಇರುವ ರೋಗ ನಿರೋಧಕ ಗುಣಗಳು ಚರ್ಮಕ್ಕೆ ಹಾನಿಯಾಗುವುದನ್ನು ತಪ್ಪಿಸುತ್ತದೆ, ಜೊತೆಗೆ ತ್ವಚೆಯ ಚರ್ಮ ಸುಕ್ಕಾಗುವುದನ್ನು ಕೂಡ ತಡೆಯುತ್ತದೆ, ಹಾಗಾಗಿ ಆರೋಗ್ಯಕರ `ಆಹಾರದ ಸೇವನೆಯಿಂದ ಚರ್ಮ ಸುಕ್ಕಾಗುವುದನ್ನು ತಪ್ಪಿಸಬಹುದು. ಚರ್ಮಕ್ಕೆ ಆರೋಗ್ಯಕರವಾದ ತರಕಾರಿಗಳ ಬಗ್ಗೆ ಮಾಹಿತಿ ಪಡೆಯಲು ಈ ಕೆಳಗೆ ಓದಿನೋಡಿ.

ಗೆಣಸು
ಸಿಹಿಗೆಣಸುಗಳನ್ನು ಬೇಯಿಸಿರುವ ನೀರನ್ನು ನಿಮ್ಮ ಮುಖವನ್ನು ತೊಳೆಯಲು ಬಳಸಿ. ಇದರಿಂದ ನಿಮ್ಮ ಮುಖದಲ್ಲಿರುವ ಕಲೆಗಳು, ರಂಧ್ರಗಳು ಮತ್ತು ಧೂಳು ಎಲ್ಲವೂ ನಿವಾರಣೆಯಾಗುತ್ತದೆ. ಇದರಲ್ಲಿರುವ ವಿಟಮಿನ್ ಸಿಯು ಕೊಲ್ಲಾಜೆನ್ ಉತ್ಪಾದನೆಗೆ ಸಹಕರಿಸುತ್ತದೆ, ವಿಟಮಿನ್ ಡಬ್ಲ್ಯೂ ತ್ವಚೆಯ ಬಣ್ಣವನ್ನು ಸುಧಾರಿಸುತ್ತದೆ. ಇದರಲ್ಲಿರುವ ಅಂಥೋಸಿಯಾನಿನ್‌ಗಳು ಸುಕ್ಕುಗಳನ್ನು, ಕಪ್ಪು ವೃತ್ತಗಳನ್ನು ಸಹ ನಿವಾರಿಸಿ, ಕಣ್ಣುಗಳು ಕಾಂತಿಯಿಂದ ಕಂಗೊಳಿಸಲು ನೆರವು ನೀಡುತ್ತದೆ.

ಪಾಲಕ್
ಪಾಲಾಕ್ ಸೊಪ್ಪಿನಲ್ಲಿ ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ತಡೆಯುವ ಗುಣಗಳೆರಡೂ ಇರುವುದರಿಂದ ಇದು ಆರೋಗ್ಯಕರ ಚರ್ಮ ಪಡೆಯಲು ಸಹಾಯಕ. ಪಾಲಾಕ್ ಸೊಪ್ಪಿನ ಜ್ಯೂಸ್ ಮಾಡಿ ಪ್ರತಿದಿನ ಸೇವಿಸುವುದರಿಂದ ಕಾಂತಿಯುತ ಚರ್ಮ ಪಡೆಯಬಹುದು.

ಕ್ಯಾರೆಟ್
ಇದರಲ್ಲಿರುವ ಆಂಟಿ ಆಕ್ಸಿಡೆಂಟ್‍ಗಳು ಮತ್ತು ವಿಟಮಿನ್ ಸಿ ನಿಮ್ಮ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತವೆ. ಕ್ಯಾರೆಟನ್ನು ಪೇಸ್ಟ್ ಮಾಡಿಕೊಂಡು ಜೇನು ತುಪ್ಪದ ಜೊತೆಗೆ ನಿಮ್ಮ ಮುಖಕ್ಕೆ ಫೇಸ್ ಮಾಸ್ಕ್ ಆಗಿ ಸಹ ಬಳಸಬಹುದು. ಸುಮ್ಮನೆ ಕಾಸ್ಮೆಟಿಕ್‍ಗಳ ಮೇಲೆ ಹಣ ಚೆಲ್ಲುವ ಬದಲು ಕ್ಯಾರೆಟ್ ಜ್ಯೂಸ್ ಸೇವಿಸಲು ಆರಂಭಿಸಿ.

ಬೀಟ್ರೂಟ್
ಬೀಟ್‌ರೂಟ್‌ನಲ್ಲಿ ಕೂಡ ಉತ್ಕರ್ಷಣ ವಿರೋಧಿ ಗುಣವಿರುವುದರಿಂದ ಇದು ಚರ್ಮಕ್ಕೆ ಒಳ್ಳೆಯದು.ಪ್ರತಿದಿನ ಬೀಟ್ರೂಟ್ ಸೇವಿಸುವುದರಿಂದ ಚರ್ಮ ಸುಕ್ಕುಗಟ್ಟುವುದನ್ನು ತಡೆಯಬಹುದು.

ಟೊಮೇಟೊ
ನಿಮಗೆ ತಾಜಾ ಮತ್ತು ಕಾಂತಿಯುತ ತ್ವಚೆಯ ಚರ್ಮ ಬೇಕೆಂದಿದ್ದರೆ ಟೊಮೇಟೊವನ್ನು ಬಳಸಿ. ಇದರಲ್ಲಿ ಉತ್ಕರ್ಷಣ ಗುಣವಿರುವುದರಿಂದ ದಿನನಿತ್ಯದ ಆಹಾರದಲ್ಲಿ ಇದನ್ನು ಬಳಸುವುದರಿಂದ ಹೊಳೆಯುವ ತ್ವಚೆ ನಿಮ್ಮದಾಗಿಸಿಕೊಳ್ಳಬಹುದು.



Click it and Unblock the Notifications
